ಬಿಹಾರ | ಶಾಲೆಯಲ್ಲಿ ಮಗು ಮೇಲೆ ಲೈಂಗಿಕ ದೌರ್ಜನ್ಯ; ವಿಕೃತವಾಗಿ ಇರಿದು ಕೊಂದಿರುವ ದುರುಳರು

Date:

ಏಪ್ರಿಲ್ 1ರಂದು ತಾಯಿಯೊಬ್ಬರು ತನ್ನ 5 ವರ್ಷದ ಮಗುವನ್ನು ಶಿಕ್ಷಣಕ್ಕಾಗಿ ವಸತಿ ಶಾಲೆಗೆ ಸೇರಿಸಿದ್ದರು. ಆಕೆ ತನ್ನ ಮಗನನ್ನು  ಶಾಲೆಯಲ್ಲಿ ಬಿಟ್ಟುಬಂದ ಐದೇ ದಿನದಲ್ಲಿ (ಏಪ್ರಿಲ್ 6) ಆ ಮಗು ಶವವಾಗಿ ಮನೆಗೆ ಮರಳಿದೆ. ಆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲವು ಬಾರಿ ಆತನಿಗೆ ಇರಿದು ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ಈ ಘಟನೆ ಬಿಹಾರದ ಪಾಟ್ನಾ ಬಳಿಯ ಜೆಹಾನಾಬಾದ್‌ನ ಗುರುಕುಲವೊಂದರಲ್ಲಿ ನಡೆದಿದೆ.  

- Advertisement -

ಮಗುವಿನ ತಂದೆ ಅಜಯ್ ಕುಮಾರ್ ಶರ್ಮಾ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ದೂರಿನಲ್ಲಿ; “ಏಪ್ರಿಲ್ 6ರಂದು ಬೆಳಿಗ್ಗೆ 5:20ಕ್ಕೆ ಗುರುಕುಲದ ಪ್ರಾಂಶುಪಾಲ ಮತ್ತು ನಿರ್ದೇಶಕ ತರುಣ್ ಕುಮಾರ್ ಎಂಬುವವರಿಂದ ಕರೆ ಬಂದಿತ್ತು. ‘ನಿಮ್ಮ ಮಗನ ಆರೋಗ್ಯ ತೀವ್ರ ಹದಗೆಟ್ಟಿದೆ’ಯೆಂದು ಅವರು ಹೇಳಿದರು. ತಕ್ಷಣವೇ ನಾವು ಆಸ್ಪತ್ರೆಗೆ ಧಾವಿಸಿದಾಗ, ತಮ್ಮ ಮಗ ಆಶುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು” ಎಂದು ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

“ನನ್ನ ಮಗುವಿನ ಗಂಟಲನ್ನು ಸೀಳಲಾಗಿತ್ತು, ಜನನಾಂಗವನ್ನು ಕತ್ತರಿಸಲಾಗಿತ್ತು. ಹೊಟ್ಟೆಯ ಎಡಭಾಗ, ಕೆನ್ನೆ ಹಾಗೂ ಕಣ್ಣಿನ ಹುಬ್ಬಿನ ಕೆಳಗೆ ಆಳವಾದ ಗಾಯಗಳಿದ್ದವು. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಟ್ನಾದ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಆ ವೇಳೆಗೆ ಮಗು ಮೃತಪಟ್ಟಿದೆಯೆಂದು ವೈದ್ಯರು ಘೋಷಿಸಿದರು” ಎಂದು ಶರ್ಮಾ ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೆ, ಹರಿತವಾದ ಆಯುಧದಿಂದ ಪದೇ ಪದೇ ಇರಿಯಲಾಗಿದೆ. ಇದು ಸಾಮೂಹಿಕ ಅತ್ಯಾಚಾರ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಆಶುವಿನ ಅಣ್ಣ ರಿಶು ಕೂಡ ಅದೇ ಶಾಲೆಯಲ್ಲಿದ್ದರು. “ಘಟನೆಯ ದಿನದಂದು ಪ್ರಾಂಶುಪಾಲ ತರುಣ್ ಕುಮಾರ್ ಅವರು ಆಶುವನ್ನು ತನ್ನ ಜೊತೆಗೆ ಮಲಗಲು ರೂಮಿಗೆ ಕರೆದುಕೊಂಡು ಹೋಗಿದ್ದರು” ಎಂದು ರಿಶು ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಸಿಇಸಿ ವಿರುದ್ಧದ ಅವಿಶ್ವಾಸ; ಕಾರಣವಿಲ್ಲದೇ ನೋಟಿಸ್‌ ತಿರಸ್ಕಾರ ಕೂಡ ಪ್ರಜಾತಂತ್ರಕ್ಕೆ ಮಾರಕ!

ಮಗುವಿನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪಟ್ನಾ-ಗಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುವಿನ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಮುಖ ಆರೋಪಿ ಪ್ರಾಂಶುಪಾಲ ತರುಣ್ ಕುಮಾರ್‌ನನ್ನು ಬಂಧಿಸಿದ್ದಾರೆ.  ಒಬ್ಬ ಶಿಕ್ಷಕ ಮತ್ತು ಇಬ್ಬರು ಮಹಿಳಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಲಾಗಿದೆ. ಶಾಲೆಯ ಸೆಕ್ಯೂರಿಟಿ ಗಾರ್ಡ್‌ನನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಾಲೆಯನ್ನು ಪೊಲೀಸರು ಸೀಲ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಆಯಿಷಾ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದಲ್ಲಿ ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ

ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಎನ್ ಎಸ್ ಎಸ್ ದಿನಾಚರಣೆ...

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಣ್ಣಗಾಗುವ ಮುನ್ನವೇ,...