ಸಂಸತ್ ಭದ್ರತಾ ಲೋಪ | ಪತ್ರಕರ್ತರ ಪ್ರಶ್ನೆಗೆ ಉದ್ಧಟತನದಿಂದ ವರ್ತಿಸಿದ ಸಂಸದ ಪ್ರತಾಪ್ ಸಿಂಹ

Date:

ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಆರೋಪಿಗಳಿಗೆ ಲೋಕಸಭೆಯ ಒಳಗಡೆ ಪ್ರವೇಶಿಸಲು ಪಾಸ್ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸಂಸತ್ ಭದ್ರತಾ ಲೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉದ್ಧಟತನದಿಂದ ವರ್ತಿಸಿ ಪತ್ರಿಕಾಗೋಷ್ಠಿಯಿಂದ ಎದ್ದುಹೋದ ಪ್ರಸಂಗ ನಡೆದಿದೆ.

ಮೈಸೂರಿನಲ್ಲಿ ಇಂದು (ಡಿ.29) ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ, ಕೇಂದ್ರ ಸರ್ಕಾರದಿಂದ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಬಂದ ಯೋಜನೆ ಹಾಗೂ ಅನುದಾನಗಳ ಬಗ್ಗೆ ತಿಳಿಸುತ್ತಿದ್ದರು.

“ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಮಾಡಿಸಿದ್ದು ನಾನೇ. ಅದಕ್ಕೆ ಪ್ರಧಾನಿ ಮೋದಿಯವರು ಸಹಕಾರ ನೀಡಿದ್ದಾರೆ. ಮೋದಿಯವರಿಂದ ಮಾರ್ಚ್ 12,2023ರಲ್ಲಿ ಈ ಯೋಜನೆ ಉದ್ಘಾಟನೆಯಾಗಿದೆ. ಈ ನಡುವೆ ಸಚಿವ ಮಹದೇವಪ್ಪ, ಸಿದ್ದರಾಮಯ್ಯನವರು ಎಲ್ಲಿದ್ದರು?” ಎಂದು ಹೇಳುತ್ತಾ, ಸುದ್ದಿಗೋಷ್ಠಿಯಿಂದ ಹೊರಡಲು ಅನುವಾಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ನಡುವೆ ಪತ್ರಕರ್ತರೋರ್ವರು, “ಪ್ರತಿಯೊಂದು ವಿಚಾರದಲ್ಲೂ ಮಾತನಾಡುತ್ತಿದ್ದ ಪ್ರತಾಪ್ ಸಿಂಹ ಅವರು ಸಂಸತ್‌ನ ಭದ್ರತಾ ಲೋಪದ ವಿಚಾರದಲ್ಲಿ ಯಾಕೆ 2024ರಲ್ಲಿ ಮತದಾರರು ನೋಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದೀರಿ?” ಎಂದು ಪ್ರಶ್ನಿಸಿದರು.

ಪತ್ರಕರ್ತನ ಬಳಿ, ನಿನ್ನ ಹೆಸರೇನು ಎಂದು ಕೇಳಿದ ಪ್ರತಾಪ್ ಸಿಂಹ, ‘ನನ್ನ ಈ ಹೇಳಿಕೆಯನ್ನು ತಗೋಬೇಡಿ, ಕ್ಯಾಮರಾ ಆಫ್ ಮಾಡಿ’ ಎಂದು ಸೂಚಿಸಿದ್ದಾರೆ.

“ಅರಿವು ಬರುವುದಕ್ಕೋಸ್ಕರ ಹೇಳುತ್ತೇನೆ” ಎಂದು ಹೇಳುವಾಗ ಕ್ಯಾಮರಾ ರೆಕಾರ್ಡಿಂಗ್ ಅಲ್ಲಿರುವುದನ್ನು ಗಮನಿಸಿ, ‘ಆಫ್ ಮಾಡಿ’ ಎಂದು ಮತ್ತೊಮ್ಮೆ ಪತ್ರಕರ್ತರಿಗೆ ಸೂಚಿಸಿದ್ದಾರೆ. ಆಮೇಲೂ ಉತ್ತರಿಸದೇ, ‘ನನಗೆ ಮೀಟಿಂಗ್ ಇದೆ’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಅಲ್ಲದೇ, ಹೀಗೆ ಪತ್ರಿಕಾಗೋಷ್ಠಿಯಿಂದ ತೆರಳುವಾಗ, ‘ಮಾಡೋಕ್ ಕೆಲಸವಿಲ್ಲದೇ ಬರ್ತಾರೆ, ನಾನೇನ್ ಮಾಡ್ಲಿ. ಸಂಸತ್ ಪ್ರವೇಶಕ್ಕೆ ಗೊತ್ತಿರುವ ವ್ಯಕ್ತಿಯಾದ್ದರಿಂದ ಪಾಸ್ ಕೊಡಿಸಿದ್ದೆ.‌ಆತ ಹೊಗೆ ಬಾಂಬ್ ಸಿಡಿಸುತ್ತಾನೆ ಎಂದು ನನಗೆ ಗೊತ್ತಿತ್ತಾ ಎಂದು ಹೇಳಿಕೊಂಡು ಹೊರನಡೆದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಉಕ್ಕು ಗಣಿಗಾರಿಕೆ | ಆರು ವರ್ಷಗಳ ಹಿಂದೆ ವಿರೋಧ – ಇಂದು ಒಪ್ಪಿಗೆ; ಇದು ಕೇಂದ್ರ ಸಚಿವ ಎಚ್‌ಡಿಕೆ ವರಸೆ!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ನೇತೃತ್ವದ ಎನ್‌ಡಿಎ...

ಪೋಕ್ಸೋ ಪ್ರಕರಣ | ಬಿಎಸ್‌ವೈ ಬಂಧಿಸದಂತೆ ಹೈಕೋರ್ಟ್‌ ಮಧ್ಯಂತರ ಆದೇಶ

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು...

ಬಿಎಸ್‌ವೈ ಪೋಕ್ಸೊ | ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ: ವಕೀಲ ಎಸ್‌ ಬಾಲನ್ ಆರೋಪ

"ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಗಂಭೀರವಾಗಿರುವ ಪೋಕ್ಸೊ ಪ್ರಕರಣ...

ಕಾಂಗ್ರೆಸ್ ಪರ ಕೆಲಸ ಮಾಡಿದ್ದಕ್ಕೆ ಠಾಣೆಗೆ ಶಾಮಿಯಾನ ಹಾಕಿ ನಟ ದರ್ಶನ್‌ಗೆ ರಕ್ಷಣೆಯೇ: ಶೋಭಾ ಕರಂದ್ಲಾಜೆ ಪ್ರಶ್ನೆ

ಕೊಲೆ ಪ್ರಕರಣದಲ್ಲಿ ನಟ ದರ್ಶನ ಬಂಧನವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ...