ಶೋಭಾ ಕರಂದ್ಲಾಜೆಗೆ ಯಾಕೆ ಇ.ಡಿ ನೋಟಿಸ್ ಕೊಟ್ಟಿಲ್ಲ: ರಮೇಶ್‌ ಬಾಬು ಪ್ರಶ್ನೆ

Date:

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಯಾಕೆ ಇಡಿ ನೋಟಿಸ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಮೇಶ್‌ ಬಾಬು ಪ್ರಶ್ನಿಸಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷಕ್ಕೆ ಯಾಕೆ ನೋಟಿಸ್ ಕೊಡಲಾಗಿದೆ. ಕೇಜ್ರಿವಾಲ್ ಮೇಲೆ ಯಾವ ಆರೋಪವಿಲ್ಲ. ಕೆಲವು ವಿಟ್ನೆಸ್ ಬಳಸಿಕೊಂಡು ಅರೆಸ್ಟ್ ಮಾಡಲಾಗಿದೆ” ಎಂದು ಕಿಡಿಕಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“350 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವ ಶೋಭಾ ಕರಂದ್ಲಾಜೆ ಮೇಲೆ 48 ಕೋಟಿ ಹಣ ವರ್ಗಾವಣೆ ಆರೋಪ ಇದೆ. ಇದು 2010ರಲ್ಲಿ ನಡೆದಿರುವ ಹಗರಣ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಶೋಭಾ ಮೇಲೆ 24 ಗಂಭೀರ ಆರೋಪಗಳು ಇವೆ. ಇಷ್ಟಿದ್ದರೂ ಅವರನ್ನು ಕೇಂದ್ರದಲ್ಲಿ ಮಂತ್ರಿ‌ ಮಾಡಿದ್ದಾರೆ. ಹೇಗೆ ಅವರನ್ನು ಮಂತ್ರಿ ಮಾಡಲಾಗಿದೆ?” ಎಂದು ರಮೇಶ್ ಬಾಬು ಪ್ರಶ್ನಿಸಿದರು.

“ಕಳಂಕಿತರನ್ನ ಸಂಪುಟದಲ್ಲಿ ಮುಂದುವರೆಸಬಾರದು. ಪ್ರತಿಪಕ್ಷಗಳಲ್ಲಿದ್ದರೆ ತಕ್ಷಣ ಬಂಧಿಸ್ತೀರಾ? ಬಿಜೆಪಿ ನಾಯಕರಿಗೆ ಮಾತ್ರ ಯಾವುದೂ ಇಲ್ಲ. ಶೋಭಾ ಕರಂದ್ಲಾಜೆ ಮೇಲೆ 10 ವರ್ಷ ಕೇಸ್ ಇದೆ. ಅವರಿಂದ 70 ಲಕ್ಷ ಹಣ ಸೀಝ್ ಮಾಡಿದ್ದಾರೆ. ಇಷ್ಟಾದ್ರೂ ಯಾಕೆ ಬಂಧಿಸಿಲ್ಲ. ನಮಗೆ ಇಡಿ ಮೇಲೆ ಅನುಮಾನವಿದೆ” ಎಂದರು.

“ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು. ಕೂಡಲೇ ಸಂಪುಟದಿಂದ ಅವರನ್ನ ಕೈಬಿಡಬೇಕು. ಸುಪ್ರೀಂ ಜಡ್ಜ್ ಮೆಂಟ್‌ನಲ್ಲಿ ಹಲವು ದಾಖಲೆ ಇವೆ. ಗುರುತರ ಆರೋಪ ಮುಚ್ಚಿಡುವಂತಿಲ್ಲ. ಆದರೆ ಇವರು ಆರೋಪ‌ ಮುಚ್ಚಿಟ್ಟಿದ್ದಾರೆ. ಈಗ ಮತ್ತೆ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ನಿಲ್ಲಿಸಲಾಗಿದೆ” ಎಂದು ವಾಗ್ದಾಳಿ ನಡೆಸಿದರು.

ಪ್ರೊ.ರಾಜೀವ್ ಗೌಡ ಮಾತನಾಡಿ, “ಉಡುಪಿ ಚಿಕ್ಕಮಗಳೂರು ಸಂಸದೆಯಾಗಿದ್ದರು. ಈಗ ಬೆಂಗಳೂರು ಉತ್ತರಕ್ಕೆ ಬಂದಿದ್ದಾರೆ. ಇಡಿ ಪ್ರಕರಣದಲ್ಲಿ 24ನೇ ಆರೋಪಿ ಅವರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಇವರ ಮೇಲೆ ಕ್ರಮ‌ ಜರುಗಿಸಬೇಕು. ದೇಶದ ಕಾನೂನು ಎಲ್ಲಿಗೆ ಹೋಗಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪ್ರಧಾನಿ ನಾ ಕಾವೂಂಗಾ ಕಾನೇದೂಂಗಾ ಅಂತಾರೆ. ಅಕ್ರಮ ಹಣ ವರ್ಗಾವಣೆ ಆರೋಪ ಇದ್ರೂ ಯಾಕೆ ಕ್ರಮವಿಲ್ಲ? ಡಿಕೆಶಿಗೆ ಪದೇ ಪದೇ ನೋಟಿಸ್ ಕೊಟ್ಟಿದ್ದರು. ತಿಹಾರ್ ಜೈಲಿಗೂ ಕಳಿಸಲಾಗಿತ್ತು. ಜಾರ್ಖಂಡ್ ಸಿಎಂ, ದೆಹಲಿ ಸಿಎಂ ಅನ್ನು ಜೈಲಿಗೆ ಹಾಕಿದ್ದಾರೆ. ಬಿಜೆಪಿ ನಾಯಕರಿಗೆ ಒಂದು ಕಾನೂನು. ಇತರರಿಗೆ ಇನ್ನೊಂದು ಕಾನೂನಾ?” ಎಂದು ಕಿಡಿಕಾರಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಗೃಹಲಕ್ಷ್ಮಿ’ಗೆ 17 ಪ್ರಶ್ನೆಗಳ ಪರೀಕ್ಷೆ: ₹2 ಸಾವಿರದ ಯೋಜನೆಗೆ ಇಷ್ಟೆಲ್ಲಾ ದಾಖಲೆ ಬೇಕೇ?

ಮರುಪರಿಶೀಲನೆ ಹೆಸರಿನಲ್ಲಿ ಫಲಾನುಭವಿಗಳ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಬಾರದು; ನೈಜ ಅನರ್ಹರನ್ನು ಕೈಬಿಡುವ ಕ್ರಮದ...

ನಕಲಿ ಔಷಧ ಜಾಲ ಭೇದಿಸಿದ ಎಸ್‌ಐಟಿ: ಅಜರ್‌ಬೈಜಾನ್‌ಗೆ ಪರಾರಿಯಾಗಿದ್ದ ಕಿಂಗ್‌ಪಿನ್‌ ಪ್ರಶಾಂತ್‌ ಸೆರೆ

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ...

RSSಗೆ ಅಪಾರ್ಟ್‌ಮೆಂಟ್ ಬಾಗಿಲು ತೆರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ: ಪಾರದರ್ಶಕತೆ ಪ್ರಶ್ನಿಸುವಂತೆ ಸಂಘಗಳಿಗೆ ಸಲಹೆ

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್‌ ಆಯೋಜಿಸಿದ್ದ ಸಭೆಗೆ ಗೃಹ ಸಚಿವ ಪ್ರಿಯಾಂಕ್...

ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್: ಮರು ಸೇರ್ಪಡೆಗೆ ಕೇವಲ 7.7 ಲಕ್ಷ ಅರ್ಜಿ

ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ...