ದೆಹಲಿ ಜಲಮಂಡಳಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎರಡು ಎಫ್‌ಐಆರ್‌ಗಳನ್ನು ಇಡಿ ತನಿಖೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಶನಿವಾರ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದೆ.
ಚಾರ್ಜ್‌ಶೀಟ್‌ನಲ್ಲಿ ನಾಲ್ಕು ಜನರನ್ನು ಮತ್ತು ಸಂಸ್ಥೆಗಳನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಮಾಜಿ ಡಿಜೆಬಿ ಮುಖ್ಯ ಇಂಜಿನಿಯರ್ ಜಗದೀಶ್ ಕುಮಾರ್ ಅರೋರಾ, ಕಾಂಟ್ರಾಕ್ಟರ್ ಅನಿಲ್ ಕುಮಾರ್ ಅಗರ್ವಾಲ್, ಮಾಜಿ ಎನ್‌ಬಿಸಿಸಿ ಜನರಲ್ ಮ್ಯಾನೇಜರ್ ಡಿಕೆ ಮಿತ್ತಲ್, ತಿಜೇಂದರ್ ಸಿಂಗ್ ಮತ್ತು ಎನ್‌ಕೆಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹೆಸರುಗಳು ಈ ಚಾರ್ಚ್‌ಶೀಟ್‌ನಲ್ಲಿದೆ.
ಇದನ್ನು ಓದಿದ್ದೀರಾ? ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ, ಎಎಪಿ ಸಂಸದರ ನಿವಾಸದ ಮೇಲೆ ದಾಳಿ: ಇ.ಡಿ ವಿರುದ್ಧ ಆಪ್ ಆಕ್ರೋಶ
ಡಿಜೆಬಿ ನೀಡಿದ ಒಪ್ಪಂದದಲ್ಲಿ ಭ್ರಷ್ಟಾಚಾರದಿಂದ ಬಂದ ಈ ಲಂಚದ ಹಣವನ್ನು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಚುನಾವಣಾ ನಿಧಿಯಾಗಿ “ಹಸ್ತಾಂತರಿಸಲಾಗಿದೆ” ಎಂದು ಇಡಿ ಆರೋಪಿಸಿದೆ. ಇನ್ನು ಈ ಹಿಂದೆ ಈ ಪ್ರಕರಣದಲ್ಲಿ ವಿಚಾರಣೆಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡಾ ಸಂಸ್ಥೆ ಕರೆದಿತ್ತು. ಆದರೆ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿದೆ. ಇನ್ನು ಇದರ ತನಿಖೆಯ ಭಾಗವಾಗಿ ಫೆಬ್ರವರಿಯಲ್ಲಿ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್, ಎಎಪಿಯ ರಾಜ್ಯಸಭಾ ಸಂಸದ ಮತ್ತು ಖಜಾಂಚಿ ಎನ್‌ಡಿ ಗುಪ್ತಾ, ಮಾಜಿ ಡಿಜೆಬಿ ಸದಸ್ಯ ಶಲಭ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ ಪಂಕಜ್ ಮಂಗಲ್ ಮತ್ತು ಇತರ ಕೆಲವರ ಮನೆಗಳ ಮೇಲೆ ಸಂಸ್ಥೆ ದಾಳಿ ನಡೆಸಿದೆ.
ಕಂಪನಿಗೆ ಯಾವುದೇ ತಾಂತ್ರಿಕ ಅರ್ಹತೆ ಇರದಿದ್ದರೂ ಕೂಡಾ ಒಟ್ಟು 38 ಕೋಟಿ ರೂಪಾಯಿಯ ಗುತ್ತಿಗೆಯನ್ನು ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ಅರೋರಾ ನೀಡಿದ್ದಾರೆ ಎಂದು ಆರೋಪಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಜನವರಿ 31 ರಂದು ಈ ಪ್ರಕರಣದಲ್ಲಿ ಇಡಿ ಅರೋರಾ ಮತ್ತು ಅಗರ್ವಾಲ್ ಅವರನ್ನು ಬಂಧಿಸಿತ್ತು.
ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಟೆಡ್ ಕಂಪನಿಗೆ ಎನ್‌ಬಿಸಿಸಿ ಅಧಿಕಾರಿಗಳ ಸಮ್ಮತಿ ಮೇರೆಗೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫ್ಲೋ ಮೀಟಿರ್ ಸರಬರಾಜು, ಸ್ಥಾಪನೆ ಮತ್ತು ಪರೀಕ್ಷೆಗೆ ಸಂಬಂಧಿಸಿ ಟೆಂಡರ್ ನೀಡುವಲ್ಲಿ ಜಲಮಂಡಳಿ ಅನುಕೂಲ ಮಾಡಿಕೊಟ್ಟಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಸಿತ್ತು.