ಮಹಿಳಾ ಮೀಸಲಾತಿ : ತರಾತುರಿಯ ನಿರ್ಧಾರದಿಂದ ನೈಜ ಉದ್ದೇಶ ತಲುಪಲು ಸಾಧ್ಯವೇ?

Date:

2029ರ ಲೋಕಸಭಾ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಮತ್ತು ಲೋಕಸಭಾ ಕ್ಷೇತ್ರಗಳನ್ನು 816ಕ್ಕೆ ಹೆಚ್ಚಿಸುವ ಕರಡು ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 816 ಕ್ಷೇತ್ರಗಳ ಪೈಕಿ 273 ಕ್ಷೇತ್ರಗಳಲ್ಲಿ ಮಹಿಳಾ ಮೀಸಲಾತಿಗಾಗಿ ಪ್ರಸ್ತಾಪಿಸಲಾಗಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು, ನಾರಿ ಶಕ್ತಿ ವಂದನಾ ಅಧಿನಿಯಮ/ಮಹಿಳಾ ಮೀಸಲಾತಿ ಕಾಯ್ದೆ ಎಂದು ಕರೆಯಲ್ಪಡುವ ಕಾಯ್ದೆಗೆ ತಿದ್ದುಪಡಿ ಮಾಡುವ ಕರಡು ಮಸೂದೆಗಳಿಗೆ ಅನುಮೋದನೆ ನೀಡಿದೆ.

- Advertisement -

ಸಂವಿಧಾನ ತಿದ್ದುಪಡಿ ಮಸೂದೆ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ತಿದ್ದುಪಡಿ ಮಾಡಿದರೆ, ಮತ್ತೊಂದು ಸಾಮಾನ್ಯ ಮಸೂದೆಯು ಕ್ಷೇತ್ರಗಳ ಪುನ‌ರ್ ವಿಂಗಡಣೆಗೆ ಅನುವು ಮಾಡಿಕೊಡಲು ಕ್ಷೇತ್ರ ಮರು ವಿಂಗಡಣಾ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತದೆ. ವಿಧಾನಸಭೆ ಹೊಂದಿರುವ ಮೂರು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೆರಿಯಲ್ಲಿ ಕಾಯ್ದೆಯ ಅನುಷ್ಠಾನವನ್ನು ಇನ್ನೊಂದು ಮಸೂದೆ ಖಚಿತಪಡಿಸಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇದಕ್ಕಾಗಿಯೇ ಸಂಸತ್ತಿನ ಬಜೆಟ್ ಅಧಿವೇಶನವನ್ನು ಸರ್ಕಾರ ವಿಸ್ತರಿಸಿದ್ದು, ಏಪ್ರಿಲ್ 16ರಿಂದ 18ರವರೆಗೆ ಮೂರು ದಿನ ವಿಶೇಷ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲೇ ತಿದ್ದುಪಡಿ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಪ್ರಕ್ರಿಯೆಯನ್ನು 2029ರ ಲೋಕಸಭೆ ಚುನಾವಣೆಯ ಹೊತ್ತಿಗೆ ಪೂರ್ಣಗೊಳಿಸಲು ಸರ್ಕಾರ ಸಜ್ಜಾಗಿದೆ.

ಮೀಸಲಾತಿ ಮತ್ತು ಕ್ಷೇತ್ರಗಳ ಹೆಚ್ಚಳ

ಕೇಂದ್ರ ಸಂಪುಟ ಅನುಮೋದಿಸಿರುವ ಹೊಸ ಪ್ರಸ್ತಾವನೆಯ ಪ್ರಕಾರ, ಕೇವಲ ಮೀಸಲಾತಿ ಮಾತ್ರವಲ್ಲದೆ ಒಟ್ಟಾರೆ ಕ್ಷೇತ್ರಗಳ ಸಂಖ್ಯೆಯಲ್ಲೂ ದೊಡ್ಡ ಬದಲಾವಣೆಯಾಗಲಿದೆ. ಲೋಕಸಭೆಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು ಈಗಿರುವ 543 ರಿಂದ 816ಕ್ಕೆ (ಅಂದರೆ ಶೇ.50 ರಷ್ಟು) ಹೆಚ್ಚಿಸುವ ಪ್ರಸ್ತಾವನೆ ಇದೆ. ಈ 816 ಕ್ಷೇತ್ರಗಳಲ್ಲಿ ಶೇ.33 ರಷ್ಟು ಅಂದರೆ, 273 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಲಿವೆ. ಇದರಲ್ಲಿ SC/ST ಮಹಿಳಾ ಮೀಸಲಾತಿಯನ್ನೂ ಕಲ್ಪಿಸಬೇಕಿದೆ.

ಇನ್ನು, ಸಾಮಾನ್ಯವಾಗಿ ಕ್ಷೇತ್ರ ಮರುವಿಂಗಡಣೆ ಮುಂಬರುವ ಜನಗಣತಿಯ ಆಧಾರದ ಮೇಲೆ ನಡೆಯಬೇಕಿತ್ತು. ಆದರೆ, ಪ್ರಕ್ರಿಯೆಯನ್ನು ತರಾತುರಿಯಲ್ಲಿ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಲು ನಿರ್ಧರಿಸಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡು 2029ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ಮಹಿಳಾ ಮೀಸಲಾತಿ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಮೀಸಲಾತಿ ಜಾರಿಗೆ ಬಂದ ದಿನದಿಂದ 15 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ.

ಮಹಿಳಾ ಮೀಸಲಾತಿ ರಾಜಕೀಯ ಚರ್ಚೆಗಳು , ಆಕ್ಷೇಪಗಳು

ಭಾರತೀಯ ರಾಜಕಾರಣದ ಇತಿಹಾಸದಲ್ಲಿ “ಮಹಿಳಾ ಮೀಸಲಾತಿ ಮಸೂದೆ” (ನಾರಿ ಶಕ್ತಿ ವಂದನ್ ಅಧಿನಿಯಮ) ಒಂದು ಮೈಲಿಗಲ್ಲು ಎಂದೇ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ದಶಕಗಳ ಕಾಲ ನಡೆದ ಹೋರಾಟ, ಚರ್ಚೆ ಮತ್ತು ರಾಜಕೀಯ ಜಟಾಪಟಿಗಳ ನಂತರ  2023ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆ ಅಂಗೀಕಾರಗೊಂಡಿದೆ. ಆದಾಗ್ಯೂ, ಇದರ ಅನುಷ್ಠಾನದ ಬಗ್ಗೆ ಈಗ ಗಂಭೀರ ಚರ್ಚೆಗಳು ನಡೆಯುತ್ತಿವೆ.

1996ರಲ್ಲಿ ಮೊದಲ ಬಾರಿಗೆ ಹೆಚ್.ಡಿ. ದೇವೇಗೌಡರ ಸರ್ಕಾರ ಈ ಮಸೂದೆಯನ್ನು ಮಂಡಿಸಿತು. ಅಂದಿನಿಂದ ಇಂದಿನವರೆಗೆ ಪ್ರತಿ ಸರ್ಕಾರ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರೂ, ರಾಜಕೀಯ ಒಮ್ಮತದ ಕೊರತೆಯಿಂದಾಗಿ ಇದು ನೆನಗುದಿಗೆ ಬಿದ್ದಿತ್ತು.

ಈಗ ಆಡಳಿತ ಪಕ್ಷ ಈ ಮಹಿಳಾ ಮೀಸಲಾತಿಯನ್ನು ಮಹಿಳಾ ಸಬಲೀಕರಣದ ದೊಡ್ಡ ಹೆಜ್ಜೆ ಎಂದು ಬಣ್ಣಿಸಿ ಜಾರಿಗೆ ತರಲು ಮುಂದಾಗಿದೆ, ವಿರೋಧ ಪಕ್ಷಗಳು ಚುನಾವಣಾ ಲಾಭಕ್ಕಾಗಿ ನಡೆಸಿದ “ರಾಜಕೀಯ ತಂತ್ರ” ಎಂದು ಟೀಕಿಸುತ್ತಿವೆ.

ಪ್ರಸ್ತುತ ಅನುಷ್ಠಾನ ಮಾಡಲು ಹೊರಟಿರುವ ಮಸೂದೆಯಲ್ಲಿ SC ಮತ್ತು ST ಮಹಿಳೆಯರಿಗೆ ಒಳಮೀಸಲಾತಿ ಇದೆ. ಅದರೆ, ಹಿಂದುಳಿದ ವರ್ಗಗಳ (OBC) ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಿಲ್ಲ. ಇದರಿಂದಾಗಿ ಮೀಸಲಾತಿಯ ಸೌಲಭ್ಯ ಕೇವಲ ಮೇಲ್ವರ್ಗದ ಅಥವಾ ಪ್ರಭಾವಿ ವರ್ಗದ ಮಹಿಳೆಯರಿಗೆ ಮಾತ್ರ ಸೀಮಿತವಾಗಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ.

ಇನ್ನು, ಈ ಮಹಿಳಾ ಮೀಸಲಾತಿ ಕೇವಲ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಮಹಿಳೆಯರಿಗೆ ಈ ಮೀಸಲಾತಿ ಅನ್ವಯವಾಗದಿರುವುದು ಪ್ರಾತಿನಿಧ್ಯದ ಅಪೂರ್ಣತೆಗೆ ಸಾಕ್ಷಿ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ. ಮಾತ್ರವಲ್ಲದೆ, ಮೀಸಲಾತಿ ಅಡಿಯಲ್ಲಿ ಮಹಿಳೆಯರು ಆಯ್ಕೆಯಾದರೂ ನಿಜವಾದ ಅಧಿಕಾರವನ್ನು ಅವರ ಪತಿ ಅಥವಾ ಕುಟುಂಬದ ಪುರುಷ ಸದಸ್ಯರು ಚಲಾಯಿಸುವ (‘ಸರಪಂಚ್ ಪತಿ’ ಸಂಸ್ಕೃತಿ) ಆತಂಕ ಶಾಸನಸಭೆಗಳ ಮಟ್ಟದಲ್ಲೂ ಎದುರಾಗಬಹುದು.

ಇದನ್ನೂ ಓದಿ : ಸಾಥನ್‌ಕುಲಂ ಪ್ರಕರಣ: ಅನ್ಯಾಯದ ವಿರುದ್ಧ ದೃಢ ಸಾಕ್ಷಿಯಾಗಿ ನಿಂತ ಹೆಡ್ ಕಾನ್‌ಸ್ಟೆಬಲ್ ರೇವತಿ

ಇನ್ನು, ರಾಜಕೀಯವಾಗಿ ಇಷ್ಟು ದೊಡ್ಡ ಸಾಂವಿಧಾನಿಕ ತಿದ್ಧುಪಡಿಯನ್ನು ತರುವಾಗ ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸದೆ, ತರಾತುರಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದು ವಿಪಕ್ಷಗಳು ಟೀಕಿಸುತ್ತಿವೆ.

ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ಭಾರತೀಯ ರಾಜಕಾರಣದ “ಪುರುಷ ಕೇಂದ್ರಿತ” ವ್ಯವಸ್ಥೆಯನ್ನು ಬದಲಾಯಿಸಿ ಸುಧಾರಣೆ ತರುವ ಶಕ್ತಿ ಹೊಂದಿದೆ. ಇದು ಕೇವಲ ಮಹಿಳೆಯರ ಉದ್ಧಾರವಲ್ಲ, ಬದಲಿಗೆ ಸಮಗ್ರ ಭಾರತದ ಪ್ರಗತಿಯ ಹಾದಿಯಾಗಿದೆ. ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಬೆಂಬಲವಿದ್ದಾಗ ಮಾತ್ರ ಈ ಕಾಯ್ದೆ ತನ್ನ ನೈಜ ಉದ್ದೇಶವನ್ನು ತಲುಪಲು ಸಾಧ್ಯ.

ಮಹಿಳಾ ಮೀಸಲಾತಿ ಎನ್ನುವುದು ಎಲ್ಲರೂ ಸ್ವಾಗತಿಸುವ ನಿರ್ಧಾರವಾದರೂ, ಅದನ್ನು ಜಾರಿಗೆ ತರುವ ವಿಧಾನ ಮತ್ತು ಅದರ ಹಿಂದಿರುವ ರಾಜಕೀಯ ಲೆಕ್ಕಾಚಾರಗಳು ಟೀಕೆಗೆ ಗುರಿಯಾಗಿವೆ. ಕಾಯ್ದೆ ಕೇವಲ ಕಾಗದಕ್ಕಷ್ಟೇ ಸೀಮಿತವಾಗದೆ ಅಥವಾ ಚುನಾವಣಾ ಪ್ರಚಾರದ ಅಸ್ತ್ರವಾಗದೆ, ಪಾರದರ್ಶಕವಾಗಿ ಮತ್ತು ಸರ್ವ ಪಕ್ಷಗಳ ಸಮ್ಮತಿಯಿಂದ ಜಾರಿಯಾದಾಗ ಮಾತ್ರ ಅದರ ಮೌಲ್ಯ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...