ಇಮ್ರಾನ್ ಖಾನ್‌ ಅವರಿಗೆ ಎರಡು ವಾರ ಜಾಮೀನು ನೀಡಿದ ಇಸ್ಲಮಾಬಾದ್ ಹೈಕೋರ್ಟ್

Date:

  • ಇಮ್ರಾನ್ ಖಾನ್‌ ಅವರಿಗೆ ಎರಡು ವಾರಗಳ ಅವಧಿಗೆ ಜಾಮೀನು
  • ಇಸ್ಲಮಾಬಾದ್ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆದ ವಿಚಾರಣೆ

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಎರಡು ವಾರಗಳ ಜಾಮೀನು ನೀಡಿದೆ.

ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ (ಎನ್‌ಎಬಿ) ಇಸ್ಲಾಮಾಬಾದ್ ಹೈಕೋರ್ಟ್‌ನ ಆವರಣದಿಂದ ಇಮ್ರಾನ ಖಾನ್ ಅವರನ್ನು ಬಂಧಿಸಿದ ಕ್ರಮವನ್ನು “ಅಸಿಂಧು ಮತ್ತು ಕಾನೂನುಬಾಹಿರ” ಎಂದು ಸುಪ್ರೀಂ ಕೋರ್ಟ್ ಗುರುವಾರ (ಮೇ 11) ಹೇಳಿದ ನಂತರ ಹೈಕೋರ್ಟ್ ಇದೀಗ ಜಾಮೀನಿಗೆ ಅನುಮೋದನೆ ನೀಡಿದೆ.

ಭದ್ರತಾ ಕಾರಣಗಳಿಂದ ಶುಕ್ರವಾರದ ವಿಚಾರಣೆಯು ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಇಸ್ಲಾಮಾಬಾದ್ ಹೈಕೋರ್ಟ್‌ಗೆ ಸುರಕ್ಷಿತ ಬೆಂಗಾವಲು ಪಡೆಯಲ್ಲಿ ಇಮ್ರಾನ್‌ ಖಾನ್ ಆಗಮಿಸಿದರು. ಮಾಜಿ ಪ್ರಧಾನಿಯವರ ಭದ್ರತೆಗೆ ನೂರಾರು ಪೊಲೀಸರು ಮತ್ತು ಅರೆಸೈನಿಕರು ನ್ಯಾಯಾಲಯದ ಕಟ್ಟಡದ ಸುತ್ತ ಸುತ್ತುವರಿದಿದ್ದರು.

“ನ್ಯಾಯಾಲಯವು ಇಮ್ರಾನ್ ಖಾನ್‌ ಅವರಿಗೆ ಎರಡು ವಾರಗಳ ಮಧ್ಯಂತರ ಜಾಮೀನು ನೀಡಿದೆ ಮತ್ತು ಭ್ರಷ್ಟಾಚಾರದ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ” ಎಂದು ಇಮ್ರಾನ್‌ ಅವರ ವಕೀಲ ಖವಾಜಾ ಹ್ಯಾರಿಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಆಸ್ಟ್ರೇಲಿಯಾದ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡತಿ

ಕಳೆದ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿದ್ದ ಇಮ್ರಾನ್‌ ಅವರನ್ನು ಮಂಗಳವಾರ ಅಲ್- ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್‌ನ ಆವರಣದ ಹೊರಗಿನಿಂದ ಬಂಧಿಸಲಾಯಿತು. ದೇಶದ ಉನ್ನತ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾದ ಎನ್‌ಎಬಿ ಇಮ್ರಾನ್‌ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.

ಬಂಧನದ ನಂತರ ಉಂಟಾದ ಗಲಭೆಯಲ್ಲಿ ದೇಶಾದ್ಯಂತ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮತ್ತು ಆಸ್ಪತ್ರೆಗಳ ಮೂಲಗಳು ತಿಳಿಸಿವೆ.

“ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಚುನಾವಣೆಯಲ್ಲಿ ಅವರ ಪಿಟಿಐ ಪಕ್ಷ ಬಹುಮತ ಗಳಿಸಬಾರದು ಎನ್ನುವ ಉದ್ದೇಶದಿಂದ ಮಾಜಿ ಪ್ರಧಾನಿಯವರನ್ನು ಬಂಧಿಸಲಾಗುತ್ತಿದೆ” ಎಂದು ಇಮ್ರಾನ್‌ ಖಾನ್‌ ಬೆಂಬಲಿಗರು ಆರೋಪಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹದಗೆಟ್ಟ ರಾಜತಾಂತ್ರಿಕ ಸಂಬಂಧ; ಕೆನಡಾದಲ್ಲಿರುವ ಭಾರತೀಯ ನಾಗರಿಕರಿಗೆ ಸಲಹಾ ಸೂಚಿ ಜಾರಿ

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದ್ದಿರುವ...

ಬ್ರೆಝಿಲ್‌ನಲ್ಲಿ ಭೀಕರ ವಿಮಾನ ಅಪಘಾತ: ಪ್ರವಾಸಕ್ಕೆ ಹೋದ 14 ಮಂದಿ ದಾರುಣ ಸಾವು

ಘಟನೆಯಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತ್ಯು ಪ್ರವಾಸಿ ಪಟ್ಟಣವಾದ ಬಾರ್ಸೆಲೋಸ್...

ಕೊರಿಯಾದ ಯುವತಿ ಲೈವ್‌ನಲ್ಲಿರುವಾಗಲೇ ಲೈಂಗಿಕ ಕಿರುಕುಳ ನೀಡಿದ ಭಾರತೀಯ ವ್ಯಕ್ತಿ!

ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಯುವಕನನ್ನು ಅಮಿತ್ ಎಂದು ಗುರುತಿಸಿದ ನೆಟ್ಟಿಗರು ಕೊರಿಯಾದ ಯುವತಿಯೋರ್ವಳು...

ಪ್ರೋಟೋಕಾಲ್ ಉಲ್ಲಂಘನೆ: ಬೈಡನ್‌ ಜಿ20 ಬೆಂಗಾವಲು ಪಡೆಯ ಚಾಲಕನ ಬಂಧನ

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಜಿ20 ಬೆಂಗಾವಲು ಪಡೆಯಲ್ಲಿದ್ದ ಚಾಲಕನನ್ನು...