2025 ಹಿನ್ನೋಟ | ನಡೆದು ಹೋಯ್ತು ದುರಂತಗಳ ಸರಮಾಲೆ

Date:

2025ನೇ ವರ್ಷ ಕೊನೆಗೊಳ್ಳುತ್ತಿದೆ. ಮುಂದೆ 2026ರ ಹೊಸ ವರ್ಷ ಹೊಸಿಲಿಗೆ ಬಂದು ನಿಂತಿದೆ. ಬೆಂಗಳೂರಿನಂತಹ ನಗರಗಳ ರಸ್ತೆಗಳಲ್ಲಿ ದೀಪಗಳು, ಹಬ್ಬದ ಉತ್ಸಾಹ ಮನೆ ಮಾಡಿದೆ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಹೊಸ ವರ್ಷ ಎಂದರೆ ಹೊಸ ಆಶಯಗಳು, ಹೊಸ ಹುರುಪು. ಆದರೆ ಈ ವರ್ಷದ ಕೊನೆಯಲ್ಲಿ ನಾವು ಹಿಂದಿನ ಕ್ಷಣಗಳನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ 2025 ವರ್ಷ ಭಾರತಕ್ಕೆ ಒಂದು ದೊಡ್ಡ ಪರೀಕ್ಷೆಯಂತಾಗಿತ್ತು. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ, ದೇಶವೇ ಬೆಚ್ಚಿಬೀಳುವಂತಹ ದುರಂತಗಳು, ದಾಳಿಗಳು ನಡೆದಿವೆ. ಸಾವಿರಾರು ಜನರು ಜೀವಗಳನ್ನ ಕಳೆದುಕೊಂಡಿದ್ದಾರೆ. ಕುಟುಂಬಗಳು ಕಣ್ಣೀರು ಸುರಿಸಿದೆ. ನಾವು 2025ರ ಪ್ರಮುಖ ದುರಂತಗಳನ್ನು ನೆನಪು ಮಾಡಿಕೊಳ್ಳುತ್ತ ಹೊಸ ವರ್ಷವನ್ನು ಸ್ವಾಗತಿಸೋಣ.

- Advertisement -

ಕುಂಭಮೇಳ ಕಾಲ್ತುಳಿತ
ಜನವರಿ 9 ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡದ 2025ರ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಯಾತ್ರಾರ್ಥಿಗಳ ಅನಿಯಂತ್ರಿತ ಹೆಚ್ಚಳವೇ ಈ ದುರಂತಕ್ಕೆ ಕಾರಣವಾಗಿದೆ. ಆದ್ರೆ ಯೋಗಿ ಆದಿತ್ಯನಾಥ್‌ ಸರ್ಕಾರ ಈ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನ ಬಯಲು ಮಾಡಿಯೇ ಇಲ್ಲ. ಕೆಲ ವರದಿಗಳ ಪ್ರಕಾರ ಸುಮಾರು 30 ಅಂತ ಇದ್ದರೆ, ಕೆಲವು ವರದಿಗಳು ಸಾವಿನ ಸಂಖ್ಯೆ ಹೆಚ್ಚಿದೆ ಅಂತ ಹೇಳಿದೆ. ಯುಪಿ ಸರ್ಕಾರ ಘಟನೆಯನ್ನ ನಿರ್ವಹಿಸಿದ ರೀತಿ ಮತ್ತು ಮಾಹಿತಿ ಪಾರದರ್ಶಕತೆಯ ಬಗ್ಗೆ ಟೀಕೆಗಳು ಕೇಳಿಬಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...
    ಕುಂಭ ಮೇಳ

    ದೆಹಲಿ ವಿಮಾನ ನಿಲ್ದಾಣ ಕಾಲ್ತುಳಿತ ಘಟನೆ
    ನವದೆಹಲಿ ರೈಲು ನಿಲ್ದಾಣದಲ್ಲಿ 2025ರ ಫೆಬ್ರವರಿ 15ರಂದು ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಮಹಾಕುಂಭಮೇಳ ನಡೆಯುತ್ತಿದ್ದ ಪ್ರಯಾಗ್‌ರಾಜ್‌ಗೆ ರೈಲುಗಳನ್ನ ಹತ್ತಲು ನಿಲ್ದಾಣದ ಫ್ಲಾಟ್‌ಫಾರ್ಮ್‌ ಸಂಖ್ಯೆ 12 ಮತ್ತು 14ರಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಗುಂಪಿನಿಂದಾಗಿ ಈ ದುರಂತ ಸಂಭವಿಸಿತ್ತು. ಜನರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆಗಳನ್ನ ಮಾಡುವಲ್ಲಿ ದೆಹಲಿ ಸರ್ಕಾರ ಸೋತಿತ್ತು. ಸರ್ಕಾರದ ವೈಫಲ್ಯಕ್ಕೆ ಅಮಾಯಕ ಜನರು ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಹಠಾತ್‌ ಪ್ರವಾಹಗಳು
    ಪಶ್ಚಿಮ ಹಿಮಾಲಯದಾದ್ಯಂತ ಮೇಘಸ್ಫೋಟಗಳು ಮತ್ತು ದಿಢೀರ್ ಪ್ರವಾಹಗಳು, ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಆರಂಭದವರೆಗೆ ಉತ್ತರ ಬಯಲು ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ನದಿ ಪ್ರವಾಹ ಮತ್ತು ಮಾನ್ಸೂನ್ ನಂತರದ ಅವಧಿಯಲ್ಲಿ ದಕ್ಷಿಣದಲ್ಲಿ ಮಳೆಯಿಂದ ಪ್ರವಾಹ ಉಂಟಾಯಿತು. ಪಾಟ್ನಾ, ಗುವಾಹಟಿ ಮತ್ತು ಮುಂಬೈ ಸೇರಿದಂತೆ ಭಾರತದ ನಗರಗಳು ಮಾನ್ಸೂನ್ ಮಳೆ, ನದಿ ಉಕ್ಕಿ ಹರಿಯುವಿಕೆ ಮತ್ತು ಕಳಪೆ ಒಳಚರಂಡಿಯಿಂದ ಉಂಟಾಗುವ ಪ್ರವಾಹಕ್ಕೆ ಹೆಚ್ಚು ಒಳಗಾದವು. ಗುಜರಾತ್ ರಾಜ್ಯದಲ್ಲಿ ಭಾರೀ ಮಾನ್ಸೂನ್ ಪೂರ್ವ ಮಳೆಯಿಂದ ಮೇ ಆರಂಭದಲ್ಲಿ 14 ಮಂದಿ ಮೃತಪಟ್ಟಿದ್ದರು.

    ಉತ್ತರಕಾಶಿ ಮೇಘಸ್ಫೋಟ
    ಆಗಸ್ಟ್‌ನಲ್ಲಿ, ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿತು, ಇದು ಭೀಕರ ಪ್ರವಾಹಕ್ಕೆ ಕಾರಣವಾಯಿತು. ಹಲವು ಸಾವು ನೋವುಗಳನ್ನು ಕಂಡವು. ಮೇಘಸ್ಫೋಟವು ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಕೆಲವೇ ನಿಮಿಷಗಳಲ್ಲಿ ಒಂದು ಶತಕೋಟಿ ಲೀಟರ್‌ಗಿಂತಲೂ ಹೆಚ್ಚು ನೀರನ್ನು ಹೊರಹಾಕಿತು. ಹಿಮಾಲಯ ಪ್ರದೇಶಗಳಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು. ಭಾರತವು ತೀವ್ರ ಮಾನ್ಸೂನ್ ಮಳೆ, ಮೇಘಸ್ಫೋಟ ಮತ್ತು ಹಿಮನದಿ ಘಟನೆಗಳಿಂದ ದೇಶದ 45% ಕ್ಕಿಂತ ಹೆಚ್ಚು ಪ್ರದೇಶದ ಮೇಲೆ ಪರಿಣಾಮ ಬೀರಿತು, ದೇಶಾದ್ಯಂತ 1,500 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು.

    ಉತ್ತರಾಖಂಡ

    ಈಶಾನ್ಯ ಪ್ರವಾಹ: ತೀವ್ರ ಮಳೆ, ಭೂಕುಸಿತಗಳು
    ನಿರಂತರ ಮಳೆಯು ಅನೇಕ ರಾಜ್ಯಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಗೆ ಕಾರಣವಾಯಿತು. ಜೂನ್ 2 ರ ವೇಳೆಗೆ ಕನಿಷ್ಠ 34 ಸಾವುಗಳು ವರದಿಯಾಗಿವೆ. ಸಾಮೂಹಿಕ ಸ್ಥಳಾಂತರಿಸುವಿಕೆಗಳ ಜೊತೆಗೆ – ಸಿಕ್ಕಿಂನಿಂದ ಪ್ರವಾಸಿಗರು ಸ್ಥಳಾಂತರಗೊಂಡರು. ಮೇಘಾಲಯದಲ್ಲಿ ಜನರು ಸಿಲುಕಿಕೊಂಡರು ಮತ್ತು ಸಿಲ್ಚಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಅಸ್ಸಾಂನಲ್ಲಿ ವ್ಯಾಪಕ ಪ್ರವಾಹವುಂಟಾಯಿತು. ಹಿಮಾಚಲ ಪ್ರದೇಶವು 2025 ರ ಅತ್ಯಂತ ನಿರಂತರ ಮತ್ತು ಹಾನಿಕಾರಕ ಮಾನ್ಸೂನ್ ಪರಿಣಾಮಗಳನ್ನು ಕಂಡಿತು. ಜುಲೈ ಮಧ್ಯದಲ್ಲಿ ರಿಲೀಫ್‌ವೆಬ್ ಪರಿಸ್ಥಿತಿ ಮೇಘಸ್ಫೋಟ, ಹಠಾತ್ ಪ್ರವಾಹ ಮತ್ತು ಭೂಕುಸಿತಗಳು ಸೇರಿದಂತೆ ತೀವ್ರವಾದ ಜಲ-ಹವಾಮಾನ ಘಟನೆಗಳಿಂದ ರಾಜ್ಯವು ತೀವ್ರ ಪರಿಣಾಮ ಎದುರಿಸಿತು. ಆಗಸ್ಟ್ ಆರಂಭದಲ್ಲಿ, ಉತ್ತರಾಖಂಡದ ಉತ್ತರಕಾಶಿ ಜಿಲ್ಲೆ ವಿನಾಶಕಾರಿ ಮೇಘಸ್ಫೋಟ ಸಂಬಂಧಿತ ಹಠಾತ್ ಪ್ರವಾಹ ಮತ್ತು ಶಿಲಾಖಂಡರಾಶಿಗಳ ಹರಿವನ್ನು ಕಂಡಿತು. ಗಂಗೋತ್ರಿ ಮಾರ್ಗದಲ್ಲಿ ಧರಾಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಅಕ್ಟೋಬರ್‌ನಲ್ಲಿ ತಮಿಳುನಾಡಿನಲ್ಲಿ ಚಂಡಮಾರುತ ಪ್ರಭಾವದಿಂದ ವ್ಯಾಪಕ ಮಳೆಯಾಗಿತ್ತು. ಡಿಸೆಂಬರ್ ಆರಂಭದಲ್ಲಿ, ದಿತ್ವಾ ಚಂಡಮಾರುತದಿಂದ ತಮಿಳುನಾಡು, ಕರ್ನಾಟಕದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾದವು.

    ಪಹಲ್ಗಾಮ್‌ ಭಯೋತ್ಪಾದಕ ದಾಳಿ
    ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (ಏಪ್ರಿಲ್‌) ಪಾಕ್‌ ಪ್ರಾಯೋಜಿತ ಭಯೋತ್ಪಾದಕರು ಏಕಾಏಕಿ ಪ್ರವಾಸಿಗರ ಮೇಲೆ ಗುಂಡಿನ ಸುರಿಮಳೆಗೈದ ಘಟನೆಯಲ್ಲಿ 26 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. 4 ಜನ ಭಯೋತ್ಪಾದಕರು ಶಸ್ತ್ರಸಜ್ಜಿತರಾಗಿ ದಾಳಿ ಮಾಡಿದಾಗ, ಪಹಲ್ಗಾಮ್‌ನಂತ ಸೂಕ್ಷ್ಮ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ಯಾಕೆ ಇರಲಿಲ್ಲ? ಭಯೋತ್ಪಾದಕರು ಭಾರತದ ಒಳಗೆ ಹೇಗೆ ಬಂದರು? ಇದು ಭಾರತಕ್ಕೆ ಗುಪ್ತಚರ ಮಾಹಿತಿಯೂ ಸಿಕ್ಕಿರಲಿಲ್ವಾ? ಅನ್ನೋ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿದೆ.

    ಪಹಲ್ಗಾನ್ ದಾಳಿ

    ಅಹಮದಾಬಾದ್’ನಲ್ಲಿ ಏರ್ ಇಂಡಿಯಾ ವಿಮಾನ ಪತನ
    ಜೂನ್ 12ರಂದು ಗುಜರಾತಿನ ಅಹಮದಾಬಾದ್ ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ 32 ಸೆಕೆಂಡ್ ನಲ್ಲಿ ಪತನಗೊಂಡಿತ್ತು. 241 ಪ್ರಯಾಣಿಕರು ಈ ದುರಂತದಲ್ಲಿ ಮೃತ ಪಟ್ಟಿದ್ದರು. ಲಂಡನ್ ನಗರಕ್ಕೆ ಹೊರಟಿದ್ದ ವಿಮಾನ, ಏರ್ಪೋರ್ಟ್ ಪಕ್ಕ ಇರುವ ಬಿಜೆ ಮೆಡಿಕಲ್ ಕಾಲೇಜ್ ಹಾಸ್ಟೆಲ್ ಮೇಲೆ ಹೊತ್ತಿ ಉರಿದು ಪತನಗೊಂಡಿತ್ತು. ಹನ್ನೆರಡು crew ಸದಸ್ಯರೂ ಈ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಈ ವಿಮಾನ ದುರಂತದಲ್ಲಿ ಒಬ್ಬ ಪ್ರಯಾಣಿಕ ಪವಾಡಸದೃಶವಾಗಿ ಬಚಾವ್ ಆಗಿದ್ದ. ಗುಜರಾತ್ ರಾಜ್ಯದ ಮಾಜಿ ಸಿಎಂ ವಿಜಯ್ ರುಪಾನಿ ಕೂಡಾ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

    Air India crash 696x392 1

    ಬೆಂಗಳೂರಿನಲ್ಲಿ ಐಪಿಎಲ್ ಸಂಭ್ರಮಾಚರಣೆ ವೇಳೆ ಕಾಲ್ತುಳಿತ (ಜೂನ್ 4)
    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಆಚರಿಸುತ್ತಿದ್ದ ಸಮಯದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಮಾರಕ ಕಾಲ್ತುಳಿತ ಸಂಭವಿಸಿತ್ತು. ಕ್ರೀಡಾಂಗಣದ ಗೇಟ್‌ಗಳ ಹೊರಗೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟು, 47 ಜನರು ಗಾಯಗೊಂಡರು. ಅಭಿಮಾನಿಗಳು ಅಗಾಧ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರಣ, ಪೊಲೀಸರಿಗೆ ನಿಯಂತ್ರಿಸಲು ಸಾಧ್ಯವಾಗದೆ ಈ ದುರಂತ ಸಂಭವಿಸಿತ್ತು.

    ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ
    ನವೆಂಬರ್‌ 10ರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಸ್ಫೋಟವು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದರು. ರಸ್ತೆಯಲ್ಲೆಲ್ಲ ಮೃತದೇಹದ ತುಂಡುಗಳು ಬಿದ್ದಿರುವುದು ಈ ಸ್ಫೋಟದ ಭೀಕರತೆಯನ್ನು ತೆರೆದಿಟ್ಟಿತ್ತು. ಈ ಸ್ಫೋಟದ ಬಳಿಕ ದೆಹಲಿ, ಹರಿಯಾಣ, ಬಿಹಾರ, ಚಂಡೀಗಢ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿತ್ತು.

    ಗೋವಾ ನೈಟ್‌ ಕ್ಲಬ್‌ ದುರಂತ : ಡಿಸೆಂಬರ್‌ 6 ರಂದು ಗೋವಾದ ಅರ್ಪೋರಾದಲ್ಲಿರುವ ಬಿರ್ಚ್‌ ಬೈ ರೊಮಿಯೋ ಲೇನ್‌ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಅವಘಡದಲ್ಲಿ 25 ಮಂದಿ ಸಾವನ್ನಪ್ಪಿದ್ದರು.

    goafire

    ನಟ ವಿಜಯ ಬಹಿರಂಗ ಸಭೆಯ ಕಾಲ್ತುಳಿತ
    ಸೆಪ್ಟೆಂಬರ್‌ 27ರಂದು ತಮಿಳುನಾಡಿನ ಕರೂರ್‌ ಜಿಲ್ಲೆಯಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 41 ಜನರು ಪ್ರಾಣ ಕಳೆದುಕೊಂಡಿದ್ದರು. ಈ ರ್ಯಾಲಿಯನ್ನ ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಮತ್ತು ನಟ ವಿಜಯ್‌ ಆಯೋಜಿಸಿದ್ದರು. ನಟನ ಆಗಮನ ಸುಮಾರು 7 ಗಂಟೆಗಳ ಕಾಲ ವಿಳಂಬವಾಗಿತ್ತು. ವಿಜಯ್‌ನನ್ನ ನೋಡೋಕೆ ಜನ ಏಕಾಏಕಿ ಧಾವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.

    ಗುಜರಾತ್ ವೇರ್’ಹೌಸ್ ನಲ್ಲಿ ಸಂಭವಿಸಿದ ದುರಂತ
    ಎಪ್ರಿಲ್ 1ರಂದು ಗುಜರಾತ್’ನ ದೀಶಾ ಎನ್ನುವ ಪ್ರದೇಶದ ಗ್ರಾಮೀಣ ಭಾಗದಲ್ಲಿರುವ ವೇರ್’ಹೌಸ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 21 ಮಂದಿ ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ವೇಳೆ, 24 ನೌಕರರು ಅಲ್ಲಿದ್ದರು. ಕಳಪೆ ಮಟ್ಟದ ಅಲ್ಯೂಮಿನಿಯಂ ಪೌಡರ್ ನಿಂದಾಗಿ ಬೆಂಕಿ ತಗಲಿಕೊಂಡಿತ್ತು. ದೀಪಕ್ ಫತಡ್ಕಾ ಮಾಲೀಕತ್ವದ ಈ ವೇರ್’ಹೌಸ್ ಲೈಸೆನ್ಸ್ ಅವಧಿ ಒಂದು ವರ್ಷದ ಹಿಂದೆ ಮುಗಿದಿತ್ತು.

    ಇದನ್ನೂ ಓದಿ 2025 ಹಿನ್ನೋಟ : ನಿರಾಸೆಯ ಕತ್ತಲಲ್ಲಿ ಮಿನುಗಿದ ಭರವಸೆಯ ಕ್ರೀಡಾ ನಕ್ಷತ್ರಗಳು

    ಹೊತ್ತಿ ಉರಿದ ಹೈದರಾಬಾದ್ – ಬೆಂಗಳೂರು ಬಸ್
    ಅಕ್ಟೋಬರ್ 24ರಂದು ಬಸ್ ದುರಂತದಲ್ಲಿ 21 ಪ್ರಯಾಣಿಕರು ಸಜೀವ ದಹನರಾಗಿದ್ದರು. ಹೈದರಾಬಾದ್ – ಬೆಂಗಳೂರು ಬಸ್, ಕರ್ನೂಲ್ ಸಮೀಪ, ಟುವೀಲ್ಹರ್’ಗೆ ಢಿಕ್ಕಿ ಹೊಡೆದ ಪರಿಣಾಮ, ಬಸ್ಸಿಗೆ ಬೆಂಕಿ ತಗಲಿತ್ತು. ನಸುಕಿನ 3.30ರ ಸುಮಾರಿಗೆ ಈ ದುರಂತ ಸಂಭವಿಸಿತ್ತು ಮತ್ತು ವಿ.ಕಾವೇರಿ ಟ್ರಾವೆಲ್ಸ್ ಬಸ್ ಆಗಿತ್ತು.

    ಚಿತ್ರದುರ್ಗದಲ್ಲಿ ಹತ್ತಿ ಉರಿದ ಬಸ್
    ಡಿಸೆಂಬರ್ 25ರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಚಿತ್ರದುರ್ಗದ ಹಿರಿಯೂರು ತಾಲೂಕು ರಾ.ಹೆ.48ರ ಜವನಗೊಂಡನಹಳ್ಳಿಯ ಬಳಿ, ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಯೊಂಡು ಡಿವೈಡರ್ ದಾಟಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಸ್ಪೀಪರ್ ಕೋಚ್ ಬಸ್ ಹೊತ್ತಿ ಉರಿದ ವಿದ್ಯಮಾನ ನಡೆದಿದೆ. ಈ ದುರಂತದಲ್ಲಿ ಐದು ಮಂದಿ ಪ್ರಯಾಣಿಕರು ಮೃತ ಪಟ್ಟಿದ್ದರು. ಎರಡು ದಿನಗಳ ನಂತರ ಗಂಭೀರವಾಗಿ ಗಾಯಗೊಂಡಿದ್ದ ಬಸ್‌ ಚಾಲಕ ಕೂಡ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕುಮಟಾಗೆ ತೆರಳುತ್ತಿದ್ದ ಈ ಖಾಸಗಿ ಬಸ್ ದುರಂತದಲ್ಲಿ ಸಂಪೂರ್ಣ ಸುಟ್ಟು ಕರಕಲಾಯಿತು.

    WhatsApp Image 2025 09 25 at 3.16.47 PM e1758793879498
    + posts

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

    ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

    ‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!

    ​ಅಧಿಕಾರದ ಉತ್ತುಂಗದ ಸಂಭ್ರಮದ ನಡುವೆ, ಜನಸಾಮಾನ್ಯರ ಕಮರಿದ ಕನಸುಗಳ ಕಥೆಯೊಂದು ಮರೆಯಾಗುತ್ತಿದೆ....

    ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

    ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...