ವಿಧವೆಯರ ಘನತೆಗಾಗಿ ಪಣ ತೊಟ್ಟ 915 ಗ್ರಾಮಗಳು!

Date:

ಮಹಿಳೆಯರ ಸ್ವಾತಂತ್ರ್ಯ, ಹಕ್ಕು ಹಾಗೂ ಘನತೆಯನ್ನು ಕಾಪಾಡಲು ಸ್ಥಳೀಯ ಅಡಳಿತ ಮತ್ತು ಗ್ರಾಮಗಳು ಪಣತೊಟ್ಟಿವೆ. ಸೌಭಾಗ್ಯವತಿಯರ ಶಪಥ ಅಭಿಯಾನ ಆರಂಭಿಸಿವೆ. ಇದು ನಾಸಿಕ್ ಜಿಲ್ಲೆಯನ್ನು ದಾಟಿ, ಮಹಾರಾಷ್ಟ ಮಾತ್ರವಲ್ಲದೆ, ಇಡೀ ದೇಶದ ಉದ್ದಗಲಕ್ಕೂ ಪಸರಿಸಬೇಕು. ಮಹಿಳೆಯರ ಸ್ವಾಭಿಮಾನದ ಬದುಕಿಗೆ ಈ ಅಭಿಯಾನ ಇಡೀ ದಾಶಾದ್ಯಂತ ನಾಂದಿಹಾಡಬೇಕು.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕ್ರಾಂತಿಕಾರಕ ವಿದ್ಯಮಾನವೊಂದು ಘಟಿಸಿದೆ. ಜಿಲ್ಲೆಯ ಬರೋಬ್ಬರಿ 915 ಹಳ್ಳಿಗಳು ಇಡೀ ದೇಶದಲ್ಲಿ ಚಾಲ್ತಿಯಲ್ಲಿರುವ ದುಷ್ಟ, ಅವಮಾನಕರ ಪದ್ದತಿಗಳಲ್ಲಿ ಒಂದಾದ ವಿಧವೆಯರ ಕುಂಕುಮ-ಬಳೆ ತೆಗೆಯುವ ಅನಿಷ್ಠ ಪದ್ದತಿಯ ವಿರುದ್ಧ ಪಣತೊಟ್ಟಿವೆ.

- Advertisement -

ಹೌದು, ತಮ್ಮ ಗ್ರಾಮಗಳಲ್ಲಿ ಯಾವುದೇ ಮಹಿಳೆಗೆ ಆಕೆಯ ಗಂಡ ಸತ್ತ ಬಳಿಕ, ಆಕೆಯ ಕುಂಕುಮವನ್ನು ಅಳಿಸುವುದಿಲ್ಲ, ಆಕೆಯ ಬಳೆಗಳನ್ನು ಒಡೆಯುವುದಿಲ್ಲ. ವಿಧವೆಯರೂ ಸಹ ಎಲ್ಲ ಮಹಿಳೆಯರಂತೆ ಕುಂಕುಮ, ಬಳೆ, ಹೂವುಗಳನ್ನು ಧರಿಸಲು ಸ್ವತಂತ್ರರು. ಅವರನ್ನು ವಿಧವೆಯರೆಂದು ಅವಮಾನಿಸಿ, ಅವರ ಮೇಲೆ ದುಷ್ಟ ಪದ್ದತಿಗಳನ್ನು ಹೇರುವುದಿಲ್ಲ ಎಂದು 915 ಗ್ರಾಮಗಳು ಪ್ರತಿಜ್ಞೆ ಮಾಡಿವೆ. ಜತೆಗೆ, ಈ ಗ್ರಾಮಗಳ ಮಹಿಳೆಯರು ಪಿತೃಪ್ರಧಾನದ ದಾಷ್ಠ್ಯವುಳ್ಳ ಸಮಾಜವು ತಮ್ಮ ಘಟನೆಯನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಮತ್ತು ಮಹಿಳಾ ವಿರೋಧಿ ಅನಿಷ್ಠ ಪದ್ದತಿಯನ್ನು ಅನುಸರಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಅಂತೆಯೇ, ಸುಮಾರು 1,100ಕ್ಕೂ ಹೆಚ್ಚು ಗಂಡಸರು ತಮ್ಮ ಮರಣದ ಬಳಿಕ, ತಮ್ಮ ಸಂಗಾತಿಗೆ ಈ ಅವಮಾನಕರ ಸಾಂಪ್ರದಾಯಿಕ ಅನಿಷ್ಠ ಪದ್ದತಿಯನ್ನು ಅನುಸರಿಸಲು ಬಿಡುವುದಿಲ್ಲ ಎಂದು ಅಫಡವಿಟ್ ಮೇಲೆ ಸಹಿ ಹಾಕಿದ್ದಾರೆ.

ಈ ಕ್ರಾಂತಿಕಾರಕ ಬೆಳವಣಿಗೆ 915 ಗ್ರಾಮಗಳನ್ನು ಘಟಿಸಿದ್ದು ಕೇವಲ ಒಂದೇ ವಾರದಲ್ಲಿ. ಹೌದು, ಕಳೆದ ವಾರ, ನಾಸಿಕ್ ಜಿಲ್ಲೆಯ ಸುರ್ಗಾನಾದ ತಾಲೂಕಿನ ಮಸಾಲ್ ಗ್ರಾಮ ಪಂಚಾಯತಿಯ ಅಧಿಕಾರಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದರು. ಅವರ ಅಂತ್ಯಕ್ರಿಯೆಗೆ ಸಿದ್ದತೆಗಳು ನಡೆಯುತ್ತಿದ್ದವು. ಆಗ, ಅವರು ಬರೆದಿಟ್ಟಿದ್ದ ಸಂದೇಶವೊಂದು ದೊರೆಯಿತು. ಅದನ್ನು ಗ್ರಾಮಸ್ಥರ ಎದುರು ಧ್ವನಿವರ್ಧಕದಲ್ಲಿ ಓದಲಾಯಿತು.

ಆ ಸಂದೇಶದಲ್ಲಿ; “ಸಿಂಧೂರ, ಬಳೆಗಳು, ಕಾಲುಂಗುರ ಹಾಗೂ ಮಂಗಳಸೂತ್ರವನ್ನು ಮುತ್ತೈದೆಯ ಸಂಕೇತವೆಂದು ಬಿಂಬಿಸಲಾಗಿದೆ. ಆದರೆ, ಈ ಎಲ್ಲವನ್ನೂ ಪತಿ ಮೃತಪಟ್ಟಾಗ ತೆಗೆಯಲಾಗುತ್ತದೆ. ಇದು, ಮಹಿಳೆಯರ ಘನತೆಗೆ ವಿರುದ್ಧವಾದುದು. ನಮ್ಮ ಮಹಿಳೆಯರ ಘನತೆಯನ್ನು ಕಾಪಾಡಿಕೊಳ್ಳುವ ಪರಿಕಲ್ಪನೆಗೆ ಅನುಗುಣವಾಗಿ ಈ ದುಷ್ಟ ಸಂಪ್ರದಾಯವನ್ನು ನಾವು ಅನುಸರಿಸಬಾರದು. ವಿಧವೆಯರು ಸಾಮಾಜಿಕ ಅವಮಾನವನ್ನು ಎದುರಿಸಲು ಬಿಡಬಾರದು. ನನ್ನ ಸಾವಿನ ಬಳಿಕ, ನನ್ನ ಪತ್ನಿ ಇಂತಹ ಅವಮಾನವನ್ನು ಎದುರಿಸದಂತೆ ನೋಡಿಕೊಳ್ಳುವುದಾಗಿ ನಮ್ಮ ಕುಟುಂಬ ನಿರ್ಧರಿಸಿದೆ. ಇದು ಅನಿಷ್ಠ ಪದ್ದತಿಯನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಮೊದಲ ಪ್ರಯತ್ನವಾಗಿದೆ” ಎಂದು ಘೋಷಿಸಲಾಗಿತ್ತು.

ಈ ಸಂದೇಶವು ಗ್ರಾಮಸ್ಥರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು. ಯಾಕೆಂದರೆ, ಶತಮಾನಗಳಿಂದ ಪತಿ ಸತ್ತ ಬಳಿಕ ಮಹಿಳೆಯ ವಿವಾಹದ ಸಂಕೇತಗಳೆಂದು ಪರಿಗಣಿಸಲಾದ ಕುಂಕುಮ, ತಾಳಿ, ಕಾಲುಂಗುರ, ಬಳೆ ಹಾಗೂ ಹೂವುಗಳನ್ನು ಸಾರ್ವಜನಿಕವಾಗಿ ತೆಗೆದುಹಾಕುವ ಅನಿಷ್ಠ ಸಂಪ್ರದಾಯ ಮಹಾರಾಷ್ಟ್ರವೂ ಸೇರಿದಂತೆ ಇಡೀ ದೇಶಾದ್ಯಂತ ಪ್ರಚಲಿತವಾಗಿದೆ.

ಮಹಾರಾಷ್ಟ್ರದಲ್ಲಿ ಗ್ರಾಮಸ್ಥರು ಒಟ್ಟಾಗಿ ಸೇರಿ ವಿಧವೆಯನ್ನು ಸುತ್ತುವರೆದು ಆಕೆಯ ಸಿಂಧೂರ, ಹೂವು, ಕಾಲುಂಗುರ, ಬಳೆಗಳನ್ನು ತೆಗೆಯುವುದನ್ನು ಪಾಲಿಸಲಾಗುತ್ತದೆ. ಆದರೆ, ಇದು ಗಂಡ ಸತ್ತ ಕಾರಣಕ್ಕಾಗಿ ಮಹಿಳೆಯರು ಸಮಾಜದಲ್ಲಿ ತಮ್ಮ ಸ್ಥಾನಮಾನದ ಕೊರತೆಯನ್ನು ಸಾಮಾಜಿಕವಾಗಿ ಕಳೆದುಕೊಳ್ಳುವ ಅವಮಾನಕರ ಪದ್ದತಿಯಾಗಿದೆ. ಅನೇಕ ನಗರ ಪ್ರದೇಶಗಳಲ್ಲಿ ಇದನ್ನು ಬಹಿರಂಗವಾಗಿ ಅನುಸರಿಸದಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇದು ಇನ್ನೂ ಸಾಮಾನ್ಯ ಅನುಕರಣೆಯಾಗಿ ಬೇರೂರಿದೆ.

ಈ ಅನಿಷ್ಠ ಪದ್ದತಿಯ ಬೇರನ್ನು ಚಿವುಟಿಹಾಕುವ ಪ್ರಯತ್ನ ಮಸಾಲ್ ಗ್ರಾಮ ಪಂಚಾಯತಿಯ ಅಧಿಕಾರಿಯಿಂದ ಆರಂಭವಾಯಿತು. ಆ ಅಧಿಕಾರಿ ಇಂತಹದೊಂದು ಸಂದೇಶ ರವಾನಿಸಲು ಕಾರಣವಾಗಿದ್ದು, ಕಳೆದ ಮೂರು ತಿಂಗಳುಗಳಿಂದ ನಾಸಿಕ್ ಜಿಲ್ಲಾ ಪರಿಷತ್ತು ನಡೆಸುತ್ತಿರುವ ‘ನವಚೇತನ ಕಾರ್ಯಕ್ರಮ’. ಈ ಕಾರ್ಯಕ್ರಮದ ಅಡಿಯಲ್ಲಿ ವಿಧವೆಯರ ಮೇಲಿನ ದೌರ್ಜನ್ಯದ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? 2025 ಹಿನ್ನೋಟ | ನಿಲ್ಲದ ದೌರ್ಜನ್ಯ; ಮಹಿಳೆಯರ ಪಾಲಿಗೆ ಕಹಿಯೇ ಹೆಚ್ಚು

ಈ ಕಾರ್ಯಕ್ರಮದಿಂದ ಪ್ರೇರೇಪಿತರಾದ ಗ್ರಾಮ ಪಂಚಾಯತಿಯ ಅಧಿಕಾರಿ, ವಿಧವೆಯರನ್ನು ಅವಮಾನಿಸುವ ಅನಿಷ್ಠ ಪದ್ದತಿಯ ವಿರುದ್ಧದ ನಿರ್ಣಯವನ್ನು ತಮ್ಮ ಕುಟುಂಬದಲ್ಲಿ ಜಾರಿಗೆ ತಂದರು. ಅವರ ಪ್ರಯತ್ನವು ಹಲವರನ್ನು ಪ್ರೇರೇಪಿಸಿದೆ. ಈಗ, ನಾಸಿಕ್ ಜಿಲ್ಲೆಯ 915 ಹಳ್ಳಿಗಳಿಗೆ ಹರಡಿದೆ. ಸಾವಿರಾರು ಕುಟುಂಬಗಳ ಮನಮುಟ್ಟಿದೆ. ಮನ ಪರಿವರ್ತನೆ ಮಾಡಿದೆ. ಈ 915 ಹಳ್ಳಿಗಳು ತಮ್ಮ ಹಳ್ಳಿಗಳಲ್ಲಿ ಈ ದುಷ್ಟ ಸಂಪ್ರದಾಯವನ್ನು ಇನ್ನು ಮುಂದೆ ಅನುಸರಿಸುವುದಿಲ್ಲ ಎಂದು ನಿರ್ಣಯವನ್ನು ಅಂಗೀಕರಿಸಿವೆ.

ಅಲ್ಲದೆ, 1,100ಕ್ಕೂ ಹೆಚ್ಚು ದಂಪತಿಗಳು ತಮ್ಮ ಮರಣದ ನಂತರ ತಮ್ಮ ಸಂಗಾತಿಗಳು ಈ ದುಷ್ಟ ಪದ್ದತಿಯನ್ನು ಅನುಸರಿಸುವುದಿಲ್ಲ ಮತ್ತು ಅನುಸರಿಸಲು ಬಿಡುವುದಿಲ್ಲವೆಂದು 100 ರೂಪಾಯಿಗಳ ಬಾಂಡ್ ಪೇಪರ್‌ನಲ್ಲಿ ಸಹಿ ಮಾಡಿವೆ. ಈ ಅಫಿಡವಿಟ್‌ಗೆ ‘ಸೌಭಾಗ್ಯಾಚೆ ಶಪತ್ಪಾತ್ರ’, ಅಂದರೆ, ‘ಸೌಭಾಗ್ಯವತಿಯರ ಶಪಥ’ ಎಂದು ಹೆಸರಿಡಲಾಗಿದೆ.

“ನಾವು ಮಹಾತ್ಮ ಗಾಂಧಿ, ಫುಲೆ ಮತ್ತು ಗೋಪಾಲ್ ಗಣೇಶ್ ಅಗರ್ಕರ್ ಅವರ ಪ್ರಗತಿಪರ ವಿಚಾರಗಳನ್ನು ಅನುಸರಿಸುತ್ತೇವೆ. ಸಮಾಜದಲ್ಲಿ ನಮ್ಮ ಜವಾಬ್ದಾರಿಯನ್ನು ನಾವು ಅರಿತಿದ್ದೇವೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆ, ಸ್ವಾತಂತ್ರ್ಯ ಹಾಗೂ ಘನತೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಇಂದಿಗೂ ಸಹ, ಒಬ್ಬ ಮಹಿಳೆ ತನ್ನ ಪತಿಯ ಮರಣದ ನಂತರ ಅನಿಷ್ಠ ಪದ್ದತಿಗಳಿಂದ ಅವಮಾನಕ್ಕೆ ಒಳಗಾಗುತ್ತಾಳೆ. ಆಕೆಯ ಆಭರಣಗಳನ್ನು ಕಿತ್ತೊಗೆಯುವುದು, ಆಕೆಯ ಸಿಂಧೂರವನ್ನು ಅಳಿಸುವುದು, ಬಣ್ಣದ ಬಟ್ಟೆಗಳನ್ನು ಧರಿಸಂತೆ ತಡೆಯುವುದು ಮುಂತಾದ ದುಷ್ಟ ಸಂಪ್ರದಾಯಗಳು ಮಹಿಳೆಯರ ಮೇಲಿನ ಸಾಮಾಜಿಕ ಮತ್ತು ಧಾರ್ಮಿಕ ನಿರ್ಬಂಧಗಳಾಗಿವೆ. ಈ ಪದ್ದತಿಗಳು ಮಹಿಳೆಯರಿಗೆ ಸಾಕಷ್ಟು ನೋವುಂಟು ಮಾಡುತ್ತವೆ. ಇವೆಲ್ಲವೂ ಅವೈಜ್ಞಾನಿಕವಾಗಿದ್ದು, ಆಕೆಯ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಆದ್ದರಿಂದ, ನಾವು ಅಂತಹ ಯಾವುದೇ ದುಷ್ಟ ಸಂಪ್ರದಾಯಗಳನ್ನು ಅನುಸರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇವೆ. ಈ ದುಷ್ಟ ಸಂಪ್ರದಾಯಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಲು ನಾವು ಕೆಲಸ ಮಾಡುತ್ತೇವೆ. ಮಹಿಳೆಯರ ಸ್ವಂತ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ನಾವು ಏನನ್ನೂ ಹೇರುವುದಿಲ್ಲ” ಎಂದು ಗ್ರಾಮಗಳು ಶಪತಗೈದಿವೆ.

ಈವರೆಗೆ ಅಫಿಡವಿಟ್‌ಗೆ ಸಹಿ ಮಾಡಲಾದ ಗ್ರಾಮಗಳ ಪೈಕಿ, ನಾಸಿಕ್ ಜಿಲ್ಲೆಯ ಸಿನ್ನಾರ್ ಪ್ರದೇಶದ ಗುಲ್ವಾಂಚ್ ಎಂಬ ಒಂದೇ ಗ್ರಾಮದಲ್ಲಿ 250 ದಂಪತಿಗಳು ಅಫಿಡವಿಟ್‌ಗೆ ಸಹಿಹಾಕಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಹ ಈ ಅನಿಷ್ಠ ಪದ್ದತಿಯ ವಿರುದ್ಧ ಪೋಷಕರು ಮತ್ತು ಹಿರಿಯರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ. ಜೊತೆಗೆ, ಬೀದಿ ನಾಟಕಗಳ ಮೂಲಕ ಹಳ್ಳಿಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಗ್ರಾಮಸ್ಥರನ್ನು ಅಫಿಡವಿಟ್‌ಗಳಿಗೆ ಸಹಿ ಹಾಕುವಂತೆ ಮನವೊಲಿಸುತ್ತಿದ್ದಾರೆ.

ಈ ನಿರ್ಣಯಗಳು ಮಹಿಳೆಯರಲ್ಲಿ ಹರ್ಷೋದ್ಘಾರ ಮೂಡಿಸಿವೆ. ತಮ್ಮ ಗ್ರಾಮವು ಅನಿಷ್ಠ ಪದ್ದತಿಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದನ್ನು ಕಂಡ ಮಹಿಳೆಯೊಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡರು. “ಕುಂಕುಮ, ಬಳೆ, ತಾಳಿಯಂತಹ ಆಭರಣಗಳನ್ನು ತೆಗೆದುಹಾಕಲು ಯಾರೂ ಬಿಡಬಾರದು. ಈ ಅನಿಷ್ಠ ಪದ್ದತಿಯ ವಿರುದ್ಧ ಕಾನೂನು ಜಾರಿಗೆ ಬರಬೇಕು. ಈ ನಿರ್ಣಯವು ಮಹಿಳೆಯರ ಘನತೆಯನ್ನು ಕಾಪಾಡಲು ಅತೀ ಮುಖ್ಯ” ಎಂದು ಅವರು ಹೇಳಿದ್ದಾರೆ.

WhatsApp Image 2025 12 28 at 11.29.06 AM

ಗ್ರಾಮಸ್ಥರ ತ್ವರಿತ ಸ್ಪಂದನೆಯ ಕುರಿತು ಮಾತನಾಡಿರುವ ನಾಸಿಕ್ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಓಂಕಾರ್ ಪವಾರ್, “ಮಹಾರಾಷ್ಟ್ರವು ಪ್ರಗತಿಪರ ರಾಜ್ಯವಾಗಿದೆ. ನಮ್ಮ ರಾಜ್ಯ ಸಾಮಾಜಿಕ ಸುಧಾರಣೆಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ಗಂಡ ಸತ್ತಾಗ ಅನುಸರಿಸಲಾಗುವ ಪದ್ಧತಿಗಳು ಮಹಿಳೆಯರ ಘನತೆಯನ್ನು ಕಸಿದುಕೊಳ್ಳುವುದಲ್ಲದೆ, ಅವರು ತಮ್ಮ ಸಂಗಾತಿಯನ್ನು ಕಳೆದುಕೊಂಡ ನಂತರ ಸಾಮಾಜಿಕ ವ್ಯವಸ್ಥೆಯಲ್ಲಿ ಕೀಳರಿಮೆ ಹೊಂದುವಂತೆ ಮಾಡುತ್ತವೆ. ಅದಕ್ಕಾಗಿಯೇ ನಾವು ಈ ಕಾರ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ವಿಧವೆಯರ ಸಾಮಾಜಿಕ ಸಬಲೀಕರಣಕ್ಕಾಗಿ, ನಾವು ಪ್ರತಿ ಗ್ರಾಮದಲ್ಲಿ ‘ಹಲ್ದಿ-ಕುಂಕುಮ’ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ವಿಧವೆಯರ ವಿರುದ್ಧ ಯಾವುದೇ ಸಾಮಾಜಿಕ ತಾರತಮ್ಯ ಇರಬಾರದು ಎಂಬುದು ನಮ್ಮ ಅಭಿಯಾನದ ಉದ್ದೇಶ” ಎಂದಿದ್ದಾರೆ.

ನಿಜಕ್ಕೂ ಇದೊಂದು ಕ್ರಾಂತಿಕಾರಕ ಅಭಿಯಾನ. ಸ್ಥಳೀಯ ಅಡಳಿತ ಮತ್ತು ಗ್ರಾಮಗಳು ಸಾಮಾಜಿಕ ಶೋಷಣೆಯೊಂದರ ವಿರುದ್ಧ ಸೆಟೆದು ನಿಂತಿವೆ. ನಿರ್ಣಯ ಕೈಗೊಂಡಿವೆ. ಮಹಿಳೆಯರ ಸ್ವಾತಂತ್ರ್ಯ, ಹಕ್ಕು ಹಾಗೂ ಘನತೆಯನ್ನು ಕಾಪಾಡಲು ಒಗ್ಗೂಡಿವೆ. ಪಣತೊಟ್ಟಿವೆ. ಈ ಅಭಿಯಾನವು ನಾಸಿಕ್ ಜಿಲ್ಲೆಯನ್ನು ದಾಟಿ, ಮಹಾರಾಷ್ಟ ಮಾತ್ರವಲ್ಲದೆ, ಇಡೀ ದೇಶದ ಉದ್ದಗಲಕ್ಕೂ ಪಸರಿಸಬೇಕು. ಮಹಿಳೆಯರ ಸ್ವಾಭಿಮಾನದ ಬದುಕಿಗೆ ಈ ಅಭಿಯಾನ ಇಡೀ ದಾಶಾದ್ಯಂತ ನಾಂದಿಹಾಡಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...