ಚುನಾವಣಾ ಬಾಂಡ್ ರದ್ದಾದ ನಂತರ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ: ಶೇ. 82ರಷ್ಟು ಹಣ ಪಡೆದ ಬಿಜೆಪಿ

Date:

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಕೊಡುವುದನ್ನು ರದ್ದುಗೊಳಿಸಿದ ನಂತರದ ಮೊದಲ ಹಣಕಾಸು ವರ್ಷದಲ್ಲಿ (2024-25) 3,811 ಕೋಟಿಗಳಷ್ಟು ಹಣವನ್ನು ಚುನಾವಣಾ ಟ್ರಸ್ಟ್‌ಗಳ ಮೂಲಕ ದೇಣಿಗೆ ಪಡೆದಿವೆ ಎಂದು ಚುನಾವಣಾ ಆಯೋಗವೇ ಬಹಿರಂಗ ಪಡಿಸಿದೆ.

- Advertisement -

ಬಿಜೆಪಿ ಪಕ್ಷ ಒಂದಕ್ಕೆ 3,112 ಕೋಟಿಯಷ್ಟು ಹಣವನ್ನು ವಿವಿಧ ಟ್ರಸ್ಟ್‌ಗಳು ನೀಡಿವೆ. ಅಂದರೇ ಒಟ್ಟು ಹಣದಲ್ಲಿ ಶೇ. 82ರಷ್ಟು ಹಣವನ್ನು ಬಿಜೆಪಿ ಒಂದೇ ಪಕ್ಷ ಪಡೆದಿದೆ ಎಂದು ಚುನಾವಣಾ ಆಯೋಗ ಬಹಿರಂಗ ಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡುತ್ತಾರಾ: ಸಿಎಂ ಪ್ರಶ್ನೆ

ವಿವಿಧ ಟ್ರಸ್ಟ್‌ಗಳು ಭಾರತದ ಚುನಾವಣಾ ಆಯೋಗಕ್ಕೆ ದೇಣಿಗೆಯನ್ನು ನೀಡಿರುವುದಲ್ಲಿ ಕೇವಲ 8 ಪ್ರತಿಶತಕ್ಕಿಂತ ಕಡಿಮೆ ಅಥವಾ 299 ಕೋಟಿ ರೂ.ಗಳು ಕಾಂಗ್ರೆಸ್‌ ಪಕ್ಷಕ್ಕೆ ಹೋಗಿವೆ. ಇತರ ಎಲ್ಲಾ ಪಕ್ಷಗಳು ಒಟ್ಟಾಗಿ ಉಳಿದ 10 ಪ್ರತಿಶತ ಅಥವಾ 400 ಕೋಟಿ ರೂ.ಗಳನ್ನು ಪಡೆದಿವೆ.

ಇತರ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಪಡೆದ ಕೊಡುಗೆ/ಹಣವನ್ನು ರಾಜಕೀಯ ಪಕ್ಷಗಳಿಗೆ ವಿತರಿಸುವ ಏಕೈಕ ಉದ್ದೇಶದಿಂದ ಕಂಪನಿಗಳು ಚುನಾವಣಾ ಟ್ರಸ್ಟ್ ಅನ್ನು ಸ್ಥಾಪಿಸಿದೆ. ಒಂದು ಚುನಾವಣಾ ಟ್ರಸ್ಟ್ ಒಂದು ಹಣಕಾಸು ವರ್ಷದಲ್ಲಿ ನೋಂದಾಯಿತ ಪಕ್ಷಗಳಿಗೆ ಕನಿಷ್ಠ 95% ಕೊಡುಗೆಗಳನ್ನು ವಿತರಿಸುವುದು ಕಡ್ಡಾಯವಾಗಿದೆ.

ಡಿಸೆಂಬರ್ 20ರ ಶನಿವಾರದಂದು ಈ ಹಿಂದೆ ನೋಂದಾಯಿಸಿಕೊಂಡಿದ್ದ 19 ಚುನಾವಣಾ ಟ್ರಸ್ಟ್‌ಗಳಲ್ಲಿ 13 ಚುನಾವಣಾ ಟ್ರಸ್ಟ್‌ಗಳ ಕೊಡುಗೆ ವರದಿಗಳು ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ಒಂಬತ್ತು ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ಒಟ್ಟು 3,811 ಕೋಟಿ ರೂ.ಗಳ ಕೊಡುಗೆಯನ್ನು ನೀಡಿವೆ. 2023-2024 ರಲ್ಲಿ ಟ್ರಸ್ಟ್‌ಗಳು 1.218 ಕೋಟಿಯಷ್ಟು ಹಣವನ್ನು ನೀಡಿದ್ದವು. ಆದರೆ ಈಗ ನೀಡಿರುವ ದೇಣಿಗೆ ಕಳೆದ ವರ್ಷಕ್ಕಿಂದ 200 ಪಟ್ಟು ಹೆಚ್ಚಾಗಿದೆ. ಜನ್ಹಿತ್, ಪರಿಬರ್ತನ್, ಜೈಹಿಂದ್ ಮತ್ತು ಜಯಭಾರತ್ ಎಂಬ ನಾಲ್ಕು ಟ್ರಸ್ಟ್ ಗಳು 2024-2025 ರಲ್ಲಿ ಯಾವುದೇ ಕೊಡುಗೆಗಳನ್ನು ನೀಡಿಲ್ಲ ಎಂದು ಘೋಷಿಸಿವೆ.

“ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್” ಬಿಜೆಪಿಗೆ ಬಂದಿರುವ ದೇಣಿಗೆಯಲ್ಲಿ ಸುಮಾರು 2,180.07 ಕೋಟಿ ರು. ಯಷ್ಟು ಹಣವನ್ನು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನೀಡಿದೆ. ಅತಿ ಹೆಚ್ಚು ಹಣವನ್ನು ಒಂದೇ ರಾಜಕೀಯ ಪಕ್ಷಕ್ಕೆ ನೀಡಿರುವ ಟ್ರಸ್ಟ್ ಇದಾಗಿದೆ. ಇದೇ ರೀತಿ ಬಿಜೆಯೂ ಜಿಂದಾಲ್ ಸ್ಟೀಲ್ ಅಂಡ್ ಪವರ್, ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಭಾರ್ತಿ ಏರ್‌ಟೆಲ್, ಅರಬಿಂದೋ ಫಾರ್ಮಾ, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್‌ನಿಂದ ಟ್ರಸ್ಟ್ ಹಣವನ್ನು ಪಡೆದುಕೊಂಡಿದೆ.

ಹಿಂದಿನ ಹಣಕಾಸು ವರ್ಷವಾದ 2023-24ರಲ್ಲಿ ಬಿಜೆಪಿ 3,967.14 ಕೋಟಿ ರೂ. ಸ್ವಯಂಪ್ರೇರಿತ ದೇಣಿಗೆಗಳನ್ನು ಪಡೆದಿತ್ತು. ಅದರಲ್ಲಿ ಶೇ. 43 ಅಥವಾ 1,685.62 ಕೋಟಿ ರೂ. ಚುನಾವಣಾ ಬಾಂಡ್‌ಗಳಿಂದ ಬಂದಿದ್ದವು. ಸುಪ್ರೀಂ ಕೋರ್ಟ್ 2024 ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಿ ರದ್ದುಗೊಳಿಸಿತ್ತು. ಪ್ರಸ್ತುತ, ಕಾರ್ಪೊರೇಟ್‌ಗಳು ಚೆಕ್, ಡಿಡಿ, ಯುಪಿಐ ಬ್ಯಾಂಕ್ ವರ್ಗಾವಣೆಯ ಮೂಲಕ ಪಕ್ಷಗಳಿಗೆ ದೇಣಿಗೆ ನೀಡಬಹುದು. ಪಕ್ಷಗಳು ತಮ್ಮ ಕೊಡುಗೆ ವರದಿಗಳು ಮತ್ತು ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳಲ್ಲಿ ದೇಣಿಗೆಗಳನ್ನು ಚುನಾವಣಾ ಸಮಿತಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಚುನಾವಣಾ ಟ್ರಸ್ಟ್ ಮೂಲಕ ಕಂಪನಿಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅನುಮತಿಸುತ್ತದೆ. ಇದರಿಂದ ಪಕ್ಷಗಳಿಗೆ ಬರುವ ದೇಣಿಗೆಯ ಲೆಕ್ಕವೂ ಸಿಗುತ್ತದೆ.

2024-25 ರ ಆರ್ಥಿಕ ವರ್ಷದಲ್ಲಿ ಹಲವಾರು ಕಂಪನಿಗಳ ಕೊಡುಗೆಗಳ ಮೂಲಕ “ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್” 917 ಕೋಟಿ ರೂ.ಗಳ ನಿಧಿಯನ್ನು ಸಂಗ್ರಹಿಸಿತು. ಇದರಲ್ಲಿ, 914.97 ಕೋಟಿ ರೂ.ಗಳನ್ನು ದೇಣಿಗೆ ನೀಡಿತು. ಐದನೇ ನಾಲ್ಕು ಭಾಗ ಅಥವಾ ಇಡೀ ದೇಣಿಗೆಯ 80.82% ಪ್ರತಿಶತ ಬಿಜೆಪಿಗೆ ಹೋಯಿತು. ಈ ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್‌ಗೆ ಪ್ರಮುಖ ಕೊಡುಗೆ ನೀಡಿದವರು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಸ್ಟೀಲ್ಸ್ ಲಿಮಿಟೆಡ್, ಟಾಟಾ ಮೋಟಾರ್ಸ್ ಲಿಮಿಟೆಡ್, ಟಾಟಾ ಪವರ್ ಕಂಪನಿ ಲಿಮಿಟೆಡ್ ಸೇರಿದಂತೆ ಟಾಟಾ ಗ್ರೂಪ್ ಕಂಪನಿಗಳು.

2024-25 ರಲ್ಲಿ ಚುನಾವಣಾ ಟ್ರಸ್ಟ್ ಪಡೆದ ಹಣ 3,811 ಕೋಟಿ ರೂ. ಇದರಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದು 3,811 ಕೋಟಿ ರೂ.

ಬಿಜೆಪಿ – 3,142.65 ಕೋಟಿ ರೂ (82%)

  1. ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ ನಿಂದ 757.62 ಕೋಟಿ ರೂ
  2. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನಿಂದ 2,180.70 ಕೋಟಿ ರೂ

ಕಾಂಗ್ರೆಸ್ – 298.76 ಕೋಟಿ (7.83%)

  1. ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ ನಿಂದ 77.34 ಕೋಟಿ ರೂ
  2. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನಿಂದ 21.63 ಕೋಟಿ ರೂ

ಉಳಿದ ಪಕ್ಷಗಳಿಗೆ

  1. ತೃಣಮೂಲ ಕಾಂಗ್ರೆಸ್ – 102 ಕೋಟಿ ರೂ.
  2. ವೈಎಸ್ಆರ್ ಕಾಂಗ್ರೆಸ್ – 98 ಕೋಟಿ ರೂ.
  3. ಟಿಡಿಪಿ – 44 ಕೋಟಿ ರೂ.
  4. ಬಿಆರ್ಎಸ್ – 15 ಕೋಟಿ ರೂ.
  5. ಡಿಎಂಕೆ – 10 ಕೋಟಿ ರೂ.

ಎಲೆಕ್ಟೋರಲ್ ಟ್ರಸ್ಟ್ ಗಳು : ಚುನಾವಣಾ ಟ್ರಸ್ಟ್ ಗೆ ದೇಣಿಗೆ ನೀಡಿದ್ದು

  • ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ : 2668.49 ಕೋಟಿ ರೂ.
  • ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ : 914.97 ಕೋಟಿ ರೂ.
  • ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ : 160 ಕೋಟಿ ರೂ.
  • ಹಾರ್ಮೋನಿ ಎಲೆಕ್ಟೋರಲ್ ಟ್ರಸ್ಟ್ : 35.55 ಕೋಟಿ ರೂ.
  • ರ್ಟಿಯಂಪ್ ಎಲೆಕ್ಟೋರಲ್ ಟ್ರಸ್ಟ್ : 25 ಕೋಟಿ ರೂ.
  • ಸಮಾಜ್ ಎಲೆಕ್ಟೋರಲ್ ಟ್ರಸ್ಟ್ ಅಸೋಸಿಯೆಷನ್ : 6 ಕೋಟಿ ರೂ.
  • ಜನಪ್ರಗತಿ ಎಲೆಕ್ಟೋರಲ್ ಟ್ರಸ್ಟ್ : 1.02 ಕೋಟಿ ರೂ.
  • ಜನ್ ಕಲ್ಯಾಣ್ ಎಲೆಕ್ಟೋರಲ್ ಟ್ರಸ್ಟ್ : 20 ಲಕ್ಷ ರೂ.
  • ಐಂಜಿಗಾರ್ಟಿಗ್ ಎಲೆಕ್ಟೋರಲ್ ಟ್ರಸ್ಟ್ : 8 ಲಕ್ಷ ರೂ.

ಚುನಾವಣಾ ಬಾಂಡ್ ರದ್ದಾದ ನಂತರ ಚುನಾವಣಾ ಟ್ರಸ್ಟ್ ಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆಯ ರೂಪದಲ್ಲಿ ಹಣವನ್ನು ಪಡೆಯುತ್ತಿವೆ. ಒಟ್ಟು ಸಂಗ್ರಹವಾದ 3,967 ಕೋಟಿ ರೂಗಳಲ್ಲಿ, ಬಿಜೆಪಿ ಪಕ್ಷ ಶೇ 82 ರಷ್ಟು ಅಂದರೆ, 3,112 ಕೋಟಿ ರೂ ಪಡೆದಿದೆ. ಕಾರ್ಪೊರೇಟ್ ಗಳು ಬಿಜೆಪಿ ಪಕ್ಷಕ್ಕೆ ಇಷ್ಟೊಂದು ಹಣ ನೀಡುತ್ತಿರುವುದರ ಹಿಂದಿನ ಉದ್ದೇಶವನ್ನು ಅರಿಯಬೇಕಿದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...