ಸಿನಿಮಾ TO ಮುಖ್ಯಮಂತ್ರಿ ; ವಿಜಯ್‌ ಬಗ್ಗೆ ನಿಮಗೆಷ್ಟು ಗೊತ್ತು?

Date:

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ದಶಕಗಳ ಕಾಲ ಆಳಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಿದ ಟಿವಿಕೆ (TVK) ಮುಖ್ಯಸ್ಥ ದಳಪತಿ ವಿಜಯ್ ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ನಡೆದ ನಾಟಕೀಯ ಬೆಳವಣಿಗೆಗಳು ಭಾರತೀಯ ಪ್ರಜಾಪ್ರಭತ್ವದ ಇತಿಹಾಸದಲ್ಲಿ ಸ್ಮರಣೀಯ. ಚುನಾವಣೆಯಲ್ಲಿ ವಿಜಯ್‌ ನೇತೃತ್ವದ ಟಿವಿಕೆ 108 ಸೀಟ್‌ಗಳನ್ನ ಪಡೆದ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದ್ದರೂ, ತಲೆ ಎಣಿಕೆ ರಾಜ್ಯಪಾಲರ ಮುಂದೆ ಅಲ್ಲ, ಸದನದಲ್ಲಿ ಎಂಬ ಸುಪ್ರೀಮ್ ಕೋರ್ಟ್ ತೀರ್ಪನ್ನೇ ಕಡೆಗಣಿಸಿ ವಿಜಯ್ ಅವರನ್ನು ಕಾಡಿಸಿ ಪೀಡಿಸಲಾಯಿತು. ಆ ಎಲ್ಲಾ ಅಡೆತಡೆಗಳನ್ನು ದಾಟಿ, ಕೊನೆಗೂ ರಾಜ್ಯಪಾಲರು ಆಹ್ವಾನ ನೀಡುವಂತೆ ಮಾಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಮಾಣವಚನದ ನಂತರದ ಭಾಷಣದಲ್ಲಿ ಎಷ್ಟೋ ಅವಮಾನಗಳ ಕುರಿತು ವಿಜಯ್‌ ಪ್ರಸ್ತಾಪಿಸುತ್ತಾರೆ. 

- Advertisement -
governor 1

ಪ್ರಮಾಣ ವಚನದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ನನಗೆ ಹೇಗೆ ಪ್ರಾರಂಭಿಸಬೇಕೆಂದು ತಿಳಿದಿಲ್ಲ. ನಾನು ಒಬ್ಬ ಸಾಮಾನ್ಯ ಸಹಾಯಕ ನಿರ್ದೇಶಕನ ಮಗ, ಅವನು ಹೇಗೋ ಕಷ್ಟಪಟ್ಟು ಸಿನಿಮಾದಲ್ಲಿ ಯಶಸ್ವಿಯಾಗದರು. ಬಡತನ ಎಂದರೇನು ಎಂದು ನನಗೂ ತಿಳಿದಿದೆ” ಎಂದಿದ್ದಾರೆ. “ಈ ಪ್ರಯಾಣದಲ್ಲಿ ನನಗೆ ಅನೇಕ ಕಷ್ಟಗಳು ಎದುರಾದರೂ, ನನ್ನೊಂದಿಗೆ ಇದ್ದ ನೀವು ಸಹ ಅದೇ ಕಷ್ಟಗಳನ್ನು ಮತ್ತು ಅದೇ ಅವಮಾನಗಳನ್ನು ಎದುರಿಸಿದ್ದೀರಿ. ನೀವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ನನ್ನೊಂದಿಗಿದ್ದೀರಿ. ನಿಮಗೆ ನಾನು ಮೋಸ ಮಾಡುವುದಿಲ್ಲ. ನಾನು ಸಾಧ್ಯವಾದದ್ದನ್ನು ಮಾತ್ರ ಮಾಡುತ್ತೇನೆ. ತಮಿಳುನಾಡಿಗೆ 10 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಾಲವಿದೆ. ಅವರು ಎತ್ತಲಾಗದ ಹೊರೆಯನ್ನು ಬಿಟ್ಟು ಹೋಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನಾನು ಇದನ್ನು ಕೈಗೆತ್ತಿಕೊಂಡಿದ್ದೇನೆ. ಇದು ದೊಡ್ಡ ಜವಾಬ್ದಾರಿ” ಎಂದಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ತಮಿಳುನಾಡು ರಾಜಕೀಯದಲ್ಲಿ ಚಿತ್ರನಟರ ಪ್ರಭಾವ ಎಂಬುದು ದಶಕಗಳ ಇತಿಹಾಸ. ಆದರೆ ‘ದಳಪತಿ’ ಎಂದೇ ಫೇಮಸ್‌ ಆಗಿರುವ ಜೋಸೆಫ್ ವಿಜಯ್ ಅವರ ಮುಖ್ಯಮಂತ್ರಿಯಾಗುವವರೆಗಿನ ಈ ಪಯಣ ಕೇವಲ ಅದೃಷ್ಟವಲ್ಲ; ಅದು ದಶಕಗಳ ಕಾಲದ ವ್ಯವಸ್ಥಿತ ಯೋಜನೆ ಮತ್ತು ಚಾಣಾಕ್ಷತನದ ಫಲ. 

ಆರಂಭಿಕ ಹಿನ್ನಡೆ ಮತ್ತು ಟೀಕೆಗಳ ಎದುರು ಸ್ಥಿತಪ್ರಜ್ಞತೆ:-

ವಿಜಯ್ ಅವರ ರಾಜಕೀಯ ಅಡಿಪಾಯ ಹಾಕಿದ್ದು ಚಲನಚಿತ್ರಗಳ ಮೂಲಕ. 1984 ರಲ್ಲಿ, ವಿಜಯ್ ಕೇವಲ 10 ವರ್ಷದವನಿದ್ದಾಗ, ಅವರ ತಂದೆ ಅವರನ್ನು ಬಾಲ ಕಲಾವಿದರನ್ನಾಗಿ ಪರಿಚಯಿಸಿದರು. ವಿಜಯ್ 18 ವರ್ಷ ವಯಸ್ಸಿನವನಾಗಿದ್ದಾಗ, ಅವರ ತಂದೆ ಅವರನ್ನು ನಾಯಕನನ್ನಾಗಿ ಪರಿಚಯಿಸಿದರು. ಜೂನ್ 22, 1974ರಲ್ಲಿ ಜನಿಸಿದ ವಿಜಯ್‌ಗೆ ಚಿತ್ರರಂಗ ಹೂವಿನ ಹಾಸಿಗೆಯಾಗಿರಲಿಲ್ಲ.  ಅವರ ತಂದೆ ಎಸ್.ಎ. ಚಂದ್ರಶೇಖರ್ ಖ್ಯಾತ ನಿರ್ದೇಶಕರಾಗಿದ್ದು, ತಾಯಿ ಶೋಭಾ ಚಂದ್ರಶೇಖರ್ ಗಾಯಕಿ ಹಾಗೂ ಕಥೆಗಾರ್ತಿಯಾಗಿದ್ದರು. ಬಾಲ್ಯದಿಂದಲೇ ಸಿನಿಮಾ ವಾತಾವರಣದಲ್ಲೇ ಬೆಳೆದ ವಿಜಯ್, ಚಿಕ್ಕ ವಯಸ್ಸಿನಲ್ಲೇ ಕ್ಯಾಮೆರಾ, ಸೆಟ್ ಮತ್ತು ಕಥೆಗಳ ಜಗತ್ತಿಗೆ ಹತ್ತಿರವಾದರು. ಆದರೆ, ಅವರು ಆರಂಭದಲ್ಲೇ ಸೂಪರ್ ಸ್ಟಾರ್ ಆಗಿರಲಿಲ್ಲ. ತಂದೆಯ ನಿರ್ದೇಶನದ ಕೆಲ ಸಿನಿಮಾಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡರೂ, ಜನರು ಅವರನ್ನು ತಕ್ಷಣವೇ ಸ್ವೀಕರಿಸಲಿಲ್ಲ. 

ಎಸ್.ಎ. ಚಂದ್ರಶೇಖರ್ ವಿಜಯ್‌ನನ್ನ  ಬ್ರಾಂಡ್ ಮಾಡಲು ಅವರ ತಂದೆ ನಿರ್ಧರಿಸಿದರು ಮತ್ತು ‘ವಿಜಯ್ ಫ್ಯಾನ್ ಕ್ಲಬ್’ ಅನ್ನು ಪ್ರಾರಂಭಿಸಿದರು. 1994 ರ ಚಲನಚಿತ್ರ ರಸಗನ್‌ನಲ್ಲಿ ಅವರು ವಿಜಯ್ ಅವರಿಗೆ ‘ಇಳಯತಳಪತಿ’ ಎಂಬ ಬಿರುದನ್ನು ನೀಡಿದರು. ಇದರರ್ಥ ಯುವ ನಾಯಕ. ಅಂದಿನಿಂದ, ಜನರು ಜೋಸೆಫ್ ವಿಜಯ್ ಅವರನ್ನು ಅವರ ಹೆಸರಿನ ಬದಲು ‘ತಳಪತಿ ವಿಜಯ್’ ಎಂದು ಕರೆಯುತ್ತಾರೆ. 

image 127

 1992ರಲ್ಲಿ ‘ನಾಲೈಯ ತೀರ್ಪು’ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಬಂದಾಗ ವಿಜಯ್ ಎದುರಿಸಿದ ಅತಿದೊಡ್ಡ ಸವಾಲು ‘ಸ್ವಜನಪಕ್ಷಪಾತ’ (ಪರಂಪರೆ) ಮತ್ತು ಅವರ ರೂಪ. ಅವರ ಬಾಹ್ಯ ರೂಪವನ್ನು ಕಂಡು “ಇವನೂ ಒಬ್ಬ ನಾಯಕನಾ?” “ಇವರಿಗೆ ನಟನೆಯೇ ಬರುವುದಿಲ್ಲ”, “ತಂದೆಯ ಪ್ರಭಾವದಿಂದ ಅವಕಾಶ ಸಿಗುತ್ತಿದೆ” ಎಂಬ ಮಾತುಗಳು ಕೇಳಿಬಂದವು.  ಒಟ್ಟಿನಲ್ಲಿ ಇವರನ್ನ ಹೀಯಾಳಿಸಿದವರೇ ಹೆಚ್ಚು. ತಂದೆ ನಿರ್ದೇಶಕರಾಗಿದ್ದರೂ, ಪ್ರೇಕ್ಷಕರು ಅವರನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅಂದಿನ ಸಿನಿಮಾ ಪತ್ರಿಕೆಗಳು ಅವರ ಮುಖಚರ್ಯೆಯ ಬಗ್ಗೆಯೇ ಬರೆದಿದ್ದವು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಯಾರು ಬೇಕಾದರೂ ಕುಗ್ಗಿಹೋಗುತ್ತಿದ್ದರು. ಆದರೆ ವಿಜಯ್ ಇಲ್ಲಿ ವಿಭಿನ್ನವಾಗಿ ನಿಂತರು. ಅವರು ಪ್ರತಿಕ್ರಿಯೆ ನೀಡುವ ಬದಲು ತಮ್ಮನ್ನು ತಾವು ಬದಲಿಸಿಕೊಳ್ಳಲು ನಿರ್ಧರಿಸಿದರು.

ಅವರ ಈ ಮೌನವೇ ಮುಂದೆ ಅವರ ದೊಡ್ಡ ಶಕ್ತಿಯಾಯಿತು. ತಮ್ಮ ತಂಗಿ ವಿದ್ಯಾ ಅವರ ಅಕಾಲಿಕ ಮರಣ ವಿಜಯ್ ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸಿತು. ಅತಿಯಾಗಿ ಮಾತನಾಡುತ್ತಿದ್ದ ಬಾಲಕ ಶಾಂತಸ್ವರೂಪಿಯಾದ. ಅವರ ಸಿನಿಮಾಗಳಲ್ಲೇ ಒಂದು ಸಂಭಾಷಣೆ ಇದೆ: “ಬದುಕಲ್ಲಿ ನಮಗೆ ಅವಮಾನಗಳು ಹೆಚ್ಚಾದಷ್ಟೂ ನಾವು ಬೆಳೆಯುವ ವೇಗವೂ ಹೆಚ್ಚಾಗುತ್ತದೆ.” ಇದು ಅವರ ಬದುಕಿನ ಮೂಲಮಂತ್ರವಾಯಿತು. ಈ ಗಂಭೀರತೆಯೇ ಮುಂದೆ ಅವರ ರಾಜಕೀಯ ವ್ಯಕ್ತಿತ್ವಕ್ಕೆ ‘ಸೈಲೆಂಟ್ ಕಿಲ್ಲರ್’ ಇಮೇಜ್‌ಗೆ ಬುನಾದಿ ಹಾಕಿತು.  1996ರಲ್ಲಿ ವಿಜಯ್‌ ತಂದೆ ಎಸ್‌ ಚಂದ್ರಶೇಖರ್‌ ಡೈರೆಕ್ಟರ್‌ ಆಗಿ  ವಿಜಯ್‌ ನಟನಾಗಿ ನಟಿಸಿದ್ದ “ಪೂವೇ ಉನಕ್ಕಾಗ” ಸಿನಿಮಾ ಸಕ್ಸಸ್‌ ಕಂಡಿತ್ತು. “ಪೂವೇ ಉನಕ್ಕಾಗ” ವಿಜಯ್‌ಗೆ ಯಶಸ್ಸಿನ ರುಚಿ ತೋರಿಸಿದ ಮೊದಲ ಸಿನಿಮಾ. 

image 128 1

ಸಿನಿಮಾ ಆಯ್ಕೆಗಳಲ್ಲಿನ ರಾಜಕೀಯ ಬಿತ್ತನೆ :-

ವಿಜಯ್ ಕೇವಲ ಡಾನ್ಸ್ ಮತ್ತು ಫೈಟ್ ಮಾಡಲು ಸೀಮಿತವಾಗಲಿಲ್ಲ. ಆರಂಭದಲ್ಲಿ ಕೌಟುಂಬಿಕ ಚಿತ್ರಗಳನ್ನು ಮಾಡುತ್ತಿದ್ದ ಅವರು, ನಂತರ ಸಮಾಜದ ನಾಡಿಮಿಡಿತ ಅರಿತರು. ವಿಜಯ್ ಅವರ ಸಿನಿಮಾ ಬದುಕನ್ನ ಮೂರು ಹಂತಗಳಲ್ಲಿ ವಿಂಗಡಿಸಬಹುದು.

ಮೊದಲ ಹಂತ: ಕೇವಲ ಪ್ರೇಮಕಥೆಗಳಿಗೆ ಸೀಮಿತ (ಉದಾ: ಪೂವೆ ಉನಕ್ಕಾಗ). ಇದು ಮಹಿಳಾ ಪ್ರೇಕ್ಷಕರನ್ನು ಸೆಳೆಯಲು ಸಹಕಾರಿಯಾಯಿತು.

ಎರಡನೇ ಹಂತ: ಆಕ್ಷನ್ ಹಿರೋ ಆಗಿ ಬದಲಾದ ಕಾಲ (ಉದಾ: ಗಿಲ್ಲಿ, ಪೊಕ್ಕಿರಿ). ಇದು ‘ಮಾಸ್’ ಹೀರೋ ಆಗಿ ಬೆಳೆಯಲು ಕಾರಣವಾಯಿತು.

ಮೂರನೇ ಹಂತ: ವ್ಯವಸ್ಥಿತ ರಾಜಕೀಯ ದಾಳ (ಉದಾ: ಕತ್ತಿ, ಮೆರ್ಸಲ್, ಸರ್ಕಾರ್).

ವಿಜಯ್ ಅವರು ಕಳೆದ ಹತ್ತು ವರ್ಷಗಳಿಂದ ಸಿನಿಮಾಗಳನ್ನು ಕೇವಲ ಮನರಂಜನೆಗಾಗಿ ಮಾಡಲಿಲ್ಲ. ಪ್ರತಿಯೊಂದು ಸಿನಿಮಾವೂ ಒಬ್ಬ ರಾಜಕಾರಣಿ ನೀಡಬಹುದಾದ ಭರವಸೆಯಂತೆಯೇ ಇರುತ್ತಿತ್ತು. ಕತ್ತಿ’ ಸಿನಿಮಾ ರೈತರ ಆತ್ಮಹತ್ಯೆ ಮತ್ತು ಕಾರ್ಪೊರೇಟ್ ಲೂಟಿಯ ಬಗ್ಗೆ ಮಾತನಾಡಿದರೆ, ‘ಮೆರ್ಸಲ್’ ಸಿನಿಮಾ ಜಿಎಸ್‌ಟಿ ಮತ್ತು ಉಚಿತ ಆರೋಗ್ಯ ಸೇವೆಯ ಬಗ್ಗೆ ಧ್ವನಿ ಎತ್ತಿತು. “ನಮ್ಮ ದೇಶದಲ್ಲಿ ಹಸಿವಿನಿಂದ ಸಾಯುವವರಿಗಿಂತ, ತಿಂದಿದ್ದನ್ನು ಅರಗಿಸಿಕೊಳ್ಳಲು ಕಷ್ಟಪಡುವವರೇ ಅಧಿಕಾರದಲ್ಲಿದ್ದಾರೆ” ಎಂಬಂತಹ ಸಂಭಾಷಣೆಗಳು ನೇರವಾಗಿ ಆಡಳಿತ ವ್ಯವಸ್ಥೆಯ ಮೇಲೆ ಪ್ರಹಾರ ಮಾಡಿದವು.

image 127

 ‘ಸರ್ಕಾರ್’ ಚಿತ್ರದಲ್ಲಿ ಅವರು ಮತದಾನದ ಮಹತ್ವ ಮತ್ತು 49P ಸೆಕ್ಷನ್ ಬಗ್ಗೆ ಜನರಿಗೆ ಅರಿವು ಮೂಡಿಸಿದಾಗ, ಜನರಿಗೆ ವಿಜಯ್ ಕೇವಲ ನಟನಾಗಿ ಕಾಣಲಿಲ್ಲ, ಬದಲಾಗಿ ಒಬ್ಬ ಕ್ರಾಂತಿಕಾರಿಯಾಗಿ ಕಂಡರು. ಆ ಚಿತ್ರದ ಒಂದು ಫೇಮಸ್‌ ಡೈಲಾಗ್: “ನಾನು ರಾಜಕಾರಣಿ ಅಲ್ಲ, ಆದರೆ ಕಾರ್ಪೊರೇಟ್ ಕ್ರಿಮಿನಲ್ಸ್ ಮತ್ತು ಭ್ರಷ್ಟರನ್ನು ಮನೆಗೆ ಕಳುಹಿಸುವವರೆಗೂ ನಾನು ಸುಮ್ಮನಿರಲ್ಲ.” ಈ ಸಂಭಾಷಣೆಗಳು ತೆರೆಯ ಮೇಲೆ ಚಪ್ಪಾಳೆ ಗಿಟ್ಟಿಸಿದರೆ, ತೆರೆಯ ಹಿಂದೆ ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಕಿಚ್ಚು ಹಚ್ಚಿದವು.

ತಂದೆಯ ಜೊತೆಗಿನ ಸಂಘರ್ಷ: ಕುಟುಂಬ ವರ್ಸಸ್ ಸಿದ್ಧಾಂತ:-

ವಿಜಯ್ ತಂದೆ ಖ್ಯಾತ ನಿರ್ದೇಶಕ ಎಸ್. ಎ. ಚಂದ್ರಶೇಖರ್. ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆ ಜೊತೆಗೆ ವಿಜಯ್ ಹೆಸರಿನಲ್ಲಿ ‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​ ’(all-india thalapathy vijay makkal iyakkam) ಎಂಬ ಹೆಸರಿನ ಕಲ್ಯಾಣ ಸಂಸ್ಥೆಯನ್ನು ಆರಂಭಿಸಿದ್ದರು. ವಿಜಯ್ ಅವರ ಅಭಿಮಾನಿ ಸಂಘವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿತ್ತು ಮತ್ತು ಜನರಿಗೆ ಸಹಾಯ ಮಾಡುತ್ತಿತ್ತು. ನಂತರ, ಕ್ಲಬ್ 2011 ರ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆಯನ್ನು ಬೆಂಬಲಿಸಿತ್ತು. 2020 ರಲ್ಲಿ, ಚಂದ್ರಶೇಖರ್ ವಿಜಯ್ ಅವರ ಫ್ಯಾನ್ ಕ್ಲಬ್ ಅನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಲು ನಿರ್ಧರಿಸಿದರು. ಅದೇ ಹೆಸರಿನಲ್ಲಿ ಪಕ್ಷವನ್ನು ನೋಂದಾಯಿಸಲು ಅವರು ಚುನಾವಣಾ ಆಯೋಗಕ್ಕೂ ಅರ್ಜಿ ಸಲ್ಲಿಸಿದ್ದರು. ಹಲವರು ವಿಜಯ್ ಕೂಡ ಈ ರಾಜಕೀಯ ಪಕ್ಷಕ್ಕೆ ಸೇರುತ್ತಾರೆ ಎಂದು ನಿರೀಕ್ಷಿಸಿದ್ದರು. 

image 128

 ಆದರೆ ವಿಜಯ್ ತಮ್ಮ ತಂದೆಯ ಈ ನಿರ್ಧಾರವನ್ನು ವಿರೋಧಿಸಿದರು. ಅವರು ತಮ್ಮ ಪೋಷಕರು ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿದರು. “ಈ ಅಭಿಮಾನಿ ಸಂಘವನ್ನ  ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ” ಎಂದು ವಿಜಯ್‌ ದೂರಿದ್ದರು. ಈ ರೀತಿ ಮಾಡುತ್ತಿರುವುದು ದಳಪತಿ ವಿಜಯ್ ಅವರಿಗೆ ಕಿಂಚಿತ್ತು ಇಷ್ಟವಿರಲಿಲ್ಲ. ಹೀಗಾಗಿ ಹಲವು ಸಮಸ್ಯೆಗಳು ಎದುರಾಗಿತ್ತು. “ನನಗೂ ಆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ನನ್ನ ಕುಟುಂಬ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು  ಅಪ್ಪ ಕಟ್ಟಿರೋ ಪಕ್ಷದಿಂದ ದೂರ ಉಳಿಯಲು ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. “ತಮ್ಮ ತಂದೆ ಪ್ರಾರಂಭಿಸಿರುವ ಪಕ್ಷವನ್ನು ರದ್ದು ಮಾಡಬೇಕು ಹಾಗೂ ಆ ಪಕ್ಷದಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರವನ್ನು ಬಳಸಬಾರದೆಂದು” ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ರು. 

ಅಂತೆಯೇ ನ್ಯಾಯಾಲಯ ಸಹ ವಿಜಯ್ ಪರವಾಗಿಯೇ ಆದೇಶ ನೀಡಿತ್ತು. ಬಳಿಕ ಎಸ್​​ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅಪಿಢವಿಟ್ ಸಲ್ಲಿಸಿ, ಪಕ್ಷಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಚಿತ್ರ, ಹೆಸರು ಬಳಸುವುದಿಲ್ಲ ಎಂದಿದ್ರು. ಕೊನೆಗೆ ಈ ಪ್ರಕರಣ ಬಗೆ ಹರಿದ ಮರು ವರ್ಷವೇ ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಪಕ್ಷ ರದ್ದಾಯ್ತು. 

ತಮ್ಮ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಹೆಸರಲ್ಲಿ ರಾಜಕೀಯ ಪಕ್ಷ ಕಟ್ಟಿದ್ದ ತಂದೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲು ಹತ್ತಿದ ನಿಷ್ಠುರಿ ವಿಜಯ್‌. ಇದು ಹೊರನೋಟಕ್ಕೆ ಕಟು ನಿರ್ಧಾರವೆಂದು ಕಂಡರೂ, ರಾಜಕೀಯವಾಗಿ ಇದು ಬಹಳ ದೊಡ್ಡ ಚಾಣಾಕ್ಷತನವಾಗಿತ್ತು. ಅವರು ತನ್ನ ತಂದೆಯ ‘ರಿಮೋಟ್ ಕಂಟ್ರೋಲ್’ ನಾಯಕನಾಗಿ ಇರಲು ಬಯಸಲಿಲ್ಲ. ಒಬ್ಬ ಸ್ವತಂತ್ರ ನಾಯಕನಾಗಿ ಜನರಿಗೆ ಕಾಣಿಸಿಕೊಳ್ಳಬೇಕೆಂಬ ಅವರ ಹಂಬಲ ಇಲ್ಲಿ ಸ್ಪಷ್ಟವಾಯಿತು. “ಇವನು ಸ್ವಂತ ತಂದೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳದವನು, ಇನ್ನು ಯಾರಿಗೆ ಮಣಿಯುತ್ತಾನೆ?” ಎಂಬ ಸಂದೇಶ ಜನರಿಗೆ ರವಾನೆಯಾಯಿತು. 

ಸಾಂಕೇತಿಕ ಪ್ರತಿಭಟನೆ ಮತ್ತು ಸೈಕಲ್ ಸವಾರಿ:-

2021ರ ತಮಿಳುನಾಡು ವಿಧಾನಸಭಾ ಚುನಾವಣೆಯ ದಿನ ವಿಜಯ್ ಸೈಕಲ್‌ನಲ್ಲಿ ಬಂದು ಮತ ಚಲಾಯಿಸಿದ ಘಟನೆ ದೇಶದಾದ್ಯಂತ ಸುದ್ದಿಯಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಸಾಂಕೇತಿಕವಾಗಿ ವಿರೋಧಿಸಲು ಅವರು ಸೈಕಲ್ ಬಳಸಿದ್ದರು. ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಎಂಬ ಭಾವನೆ ಜನರಲ್ಲಿ ಮತ್ತಷ್ಟು ಬಲವಾಯಿತು.  ವಿಜಯ್‌ ಯಾವುದೇ ಘೋಷಣೆ ಕೂಗಲಿಲ್ಲ. ಆದರೆ ಮರುದಿನದ ಹೆಡ್‌ಲೈನ್‌ಗಳೆಲ್ಲಾ ಆ ಕೆಂಪು ಸೈಕಲ್ ಬಗ್ಗೆಯೇ ಸುದ್ದಿಗಳಿದ್ದವು. ಸಿನಿಮಾದಲ್ಲಿ ಅವರು ಹೇಳುವಂತೆ “ನಾವು ಏನು ಮಾಡ್ತೀವಿ ಅನ್ನೋದನ್ನ ಯಾರಿಗೂ ಹೇಳ್ಬೇಡ, ಮಾಡಿದ್ದನ್ನ ಇಡೀ ಊರು ನೋಡುವಂತೆ ಮಾಡು” ಎಂಬ ನೀತಿಯನ್ನು ಅವರು ನಿಜ ಜೀವನದಲ್ಲೂ ಅನುಸರಿಸಿದರು. 

ರಾಜಕೀಯ ಸವಾಲುಗಳು ಮತ್ತು ‘ತಮಿಳಗ ವೆಟ್ರಿ ಕಳಗಂ’:-

ವಿಜಯ್‌ ಅನೇಕ ವರ್ಷಗಳಿಂದ ಅಭಿಮಾನಿ ಸಂಘಗಳ ಮೂಲಕ ಸಮಾಜಸೇವೆ ನಡೆಸುತ್ತಿದ್ದ ವಿಜಯ್, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಶಿಕ್ಷಣ ಸಹಾಯ, ರಕ್ತದಾನ ಶಿಬಿರ, ಪ್ರವಾಹ ಸಂತ್ರಸ್ತರಿಗೆ ನೆರವು ಮೊದಲಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಕಾರ್ಯಗಳೇ ನಂತರ ರಾಜಕೀಯ ನೆಲೆಯನ್ನು ನಿರ್ಮಿಸಿಕೊಟ್ಟವು. ಸಿನಿಮಾ ಅಭಿಮಾನಿ ಬಳಗ ನಿಧಾನವಾಗಿ ಜನ ಚಳವಳಿಯ ರೂಪ ಪಡೆದುಕೊಂಡಿತು. ನಂತರ ಅವರು “ತಮಿಳಗ ವೆಟ್ರಿ ಕಳಗಂ” ಪಕ್ಷವನ್ನು ಸ್ಥಾಪಿಸಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದರು. ಅವರ ಭಾಷಣಗಳಲ್ಲಿ ಜಾತಿ, ಧರ್ಮ, ದ್ವೇಷ ರಾಜಕಾರಣಕ್ಕಿಂತ ಶಿಕ್ಷಣ, ಉದ್ಯೋಗ, ಸಮಾನತೆ ಮತ್ತು ಯುವಕರ ಭವಿಷ್ಯಕ್ಕೆ ಹೆಚ್ಚು ಒತ್ತು ನೀಡಲಾಯಿತು. ಇದೇ ಕಾರಣಕ್ಕೆ ಯುವ ಮತದಾರರು ದೊಡ್ಡ ಸಂಖ್ಯೆಯಲ್ಲಿ ಅವರತ್ತ ಸೆಳೆಯಲ್ಪಟ್ಟರು. 

image 128

ತಮಿಳುನಾಡಿನಲ್ಲಿ ದಶಕಗಳ ಕಾಲ ಎರಡು ಪ್ರಮುಖ ರಾಜಕೀಯ ಶಕ್ತಿಗಳೇ ಅಧಿಕಾರ ನಡೆಸುತ್ತಿದ್ದ ಪರಿಸ್ಥಿತಿಯಲ್ಲಿ, ವಿಜಯ್ ಹೊಸ ಪರ್ಯಾಯವಾಗಿ ಕಾಣಿಸಿಕೊಂಡರು. ಅವರು ಸಿನಿಮಾ ಜನಪ್ರಿಯತೆಯನ್ನು ಮಾತ್ರ ರಾಜಕೀಯಕ್ಕೆ ಬಳಸಲಿಲ್ಲ; ಯುವಜನರ ಆಶಾಭಾವನೆ, ಬದಲಾವಣೆಯ ನಿರೀಕ್ಷೆ ಮತ್ತು ಸ್ವಚ್ಛ ಆಡಳಿತದ ಕನಸನ್ನು ತಮ್ಮ ರಾಜಕೀಯದ ಕೇಂದ್ರಬಿಂದುವಾಗಿಸಿದರು. ವಿಜಯ್ ಈಗ ನೂತನ ಮುಖ್ಯಮಂತ್ರಿಯಾಗಿದ್ದಾರೆ. ವಿಜಯ್‌ ಚುನಾವಣಾ ರ‍್ಯಾಲಿಗಳಲ್ಲಿ ಹೇಳುತ್ತಿದ್ದ ಒಂದು ಮಾತು, “ನೀವು ಇಲ್ಲಿಯವರೆಗೆ ಅನೇಕರಿಗೆ ಅವಕಾಶ ಕೊಟ್ಟಿದ್ದೀರಿ, ಈಗ ಒಮ್ಮೆ ನನ್ನನ್ನು ಪರೀಕ್ಷಿಸಿ ನೋಡಿ.” ಎಂಬುದಾಗಿತ್ತು. ಸಿನಿಮಾ ಡೈಲಾಗ್‌ಗಳಾದ “I am waiting” (ತುಪಾಕಿ) ಅಥವಾ “ಜಯಿಸೋದು ಎಷ್ಟು ಮುಖ್ಯವೋ ಹಾಗೇಯೇ ಗುರಿಯಷ್ಟೇ ದಾರಿಯೂ ಮುಖ್ಯ” (ಬಿಗಿಲ್) ಎಂಬ ತಮ್ಮ ಸಿನಿಮಾದ ಡೈಲಾಗ್‌ಗಳನ್ನೇ ಅವರು ತತ್ವವಾಗಿ ಮೈಗೂಡಿಸಿಕೊಂಡರು.

ವಿಜಯ್‌ ಮುಂದಿರುವ ಸವಾಲುಗಳು:-

ಒಬ್ಬ ಮುಖ್ಯಮಂತ್ರಿಯಾಗಿ ವಿಜಯ್ ಅವರ ಮುಂದಿರುವ ಹಾದಿ ಸುಗಮವಾಗಿಲ್ಲ. ತೆಲುಗು ಮತ್ತು ತಮಿಳು ಚಿತ್ರರಂಗದ ಇತಿಹಾಸವನ್ನು ನೋಡಿದರೆ, ನಟರು ರಾಜಕೀಯಕ್ಕೆ ಬಂದು ಯಶಸ್ವಿಯಾದ ಉದಾಹರಣೆಗಳೂ ಇವೆ (ಎಂ.ಜಿ.ಆರ್, ಎನ್.ಟಿ.ಆರ್), ವಿಫಲರಾದವರೂ ಇದ್ದಾರೆ. ಜಾತಿ ಮತ್ತು ಧರ್ಮಗಳ ವಿಷಬೀಜ ಬಿತ್ತದಂತೆ ಆಡಳಿತ ನಡೆಸುವುದು ಒಂದು ಕವಾತು ಇದ್ದಂತೆ. ಯುವಕರು ಭಾವನಾತ್ಮಕವಾಗಿ ವಿಜಯ್ ಅವರನ್ನು ಬೆಂಬಲಿಸಿದ್ದಾರೆ. ಆದರೆ ಭಾವನೆಗಳು ಉದ್ಯೋಗವನ್ನಾಗಲಿ, ಅನ್ನವನ್ನಾಗಲಿ ನೀಡುವುದಿಲ್ಲ. ಸಿನೆಮಾದಲ್ಲಿ ಎರಡೂವರೆ ಗಂಟೆಯಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಆದರೆ ಬದುಕು ಸಿನೆಮಾ ಅಲ್ಲ. ರಾಜಕಾರಣದ ವಾಸ್ತವ ಮತ್ತು ಸಿನೆಮಾದ ಭ್ರಮೆಗಳು ಬೇರೆ ಬೇರೆ.

ಜೋಸೆಫ್ ವಿಜಯ್ ಅವರು ಇಂದು ತಮಿಳುನಾಡಿನ ಅಧಿಪತಿಯಾಗಿ ನಿಂತಿದ್ದಾರೆ. ಜನರು ಹೊಸತನವನ್ನು ಬಯಸಿದ್ದಾರೆ ಎಂಬುದು ಈ ಗೆಲುವಿನಿಂದ ಸ್ಪಷ್ಟವಾಗಿದೆ. ಸಿನಿಮಾ ಗ್ಲಾಮರ್ ಅನ್ನು ಬಿಟ್ಟು ಜನರ ಕಣ್ಣೀರು ಒರೆಸುವ ಕೆಲಸಕ್ಕೆ ಅವರು ಮುಂದಾಗಿದ್ದಾರೆ. ರಾಜಕೀಯ ಎಂಬುದು ಸಿನಿಮಾ ಸೆಟ್ ಅಲ್ಲ ಎಂಬ ಅರಿವು ಅವರಿಗೆ ಸದಾ ಇರಬೇಕು.

“ನೀವು ಜನರ ಹೃದಯವನ್ನು ಗೆದ್ದಿದ್ದೀರಿ, ಈಗ ಅವರ ಬದುಕನ್ನು ಗೆಲ್ಲಬೇಕಿದೆ.” ಅಧಿಕಾರ ಎನ್ನುವುದು ಕೇವಲ ಕಿರೀಟವಲ್ಲ, ಅದೊಂದು ದೊಡ್ಡ ಜವಾಬ್ದಾರಿ. ತಮಿಳುನಾಡಿನ ಒಳಿತಿಗಾಗಿ, ಯುವಜನತೆಯ ಭವಿಷ್ಯಕ್ಕಾಗಿ ನೀವು ಇನ್ನಷ್ಟು ಸೂಕ್ಷ್ಮವಾಗಿ ಮತ್ತು ಚಾಣಾಕ್ಷತನದಿಂದ ಕೆಲಸ ಮಾಡಲಿ ಎಂಬುದು ಜನರ ಹಂಬಲ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...

ಉತ್ತರ ಪ್ರದೇಶದಲ್ಲಿ ಜಲಪ್ರಳಯ: ಪ್ರವಾಹಕ್ಕೆ 56 ಮಂದಿ ಬಲಿ, ಸಾವಿರಕ್ಕೂ ಹೆಚ್ಚು ಮನೆಗಳು ಧ್ವಂಸ

ಉತ್ತರ ಪ್ರದೇಶದಲ್ಲಿ ಕಳೆದ 60 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ...

ಸಿಂದಗಿ | ರಾಮಾನಂದ ತೀರ್ಥರ ಜನ್ಮದಿನದೊಳಗೆ ವೀರಸೌಧ ಅಭಿವೃದ್ಧಿಗೆ ಕ್ರಮ

ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್...