ದಕ್ಷಿಣ ಕನ್ನಡ | ಸದ್ದಿಲ್ಲದೇ ನಶಿಸುತ್ತಿದೆ ʼಶೋಲ’ ಕಾಡು; ಶಿಥಿಲಗೊಳ್ಳುತ್ತಿರುವ ʼನೈಸರ್ಗಿಕ ನೀರಿನ ಟ್ಯಾಂಕರ್‌ʼ!

Date:

ಪಶ್ಚಿಮ ಘಟ್ಟಗಳಲ್ಲಿ ಉಗಮಿಸುವ ನದಿಗಳು ಬಿರುಬಿಸಿಲಿನಲ್ಲೂ ತಿಳಿಜಲ ಸ್ಫುರಿಸಲು ಕಾರಣ ನಮ್ಮ ʼಶೋಲ ಕಾಡುʼ. ಮಳೆಗಾಲ ಒಡಲಲ್ಲಿ ಬಸಿದಿಟ್ಟ ನೀರು ಮರುಮಳೆಯಾಗುವ ಅವಧಿಯವರೆಗೂ ಗುಪ್ತಗಾಮಿನಿಯಂತೆ ಭೂಮಿಯೊಳಗಿಂದಲೇ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರವಹಿಸುತ್ತದೆ. ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡ ರಾಜ್ಯಗಳಲ್ಲಿ ʼಜಲಕ್ಷಾಮʼ ತಲೆದೋರದಂತೆ ಕಾಯುವುದು ಇದೇ ಕುಬ್ಜ, ದಟ್ಟ ವನಸಾಲು.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಲ್ಬಣಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಬತ್ತಿದ ಜಲಾಶಯಗಳು ಮತ್ತು ನದಿತಟಗಳ ಇಂಗುವಿಕೆ ಪ್ರಮುಖ ಕಾರಣ ಎಂಬುದು ಬರಿಗಣ್ಣಿಗೆ ಕಾಣುವ ಸತ್ಯ. ಆದರೆ, ಒಂದಷ್ಟು ವರ್ಷಗಳ ಹಿಂದೆ ಮಳೆಗಾಲ ಮಾತ್ರವಲ್ಲದೇ ಬೇಸಿಗೆಯಲ್ಲೂ ನದಿಯಲ್ಲಿ ಸಣ್ಣ ಒರತೆ ಹರಿದು ಸುಡು ಬೇಗೆ ತಣಿಸುತ್ತಿತ್ತು. ನೂಲು ನೂಲಾದ ನೀರ ಝರಿ ಘಟ್ಟಗಳಿಂದ ಇಳಿಜಾರಿಗೆ ಹರಿದು ಹಳ್ಳ- ಕೊಳ್ಳ ತುಂಬುವುದರಿಂದ ಬಿಸಿಲ ಬೇಗೆ ತಣಿಯುತ್ತಿತ್ತು. ಹೀಗೆ ಸುಡು ಧಗೆಯನು ಸಹ್ಯವಾಗಿಸುತ್ತಿದ್ದದ್ದು ದಕ್ಷಿಣದ ʼಶೋಲʼ ಕಾಡುಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ʼಶೋಲʼ ಪಶ್ಚಿಮ ಘಟ್ಟಗಳ ವಿಶಾಲ ಹುಲ್ಲುಗಾವಲಿನ ಮಗ್ಗುಲಿನಲಿ ಹಬ್ಬಿಕೊಂಡಿರುವ ದಟ್ಟ, ಕುಬ್ಜ ನಿತ್ಯಹರಿದ್ವರ್ಣ ಕಾಡು. ಗಂಧದಾರೆ, ಆಲ, ನೀರಲತ್ತಿ, ಗಜಹಿಪ್ಪಲಿ ಪ್ರಭೇದಕ್ಕೆ ಸೇರಿದ ಹೆಚ್ಚು ಎತ್ತರವಿರದ ಆದರೆ, ಸೂರ್ಯನ ಕಿರಣಗಳು ಸುಲಭವಾಗಿ ನೆಲತಾಕದಂತೆ ಗಾಢವಾಗಿ ಹಬ್ಬಿದ ಮರಗಳು ಶೋಲ ಕಾಡಿನ ವೈಶಿಷ್ಟ್ಯತೆಗೆ ಕಾರಣ. ಕರ್ನಾಟಕದ ಕುದುರೆಮುಖ, ಕೆಮ್ಮಣ್ಣುಗುಂಡಿ, ತಮಿಳುನಾಡಿನ ನೀಲಗಿರಿ ಪರ್ವತ ಸಾಲುಗಳು ಮತ್ತು ಕೇರಳದ ಮುನ್ನಾರ್‌ ಪರ್ವತಗಳುದ್ದಕ್ಕೂ ಈ ದಟ್ಟ ಶೋಲ ಕಾಡುಗಳ ವ್ಯಾಪ್ತಿಸಿದೆ.

ಬಯಲುಸೀಮೆಯಲ್ಲಿ ಹುಟ್ಟುವ ನದಿಗಳು ಮಳೆಗಾಲ ತುಂಬಿ ಹರಿದು ಬೇಸಿಗೆಯಲ್ಲಿ ಬತ್ತುತ್ತವೆ. ಆದರೆ, ಪಶ್ಚಿಮ ಘಟ್ಟಗಳಲ್ಲಿ ಉಗಮಿಸುವ ನದಿಗಳು ಬಿರುಬಿಸಿಲಿನಲ್ಲೂ ತಿಳಿಜಲ ಸ್ಫುರಿಸಲು ಕಾರಣ ನಮ್ಮ ʼಶೋಲʼ. ಮಳೆಗಾಲ ಒಡಲಲ್ಲಿ ಬಸಿದಿಟ್ಟ ನೀರು ಮರುಮಳೆಯಾಗುವ ಅವಧಿಯವರೆಗೂ ಗುಪ್ತಗಾಮಿನಿಯಂತೆ ಭೂಮಿಯೊಳಗಿಂದಲೇ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರವಹಿಸುತ್ತದೆ. ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡ ರಾಜ್ಯಗಳಲ್ಲಿ ʼಜಲಕ್ಷಾಮʼ ತಲೆದೋರದಂತೆ ಕಾಯುವುದು ಇದೇ ಕುಬ್ಜ, ದಟ್ಟ ವನಸಾಲು.

ಈ ಅರಣ್ಯ ಸಾಲನ್ನು ʼನೈಸರ್ಗಿಕ ನೀರಿನ ಟ್ಯಾಂಕರ್‌ʼ ಎಂದು ಕರೆಯಲು ಕಾರಣ ಸುಮಾರು 6ರಿಂದ 8 ಅಡಿ ಎತ್ತರಕ್ಕೆ ಬೆಳೆಯುವ ಡಿಚಾಂಥಿಯಮ್‌ ಪಾಲಿಪ್ಟಿಕಮ್, ಎರಿಯೊಕ್ರಿಸಿಸ್ ರಂಗಾಚಾರಿ, ಕ್ರಿಸೊಪೋಗನ್, ಆಂಡ್ರೊಪೋಗನ್ ಪ್ರಭೇದಕ್ಕೆ ಸೇರಿದ ಹುಲ್ಲುಗಳು. ಇವು ಅಪಾರ ಪ್ರಮಾಣದಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದ್ದು, ದಕ್ಷಿಣ ಭಾರತದ ಜೀವನದಿಗಳು ನಿತ್ಯ ಪ್ರವಹಿಸಲು ಈ ಕಾಡುಗಳು ಸಮೃದ್ಧವಾಗಿರುವುದು ಅವಶ್ಯ. ಅವಧಿಗೂ ಮುನ್ನ ನೇತ್ರಾವತಿ, ಕುಮಾರಧಾರ, ಶಾಂಭವಿ, ಫಲ್ಗುಣಿ ತಟಗಳು ಬತ್ತಿಹೋಗಲು ಕಾರಣ ಈ ಗಿರಿಶೃಂಗಗಳ ಬಾಧಿಸುತ್ತಿರುವ ಮನುಷ್ಯನೆಂಬ ಕ್ರಿಮಿ.

ಘಟ್ಟದೊಡಲಿನಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಜಲಕ್ಷಾಮದ ಭೀತಿ ಎದುರಿಸುವ ಕಾಲ ಸನ್ನಿಹಿತವಾದಂತಿದೆ.
ʼನೀಲಗಿರಿ ಬಯೋಸ್ಫಿಯರ್ ರಿಸರ್ವ್‌ʼನಲ್ಲಿ ನಡೆಸಿದ ಅಧ್ಯಯನದ ಪ್ರಕಾರ 1849 ರಲ್ಲಿ ಶೋಲ ಕಾಡುಗಳು ಸುಮಾರು 8,600 ಹೆಕ್ಟೇರ್‌ನಷ್ಟು ಹಬ್ಬಿತ್ತು, 1992ರ ಶೋಲ ವ್ಯಾಪ್ತಿ 4,225 ಹೆಕ್ಟೇರ್‌. ಗಿರಿ ಶೃಂಗಗಳ ತಪ್ಪಲಿನಲಿ ತಲೆ ಎತ್ತಿರುವ ಜನವಸತಿ, ಹೋಟೆಲ್‌ ರೆಸಾರ್ಟ್‌ ಉದ್ಯಮಗಳು, ಕಾಫಿ, ಟೀ ಎಸ್ಟೇಟುಗಳು ಅಕೇಶಿಯಾ, ನೀಲಗಿರಿ ಪ್ಲಾಟೇಷನ್‌ಗಳ ಹಾವಳಿ ಒಂದೆಡೆಯಾದರೆ; ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಸಿಲುಕಿ ಪ್ರತಿವರ್ಷ 0.28% ಶೋಲ ಅರಣ್ಯ ಸದ್ದಿಲ್ಲದೆ ನಶಿಸುತ್ತಿದೆ.

ಈ ಕುರಿತು ಈ ದಿನ.ಕಾಮ್‌ ಜತೆಗೆ ಮಾಹಿತಿ ಹಂಚಿಕೊಂಡ ಹಿರಿಯ ಪರಿಸರವಾದಿ ನಾಗೇಶ್‌ ಹೆಗಡೆ “ರೆಸೋರ್ಟ್‌, ರಸ್ತೆ ಅಗಲೀಕರಣದಂತಹ ಅವೈಜ್ಞಾನಿಕ ಯೋಜನೆಗಳಿಗೆ ಗುಡ್ಡ ಬೆಟ್ಟಗಳಿಗೆ ಕೊಡಲಿ ಹಾಕಲಾಗುತ್ತಿದೆ ಪರಿಣಾಮ ಮಳೆಗಾಲದಲ್ಲಿ ಗುಡ್ಡ ಕುಸಿತ ಉಂಟಾಗುತ್ತದೆ. ಇದರಿಂದ ವರ್ಷಪೂರ್ತಿ ಹರಿಯಬೇಕಿದ್ದ ನೀರು ಜಿನುಗಿ ಖಾಲಿಯಾಗುತ್ತದೆ. ಜಾಗತಿಕ ತಾಪಾಮಾನದ ಬದಲಾವಣೆಯಿಂದ ಬಿಸಿಲು ಮತ್ತು ಮಳೆಯ ಪ್ರಮಾಣದಲ್ಲಿ ನಿರ್ದಿಷ್ಟತೆ ಇಲ್ಲದಾಗಿದೆ. 6 ದಿನಗಳ ಮಳೆ ಒಂದೂವರೆ ಗಂಟೆಯೊಳಗೆ ಸುರಿದು ನಿಲ್ಲುತ್ತದೆ. ಜತೆಗೆ ಅತೀವ ಬಿಸಿಲು ಭೂ ಮೇಲ್ಮೈನ ತೇವ ಒಣಗಿಸುತ್ತದೆ. ಹವಾಮಾನದಲ್ಲಾಗುವ ಇಂತಹ ಏರುಪೇರು ಜಲಪ್ರವಾಹಕ್ಕೂ, ಜಲಕ್ಷಾಮಕ್ಕೂ ಕಾರಣ. ನಾವು ದಹಿಸುವ ಕಲ್ಲಿದ್ದಲು, ಪೆಟ್ರೋಲ್‌ನಂತಹ ಇಂಧನಗಳು ವಾತಾವರಣದ ಮೇಲೆ ಬಹು ಗಂಭೀರ ಪರಿಣಾಮ ಬೀರಿವೆ, ಈ ದುಷ್ಪರಿಣಾಮಗಳು ತರಬಹುದಾದ ಕ್ಷೋಭೆಯಿಂದ ಸಂಪನ್ನ ರಾಷ್ಟ್ರಗಳು ಪಾರಾಗುತ್ತವೆ, ಕುಂದಾಗುವುದು ನಮ್ಮಂತಹ ದೇಶಗಳಿಷ್ಟೆ” ಎಂದು ಕಳವಳ ವ್ಯಕ್ತಪಡಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಲು ಕಾರಣ ಇಂಗಿದ ನದಿಗಳ ಜೊತೆಗೆ ನೀರಿಲ್ಲದೆ ಬರಿದಾದ ಜಲಾಶಯಗಳು, ತುಂಬೆ, ಸರಪೆ ಜಲಾಶಯಗಳಿಂದ ಬಿಸಿಲ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ನೀರಿನ ಪೂರೈಕೆಯಾಗುತ್ತಿತ್ತು, ಈ ಬಾರಿ ಈ ಜಲಾಶಯಗಳು ಬರಿದಾಗಿವೆ.

ಪರಿಸರ ಹೋರಾಟಗಾರ ಜನಾರ್ದನ್‌ ಕೆಸರಗದ್ದೆ ಮಾತನಾಡಿ, “ಪಶ್ಚಿಮಘಟ್ಟದ ನದಿಗಳ ಹರಿವು ಬಯಲುಸೀಮೆಯ ನದಿಗಳಂತೆ ಮಳೆಗಾಲ ಒಡಲುಕ್ಕಿ ಹರಿದು ಬೇಸಿಗೆಗೆ ಬತ್ತುವಂತದಲ್ಲ. ಕಾರಣ ಗಿರಿಗಳಿಂದ ಇಳಿದು ಬರುವ ನೀರಿನ ಒರತೆ, ಕರಾವಳಿಗೆ ಹರಿವ ನೇತ್ರಾವತಿ, ಫಲ್ಗುಣಿ, ಕುಮಾರಧಾರ ನದಿಗಳು ಈ ಒರತೆ ನೀರಿನಿಂದಲೇ ಬೇಸಿಗೆಯಲ್ಲೂ ಜೀವಂತಿಕೆಯಿಂದ ಹರಿಯುತ್ತವೆ. ಪಶ್ಚಿಮದ ಎತ್ತರದ ಗಿರಿಶ್ರೇಣಿಗಳು ಅದರಲ್ಲೂ, ದಟ್ಟ ಶೋಲ ಕಾಡು ಒದ್ದೆಯಾದ ಸ್ಪಾಂಜಿನ ರೀತಿ ಕಾರ್ಯನಿರ್ವಹಿಸುತ್ತದೆ. ಗಿರಿನೆತ್ತಿಗೆ ಸುರಿದ ಮಳೆನೀರು ಪೂರ್ತಿಯಾಗಿ ಅಂತರ್ಜಲದ ಆಳವನ್ನು ಇಳಿಯಲು ಬಿಡದೆ, ಇಳಿಜಾರಿನತ್ತ ಹರಿಯಲೂ ಬಿಡದೆ ತನ್ನೊಡಲಿನಲ್ಲಿ ಹಿಡಿದಿಡುತ್ತದೆ. ಈ ನೀರು ಭೂತಳ ಸೇರದೆಯೇ ಅಡ್ಡಲಾಗಿ ಹರಿದು ಹಳ್ಳ ಕೊಳ್ಳಗಳನ್ನು ಸೇರುತ್ತದೆ. ಈ ಹಳ್ಳ ಕೊಳ್ಳ ಝರಿ ನೀರು ಜನ-ಜಾನುವಾರು, ಕಾಡು ಪ್ರಾಣಿಗಳಿಗೆ ಬೇಸಿಗೆಯ ದಾಹ ಇಂಗಿಸಲು ನೆರವಾಗುತ್ತಿತ್ತು. ಹೆಚ್ಚುತ್ತಿರುವ ತಾಪಮಾನ ಹಾಗೂ ಗುಡ್ಡ ಕುಸಿತಗಳಂತಹ ಪ್ರಾಕೃತಿಕ ವಿಕೋಪ ಇಂದು ನದಿ ಬರಿದಾಗಲು, ಜಲಮೂಲ ಇಂಗಲು ಮುಖ್ಯ ಕಾರಣ” ಎಂದು ಅಭಿಪ್ರಾಯಿಸಿದರು.

“ಹಿಂದೆಲ್ಲಾ ಕರಾವಳಿ ಮತ್ತು ಮಲೆನಾಡಿನ ರೈತರು ಭತ್ತದ ಗದ್ದೆಯಲ್ಲಿ ನೀರಿನ ತೋಡು ಕಟ್ಟುತ್ತಿದ್ದರು. ಸಾಮಾನ್ಯವಾಗಿ ಎರಡನೇ ಬೆಳೆ ಬೆಳೆಯಾಗುವ ಗದ್ದೆ ನೀರು ಕುಡಿದು ಹದವಾಗಲು ಕೈ ತೋಡುಗಳನ್ನು ನಿರ್ಮಿಸುತ್ತಾರೆ. ಗದ್ದೆಯ ಕೆಸರಿಗೆ ಬದುವಿನ ಸೊಪ್ಪು ಹುಲ್ಲಿನ ಬೇರುಗಳನ್ನು ಕಲೆಸಿ ಸಣ್ಣ ಸಣ್ಣ ತೋಡು ಕಟ್ಟುತ್ತಾರೆ. ಈ ತೋಡುಗಳಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗುವ ನೀರು ಭತ್ತದ ಪೈರು ಸಮೃದ್ಧವಾಗಿ ಬೆಳೆಯಲಷ್ಟೇ ಅಲ್ಲದೆ, ಈ ನೀರು ಮೆಲ್ಲನೆ ಭೂಮಿಯಾಳಕ್ಕೆ ಇಳಿದು ಅಂತರ್ಜಲ ಸೇರುತ್ತಿತ್ತು. ಈಗ ಭತ್ತದ ಗದ್ದೆಗಳೆ ಕಣ್ಮರೆಯಾಗಿವೆ. ವ್ಯವಸಾಯ ಕ್ಷೇತ್ರದಲ್ಲಿನ ಮಾರ್ಪಾಡು, ಅವೈಜ್ಞಾನಿಕ ಯೋಜನೆಗಳು ಎಲ್ಲವೂ ಅಂತರ್ಜಲ ಕ್ಷೀಣಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿವೆ. ನಿರಂತರ ಮಾರ್ಪಾಡು ಪ್ರಾಕೃತಿಕ ವಿಕೋಪಕ್ಕೆ ಎಡೆ ಮಾಡಿಕೊಡುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ

ಮನುಷ್ಯ ಆಧುನಿಕತೆ, ನಾಗರಿಕತೆಯ ಹೆಸರಿನಲ್ಲಿ ಭೂ ಒಡಲಿನ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾನೆ. ಮನುಜನ ತೀರದ ಆಸೆ-ಆಮಿಷಗಳು ಭವಿಷ್ಯದ ದುರಂತಗಳಿಗೆ ಕಾರಣ. ನದಿ ತೀರಗಳಲ್ಲಿ ನಾಗರಿಕತೆಗಳು ಹುಟ್ಟಿದವು ಎಂದರಿತವರಿಗೆ ನದಿ ಪಾತ್ರಗಳಲ್ಲಿನ ಬದಲಾವಣೆಗಳಿಂದ ನಾಗರಿಕತೆಗಳು ವಿನಾಶಗೊಂಡವು ಎಂಬ ದುರಂತದ ಅರಿವೂ ಇರಬೇಕು. ಹಾಗಿದ್ದರೂ ಅರಣ್ಯ, ನದಿ, ಗಿರಿಶ್ರೇಣಿಗಳಿಗೆ ತಾನೇ ಒಡೆಯ ಎಂಬ ಲಾಲಸೆಗೆ ಬಿದ್ದು ತನ್ನ ವಿನಾಶಕ್ಕೆ ಸ್ವ ಮುನ್ನುಡಿ ಬರೆದುಕೊಳ್ಳುತ್ತಿರುವುದು ವಿಷಾದನೀಯ.







WhatsApp Image 2026 03 09 at 18.17.26
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಏಕೀಕರಣ ಚಳವಳಿ ಕೊಡುಗೆ ಅಪಾರ

ಕರ್ನಾಟಕ ಏಕೀಕರಣ ಚಳವಳಿ ಕನ್ನಡಿಗರಲ್ಲಿ ನಾಡು, ನುಡಿ ಹಾಗೂ ಭಾಷಾಭಿಮಾನವನ್ನು ಜಾಗೃತಗೊಳಿಸುವಲ್ಲಿ...

ಭೂ ಮಾಫಿಯಾ, ಬೆದರಿಕೆ ಆರೋಪ: ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟು ಜಾರ್ಖಂಡ್ ಬುಡಕಟ್ಟು ನಾಯಕಿ ಆತ್ಮಹತ್ಯೆ

ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಮತ್ತು ನಾಯಕಿ ನಿಶಾ ಕುಮಾರಿ...

ದೇಶದ ಭದ್ರತೆಗೆ ಧಕ್ಕೆಯಾದ ಅಗ್ನಿಪಥ್ ಯೋಜನೆ ತಕ್ಷಣವೇ ರದ್ದುಗೊಳಿಸಿ: ಕಾಂಗ್ರೆಸ್ ಆಗ್ರಹ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು...

ಸರ್ಕಾರಿ ಶಾಲೆ ಮುಚ್ಚುವುದು, ಖಾಸಗೀಕರಣ ಎರಡೂ ಅಪಾಯದ ಸೂಚನೆ; ಅವುಗಳನ್ನು ಉಳಿಸಿ, ಉನ್ನತೀಕರಿಸಬೇಕು! ಏಕೆಂದರೆ…

ಒಂದು ಸರ್ಕಾರಿ ಶಾಲೆ ಮುಚ್ಚಿದಾಗ ಆ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲೇ ದೊರೆಯುತ್ತಿದ್ದ...