ಟಿವಿಕೆ ಸರ್ಕಾರಕ್ಕೆ ‘ಕಮಲ’ ಕಂಟಕ! ‘ಪ್ರಾಕ್ಸಿ ಸಿಎಂ’ ಜಾಲಕ್ಕೆ ಬೀಳುವರೇ ಜೋಸೆಫ್ ವಿಜಯ್?

Date:

ಈ ಹಿಂದೆ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಯಶಸ್ವಿಯಾಗಿ ಅನುಸರಿಸಿದ ತಂತ್ರಗಾರಿಕೆಗಳನ್ನು ಗಮನಿಸಿದರೆ, ತಮಿಳುನಾಡಿನ ವಿದ್ಯಮಾನ ಅಚ್ಚರಿ ತರುವುದಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು, ಒಂದು ಬಣಕ್ಕೆ ಬೆಂಬಲ ನೀಡಿ ಅಧಿಕಾರದ ಪಾಲುದಾರರಾಗುವುದು ಅಥವಾ ಅವರನ್ನು ತಮ್ಮತ್ತ ಸೆಳೆದುಕೊಂಡು ಪ್ರಾಬಲ್ಯ ಮೆರೆಯುವುದು ಬಿಜೆಪಿಯ ಕುತಂತ್ರಗಳಾಗಿವೆ

- Advertisement -

ತಮಿಳುನಾಡು ರಾಜಕೀಯ ಕಣದಲ್ಲಿ ದಿನಕ್ಕೊಂದು ಹೊಸ ತಿರುವು ಎದುರಾಗುತ್ತಿದ್ದು, ನಟನೆಯಿಂದ ರಾಜಕೀಯಕ್ಕೆ ಧುಮುಕಿ, ಟಿವಿಕೆ ಪಕ್ಷದ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ದಳಪತಿ ಜೋಸೆಫ್ ವಿಜಯ್ ಸರ್ಕಾರಕ್ಕೆ ಅಣ್ಣಾ ಡಿಎಂಕೆಯ ಬಂಡುಕೋರ ಬಣದ ಬೆಂಬಲ ಬಿಸಿತುಪ್ಪ ಆಗುವ ಸಾಧ್ಯತೆಯಿದೆ. ಅಣ್ಣಾ ಡಿಎಂಕೆಯ 25 ಮಂದಿ ಶಾಸಕರು ಮೋದಿ-ಅಮಿತ್ ಶಾ ತಾಳಕ್ಕೆ ತಕ್ಕಂತೆ ಕುಣಿದರೇನು ಗತಿ ಎಂಬ ಭೀತಿ ಇದೀಗ ಟಿವಿಕೆಯನ್ನು ಕಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...

ವಿಜಯ್ ಅವರ ಸರ್ಕಾರಕ್ಕೆ ಅನಿರೀಕ್ಷಿತವಾಗಿ ಬೆಂಬಲ ಸೂಚಿಸಿರುವ ಎಐಎಡಿಎಂಕೆಯ 25 ಮಂದಿ ಬಂಡುಕೋರ ಶಾಸಕರ ನಡೆ ಈಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ 25 ಶಾಸಕರ ಬಂಡಾಯ ಕೇವಲ ಎಐಎಡಿಎಂಕೆ ಪಕ್ಷದ ಆಂತರಿಕ ಭಿನ್ನಮತದ ಸ್ಫೋಟವಷ್ಟೇ ಅಲ್ಲ, ಇದರ ಹಿಂದೆ ರಾಷ್ಟ್ರೀಯ ನಾಯಕರ ಕಾಣದ ಕೈಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ ಎಂಬ ವಾದಕ್ಕೆ ಈಗ ಹೆಚ್ಚಿನ ಬಲ ಬಂದಿದೆ. ವಿಶೇಷವಾಗಿ, ದ್ರಾವಿಡ ನಾಡಿನಲ್ಲಿ ಹೇಗಾದರೂ ಮಾಡಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ಬಿಜೆಪಿ ಹೈಕಮಾಂಡ್‌ನ ದೂರದೃಷ್ಟಿಯ ತಂತ್ರಗಾರಿಕೆ ಇದರ ಹಿಂದಿದೆ ಎನ್ನಲಾಗುತ್ತಿದೆ. ಎಐಎಡಿಎಂಕೆ ಒಡಕಿನ ಹಿಂದೆ ನೇರವಾಗಿ ನರೇಂದ್ರ ಮೋದಿ-ಅಮಿತ್ ಶಾ ಅವರ ಚಾಣಾಕ್ಷ ತಂತ್ರಗಾರಿಕೆ ಅಡಗಿರುವ ಸಾಧ್ಯತೆಗಳೇ ಹೆಚ್ಚು ಎಂಬ ವಿಶ್ಲೇಷಣೆ ನಡೆದಿದೆ.

ಟಿವಿಕೆ ನಾಯಕರಲ್ಲಿ ಈಗ ಶುರುವಾಗಿರುವ ಅತಿದೊಡ್ಡ ಆತಂಕವೆಂದರೆ, ಈ 25 ಮಂದಿ ಬಂಡುಕೋರ ಶಾಸಕರ ನಿಯಂತ್ರಣ ಅಸಲಿಗೆ ಯಾರ ಕೈಯಲ್ಲಿದೆ ಎಂಬುದು. ಮೇಲ್ನೋಟಕ್ಕೆ ಇವರು ವಿಜಯ್ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿದಂತೆ ಕಂಡರೂ, ಇವರ ಅಸಲಿ ‘ರಿಮೋಟ್ ಕಂಟ್ರೋಲ್’ ದೆಹಲಿಯ ಕಮಲ ಪಾಳೆಯದ ನಾಯಕರ ಕೈಯಲ್ಲಿದ್ದರೆ ವಿಜಯ್ ಸರ್ಕಾರದ ಗತಿಯೇನು ಎಂಬ ಪ್ರಶ್ನೆ ಎದ್ದಿದೆ. ಒಮ್ಮೆಲೇ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಬೆಂಬಲ ಪಡೆದುಕೊಂಡಿರುವ ಟಿವಿಕೆಗೆ, ಈಗ ಈ ಶಾಸಕರೇ ಕೊರಳಿಗೆ ಸುತ್ತಿಕೊಂಡ ಹಾವಿನಂತೆ ಭಾಸವಾಗಬಹುದು.

ಬಿಜೆಪಿಗೆ ತಮಿಳುನಾಡು ರಾಜಕೀಯದಲ್ಲಿ ನೇರವಾಗಿ ಪ್ರವೇಶಿಸಿ, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಎಷ್ಟೇ ಪ್ರಯತ್ನಪಟ್ಟರೂ, ಮೈತ್ರಿಗಳನ್ನು ಮಾಡಿಕೊಂಡರೂ ದ್ರಾವಿಡ ಸಿದ್ಧಾಂತದ ನೆಲದಲ್ಲಿ ಕಮಲ ಅರಳಿಸುವುದು ಸುಲಭವಲ್ಲ ಎಂಬ ಕಟುಸತ್ಯ ದೆಹಲಿ ನಾಯಕರಿಗೆ ಅರಿವಾಗಿದೆ. ಹೀಗಾಗಿಯೇ, ನೇರ ಅಧಿಕಾರದ ಬದಲು ‘ಪ್ರಾಕ್ಸಿ ಸಿಎಂ’ (ಬದಲಿ ಅಥವಾ ಪರೋಕ್ಷ ಮುಖ್ಯಮಂತ್ರಿ) ಹೊಂದುವ ಮೂಲಕ ತಮಿಳುನಾಡಿನ ಮೇಲೆ ಹಿಡಿತ ಸಾಧಿಸುವ ಪರ್ಯಾಯ ತಂತ್ರವನ್ನು ಬಿಜೆಪಿ ಈಗ ಕಾರ್ಯಗತಗೊಳಿಸಿದಂತಿದೆ. ವಿಜಯ್ ಅವರ ಅಪಾರ ಜನಪ್ರಿಯತೆಯನ್ನು ಗುರಾಣಿಯಾಗಿ ಬಳಸಿಕೊಂಡು, ತೆರೆಯ ಹಿಂದಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ಚಾಣಾಕ್ಷ ತಂತ್ರ ಬಿಜೆಪಿಯದು.

ದಶಕಗಳ ಕಾಲ ಕಮ್ಯುನಿಸ್ಟ್ ಮತ್ತು ಟಿಎಂಸಿ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳವನ್ನೇ ಭೇದಿಸಿ ಗೆದ್ದಿರುವ ವಿಶ್ವಾಸದ ಹಿನ್ನೆಲೆಯಲ್ಲಿ ತಮಿಳುನಾಡನ್ನೂ ಕೈವಶ ಮಾಡಿಕೊಳ್ಳುವ ಅತೀವ ವಿಶ್ವಾಸ ಬಿಜೆಪಿಯದು. ಬಂಗಾಳದ ಅಖಾಡದಲ್ಲಿ ಕುತಂತ್ರ, ವಂಚನೆಗಳಲ್ಲದೆ ಆಡಳಿತವಿರೋಧಿ ಭಾವನೆಯ ಲಾಭ ಪಡೆದು ಯಶಸ್ಸು ಕಂಡ ಬಿಜೆಪಿಗೆ, ದ್ರಾವಿಡ ನೆಲದ ರಾಜಕಾರಣವನ್ನು ನಿಯಂತ್ರಿಸುವ ಹೊಸ ಹುಮ್ಮಸ್ಸು ಮೂಡಿದೆ. ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆಯ ಮೈತ್ರಿ ಬೆಳೆಸಿ ಮುಖ್ಯಮಂತ್ರಿಯನ್ನು ನಿಯಂತ್ರಿಸುವುದು ಬಿಜೆಪಿಯ ಮೂಲ ಯೋಜನೆಯಾಗಿತ್ತು. ಆದರೆ ವಿಜಯ್ ಗೆಲುವು ಈ ಯೋಜನೆಯನ್ನು ತಲೆಕೆಳಗು ಮಾಡಿತು. ವಿಜಯ್ ಸರ್ಕಾರದ ಬಹುಮತ ನಾಜೂಕಾಗಿರುವ ಸನ್ನಿವೇಶವನ್ನೂ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಹಂಚಿಕೆ ಹಾಕಿದೆ.

ಅಣ್ಣಾ ಡಿಎಂಕೆ ಹೋಳಾಗಿ ಒಂದು ಬಣ ಟಿವಿಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸುವಂತೆ ಮಾಡಿ, ವಿಜಯ್ ಈ ಬಣದ ಬೆಂಬಲವನ್ನೇ ನೆಚ್ಚಬೇಕಾದ ದುರ್ಬಲ ಸನ್ನಿವೇಶಕ್ಕಾಗಿ ಕಾದು ಆತನನ್ನು ತನ್ನ ಕಪಿಮುಷ್ಠಿಯಲ್ಲಿ ಸಿಕ್ಕಿ ಹಾಕಿಸಿಕೊಳ್ಳುವ ದೂರಗಾಮಿ ಷಡ್ಯಂತ್ರವನ್ನು ಮೋಶಾ ಹೆಣೆದಿದ್ದಾರೆಂಬ ಮಾತುಗಳು ಚೆನ್ನೈನ ಅಧಿಕಾರದ ಪಡಸಾಲೆಗಳಲ್ಲಿ ಅನುರಣಿಸಿವೆ.

ಇದನ್ನು ಓದಿದ್ದೀರಾ? ಚುನಾವಣಾ ಆಯೋಗ ಸರ್ಕಾರದ ಮರ್ಜಿಯಲ್ಲಿರದೆ ಸ್ವತಂತ್ರವಾಗಿರಲಿ: ಸುಪ್ರೀಂ ಕೋರ್ಟ್

ಈ ಹಿಂದೆ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಯಶಸ್ವಿಯಾಗಿ ಅನುಸರಿಸಿದ ಮೈತ್ರಿ ಹಾಗೂ ಆಪರೇಷನ್ ತಂತ್ರಗಾರಿಕೆಗಳನ್ನು ಗಮನಿಸಿದರೆ, ತಮಿಳುನಾಡಿನ ಈ ವಿದ್ಯಮಾನ ಅಚ್ಚರಿ ತರುವುದಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು, ಒಂದು ಬಣಕ್ಕೆ ಬೆಂಬಲ ನೀಡಿ ಅಧಿಕಾರದ ಪಾಲುದಾರರಾಗುವುದು ಅಥವಾ ಅವರನ್ನು ತಮ್ಮತ್ತ ಸೆಳೆದುಕೊಂಡು ಪ್ರಾಬಲ್ಯ ಮೆರೆಯುವುದು ಬಿಜೆಪಿಯ ಕುತಂತ್ರಗಳಾಗಿವೆ.

ವಿಜಯ್ ಅವರ ಮುಂದಿರುವ ಹಾದಿ ಅತ್ಯಂತ ಕಠಿಣ ಸವಾಲಿನಿಂದ ಕೂಡಿದೆ. ಅವರು ಕೇವಲ ದಕ್ಷ ಆಡಳಿತ, ಜನಪ್ರಿಯ ಯೋಜನೆಗಳತ್ತ ಗಮನಹರಿಸಿದರೆ ಸಾಲದು, ತಮ್ಮ ಸರ್ಕಾರದ ಅಳಿವು-ಉಳಿವಿನ ಲೆಕ್ಕಾಚಾರಗಳನ್ನು ದಿನನಿತ್ಯವೂ ಅರಿತೂ ತಂತ್ರಕ್ಕೆ ಪ್ರತಿತಂತ್ರ ಹೂಡಲೇಬೇಕಾಗುತ್ತದೆ. ತಮ್ಮ ರಾಜಕೀಯ ಭವಿಷ್ಯವನ್ನು ಮತ್ತು ಪಕ್ಷದ ಸೈದ್ಧಾಂತಿಕ ಬದ್ಧತೆಯನ್ನು ಉಳಿಸಿಕೊಳ್ಳಬೇಕಾದರೆ, ಬಿಜೆಪಿ ಹರಡಿರುವ ಬಲೆಯನ್ನು ನಾಜೂಕಾಗಿ ಹರಿದೊಗೆಯಬೇಕಿದೆ. ಇಲ್ಲವಾದಲ್ಲಿ, ತಮಿಳುನಾಡಿನ ಜನತೆ ಯಾವ ಬದಲಾವಣೆಯನ್ನು ಬಯಸಿ ಟಿವಿಕೆಗೆ ಮಣೆ ಹಾಕಿದ್ದರೋ, ಆ ಆಶಯಕ್ಕೆ ದ್ರೋಹ ಬಗೆದಂತಾಗುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಟಿಯು ವಾರ್ಷಿಕ ಘಟಿಕೋತ್ಸವ: ಉತ್ತರ ಕನ್ನಡದ ಪ್ರತಿಭೆಗಳಿಗೆ ರಾಜ್ಯಮಟ್ಟದ ಗರಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ...

ಬೀದರ್‌ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ ಅ.4ರಂದು

ಕಾವ್ಯ ರಚನೆಯಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಜಿಲ್ಲಾ...

‘ನಾವು ಹೋದಾಗ ನೀವು ಬರ್ತೀರಿ’ ಎಂದಿದ್ದ ಮೋದಿ ಮಾತಿನ ಮರ್ಮವೇನು? ರಾಹುಲ್ ಈ ಘಟನೆ ನೆನೆದದ್ದು ಯಾಕೆ?

ಚುನಾವಣಾ ಆಯೋಗದ ಪಾರದರ್ಶಕತೆ ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ನಿರ್ಣಾಯಕ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ ಪುನಃ ಭುಗಿಲೆಬ್ಬಿಸಿದ ವಿವಾದ

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ...