ಕೋರ್ಟ್‌ಗೂ ಮುನ್ನವೇ ‘AI’ ತೀರ್ಪು: ದರ್ಶನ್ ಪ್ರಕರಣವನ್ನು ‘ಸಿನಿಮಾ’ ಮಾಡುತ್ತಿರುವ ಮಾಧ್ಯಮಗಳು!

Date:

ಹೈಕೋರ್ಟ್‌ನ ಆದೇಶ ದರ್ಶನ್ ಪ್ರಕರಣವೊಂದಕ್ಕೆ ಸೀಮಿತವಲ್ಲ. ಇನ್ಮುಂದೆ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್ ಮತ್ತು ಟಿಆರ್‌ಪಿಗಾಗಿ ಕಾನೂನು ಮೀರುವ ಪ್ರತಿಯೊಬ್ಬರಿಗೂ ಕಠಿಣ ಸಂದೇಶ ರವಾನಿಸಿದೆ. ಆದರೆ, ಕೇಂದ್ರ ಸರ್ಕಾರ ಇಂತಹ ಬೇಜವಾಬ್ದಾರಿ ಚಾನೆಲ್‌ಗಳ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಯಾವುದೇ ಒಂದು ಘಟನೆ ಅಥವಾ ವಿವಾದ ನಡೆದರೂ ನ್ಯಾಯಾಲಯಗಳು ತೀರ್ಪು ನೀಡುವುದಕ್ಕೂ ಮುನ್ನವೇ ಮಾಧ್ಯಮಗಳು ತಮ್ಮದೇ ಆದ ಒಂದು ತೀರ್ಮಾನಕ್ಕೆ ಬಂದುಬಿಡುತ್ತವೆ. ಇದನ್ನೇ ಇಂಗ್ಲಿಷ್‌ನಲ್ಲಿ ‘Media Trial’ (ಮಾಧ್ಯಮಗಳ ವಿಚಾರಣೆ) ಎಂದು ಕರೆಯಲಾಗುತ್ತದೆ. ಪ್ರಕರಣ ಇತ್ಯರ್ಥವಾಗುವ ಮುನ್ನವೇ ಅಪರಾಧಿಯನ್ನು ನಿರಪರಾಧಿಯೆಂದೋ ಅಥವಾ ನಿರಪರಾಧಿಯನ್ನು ಅಪರಾಧಿಯೆಂದೋ ತಮಗೆ ಬೇಕಾದಂತಹ ಕತೆ ಕಟ್ಟಿ ಅದನ್ನು ಎಳೆಎಳೆಯಾಗಿ ವಿವರಿಸುವ ಹಲವು ಮಾಧ್ಯಮಗಳಿವೆ. ಇವುಗಳಿಗೆ ಈಗ ಸಾಥ್ ನೀಡುತ್ತಿರುವುದು ‘AI’ ತಂತ್ರಜ್ಞಾನ.

- Advertisement -

ಮಾಧ್ಯಮ ರಂಗದಲ್ಲಿ ಎಐ ಬಳಕೆ ಎಷ್ಟು ಸಹಾಯ ಮಾಡುತ್ತಿದೆಯೋ, ಅದರ ಬಳಕೆ ಹೆಚ್ಚಾದಂತೆ ದುರ್ಬಳಕೆಯೂ ದೊಡ್ಡ ಸವಾಲಾಗುತ್ತಿದೆ. ಮಾಧ್ಯಮಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಸತ್ಯಾಸತ್ಯತೆ ಮತ್ತು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುತ್ತಿದೆ. ಅದೇ ರೀತಿ, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಬಂಧಿಸಿದ ನ್ಯಾಯಾಲಯ ವಿಚಾರಣೆಯನ್ನೂ ಮಾಧ್ಯಮಗಳು ಎಐ ತಂತ್ರಜ್ಞಾನಕ್ಕೆ ಒಡ್ಡಿ ಟಿಆರ್‌ಪಿ ಹೆಚ್ಚಿಸುವ, ಜನರ ಗಮನ ಸೆಳೆಯುವ ಗೀಳಿಗೆ ಬಿದ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಇದನ್ನು ಓದಿದ್ದೀರಾ? ನಟ ದರ್ಶನ್‌ ಅಂಧಾಭಿಮಾನಿಗಳು ಕೊಡುತ್ತಿರುವ ಸಂದೇಶವೇನು?

ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಸಂದರ್ಭದಲ್ಲಿ ಮಾಧ್ಯಮಗಳು ನಡೆಸುತ್ತಿರುವ ಅತಿರೇಕದ ಹಸ್ತಕ್ಷೇಪ ಹಾಗೂ ‘ಮೀಡಿಯಾ ಟ್ರಯಲ್’ ಕುರಿತು ಹೈಕೋರ್ಟ್ ನೀಡಿರುವ ಆದೇಶ ದೇಶದ ಮಾಧ್ಯಮ ರಂಗಕ್ಕೆ ಒಂದು ಗಂಭೀರ ಎಚ್ಚರಿಕೆಯ ಗಂಟೆಯಾಗಿದೆ. ಇತರೆ ಪ್ರಕರಣಗಳಲ್ಲಿ ಎಐ ಬಳಸಿ ತಮಗೆ ಬೇಕಾದಂತೆ ದೃಶ್ಯವನ್ನು ಸೃಷ್ಟಿಸಿಕೊಳ್ಳುತ್ತಿರುವ ಮಾಧ್ಯಮಗಳು ಮತ್ತು ಯೂಟ್ಯೂಬ್‌ ಚಾನೆಲ್‌ಗಳು ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿಯೂ ಅದೇ ಹಾದಿ ತುಳಿದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಧ್ಯಮಗಳು ಎಐ ಮತ್ತು ಗ್ರಾಫಿಕ್ಸ್ ಬಳಸಿ ಸುದ್ದಿ ಪ್ರಸಾರ ಮಾಡುತ್ತಿರುವುದರ ವಿರುದ್ಧ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು, ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಟಿವಿ ಚಾನೆಲ್ ಹಾಗೂ ಯೂಟ್ಯೂಬ್‌ಗಳು ಸಾರ್ವಜನಿಕ ಪ್ರದರ್ಶನದ ವಸ್ತುವನ್ನಾಗಿ ಮಾರ್ಪಡಿಸುತ್ತಿರುವುದಕ್ಕೆ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

“ವಾಕ್ ಸ್ವಾತಂತ್ರ್ಯವು ಸಂವಿಧಾನದ ಪ್ರಮುಖ ಮೌಲ್ಯ ಹೌದು. ಆದರೆ, ಅದು ಮಾಧ್ಯಮ ಪ್ರೇರಿತ ತೀರ್ಪಾಗಿ ಬದಲಾದಾಗ ಪ್ರಜಾಪ್ರಭುತ್ವಕ್ಕೆ ಆಪತ್ತಾಗುತ್ತದೆ. ಮಾಧ್ಯಮಗಳು ಕಾವಲು ನಾಯಿಯಂತೆ (Watchdog) ಕೆಲಸ ಮಾಡಬೇಕೇ ಹೊರತು, ತಾವೇ ನ್ಯಾಯಾಧೀಶರು, ಜ್ಯೂರಿಗಳಿಂತೆ (Executioner) ವರ್ತಿಸಬಾರದು” ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ.

“ಕೆಲವು ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ವೇದಿಕೆಗಳು ಕೃತಕ ಬುದ್ಧಿಮತ್ತೆ (AI) ಪ್ರಾಂಪ್ಟ್‌ಗಳು, ಗ್ರಾಫಿಕ್ಸ್ ಮತ್ತು ಅನಿಮೇಷನ್‌ಗಳನ್ನು ಬಳಸಿ ನ್ಯಾಯಾಲಯದ ಕಲಾಪಗಳನ್ನು ಹಾಗೂ ಅಪರಾಧ ನಡೆದ ಸ್ಥಳವನ್ನು ತಮಗೆ ಬೇಕಾದಂತೆ ಮರುಸೃಷ್ಟಿಸುತ್ತಿವೆ. ವಿಚಾರಣಾಧೀನ ನ್ಯಾಯಾಧೀಶರ ಮುಖವನ್ನು ಮಾತ್ರ ಮರೆಮಾಚಿ, ಆರೋಪಿಗಳು ಮತ್ತು ವಕೀಲರ ಮುಖಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

ಇದನ್ನು ಓದಿದ್ದೀರಾ? ನಟ ದರ್ಶನ್ ಅಭಿಮಾನಿಗಳ ಅತಿರೇಕಕ್ಕೆ ಕೊನೆಯೇ ಇಲ್ಲವೇ, ಕೊಲೆಯೂ ಸಮರ್ಥನೀಯವೇ?

ದರ್ಶನ್ ಅವರ ದೂರನ್ನು ಪರಿಶೀಲಿಸಿ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳ (ಪ್ರೋಗ್ರಾಂ ಕೋಡ್) ಉಲ್ಲಂಘನೆಯಾಗಿದೆಯೇ ಎಂಬುದರ ತನಿಖೆ ನಡೆಸಿ 6 ವಾರಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ (MeitY) ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಆದೇಶದ ಅನುಷ್ಠಾನದ ಕುರಿತು 12 ವಾರಗಳ ಒಳಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದೆ. ಈ ಆದೇಶವು ಎಚ್ಚರಿಕೆ ಮಾಧ್ಯಮಗಳಿಗೆ ಪ್ರಬಲವಾದ ಎಚ್ಚರಿಕೆ ನೀಡಿದೆ.

ನ್ಯಾಯಾಲಯದ ವಿಚಾರಣೆಯನ್ನು ಒಂದು ‘ಜಾತ್ರೆ’ ಅಥವಾ ಮನರಂಜನೆಯ ಸರಕನ್ನಾಗಿ ಪರಿವರ್ತಿಸುತ್ತಿರುವುದು ಹೆಚ್ಚುತ್ತಿದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ನ್ಯಾಯಾಂಗದ ತಟಸ್ಥತೆಯನ್ನು ಕೆಡಿಸಲು ಮತ್ತು ಸಾರ್ವಜನಿಕರಲ್ಲಿ ಪೂರ್ವಗ್ರಹ ಪೀಡಿತ ಅಭಿಪ್ರಾಯ ಮೂಡಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಅಷ್ಟಕ್ಕೂ ಮಾಧ್ಯಮಗಳು ಸಮಾಜದ ಕಣ್ಣಾಗಬೇಕೇ ಹೊರತು ತಾವೇ ತೀರ್ಪು ಕೊಡುವ ಶಕ್ತಿಯಾಗಬಾರದು. ಎಐ ತಂತ್ರಜ್ಞಾನವನ್ನು ಸತ್ಯ ಶೋಧನೆಗೆ ಬಳಸಬೇಕೇ ಹೊರತು, ಕಲ್ಪಿತ ಅಪರಾಧದ ದೃಶ್ಯಗಳನ್ನು ಸೃಷ್ಟಿಸಿ ವ್ಯಕ್ತಿತ್ವ ಹರಣ ಮಾಡಲು ಅಲ್ಲ.

ಈ ಆದೇಶ ದರ್ಶನ್ ಪ್ರಕರಣವೊಂದಕ್ಕೆ ಸೀಮಿತವಲ್ಲ. ಇನ್ಮುಂದೆ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್ ಮತ್ತು ಟಿಆರ್‌ಪಿಗಾಗಿ ಕಾನೂನು ಮೀರುವ ಪ್ರತಿಯೊಬ್ಬರಿಗೂ ಕಠಿಣ ಸಂದೇಶ ರವಾನಿಸಿದೆ. ಆದರೆ ಕೇಂದ್ರ ಸರ್ಕಾರ ಇಂತಹ ಬೇಜವಾಬ್ದಾರಿ ಚಾನೆಲ್‌ಗಳ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇಲ್ಲಿ ದರ್ಶನ್ ಅಪರಾಧಿಯೋ, ನಿರಪರಾಧಿಯೋ ಎಂದು ಸಾಬೀತಾಗುವುದು ಸಂಪೂರ್ಣ ವಿಚಾರಣೆ ನಡೆದು ನ್ಯಾಯಾಲಯ ತೀರ್ಪು ನೀಡಿದ ಬಳಿಕ. ಅಷ್ಟಕ್ಕೂ ಕಾನೂನಿನ ಪ್ರಕಾರ ‘ತಪ್ಪು ಸಾಬೀತಾಗುವವರೆಗೂ ಆರೋಪ ಹೊತ್ತ ಪ್ರತಿಯೊಬ್ಬನೂ ಕೇವಲ ಆರೋಪಿಯಷ್ಟೇ’. ಆದರೆ, ಮಾಧ್ಯಮಗಳು ಮೊದಲೇ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತು ಆರೋಪಿಯನ್ನು ಅಪರಾಧಿಯನ್ನಾಗಿಸುತ್ತದೆ. ಇದರಿಂದಾಗಿ ಸಮಾಜದಲ್ಲಿ ಆತನಿಗೆ ಮತ್ತು ಆತನ ಕುಟುಂಬಕ್ಕೆ ಆಗಿರುವ ಮಾನಹಾನಿಯನ್ನು ಸರಿಪಡಿಸಲು ಸಾಧ್ಯವೇ ಇಲ್ಲದಂತಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಅಪರಾಧಿಯನ್ನೂ ಈ ಮಾಧ್ಯಮಗಳು ನಿರಪರಾಧಿಯನ್ನಾಗಿಸುತ್ತದೆ ಎಂಬುದು ವಾಸ್ತವ!

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...

ರಾಜೌರಿಯಲ್ಲಿ ಎಲ್‌ಒಸಿ ದಾಟಿ ಬಂದ ಪಾಕ್ ಆಕ್ರಮಿತ ಕಾಶ್ಮೀರದ ಅಪ್ರಾಪ್ತೆ ಬಂಧನ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಗಡಿ ನಿಯಂತ್ರಣ...

ಸಾಗರ | ʻಮೀಶೋ ಲಕ್ಕಿ ಡ್ರಾʼ ಆಮಿಷವೊಡ್ಡಿ ಮಹಿಳೆಗೆ ರೂ.23 ಲಕ್ಷ ವಂಚನೆ

ಆನ್‌ಲೈನ್ ಶಾಪಿಂಗ್ ವೇದಿಕೆ ಮೀಶೋ ಹೆಸರಿನಲ್ಲಿ ಲಕ್ಕಿ ಡ್ರಾ ಆಮಿಷವೊಡ್ಡಿ ಸಾಗರದ...