ಡಿಜಿಟಲ್ ಕೊಯ್ಲು; ಡೇಟಾ ಯುಗದಲ್ಲಿ ನಾವೆಷ್ಟು ಸ್ವತಂತ್ರರು?

Date:

ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ ಎಂದು ಭಾವಿಸುತ್ತೇವೆ, ಆದರೆ ನಿಜವಾಗಿಯೂ ನಾವು ಡೇಟಾ, ಅಲ್ಗಾರಿದಮ್‌ಗಳು ಮತ್ತು ಮಾಹಿತಿ ತಂತ್ರಜ್ಞಾನದ ಬಲೆಯಲ್ಲಿ ಖೈದಿಗಳಂತೆ ಸಿಕ್ಕಿಕೊಂಡಿದ್ದೇವೆ. ಗೌಪ್ಯತೆ, ಸ್ವಾತಂತ್ರ್ಯ ಮತ್ತು ಆಯ್ಕೆ ಮೂರನ್ನು ಕಾಪಾಡಿಕೊಳ್ಳುವುದು ಇಂದಿನ ಪೀಳಿಗೆಗೆ ದೊಡ್ಡ ಸವಾಲು. ತಂತ್ರಜ್ಞಾನವನ್ನು ಬಳಸುವಾಗ ಎಚ್ಚರಿಕೆ ಇಲ್ಲದಿದ್ದರೆ, ಈ ಪಂಜರವು ನಮ್ಮ ಶಾಶ್ವತ ವಾಸಸ್ಥಾನವಾಗಬಹುದು

- Advertisement -

ಇಂದಿನ ಡಿಜಿಟಲ್ ಯುಗದಲ್ಲಿ ನಾವು ಸ್ಮಾರ್ಟ್‌ಫೋನ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಜಗತ್ತನ್ನು ಅನ್ವೇಷಿಸುತ್ತೇವೆ. ಸ್ಮಾರ್ಟ್‌ಫೋನ್‌ನಿಂದ ಮಾಡಲಾದ ಪಂಜರದೊಳಗೆ ಸಿಲುಕಿ ಸ್ವತಂತ್ರರಾಗಿದ್ದೇವೆಂಬ ಭ್ರಮೆಯಲ್ಲಿ ಆಯುಸ್ಸು ಸವೆಯುತ್ತಿದೆ. ಗೌಪ್ಯತೆ–ಸ್ವಾತಂತ್ರ್ಯ–ಆಯ್ಕೆಯ ಪ್ರಶ್ನೆ ಬಂದಾಗ ನಾವು ಯಾವುದೋ ಕಪಿಮುಷ್ಠಿಯಲ್ಲಿ ಸಿಲುಕಿರುವುದು ಸ್ಪಷ್ಟವಾದರೂ, ಮುಕ್ತವಾಗಲು ಪರ್ಯಾಯಗಳಿಲ್ಲದೆ ಬಂಧನವನ್ನೇ ಬಿಡುಗಡೆ ಎಂದು ನಂಬಿಸಿದೆ ಈ ಡಿಜಿಟಲ್ ಜಗತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಈ ಡಿಜಿಟಲ್‌ ದೈತ್ಯನಿಂದ ನಾಗರಿಕರ ಪ್ರತಿ ಚಲನವಲನ, ರಾಜಕೀಯ ಆಯ್ಕೆ, ಸಿದ್ಧಾಂತ, ಧಾರ್ಮಿಕ ನಿಲುವು ಪ್ರತಿಯೊಂದನ್ನೂ ದಾಖಲಿಸುವುದರ ಜೊತೆಗೆ ನಿಯಂತ್ರಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತದೆ. ನಮ್ಮ ನೀಲಿ ಬೆಳಕಿನ ಪರದೆಗಳಿಗೆ ಈಗ ನಮ್ಮಿಡೀ ಬದುಕನ್ನೇ ನಿಯಂತ್ರಿಸುವ, ಆಡಳಿತಾರೂಢರ ಸಂಚಿಯೊಳಗೆ ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಅಡವಿಟ್ಟು ವ್ಯಾಪಾರಸ್ಥಿಕೆಗೆ ಇಳಿವ ದಾರಿದ್ರ್ಯತನವಿದೆ.

“You are always being watched”

ಸಾಮಾಜಿಕ ಮಾಧ್ಯಮಗಳು — ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸ್‌ಆಪ್, ಟ್ವಿಟರ್ — ನಮ್ಮ ಪ್ರತಿ ಲೈಕ್, ಕಾಮೆಂಟ್, ಹುಡುಕಾಟವನ್ನು ದಾಖಲಿಸುತ್ತಿವೆ. ನಾವು ಉಚಿತ ಎಂದು ಭಾವಿಸುವ ಸೇವೆಗಳು ಕೊಡು-ಕೊಳ್ಳುವ ವ್ಯವಹಾರಕ್ಕೆ ಬಿದ್ದಿವೆ. “ಬಳಸುವ ಎಲ್ಲಾ ಅಪ್ಲಿಕೇಷನ್‌ಗಳು ನಿಮಗೆ ಉಚಿತವೇ; ಖರ್ಚೆಂದರೆ ನಮ್ಮ ಡೇಟಾ ಪ್ಯಾಕ್‌ಗಳಿಗೆ ರಿಚಾರ್ಜ್‌ಗೆ ಬಳಸುವ ಹಣ ಮಾತ್ರ” ಎಂದು ನಂಬಿಬಿಟ್ಟಿರುವ ನಮಗೆ ಈ ಮಾಯಾಸಂತೆಯಲ್ಲಿ ನಮ್ಮ ಗಮನವನ್ನು ಮಾರಾಟ ಮಾಡುವ, ನಮ್ಮ ವೈಯಕ್ತಿಕ ಬದುಕಿನ ಗುಟ್ಟುಗಳನ್ನು ಖುಲ್ಲಂ ಖುಲ್ಲಾಗೊಳಿಸುವ ‘ಡಿಜಿಟಲ್ ಬಿಸಿನೆಸ್’ನ ಆಳ-ಅಗಲದ ಪರಿವೆಯೇ ಇಲ್ಲ.

“Tracked Everywhere”

ಎರಡು ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಬಂದಾಗ ಲೊಕೇಷನ್ ಹಾಕಿಕೊಂಡು ಯಾವುದೋ ಕಾಫಿ ಶಾಪ್‌ಗೆ ಆಟೋ ಬುಕ್ ಮಾಡಿದ್ದೆ. ನನ್ನ ಗೂಗಲ್ ಮ್ಯಾಪ್ ಹಿಸ್ಟರಿಯಲ್ಲಿ “ನೀವು ಎರಡು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದೀರಿ” ಎಂಬ ರಿಮೈಂಡರ್ ಈಗಲೂ ಪಾಪ್ ಆಗುತ್ತದೆ. ನೀವು ತಂಗಿರುವ ಸ್ಥಳ (Location), ನಿಮ್ಮ ಹುಡುಕಾಟಗಳು (Search), ಕ್ಲಿಕ್‌ಗಳು, ಲೈಕ್‌ಗಳು ಮತ್ತು ಸಂದೇಶಗಳು ಎಲ್ಲವೂ ಟ್ರ್ಯಾಕ್ ಆಗುತ್ತವೆ. ಇದಕ್ಕೆ “Attention Economy” ಎಂದೇ ಹೆಸರು; ನಮ್ಮ ಗಮನವೇ ಅವರ ಲಾಭ. ನಾವು ಎಷ್ಟು ಸಮಯವನ್ನು ಮೊಬೈಲ್, ಲ್ಯಾಪ್‌ಟಾಪ್ ಸ್ಕ್ರೋಲ್ ಮಾಡಲು ವಿನಿಯೋಗಿಸುತ್ತೇವೋ ಅಷ್ಟು ಅವರ ಆದಾಯ ಹೆಚ್ಚುತ್ತದೆ.

“Digital Footprint”

ಹೆಜ್ಜೆಗುರುತು ಈ ಡಿಜಿಟಲ್ ಯಾನಕ್ಕೂ ಇದೆ — ಬೈನರಿ ಕೋಡ್‌ಗಳಿಂದ ಸೃಷ್ಟಿಯಾದ ಈ ಗುರುತುಗಳು. ಒಮ್ಮೆ ಇಂಟರ್ನೆಟ್‌ನಲ್ಲಿ ಅನ್ವೇಷಿಸಿದ ವಿಷಯ, ಕೊಂಡ ವಸ್ತು, ಭೇಟಿ ನೀಡಿದ ಜಾಗದಿಂದ ಹಿಡಿದು ಕ್ಲಿಕ್ ಮಾಡಿ ಬಿನ್‌ಗೆ ತುಂಬಿದ ಫೋಟೋಗಳನ್ನು ತನ್ನಲ್ಲಿ ಉಳಿಸಿಕೊಳ್ಳುತ್ತದೆ. ಶಾಶ್ವತವಾಗಿ ಅಳಿಸಲಾಗದ ಈ ನಮ್ಮ ಚಹರೆಗಳಿಂದ ಸದ್ಯಕ್ಕಂತೂ ಜಗತ್ತಿನ ಯಾವ ಮೂಲೆಯಲ್ಲಿ ಅವಿತುಕೊಂಡರೂ ನಮ್ಮ-ನಿಮ್ಮ ಖಾಸಗಿ ಬದುಕನ್ನು ಖಾಸಗಿಯಾಗಿ ಕಾಪಿಡುವುದು ಅಸಾಧ್ಯ.

“Your data is the new oil”

ನಮ್ಮೆಲ್ಲಾ ಮಾಹಿತಿಗಳು ಈ ಮಾಯಾಗಾಲಿಗೆ ಇಂಧನವಿದ್ದಂತೆ. ಕಾರ್ಪೊರೇಷನ್‌ಗಳು ಮತ್ತು ಸರ್ಕಾರಗಳು ನಮ್ಮ ಡೇಟಾವನ್ನು ಎಣ್ಣೆಯಂತೆ ಹೀರಿ ತಮ್ಮ ಗಾಡಿ ಓಡಿಸುತ್ತವೆ. ಹುಟ್ಟು, ಊರು, ಲಿಂಗ, ಮುಖಚರ್ಯೆ — ಇವೆಲ್ಲಾ ಹಳಸಲು ಉದಾಹರಣೆಯಾದವು. ಈಗೇನಿದ್ದರೂ ನಿಮ್ಮ ರಾಜಕೀಯ ನಿಲುವು, ಸಿದ್ಧಾಂತ, ಧರ್ಮ, ಜಾತಿ, ಆಹಾರ ಕ್ರಮ, ದಾಂಪತ್ಯ ಜೀವನ, ಕೊನೆಗೆ ನಿಮ್ಮ ಲೈಂಗಿಕ ಬದುಕಿನಲ್ಲೂ ಖಾಸಗಿತನ ಇಲ್ಲವೆಂದರೆ ಸ್ವಾತಂತ್ರ್ಯವನ್ನು ಯಾಕಾಗಿ ಸಂಭ್ರಮಿಸಬೇಕು? ಯಾವುದು ಸ್ವಾತಂತ್ರ್ಯ ಎಂದನಿಸದಿರದು.

ಇಲ್ಲಿ ನಮ್ಮ ಡೇಟಾವನ್ನು ಬಳಸಿ ನಮ್ಮ ಆಯ್ಕೆಗಳನ್ನು ಪ್ರಭಾವಿಸಲಾಗುತ್ತದೆ. ಇದನ್ನೇ ನಾವು Manipulation & Control (ಪ್ರಭಾವ ಮತ್ತು ನಿಯಂತ್ರಣ) ಎನ್ನುವುದು. ಹೀಗೆ ನಮ್ಮ ಜನ್ಮ ಜಾಲಾಡಿ ಜಾತಕ ಬರೆಯುವುದನ್ನು “ಡಿಜಿಟಲ್ ಹಾರ್ವೆಸ್ಟಿಂಗ್” ಎಂದು ಕರೆಯುತ್ತೇವೆ. ಹಾರ್ವೆಸ್ಟಿಂಗ್ ನಾವೆಲ್ಲರೂ ಕೇಳಿರಬಹುದಾದ ಮಾಮೂಲಿ ಪದವೇನೋ; ಆದರೆ ಇಲ್ಲಿ ಇದರ ಅರ್ಥ-ವ್ಯಾಪ್ತಿ ಬೇರೆ. ಕಾರ್ಯರೂಪ ಬಹುಪಾಲು ಒಂದೇ: ಬಿತ್ತಿದ್ದನ್ನು ಕೊಯ್ಲು ಮಾಡಿಕೊಳ್ಳುತ್ತೇವಲ್ಲ, ಹಾಗೆಯೇ ದೊಡ್ಡ ದೊಡ್ಡ ಕಂಪನಿಗಳು “ಎಲ್ಲಾ ಫ್ರೀ” ಎಂದು ತಮ್ಮ ಡಿಜಿಟಲ್ ಅಂಗಳದಲ್ಲಿ ಗ್ರಾಹಕರನ್ನು ತಮ್ಮ ನಿಯಂತ್ರಣದೊಳಗೆ ಕುಣಿಸಿ, ನಮ್ಮ ಕೋಣೆಗೆ ನುಗ್ಗಿ, ಇಂಚಿಂಚು ಮಾಹಿತಿ ಕದ್ದು ಸರ್ಕಾರಕ್ಕೋ ಇನ್ನಾವುದೋ ಕಾರ್ಪೊರೇಟ್ ಕಂಪನಿಗೋ ನಮ್ಮ ಖಾಸಗಿ ಡೈರಿ ಮಾರಿಕೊಂಡು ಹಣ ಗಳಿಸುತ್ತವೆ. ನಮ್ಮ ಆಯ್ಕೆಗಳನ್ನು ಪ್ರಭಾವಿಸಿ, ಜಾಹೀರಾತುಗಳನ್ನು ತೋರಿಸಿ, ರಾಜಕೀಯ ಅಭಿಪ್ರಾಯಗಳನ್ನು ಕೂಡ ಬದಲಾಯಿಸುವ ಶಕ್ತಿ ಈ ಡಿಜಿಟಲ್ ಎಂಜಿನ್‌ಗಳಿಗಿದೆ.

“No space is truly private anymore”

ಕೊನೆಯಲ್ಲಿ ಒಬ್ಬ ವ್ಯಕ್ತಿ ತನ್ನ ಕೋಣೆಯಲ್ಲಿ ಕುಳಿತಿದ್ದರೂ ಸಾವಿರ ಕಣ್ಣಿನ ಸುಪರ್ದಿಯಲ್ಲಿರುತ್ತಾನೆ. ನಮ್ಮ ಮನೆಯೊಳಗಿನ ಮಾತುಕತೆಗಳು, ಆಲೋಚನೆಗಳು, ಖಾಸಾ ಭಾವನೆಗಳು ಕೂಡ ಡೇಟಾ ಪಾಯಿಂಟ್‌ಗಳಾಗಿ ಪರಿವರ್ತನೆಯಾಗುತ್ತಿವೆ. ನಿರಂತರ ನಿಗಾದಡಿಯಲ್ಲಿರುವ ನಾವು ಪ್ರತಿಯೊಂದು ಕ್ಷಣವನ್ನೂ ಡಿಜಿಟಲ್ ಹಿಡಿತದೊಳಗೆ ಕಳೆಯುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳು ನಮ್ಮ ಪ್ರತಿ ಲೈಕ್, ಕಾಮೆಂಟ್, ಹುಡುಕಾಟ ಎಲ್ಲವನ್ನೂ ದಾಖಲಿಸಿಕೊಂಡಿವೆ.

ಈ ವ್ಯವಸ್ಥೆಯ ಹಿಂದೆ ಸರ್ಕಾರ ಮತ್ತು ಕಾರ್ಪೊರೇಷನ್‌ಗಳು ಕ್ಷುದ್ರ ಶಕ್ತಿಗಳಾಗಿ ಕೆಲಸ ಮಾಡುತ್ತಿವೆ. ಕಾರ್ಪೊರೇಷನ್‌ಗಳು ನಮ್ಮ ಡೇಟಾವನ್ನು ಹೊಸ ತೈಲದಂತೆ ಹೀರುತ್ತವೆ. ಮೆಟಾ, ಗೂಗಲ್, ಟಿಕ್‌ಟಾಕ್, ಅಮೆಜಾನ್ ಮುಂತಾದ ಕಂಪನಿಗಳು ನಮ್ಮ ಲೊಕೇಷನ್, ಹುಡುಕಾಟಗಳು, ಸಂದೇಶಗಳು ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಿ ಲಾಭ ಗಳಿಸುತ್ತವೆ. ಅಲ್ಗಾರಿದಮ್‌ಗಳು ನಮ್ಮ ಆಯ್ಕೆಗಳನ್ನು ಪ್ರಭಾವಿಸಿ, ನಾವು ಏನು ನೋಡಬೇಕು ಮತ್ತು ಏನು ಖರೀದಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ನಿಜವಾಗಿ ನಾವು ಅವರ ಮಾರುಕಟ್ಟೆಯ ಉತ್ಪನ್ನ.

ಸರ್ಕಾರಗಳು ಇದೇ ಡೇಟಾವನ್ನು ಸುರಕ್ಷತೆ ಮತ್ತು ಆಡಳಿತದ ಹೆಸರಿನಲ್ಲಿ ಬಳಸುತ್ತವೆ. ಅವು ಕಂಪನಿಗಳಿಂದ ಡೇಟಾ ಪಡೆದು ನಾಗರಿಕರನ್ನು ಟ್ರ್ಯಾಕ್ ಮಾಡುತ್ತವೆ. ಕೆಲವು ದೇಶಗಳಲ್ಲಿ ಸಂಪೂರ್ಣ ನಿಗಾ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಸರ್ಕಾರಗಳು ಕಾನೂನುಗಳ ಮೂಲಕ ಕಂಪನಿಗಳನ್ನು ಒತ್ತಾಯಿಸಿ ಇನ್ನಷ್ಟು ಮಾಹಿತಿ ಪಡೆಯುತ್ತವೆ. ಇದರಿಂದ ನಾಗರಿಕರ ವರ್ತನೆ, ಚಲನವಲನ ಮತ್ತು ಅಭಿಪ್ರಾಯಗಳು ನಿರಂತರ ನಿಗಾದಲ್ಲಿರುತ್ತವೆ.

ಕಾರ್ಪೊರೇಷನ್‌ಗಳು ಡೇಟಾ ಸಂಗ್ರಹಿಸಿ ಲಾಭ ಗಳಿಸುತ್ತವೆ ಮತ್ತು ಸರ್ಕಾರಗಳು ಅದನ್ನು ನಿಯಂತ್ರಣಕ್ಕಾಗಿ ಬಳಸುತ್ತವೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡಿದಾಗ ಸಾಮಾನ್ಯ ನಾಗರಿಕನ ಗೌಪ್ಯತೆ, ಸ್ವಾತಂತ್ರ್ಯ ಮತ್ತು ಆಯ್ಕೆಯ ಸ್ವಾತಂತ್ರ್ಯ ಹೆಸರಿಗಷ್ಟೇ.

ಭಾರತದಲ್ಲಿ ಈ ವ್ಯವಸ್ಥೆ ಹೇಗಿದೆ?

ಭಾರತದಲ್ಲಿ ಡಿಜಿಟಲ್ ನಿಗಾ, ಡೇಟಾ ಸಂಗ್ರಹಣೆ ಮತ್ತು ಗೌಪ್ಯತೆಯ ಪರಿಸ್ಥಿತಿ ಸಂಕೀರ್ಣವಾಗಿದೆ. ಒಂದು ಕಡೆ ಹೊಸ ಕಾನೂನು ಬಂದಿದೆ; ಇನ್ನೊಂದು ಕಡೆ ಸರ್ಕಾರದ ನಿಗಾ ವ್ಯವಸ್ಥೆಗಳು ಬಲಗೊಳ್ಳುತ್ತಿವೆ.

ಭಾರತದ ಮೊದಲ ಸಮಗ್ರ ಡೇಟಾ ಸಂರಕ್ಷಣಾ ಕಾನೂನು ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್, 2023 (DPDP Act). ಇದರ ನಿಯಮಗಳನ್ನು (DPDP Rules 2025) ನವೆಂಬರ್ 13, 2025ರಂದು ಅಧಿಸೂಚಿಸಲಾಯಿತು. ಇದು ಹಂತಹಂತವಾಗಿ ಜಾರಿಗೆ ಬರುತ್ತಿದೆ.

ಈ ಕಾನೂನಿನ ಅಡಿಯಲ್ಲಿ ಕಂಪನಿಗಳು (ಕಾರ್ಪೊರೇಷನ್‌ಗಳು) ನಿಮ್ಮ ಡೇಟಾ ಸಂಗ್ರಹಿಸುವಾಗ ಸ್ಪಷ್ಟ ಸಮ್ಮತಿ ಪಡೆಯಬೇಕು, ಉದ್ದೇಶ ಹೇಳಬೇಕು ಮತ್ತು ಉಲ್ಲಂಘನೆಯಾದರೆ ವರದಿ ಮಾಡಬೇಕು. ಗರಿಷ್ಠ ದಂಡ 250 ಕೋಟಿ ರೂಪಾಯಿಗಳವರೆಗೆ ಇರಬಹುದು. ಆದರೆ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮುಂತಾದ ಕಾರಣಗಳಿಗೆ ವಿಶಾಲ ವಿನಾಯಿತಿಗಳಿವೆ. ಇದರಿಂದ ಸರ್ಕಾರಿ ಏಜೆನ್ಸಿಗಳು ಹೆಚ್ಚು ನಿಯಂತ್ರಣಕ್ಕೆ ಒಳಪಡುವುದಿಲ್ಲ ಎಂಬ ಟೀಕೆಗಳಿವೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಕಾನೂನಿನ ಕೆಲವು ನಿಬಂಧನೆಗಳ ವಿರುದ್ಧ ಅರ್ಜಿಗಳು ಇನ್ನೂ ವಿಚಾರಣೆಯಲ್ಲಿವೆ.

  • NATGRID (ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್): ಇದು ಈಗ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ತಿಂಗಳಿಗೆ ಸುಮಾರು 45,000 ವಿನಂತಿಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಆಧಾರ್, ಬ್ಯಾಂಕ್ ವಿವರಗಳು, ಪ್ರಯಾಣ ದಾಖಲೆಗಳು, ವಾಹನ ನೋಂದಣಿ, ಸಾಮಾಜಿಕ ಮಾಧ್ಯಮಗಳು, NPR (119 ಕೋಟಿ ಜನರ ಕುಟುಂಬ ಮಟ್ಟದ ಮಾಹಿತಿ) ಮುಂತಾದ 20ಕ್ಕೂ ಹೆಚ್ಚು ಮೂಲಗಳಿಂದ ಡೇಟಾ ಸಂಗ್ರಹಿಸುತ್ತದೆ.
  • CMS (ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್): ದೂರವಾಣಿ ಮತ್ತು ಇಂಟರ್ನೆಟ್ ಸಂವಹನಗಳಲ್ಲಿ ನೇರವಾಗಿ ಮಧ್ಯಪ್ರವೇಶಿಸಲು, ಮುಖ ಗುರುತಿಸುವಿಕೆ (Facial Recognition) ವ್ಯವಸ್ಥೆಗಳು ವಿಮಾನ ನಿಲ್ದಾಣದ ಚಕಿಂಗ್‌ ಕಾರ್ಯದಲ್ಲಿ ಇತ್ತೀಚೆಗಂತೂ ಪ್ರತಿಭಟನೆಗಳು ಮತ್ತು ಪೊಲೀಸ್ ಕಾರ್ಯಾಚರಣೆಗಳಲ್ಲಿ ಈ ವಿಧಾನ ಚಾಲ್ತಿಯಲ್ಲಿದೆ. ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಈ ಬಗೆಯ ಟ್ರಾಕಿಂಗ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿತು ಎಂಬುದು ಇದಕ್ಕೆ ಸ್ಪಷ್ಟ ಉದಾಹರಣೆ.
  • ಆಧಾರ್: ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಡೇಟಾಬೇಸ್. ಇದು ಭಾರತೀಯರ ಬಹುಪಾಲು ಸರ್ಕಾರಿ, ಖಾಸಗಿ ಸೇವೆಗಳಿಗೆ ಲಿಂಕ್ ಆಗಿದೆ, ಆದರೆ ಗೌಪ್ಯತೆ ಮತ್ತು ಡೇಟಾ ಸೋರಿಕೆ ಕುರಿತ ಆತಂಕಗಳು ಇದರಿಂದಲೇ ಹೆಚ್ಚು. ನಿತ್ಯ ಕೇಳುವ ಡಿಜಿಟಲ್‌ ಅರೆಸ್ಟ್‌, ಸೈಬರ್‌ ಅಪರಾಧಗಳ ರೂವಾರಿಗಳಿಗೆ ನಾಗರಿಕರ ಮಾಹಿತಿ ಸೋರುವುದೇ ಇಲ್ಲಿಂದ ಎಂಬ ಆರೋಪ ಹೊಸತೇನಲ್ಲ.

ಕಾರ್ಪೊರೇಷನ್‌ಗಳ ಪಾತ್ರ:

ಮೆಟಾ, ಗೂಗಲ್, ವಾಟ್ಸ್‌ಆಪ್, ಟಿಕ್‌ಟಾಕ್ ಮುಂತಾದ ಕಂಪನಿಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಡೇಟಾ ಸಂಗ್ರಹಿಸುತ್ತವೆ. DPDP ಕಾನೂನು ಜಾರಿಗೆ ಬಂದ ಮೇಲೆ ಅವು ಸಮ್ಮತಿ ಪಡೆಯುವುದು, ಉದ್ದೇಶ ಸ್ಪಷ್ಟಪಡಿಸುವುದು ಮತ್ತು ಭದ್ರತೆ ಕಾಪಾಡುವುದು ಕಡ್ಡಾಯ. ಆದರೆ ಸರ್ಕಾರ ಕಾನೂನುಬದ್ಧವಾಗಿ ಅವುಗಳಿಂದ ಡೇಟಾ ಕೇಳಬಹುದು. ಹೀಗಾಗಿ ಕಂಪನಿಗಳು ಲಾಭಕ್ಕಾಗಿ ಮತ್ತು ಸರ್ಕಾರ ನಿಯಂತ್ರಣಕ್ಕಾಗಿ ಡೇಟಾವನ್ನು ಬಳಸುವ ಮಾರ್ಗ ಹಿಡಿದಿದೆ.

ಒಟ್ಟಾರೆ ಚಿತ್ರ:

ಭಾರತದಲ್ಲಿ ಗೌಪ್ಯತೆಯ ಹಕ್ಕು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ 2017ರಲ್ಲಿ ಘೋಷಿಸಿದೆ. ಆದರೆ ಪ್ರಾಯೋಗಿಕವಾಗಿ ಆಧಾರ್, NATGRID, CMS ಮುಂತಾದ ವ್ಯವಸ್ಥೆಗಳು ನಾಗರಿಕರ ಡೇಟಾವನ್ನು ವ್ಯಾಪಕವಾಗಿ ಸಂಗ್ರಹಿಸುತ್ತವೆ. ಹೊಸ DPDP ಕಾನೂನು ಕಂಪನಿಗಳ ಮೇಲೆ ನಿಯಂತ್ರಣ ಹೇರುತ್ತದೆ, ಆದರೆ ಸರ್ಕಾರಕ್ಕೆ ವಿಶಾಲ ವಿನಾಯಿತಿಗಳನ್ನು ನೀಡುತ್ತದೆ. ಇದರಿಂದ “ನಿಮ್ಮ ಡೇಟಾ ನಿಮ್ಮದೇ” ಎಂಬ ಭಾವನೆ ಸಂಪೂರ್ಣ ಸತ್ಯವಲ್ಲ. ಗೌಪ್ಯತೆ, ಸ್ವಾತಂತ್ರ್ಯ ಮತ್ತು ಆಯ್ಕೆಯ ಪ್ರಶ್ನೆ ಎದುರುಗೊಂಡಾಗ ಭಾರತೀಯರು ಇನ್ನೂ ಬಂಧನದಲ್ಲಿಯೇ ಇದ್ದಾರೆ. ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ನಮ್ಮ ಸ್ವಾತಂತ್ರ್ಯದ ಪರಿಧಿ ಸಂಕುಚಿತಗೊಂಡು ಕೀಲಿಗೆ ಸಿಕ್ಕ ಗೊಂಬೆಗಳಾಗುತ್ತಿದ್ದೇವೆ; ಬಿಡುಗಡೆಯ ಕನಸು ಕೂಡ ಭ್ರಮೆಯೇ.

ಇದು ನಮ್ಮ ವರ್ತಮಾನದ ಕನ್ನಡಿ. ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ ಎಂದು ಭಾವಿಸುತ್ತೇವೆ, ಆದರೆ ನಿಜವಾಗಿಯೂ ನಾವು ಡೇಟಾ, ಅಲ್ಗಾರಿದಮ್‌ಗಳು ಮತ್ತು ಮಾಹಿತ ತಂತ್ರಜ್ಞಾನದ ಬಲೆಯಲ್ಲಿ ಖೈದಿಗಳಂತೆ ಸಿಕ್ಕಿಕೊಂಡಿದ್ದೇವೆ. ಗೌಪ್ಯತೆ, ಸ್ವಾತಂತ್ರ್ಯ ಮತ್ತು ಆಯ್ಕೆ ಮೂರನ್ನು ಕಾಪಾಡಿಕೊಳ್ಳುವುದು ಇಂದಿನ ಪೀಳಿಗೆಗೆ ದೊಡ್ಡ ಸವಾಲು. ತಂತ್ರಜ್ಞಾನವನ್ನು ಬಳಸುವಾಗ ಎಚ್ಚರಿಕೆ ಇಲ್ಲದಿದ್ದರೆ, ಈ ಪಂಜರವು ನಮ್ಮ ಶಾಶ್ವತ ವಾಸಸ್ಥಾನವಾಗಬಹುದು.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹2,700 ಬೆಲೆಯ ಕ್ಯಾನ್ಸರ್‌ ಔಷಧಿ ಮೇಲೆ ₹27,000 MRP: ಇದು ʼನರಮೇಧʼ ಎಂದ ಸುಪ್ರೀಂ ಕೋರ್ಟ್

ಕ್ಯಾನ್ಸರ್‌ ಔಷಧಿಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌...

​’ಕಂದಾ, ನೀನು ನ್ಯಾಯಾಲಯ ಕಂಡ ಅತಿ ಧೈರ್ಯಶಾಲಿ ಬಾಲಕಿ’: ಪೋಕ್ಸೊ ಸಂತ್ರಸ್ತೆಗೆ ನ್ಯಾಯಾಧೀಶರ ಭಾವುಕ ಪತ್ರ

ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪುಗಳು ಕೇವಲ ಶಿಕ್ಷೆ ಮತ್ತು ದಂಡಕ್ಕೆ...

ಹವಾಮಾನ | ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಾರಿ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 30ರಿಂದ 40...

ಕೋಡಿಹಳ್ಳಿ ಚಂದ್ರಶೇಖರ್ ಬಂಧನ ಖಂಡಿಸಿ ಮುಧೋಳದಲ್ಲಿ ರೈತರ ಪ್ರತಿಭಟನೆ

ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರೈತಪರ ಹೋರಾಟ ನಡೆಸಿದ್ದ ರಾಜ್ಯ ರೈತ...