ಹರಿಯಾಣದ ಮತದಾರೆ ‘ಬ್ರೆಜಿಲ್ ಮಾಡೆಲ್’ ಯಾರು ಗೊತ್ತೇ?

Date:

ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದ ಬ್ರೆಜಿಲ್‌ನಲ್ಲಿ ವಾಸಿಸುವ ಈ ಮಹಿಳೆಯ ಹೆಸರು ಲಾರಿಸಾ ನೆರಿ. ಎನ್‌ಡಿಟಿವಿಗೆ ಸಂದರ್ಶನ ನೀಡಿರುವ ಅವರು, ರಾಹುಲ್ ಗಾಂಧಿ ಅವರು ಹೇಳಿಕೊಂಡಂತೆ ತಾವು ಮಾಡೆಲ್ ಅಲ್ಲ. ಕೇಶ ವಿನ್ಯಾಸಕಿ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ಈ ವಿವಾದ ಭುಗಿಲೆದ್ದಾಗ ಭಯಗೊಂಡಿದ್ದಾಗಿ ತಿಳಿಸಿದ್ದಾರೆ.

- Advertisement -

ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಮತಗಳ್ಳತನ ವಿಚಾರವಾಗಿ ಪದೇಪದೇ ಧ್ವನಿ ಎತ್ತುತ್ತಲೇ ಇದ್ದಾರೆ. ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಉತ್ತರ ನೀಡಬೇಕಾದ ಚುನಾವಣಾ ಆಯೋಗ ಸುಮ್ಮನೆ ಕೂತರೆ, ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ದಾಖಲೆಯ ಸಮೇತ ಸಂಸತ್ತಿನಲ್ಲಿಯೇ ಮೋದಿಯ ಮುಖವಾಡವನ್ನು ಕಳಚುವ ರಾಹುಲ್ ಗಾಂಧಿ ಅವರು ಈಗಿನ ಮಾಧ್ಯಮಗಳು ಮಾಡದೇ ಇರುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಹಿಂದೆ, 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಮಯದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ದಾಖಲೆಯ ಸಮೇತ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಸಂಗತಿ ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಆ ಬಳಿಕ, ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಮತಗಳ್ಳತನ ಪ್ರಕರಣವು 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಭಾರೀ ಸದ್ದು ಮಾಡಿ, ನಂತರದಲ್ಲಿ ಮೂಲೆಗುಂಪಾದಂಗಾಗಿತ್ತು. ರಾಹುಲ್ ಗಾಂಧಿ ಅವರು ಈ ಬಗ್ಗೆ ದ್ವನಿ ಎತ್ತಿದ ಬಳಿಕ ಮೂಲೆಗುಂಪಾಗಿದ್ದ ಪ್ರಕರಣ ಮತ್ತೆ ಸದ್ದು ಮಾಡಿತ್ತು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಮತಗಳ್ಳತನದ ಮೂಲಕ ವ್ಯವಸ್ಥಿತವಾಗಿ ಬುಡಮೇಲುಗೊಳಿಸಲಾಗುತ್ತಿದೆ ಎಂಬ ಕರಾಳ ಸತ್ಯವನ್ನು ರಾಹುಲ್‌ ಗಾಂಧಿ ಅವರು ದೇಶದ ಜನರೆದುರು ತೆರೆದಿಟ್ಟಿದ್ದರು.

ಮಹದೇವಪುರ ಕ್ಷೇತ್ರದಲ್ಲಿ ಕನಿಷ್ಠ 15% ಮತದಾರರು ನಕಲಿ ಎಂದು ಹೇಳಿ ‘ಬಾಂಬ್’ ಸಿಡಿಸಿದ್ದ ರಾಹುಲ್‌ ಗಾಂಧಿ, ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆರೋಗದ ವಿರುದ್ಧ ‘ಆಟಂ ಬಾಂಬ್’ ಸಿಡಿಸಿದ್ದರು. ಇದೀಗ, ಮತ್ತೊಂದು ಪತ್ರಿಕಾಗೋಷ್ಠಿಯನ್ನು ನಡೆಸಿರುವ ರಾಹುಲ್ ಗಾಂಧಿ ಅವರು ‘ಹೈಡ್ರೋಜನ್ ಬಾಂಬ್’ ಸಿಡಿಸಿದ್ದಾರೆ.

ಹೌದು, ಬಿಹಾರದಲ್ಲಿ ಮೊದಲ ಹಂತದ ಮತದಾನದ ಹಿಂದಿನ ದಿನವಾದ ನವೆಂಬರ್ 5, 2025ರಂದು ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ‘ಮತಗಳ್ಳತನ’ ನಡೆದಿದೆ ಎಂಬ ‘ಹೈಡ್ರೋಜನ್ ಬಾಂಬ್’ ಸಿಡಿಸಿದ್ದರು.

3411111

ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಮತಗಳ್ಳತನದ ವಿರುದ್ದ ಬಿಹಾರದಲ್ಲಿ ‘ವೋಟರ್ ಅಧಿಕಾರ್ ಯಾತ್ರೆ’ ನಡೆಸಿದ್ದ ರಾಹುಲ್ ಗಾಂಧಿ, ಮತಗಳ್ಳತನ ಕುರಿತ ಹೈಡ್ರೋಜನ್ ಬಾಂಬ್ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದರು. ಅದರಂತೆ ‘ಹೆಚ್‌ ಫೈಲ್ಸ್’ (ಹರಿಯಾಣ ಫೈಲ್ಸ್ ಅಥವಾ ಹೈಡ್ರೋಜನ್ ಫೈಲ್ಸ್‌) ಎಂಬ ಶೀರ್ಷಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

“ಬಿಜೆಪಿ ಚುನಾವಣಾ ಆಯೋಗದ ಜತೆಗೆ ಸೇರಿ ಮತಗಳ್ಳತನ ನಡೆಸುತ್ತಿದೆ” ಎಂದು ಮತ್ತೋಮ್ಮೆ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. “ನಾನು ಹೇಳುತ್ತಿರುವುದು 100ರಷ್ಟು ಸತ್ಯ. ವಿರೋಧ ಪಕ್ಷ ನಾಯಕ ಎಂಬುವುದನ್ನು ತಲೆಯಲ್ಲಿ ಇಟ್ಟುಕೊಂಡು ಬಹಳ ಜವಾಬ್ದಾರಿಯಿಂದ ಈ ಆರೋಪಗಳನ್ನು ಮಾಡುತ್ತಿದ್ದೇನೆ. ನಾನು ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದೇನೆ. ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ 2ನೇ ಸ್ಥಾನಕ್ಕೇರಿದ್ದು ಹೇಗೆ?

“ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ ನಡೆದಿದೆ. ಶೇಕಡ 12.5ರಷ್ಟು ನಕಲಿ ಮತಗಳನ್ನು ಹಾಕಲಾಗಿದೆ. ಸುಮಾರು 93,000 ವಿಳಾಸಗಳು ಅಮಾನ್ಯವಾಗಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಶೀಲನೆ ನಡೆಸಲು ಅವಕಾಶ ನೀಡುತ್ತಿಲ್ಲ, ನಿರ್ಬಂಧಿಸುತ್ತಿದೆ” ಎಂದು ದೂರಿದ್ದಾರೆ.

ಈ ಆರೋಪಗಳಲ್ಲಿ ಪ್ರಮುಖವಾಗಿ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್‌ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿದೆ ಎಂದು ಹೇಳಿದ್ದಾರೆ. ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ ಮತ್ತು ವಿಲ್ಮಾ ಮುಂತಾದ ಬಹು ಹೆಸರುಗಳಲ್ಲಿ ಒಂದೇ ಚಿತ್ರ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಈ ಮಹಿಳೆ ಯಾರು? ಆಕೆಯ ಹೆಸರೇನು? ಆಕೆ ಎಲ್ಲಿಂದ ಬಂದಿದ್ದಾಳೆ?

ಹರಿಯಾಣದಲ್ಲಿ 22 ಬಾರಿ ಆಕೆ ಮತ ಚಲಾಯಿಸಿದ್ದಾಳೆ. ಯಾರೋ ಈ ಫೋಟೋವನ್ನು ಬೂತ್ ಮಟ್ಟದಲ್ಲಿ ಅಲ್ಲ, ಕೇಂದ್ರ ಮಟ್ಟದಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಆಕೆ ಬ್ರೆಜಿಲಿಯನ್ ಮಾಡೆಲ್ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಮತದಾನದ ವಂಚನೆ ಆರೋಪದ ನಂತರ ಬ್ರೆಜಿಲ್ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ವೈರಲ್ ಆಗಿತ್ತು. ರೂಪದರ್ಶಿಯ ಭಾವಚಿತ್ರ ಹಾಗೂ ಅದನ್ನು ಸೆರೆ ಹಿಡಿದ ಬ್ರೆಜಿಲ್ ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರ್ರೆರೊ ಬಗ್ಗೆಯೂ ಹುಡುಕಾಟ ಪ್ರಾರಂಭಗೊಂಡಿತ್ತು.  

ಬ್ರೆಜಿಲ್ ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರ್ರೆರೊ ಉಚಿತ ಪರವಾನಗಿ ಹೊಂದಿರುವ ರೂಪದರ್ಶಿಗಳ ಭಾವಚಿತ್ರಗಳನ್ನು ಸ್ಟಾಕ್ ಸೈಟ್ ಗಳಲ್ಲಿ ಪೋಸ್ಟ್ ಮಾಡುತ್ತಾರೆ.  ದಾಖಲೆಗಳ ಪ್ರಕಾರ, ರೂಪದರ್ಶಿಯ ಫೋಟೋವನ್ನು ಮಾರ್ಚ್ 2, 2017 ರಂದು ಪ್ರಕಟಿಸಲಾಗಿದೆ. ಈ ಫೋಟೋ ಎಂಟು ವರ್ಷ ಹಳೆಯದಾಗಿದೆ.

G4 yzB3bAAA5lZw

ಇನ್ನು ರಾಹುಲ್ ಗಾಂಧಿ ಅವರು ಹೇಳಿದಂತೆ, ಹರಿಯಾಣದಲ್ಲಿ ಸರಸ್ವತಿ, ಸ್ವೀಟಿ ಸೇರಿದಂತೆ ಇನ್ನಿತರ ಹೆಸರುಗಳಿಂದ ಮತ ಹಾಕಿದ ಈ ಮಹಿಳೆ ಯಾರು? ಆಕೆಯ ನಿಜವಾದ ಹೆಸರೇನು ಎಂಬುದು ಯಾರಿಗೂ ಕೂಡ ಗೊತ್ತಿರಲಿಲ್ಲ. ಈ ಬಗ್ಗೆ ದೊಡ್ಡ ಸುದ್ದಿಯಾದ ಬಳಿಕ, ಸ್ವತಃ ರೂಪದರ್ಶಿಯೇ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ಬಳಿಕ, ಅವರ ಹೆಸರು, ಅವರ ಕೆಲಸ ಏನು ಎಂಬುದರ ಬಗ್ಗೆ ತಿಳಿದುಬಂದಿದೆ.

ಹೌದು, ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಬ್ರೆಜಿಲ್‌ನಲ್ಲಿ ವಾಸಿಸುವ ಈ ಮಹಿಳೆಯ ಹೆಸರು ಲಾರಿಸಾ ನೆರಿ. ಎನ್ ಡಿ ಟಿವಿಗೆ ಸಂದರ್ಶನ್ ನೀಡಿರುವ ಅವರು, “ರಾಹುಲ್ ಗಾಂಧಿ ಅವರು ಹೇಳಿಕೊಂಡಂತೆ ಅವರು ಮಾಡೆಲ್ ಅಲ್ಲ. ಕೇಶ ವಿನ್ಯಾಸಕಿ ಎಂದು ಹೇಳಿಕೊಂಡಿದ್ದಾರೆ. ಜತೆಗೆ, “ಈ ವಿವಾದ ಭುಗಿಲೆದ್ದಾಗ ಭಯಗೊಂಡಿದ್ದಾಗಿ” ಹೇಳಿದ್ದಾರೆ.

“ವೈರಲ್ ಆಗಿರುವ ಚಿತ್ರವನ್ನು ಸುಮಾರು ಎಂಟು ವರ್ಷಗಳ ಹಿಂದೆ ನಾನು 20 ವರ್ಷದವಳಿದ್ದಾಗ ತೆಗೆಯಲಾಗಿತ್ತು. ಆ ಸಮಯದಲ್ಲಿ ಛಾಯಾಗ್ರಾಹಕನಾಗಿದ್ದ ನನ್ನ ಸ್ನೇಹಿತನಿಗೆ ಸಹಾಯ ಮಾಡಲು ಈ ಫೋಟೋ ಕ್ಲಿಕ್ಕಿಸಿಕೊಂಡೆ. ಈ ಫೋಟೋವನ್ನು ನನ್ನ ಮನೆಯ ಮುಂದೆ ಇರುವ ಗೋಡೆಯ ಪಕ್ಕದಲ್ಲಿ ಕ್ಲಿಕ್ಕಿಸಲಾಗಿತ್ತು. ಆದ್ದರಿಂದ, ಅದು ವೃತ್ತಿಪರವೂ ಆಗಿರಲಿಲ್ಲ. ನಾನು ಎಂದಿಗೂ ಮಾಡೆಲ್ ಆಗಿರಲಿಲ್ಲ. ವಾಸ್ತವವಾಗಿ, ನಾನು ಕೇಶ ವಿನ್ಯಾಸಕಿ” ಎಂದು ತಿಳಿಸಿದ್ದಾರೆ

‘ನೀಲಿ ಡೆನಿಮ್ ಜಾಕೆಟ್ ಧರಿಸಿದ ಮಹಿಳೆ’ ಎಂಬ ಶೀರ್ಷಿಕೆಯ ಫೋಟೋವನ್ನು ಅನ್‌ಸ್ಪ್ಲಾಶ್ ಮತ್ತು ಪೆಕ್ಸೆಲ್ಸ್‌ನಂತಹ ಸ್ಟಾಕ್ ಛಾಯಾಗ್ರಹಣ ವೆಬ್‌ಸೈಟ್‌ಗಳಲ್ಲಿ ಉಚಿತ ಡೌನ್‌ಲೋಡ್‌ಗೆ ಲಭ್ಯವಿದೆ. ಈ ಎರಡು ವೆಬ್‌ಸೈಟ್‌ಗಳಿಂದ ಛಾಯಾಚಿತ್ರವನ್ನು 4 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ವೆಬ್‌ಸೈಟ್‌ಗಳಲ್ಲಿ ಲಾರಿಸಾ ಹೆಸರಿಸಲಾಗಿಲ್ಲವಾದರೂ, ಛಾಯಾಗ್ರಾಹಕ ಬ್ರೆಜಿಲ್ ನಗರವಾದ ಬೆಲೊ ಹೊರಿಜಾಂಟೆಯಲ್ಲಿ ನೆಲೆಸಿರುವ ಮ್ಯಾಥ್ಯೂಸ್ ಫೆರ್ರೆರೊ ಹೆಸರಿದೆ.

ಭಾರತಕ್ಕೆ ಒಮ್ಮೆಯೂ ಕಾಲಿಡದ ಬ್ರೆಜಿಲ್ ಮಾಡೆಲ್ ಭಾರತದಲ್ಲಿ ಬರೋಬ್ಬರಿ 22 ಬಾರಿ ಮತದಾನ ಮಾಡಿದ್ದಾರೆ. ಇದು ಹೇಗೆ ಸಾಧ್ಯ? ಭಾರತದಲ್ಲಿರುವ ಚುನಾವಣಾ ಆಯೋಗ ಏನು ಮಾಡುತ್ತಿದೆ? ಈ ಮತಗಳ್ಳತನ ಎಂಬ ವಿಚಾರ ಚುನಾವಣಾ ಆಯೋಗವನ್ನ ‘ಕಂಪ್ಲೀಟ್ ಎಕ್ಸ್‌ಪೋಸ್’ ಮಾಡಿದೆ. ಇದೆಲ್ಲವನ್ನೂ ಚುನಾವಣಾ ಆಯೋಗ ಕೂಡಲೇ ಸರಿ ಮಾಡಿಲಿಲ್ಲವೆಂದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಭಾರೀ ಧಕ್ಕೆಯಾಗಲಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...