ಸಿಇಸಿ ವಿರುದ್ಧದ ಅವಿಶ್ವಾಸ; ಕಾರಣವಿಲ್ಲದೇ ನೋಟಿಸ್‌ ತಿರಸ್ಕಾರ ಕೂಡ ಪ್ರಜಾತಂತ್ರಕ್ಕೆ ಮಾರಕ!

Date:

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್ ವಿರುದ್ಧ ವಿಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ನೋಟಿಸ್‌ಅನ್ನು ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆಯಲ್ಲಿ ಸಭಾಪತಿ ಸಿ.ಪಿ ರಾಧಾಕೃಷ್ಣನ್ ತಿರಸ್ಕರಿಸಿದ್ದಾರೆ. ಅದೂ, ಯಾವುದೇ ಕಾರಣಗಳನ್ನೂ ನೀಡದೇ ಈ ತಿರಸ್ಕಾರದ ಆದೇಶಗಳು ಒಮ್ಮೆಗೆ ಬಂದಿವೆ. ಇದು, ಪ್ರಜಾಪ್ರಭುತ್ವ ಮತ್ತು ಸಂಸತ್ ನಡಾವಳಿಗಳ ಉಲ್ಲಂಘನೆಯೆಂದು ವಿಪಕ್ಷಗಳು ಆರೋಪಿಸಿವೆ. ಎರಡೂ ಸದನಗಳ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.

- Advertisement -

ಮಾರ್ಚ್‌ 23ರಂದು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ನೋಟಿಸ್ ಸಲ್ಲಿಸಿದ್ದವು. ಈ ನೋಟಿಸ್‌ಗೆ ಒಟ್ಟು 193 ಸಂಸದರು (ಲೋಕಸಭೆ – 130, ರಾಜ್ಯಸಭೆ – 63) ಸಹಿ ಹಾಕಿದ್ದರು. ಇದು ಭಾರತದ ಇತಿಹಾಸದಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಮೊದಲ ಬಾರಿಗೆ ಸಲ್ಲಿಸಲಾದ ಅವಿಶ್ವಾಸದ ನೋಟಿಸ್ಆಗಿ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ನೋಟಿಸ್‌ನಲ್ಲಿ; “ಮುಖ್ಯ ಚುನಾವಣಾ ಆಯುಕ್ತರ ನಡವಳಿಕೆಯು ಅವರ ಹುದ್ದೆಯ ಘನತೆಯನ್ನು ಕುಗ್ಗಿಸುವಂತಿದೆ. ಜ್ಞಾನೇಶ್‌ ಕುಮಾರ್ ಅವರು ಬಿಜೆಪಿ ಕಾರ್ಯಕರ್ತರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿಗೆ ಅನುಕೂಲವಾಗುವಂತೆ ನೀತಿ-ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ವಿಪಕ್ಷಗಳು ಆರೋಪಿಸಿದ್ದವು.

ಚುನಾವಣಾ ಆಯುಕ್ತರು ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ. ಆಯೋಗವು ತನ್ನ ಸ್ವಾಯತ್ತತೆ ಕಳೆದುಕೊಂಡಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮತದಾರರ ಪಟ್ಟಿ ತಿದ್ದುಪಡಿಯಲ್ಲಿ ಅಸಮತೋಲನ ಎದ್ದುಕಾಣುತ್ತಿದೆ. ಮತದಾರರ ಪಟ್ಟಿಯಿಂದ ಅನೇಕರನ್ನು ತೆಗೆದುಹಾಕುವುದು ಅಥವಾ ಸೇರಿಸುವುದರಲ್ಲಿ ಪಕ್ಷಪಾತ ನಡೆದಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ, ಮೈಕ್ರೋ-ಆಬ್ಸರ್ವರ್‌ಗಳ ನಿಯೋಜನೆಯಲ್ಲಿ ತಾರತಮ್ಯ ಎಸಗಲಾಗಿದೆ. ಸಿಇಸಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ” ಎಂದು ಗಂಭೀರ ಆರೋಪ ಮಾಡಿದ್ದವು.

“ಆಯುಕ್ತರ ಕಾರ್ಯಗಳು ಪಾರದರ್ಶಕವಾಗಿಲ್ಲದಿದ್ದಾಗ, ಪದಚ್ಯುತಿ ನಿರ್ಣಯವನ್ನು ತರಲು ಭಾರತದ ಸಂವಿಧಾನದಲ್ಲಿ ಅವಕಾಶವಿದೆ. ಈ ನಿರ್ಣಯವು ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಕೈಗೊಂಡಿರುವ ಕ್ರಮವಾಗಿದೆ” ಎಂದು ವಿಪಕ್ಷಗಳು ಹೇಳಿದ್ದವು.

ಚುನಾವಣಾ ಆಯೋಗವು ಭಾರತೀಯ ಪ್ರಜಾಪ್ರಭುತ್ವದ ಮೂಲಸ್ತಂಭ. ಇದರ ಮೇಲಿನ ಆರೋಪಗಳು ಚುನಾವಣೆಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತವೆ. 2024 ಲೋಕಸಭೆ ಚುನಾವಣೆಯ ನಂತರ ಇಂತಹ ಆರೋಪಗಳು ಹೆಚ್ಚಾಗಿವೆ. ಆದರೂ, ಚುನಾವಣಾ ಆಯೋಗದ ಧೋರಣೆ/ವರ್ತನೆಗಳು ಬದಲಾಗಿಲ್ಲ. ಆದ್ದರಿಂದಲೇ, ಇದೇ ಮೊದಲ ಬಾರಿಗೆ, ಸಿಇಸಿ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ನೋಟಿಸ್‌ ಸಲ್ಲಿಕೆಯಾಗಿದೆ.

ಸುಪ್ರೀಂ ಕೋರ್ಟ್‌ ಮತ್ತು ಚುನಾವಣಾ ಆಯೋಗದಂತಹ ಸಂವಿಧಾನಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರನ್ನು ಪದಚ್ಯುತಿಗೊಳಿಸಲು ನಿರ್ಣಯ ಮಂಡಿಸುವ ಅವಕಾಶ ಸಂಸತ್ತಿಗಿದೆ. ಇಂತಹ ನೋಟಿಸ್‌ಗಳನ್ನು ಸಲ್ಲಿಸಲು ಲೋಕಸಭೆಯಲ್ಲಿ ಕನಿಷ್ಠ 100 ಸಂಸದರು ಮತ್ತು ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಸಹಿ ಹಾಕುವ ಅಗತ್ಯವಿರುತ್ತದೆ. ನಂತರ, ಆ ನಿರ್ಣಯವನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂದು ಸ್ಪೀಕರ್ ಅಥವಾ ಅಧ್ಯಕ್ಷರು ನಿರ್ಧರಿಸಬಹುದು. ನಂತರದ ಕ್ರಮಗಳನ್ನು ಕೈಗೊಳ್ಳಬಹುದು.

ಆದರೆ, ಜ್ಞಾನೇಶ್‌ ಕುಮಾರ್ ವಿರುದ್ಧದ ನೋಟಿಸ್‌ಅನ್ನು ಉಭಯ ಸದನಗಳ ಅಧ್ಯಕ್ಷರು ತಿರಸ್ಕರಿಸಿದ್ದಾರೆ. ನೋಟಿಸ್ ತಿರಸ್ಕಾರದ ಬಗ್ಗೆ ಸಂಸದೀಯ ಬುಲೆಟಿನ್‌ಗಳಲ್ಲಿ; ‘ಸೂಕ್ತ ಪರಿಶೀಲನೆ’ ಮತ್ತು ‘ಎಲ್ಲ ಸಂಬಂಧಿತ ಅಂಶಗಳು ಮತ್ತು ವಿಷಯಗಳ ಕುರಿತು ಎಚ್ಚರಿಕೆಯಿಂದ ಮತ್ತು ನಿಷ್ಪಕ್ಷಪಾತವಾಗಿ ಮೌಲ್ಯಮಾಪನ ಮಾಡಲಾಗಿದೆ’ ಮತ್ತು ಈ ನೋಟಿಸ್‌ಗಳನ್ನು ನ್ಯಾಯಾಧೀಶರ (ವಿಚಾರಣಾ) ಕಾಯಿದೆ-1968ರ ಸೆಕ್ಷನ್ ೩ರ ಅಡಿಯಲ್ಲಿ ತಿರಸ್ಕರಿಸಲಾಗಿದೆ ಎಂಬ ಸಾಮಾನ್ಯ ವಾಕ್ಯಗಳನ್ನಷ್ಟೇ ಬಳಸಲಾಗಿದೆ. ಯಾವುದೇ ನಿರ್ದಿಷ್ಟ ಕಾರಣ ಅಥವಾ ಆರೋಪಗಳ ವಿವರಣೆಯನ್ನು ನೀಡಲಾಗಿಲಿಲ್ಲ.

ಈ ಲೇಖನ ಓದಿದ್ದೀರಾ?: ರಷ್ಯಾದಿಂದ ತೈಲ, ಅನಿಲ ಪೂರೈಕೆಗೆ ಸಮ್ಮತಿ: ಭಾರತದ ಇಂಧನದ ಕೊರತೆ ಎಷ್ಟರ ಮಟ್ಟಿಗೆ ನೀಗಲಿದೆ?

ಯಾವುದೇ ಕಾರಣ ನೀಡದೆ, ನೋಟಿಸ್‌ಗಳನ್ನು ತಿರಸ್ಕರಿಸಿರುವುದನ್ನು ವಿಪಕ್ಷಗಳು ಟೀಕಿಸಿವೆ. ‘ಪ್ರಜಾಪ್ರಭುತ್ವಕ್ಕೆ ತೀವ್ರ ಬೆದರಿಕೆ’ ಕರೆದಿವೆ. ಸಭಾಪತಿಗಳು ‘ಅಪಾರದರ್ಶಕತೆ ಮತ್ತು ಏಕಪಕ್ಷೀಯತೆ’ಯಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಸಂಸದೀಯ ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವಂತಹ ನಡೆ ಎಂದು ದೂರಿವೆ.

ಸದ್ಯ, ನೋಟಿಸ್ ತಿರಸ್ಕಾರಕ್ಕೆ ನಿರ್ದಿಷ್ಟ ಕಾರಣ ನೀಡದಿರುವುದು ಸದನಗಳ ಅಧ್ಯಕ್ಷರು ಮತ್ತು ಸಂಸತ್ತನ್ನು ಮೋದಿ-ಶಾ ಸರ್ಕಾರವು ‘ರಬ್ಬರ್ ಸ್ಟ್ಯಾಂಪ್’ ರೀತಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಆದಾಗ್ಯೂ, ಆಡಳಿತ ಪಕ್ಷಗಳು ಇದನ್ನು ‘ಕಾನೂನುಬದ್ಧ ನಿರ್ಧಾರ’ ಎಂದು ಸಮರ್ಥಿಸುತ್ತಿವೆ.

ನೋಟಿಸ್‌ ತಿರಸ್ಕಾರದ ವಿರುದ್ಧ ವಿಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟನೆಗಿಳಿಯುವ ಮತ್ತು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ವಿಪಕ್ಷಗಳ ಮುಂದಿನ ನಡೆ ಏನೇ ಇದ್ದರೂ, ಯಾವುದೇ ಕಾರಣ ನೀಡದೆ ನೋಟಿಸ್‌ಗಳನ್ನು ತಿರಸ್ಕರಿಸಿರುವುದು ಸಂಸದೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಕುಂದಿಸಿದೆ ಮತ್ತು ಸಂಸತ್ತು ದುರ್ಬಲಗೊಳ್ಳುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಕಾರಣ ನೀಡದೇ ಇರುವುದು ಸಂಸತ್ತಿನ ಮೇಲಿನ ಜನವಿಶ್ವಾಸವನ್ನೂ ಕುಂದಿಸುವ ಅಪಾಯವಿದೆ. ಬಹುಶಃ, ಬಿಜೆಪಿಯೂ ಇದನ್ನೇ ಬಯಸುತ್ತಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...