ಆನೆಗಳ ನಾಡು ಕರ್ನಾಟಕ: ಹೆಮ್ಮೆಯ ಜೊತೆಗೆ ಸಂರಕ್ಷಣೆಯ ಹೊಣೆಗಾರಿಕೆಯೂ ಅಗತ್ಯ

Date:

ಬ್ರಹ್ಮಗಿರಿ, ದಾಂಡೇಲಿ, ಭದ್ರಾ ಮತ್ತು ಬಿಲಿಗಿರಿರಂಗನ ಬೆಟ್ಟಗಳಲ್ಲಿ ಆನೆಗಳು ನಿರಾಳವಾಗಿ ಸಂಚರಿಸಲು 31 ಗುರುತಿಸಲಾದ ಆನೆ ಕಾರಿಡಾರ್‌ಗಳಿವೆ. ಕರ್ನಾಟಕದ ಸಂಸ್ಕೃತಿಯಲ್ಲಿ ಆನೆ ಕೇವಲ ಪ್ರಾಣಿಯಲ್ಲ; ಅದು ನಮ್ಮ ಹೆಗ್ಗುರುತು. ಮೈಸೂರು ಜಂಬೂಸವಾರಿ 1610ರಿಂದಲೂ, ರಾಜ ಒಡೆಯರ ಕಾಲದಿಂದಲೇ ಆನೆಗಳಿಗೆ ರಾಜಮರ್ಯಾದೆ ನೀಡಲಾಗುತ್ತಿದೆ. 750 ಕೆಜಿ ಚಿನ್ನದ ಅಂಬಾರಿಯಲ್ಲಿ ದೇವಿಯನ್ನು ಹೊರುವ ಅಂಬಾರಿ ಆನೆ ವಿಶ್ವಪ್ರಸಿದ್ಧವಾಗಿದೆ.

ಪ್ರತಿ ವರ್ಷ ದಸರಾ ಹಬ್ಬಕ್ಕೆ ಮುನ್ನ, ಜುಲೈನಿಂದ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ 10-12 ಆನೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವೈದ್ಯಕೀಯ ಸೇವೆ, ಮಾವುತರ ಕಾಳಜಿ ಹಾಗೂ ಪೌಷ್ಟಿಕ ಆಹಾರ ಒದಗಿಸಿ, ಸಕಲ ಸೌಲಭ್ಯದೊಂದಿಗೆ ನಡೆಯುವ ಈ ತರಬೇತಿ ವಿಶ್ವದಲ್ಲೇ ಮಾದರಿಯಾಗಿದೆ. ಇತಿಹಾಸದಲ್ಲಿ ಟಿಪ್ಪು ಸುಲ್ತಾನನ ಪಟ್ಟದ ಆನೆಗೆ ಕಣ್ಣು ಬರಿಸಿದ ಹಕೀಮ್ ನಂಜುಂಡನ ಕಥೆ ನಮ್ಮ ಶ್ರೀಮಂತ ವೈದ್ಯಕೀಯ ಪರಂಪರೆಯನ್ನು ಸೂಚಿಸುತ್ತದೆ.

- Advertisement -

ಆದರೆ, ನಮ್ಮ ಮುಂದೆ ಹಲವು ಸವಾಲುಗಳಿವೆ. ಆನೆಗಳ ಸಂಖ್ಯೆ ಹೆಚ್ಚಿದ್ದರೂ, ಸಮಸ್ಯೆಗಳು ಕಡಿಮೆಯಾಗಿಲ್ಲ. ಆವಾಸಸ್ಥಾನ ಕುಗ್ಗುತ್ತಿರುವುದರಿಂದ ಮಾನವ-ಆನೆ ಸಂಘರ್ಷ ಹೆಚ್ಚಾಗುತ್ತಿದೆ. ಆನೆಗಳು ಹೊಲ, ಗದ್ದೆಗಳಿಗೆ ಬಂದಾಗ ಎರಡೂ ಕಡೆ ಪ್ರಾಣಹಾನಿ ಸಂಭವಿಸುತ್ತಿದೆ. 2023-24ರಲ್ಲಿ ರಾಜ್ಯದಲ್ಲಿ 42 ಜನರು ಮತ್ತು 12 ಆನೆಗಳು ಈ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿವೆ. ರಸ್ತೆ, ರೈಲ್ವೆ ಮತ್ತು ರೆಸಾರ್ಟ್‌ಗಳ ನಿರ್ಮಾಣದಿಂದ ಆನೆ ಕಾರಿಡಾರ್‌ಗಳು ನಾಶವಾಗುತ್ತಿದ್ದು, ಅವುಗಳ ಹಾದಿಗಳು ಮುಚ್ಚುತ್ತಿವೆ. ವಿದ್ಯುತ್ ಆಘಾತ ಮತ್ತು ಅಕ್ರಮ ಬೇಲಿಗಳಿಂದಲೂ ಅನೇಕ ಆನೆಗಳು ಸಾಯುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ವಿಶ್ವ ಆನೆ ದಿನದಂದು ಕರ್ನಾಟಕ ಒಂದು ಪ್ರತಿಜ್ಞೆ ಮಾಡಬೇಕು. ನಾವು ಆನೆಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದ ರಾಜ್ಯ ಎಂಬ ಹೆಮ್ಮೆಯ ಜೊತೆಗೆ, ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನೂ ಹೊರಬೇಕು. ಕಾರಿಡಾರ್‌ಗಳನ್ನು ಉಳಿಸಿ, ಆನೆ ಹಾದಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು. “ಗಜಸ್ನೇಹಿ ಕಾರಿಡಾರ್” ಯೋಜನೆಗೆ ಪೂರ್ಣ ಬೆಂಬಲ ನೀಡೋಣ. ಕಾಡಂಚಿನಲ್ಲಿ ಸೋಲಾರ್ ಬೇಲಿ, ಟ್ರಿಪ್ ಅಲಾರಂ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಜಾರಿಗೊಳಿಸಿ ಸಹಬಾಳ್ವೆಯನ್ನು ಖಚಿತಪಡಿಸೋಣ. ಪ್ರವಾಸಕ್ಕೆ ಹೋದಾಗ ಪ್ಲಾಸ್ಟಿಕ್ ಮುಕ್ತವಾಗಿರೋಣ; ಆನೆಗಳು ಪ್ಲಾಸ್ಟಿಕ್ ತಿಂದು ಸಾಯುತ್ತವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ “ಆನೆ ಶತ್ರುವಲ್ಲ, ಅದು ಕಾಡಿನ ಎಂಜಿನಿಯರ್” ಎಂದು ಕಲಿಸಿ ಜಾಗೃತಿ ಮೂಡಿಸೋಣ.

942c7c82 0229 4fad a337 4122bcc178cf

ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ರಾಜ್ಯ ಸರ್ಕಾರ ಆನೆಗಳ ವೈದ್ಯಕೀಯ, ಆಹಾರ ಮತ್ತು ರಕ್ಷಣೆಗಾಗಿ ಪ್ರತಿ ವರ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಕರ್ನಾಟಕದಲ್ಲಿ ಆನೆಗಳಿವೆ, ಹಾಗಾಗಿ ಕಾಡಿದೆ. ಕಾಡಿರುವುದರಿಂದ ಮಳೆಯಿದೆ. ಮಳೆಯಿರುವುದರಿಂದ ನಾವಿದ್ದೇವೆ. ವಿಶ್ವ ಆನೆ ದಿನ ನಮಗೆ ನೆನಪಿಸುವುದು ಒಂದೇ: ಸಂಖ್ಯೆಯಲ್ಲಿ ಪ್ರಥಮವಾಗಿರುವ ನಾವು, ಸಂರಕ್ಷಣೆಯಲ್ಲೂ ಪ್ರಥಮ ಸ್ಥಾನ ಪಡೆಯಬೇಕು. ಆನೆಗಳನ್ನು ಉಳಿಸಿದರೆ ಮಾತ್ರ “ಆನೆಗಳ ನಾಡು ಕರ್ನಾಟಕ” ಎಂಬ ಬಿರುದು ಉಳಿಯುತ್ತದೆ.

ಸಮರ್ಪಣ ಟ್ರಸ್ಟ್ ವಿಶ್ವ ಆನೆ ದಿನವನ್ನು ಆಚರಿಸಿ “ನಮ್ಮ ಗಜರಾಜರನ್ನು ಉಳಿಸೋಣ, ಕರ್ನಾಟಕದ ಕೀರ್ತಿಯನ್ನು ಬೆಳೆಸೋಣ” ಎಂಬ ಸಂದೇಶವನ್ನು ಸಾರಲು ಹೊರಟಿದೆ.

WhatsApp Image 2026 07 27 at 18.26.00
ಕೆ ಎಸ್ ಜಯಶಂಕರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...