ತಮಿಳುನಾಡು, ಕೇರಳ ಚುನಾವಣೆ: ಬಿಜೆಪಿಗೆ ಕಬ್ಬಿಣದ ಕಡಲೆಯಂತಿರುವ ರಾಜ್ಯಗಳು

Date:

ಬಿಜೆಪಿಗೆ ಕಬ್ಬಿಣದ ಕಡಲೆಯಂತಿರುವ ರಾಜ್ಯಗಳು ಇನ್ನು ನುಂಗಲಾಸಾಧ್ಯವಾದ ಫಲಿತಾಂಶವನ್ನು ನೀಡುವ ಸಾಧ್ಯತೆಯೇ ಹೆಚ್ಚಿದೆ. ಈ ಫಲಿತಾಂಶಗಳು ಸಕಾರಾತ್ಮಕವಾಗಿದ್ದಲ್ಲಿ, ಅದನ್ನು ದೇಶಾದ್ಯಂತ ಗಂಭೀರವಾಗಿ ಪ್ರೇರಕ ಶಕ್ತಿಯಾಗಿ ಬಳಸಿದರೆ ಮತ್ತು ಪ್ರಾಯೋಗಿಕವಾಗಿ ಕೆಲಸ ಮಾಡಿದರೆ, ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವು ಮತ್ತಷ್ಟು ಸುಲಭವಾಗಬಹುದು.

ಒಕ್ಕೂಟ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸೈದ್ಧಾಂತಿಕವಾಗಿಯೂ, ಆಡಳಿತಾತ್ಮಕವಾಗಿಯೂ ಪ್ರಬಲವಾಗಿ ಧ್ವನಿ ಏರಿಸುವ ರಾಜ್ಯ ತಮಿಳುನಾಡು. ಪೆರಿಯಾರ್ ಪ್ರಭಾವದ ಕಾರಣದಿಂದ ಇನ್ನೂ ಜೀವಂತವಾಗಿರುವ ದ್ರಾವಿಡ ಚಳುವಳಿಯ ನೆಲೆಗಳು ಡಿಎಂಕೆ ಪಕ್ಷದ ನಾಯಕತ್ವದಿಂದಾಗಿ ಜನರನ್ನು ಸುಲಭವಾಗಿ ತಲುಪುತ್ತಿವೆ. ಒಕ್ಕೂಟ ಸರಕಾರದ ಎಲ್ಲಾ ಹೇರಿಕೆಗಳ ವಿರುದ್ಧ ಸೂಕ್ಷ್ಮವಾಗಿ ಪ್ರತಿರೋಧ ವ್ಯಕ್ತಪಡಿಸುವ ಸ್ಟ್ಯಾಲಿನ್ ನೇತೃತ್ವದ ಸರಕಾರ ಯಾವುದೇ ಪಿಆರ್ ಸ್ಟಂಟ್‌ಗಳ ಮೊರೆ ಹೋಗಿಲ್ಲ ಎನ್ನುವುದು ವಿಶೇಷ.

- Advertisement -

ಒಂದು ತಂಡವಾಗಿ ಸರ್ಕಾರವನ್ನು ಮುನ್ನಡೆಸುವ ಅವರ ಬದ್ಧತೆ ಸುಕ್ಷ್ಮವಾಗಿ ಗೋಚರಿಸುತ್ತದೆ. ತನ್ನದೇ ಪಕ್ಷದ ಏಕಾಧಿಪತ್ಯದ ನಿಲುವನ್ನು ತಾಳದೆ, ತನ್ನ ಜೊತೆಗೂಡಿರುವ ಎಲ್ಲಾ ಮಿತ್ರ ಪಕ್ಷಗಳಿಗೆ ಗೌರವ ಮತ್ತು ಸರಿಯಾದ ಪ್ರಾತಿನಿಧ್ಯ ನೀಡುವ ಅವರ ನಾಯಕತ್ವ ಈ ಕಾಲಘಟ್ಟಡದಲ್ಲಿ ಅಪರೂಪ. ಎಲ್ಲ ಪಕ್ಷಗಳು ಅಂತರ ಕಾಯ್ದುಕೊಳ್ಳುವ ಎಸ್‌ಡಿಪಿಐ ಪಕ್ಷಕ್ಕೂ ಈ ಬಾರಿ ಮೈತ್ರಿ ಅವಕಾಶ ನೀಡಿರುವುದು ಕೇವಲ ಅಲ್ಪಸಂಖ್ಯಾತ ಮುಸ್ಲಿಂ ಮತಗಳ ಸೆಳೆಯುವಿಕೆಯ ಉದ್ದೇಶದಿಂದಲ್ಲ, ಬದಲಿಗೆ ಸರ್ವರನ್ನು ಒಳಗೊಳ್ಳುವ ಸೈದ್ಧಾಂತಿಕ ಬದ್ಧತೆಯು ಕಾರಣವಾಗಿರಬಹುದು ಎಂದೇ ನನ್ನ ಅನಿಸಿಕೆ. ಈ ಕೆಳಗಿನಂತೆ ಚುನಾವಣೆ ಫಲಿತಾಂಶ ಬರುವ ಸಾಧ್ಯತೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಡಿಎಂಕೆ ಮೈತ್ರಿಕೂಟ 110-150
ಎಡಿಎಂಕೆ ಮೈತ್ರಿಕೂಟ 70-90
ಟೀವಿಕೆ 05-10 ( ಗರಿಷ್ಠ 20)

ಇದನ್ನು ಓದಿದ್ದೀರಾ? ಚಳವಳಿಗಳ ಬೇರು ಇನ್ನೂ ಜೀವಂತ: ಪಶ್ಚಿಮ ಬಂಗಾಳ ಬಿಜೆಪಿಗೆ ಅಷ್ಟೊಂದು ಸುಲಭದ ತುತ್ತಲ್ಲ

ಈ ಅಂದಾಜಿಗೆ ಕಾರಣವೇನು?

  1. ದ್ರಾವಿಡ ಚಳುವಳಿಯ ಜೀವಂತಿಕೆ ಇರುವ ಪಕ್ಷ ಡಿಎಂಕೆ ಮಾತ್ರ ಎಂಬ ಭಾವನೆ ತಮಿಳಿಗರಲ್ಲಿದೆ. ಉತ್ತರ ಭಾರತದ ಹೇರುವಿಕೆಯ ರಾಜಕಾರಣದ ವಿರುದ್ಧ ಸ್ವಾಭಿಮಾನಿ ರಾಜಕಾರಣ ಮಾಡಲು ಡಿಎಂಕೆಗೆ ಮಾತ್ರ ಸಾಧ್ಯವಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಡಿಎಂಕೆ ಪ್ರಾಯೋಗಿಕವಾಗಿ ಈ ಕೆಲಸವನ್ನು ಮಾಡಿ ತೋರಿಸಿದೆ.
  2. ಎಡಿಎಂಕೆ ಮೊದಲಿನ ನಂಬಿಕೆಯನ್ನು ಕಳೆದುಕೊಂಡಿದೆ. ಜಯಲಲಿತಾ ನಂತರ ತಮಿಳು ಸ್ವಾಭಿಮಾನದ ಚಹರೆಯಾಗಿ ಯಾರು ಇಲ್ಲದಿರುವ ಕಾರಣ ಮತ್ತು ಪ್ರಸಕ್ತ ನಾಯಕತ್ವ ಅಧಿಕಾರದ ಏಕೈಕ ಉದ್ದೇಶದೊಂದಿಗೆ ಬಿಜೆಪಿ ಜೊತೆ ಕೈಜೋಡಿಸಿರುವುದು ತಮಿಳುಗರು ಗಂಭೀರವಾಗಿ ಪರಿಗಣಿಸಲಿದ್ದಾರೆ.
  3. ಆಡಳಿತ ವಿರೋಧಿ ಮತಗಳು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಪಾಲಾಗುವ ಸಂಭವವಿದೆ. ವಿಜಯ್ ಅವರ ಪ್ರಖ್ಯಾತಿ ಯುವ ಮನಸುಗಳನ್ನು ಗೆಲ್ಲುವ ಸಾಧ್ಯತೆ ಇದೆ. ಯಾಕೆಂದರೆ Gen-Z ತಲೆಮಾರು ಯಾವುದೇ ದ್ರಾವಿಡ ಚಳುವಳಿಯನ್ನು ನೇರವಾಗಿ ಕಂಡವರಲ್ಲ ಮತ್ತು ವಿಜಯ್ ಮಾತುಗಾರಿಕೆಯ ಶೈಲಿಯು ಯುವ ಸಮೂಹವನ್ನೇ ನೇರವಾಗಿ ಗುರಿಯಾಗಿಸಿಕೊಂಡಂತಿದೆ. ಮತದಾನೋತ್ತರ ಸಮೀಕ್ಷೆಯೂ ಕೂಡ 50% ಗಿಂತಲೂ ಹೆಚ್ಚಿನ ಯುವ ಹೊಸ ಮತದಾರರು ಟಿವಿಕೆಯತ್ತ ಒಲವು ತೋರಿಸಿರುವುದನ್ನು ಬೊಟ್ಟು ಮಾಡಿದೆ.
  4. ಟಿವಿಕೆ ಅಬ್ಬರದ ಪ್ರಚಾರಗಳು ಪೂರ್ಣವಾಗಿ ಎಲ್ಲ ವಿಭಾಗದ ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ. ವಿಜಯ್ ಬೊಟ್ಟು ಮಾಡುತ್ತಿರುವ ಭ್ರಷ್ಟಾಚಾರದಂತಹ ಕಾರಣಗಳಿಗಿಂತ ಬಿಜೆಪಿ ಯಂತ fascist ರನ್ನು ದೂರವಿರಿಸುವುದು ಕಾಲದ ಅಗತ್ಯ ಎಂಬ ಅರಿವು ತಮಿಳುನಾಡಲ್ಲಿ ಆಳವಾಗಿ ಬೇರೂರಿವೆ. ಹಾಗಾಗಿ ಬಿಜೆಪಿಗೆ ನಿರೀಕ್ಷಿತ ಫಲ ಸಿಗಲು ಸಾಧ್ಯವಿಲ್ಲ.
  5. ಎಡಿಎಂಕೆಯನ್ನು ಪಕ್ಷವಾಗಿ ಸ್ವೀಕರಿಸಿದರೂ ಬಿಜೆಪಿ ಮೈತ್ರಿ ಆಗಿ ಸ್ವೀಕರಿಸಲು ಮತದಾರರು ಸಿದ್ದವಿರುವ ಸಾಧ್ಯತೆಯಿಲ್ಲ. ಯಾಕೆಂದರೆ ಭವಿಷ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ಎಡಿಮಿಕೆಯನ್ನು ಮೀರಿ ಮುನ್ನಡೆಯುವ ಅಪಾಯವಿರುವುದರಿಂದ ಎಡಿಎಂಕೆ ಪಕ್ಷಕ್ಕೂ ಈ ಮೈತ್ರಿ ಹಿನ್ನಡೆಯನ್ನು ನೀಡಲಿದೆ. ಎಡಿಎಂಕೆ ಪ್ರಾಬಲ್ಯದ ಪ್ರದೇಶಗಳಲ್ಲಿ ಮಾತ್ರ ಸದರಿ ಪಕ್ಷವು ತಕ್ಕಮಟ್ಟಿಗಿನ ಸೀಟುಗಳನ್ನು ಪಡೆಯಲು ಸಾಧ್ಯವಿದೆ.

ಇದನ್ನು ಓದಿದ್ದೀರಾ? ಕೇರಳ ತನ್ನ ವೈಭವದ ದಿನಗಳಿಗೆ ಮರಳಬೇಕಾದರೆ ಯುಡಿಎಫ್ ಅಧಿಕಾರಕ್ಕೆ ಬರಬೇಕು: ಸಚಿವ ಕೃಷ್ಣಬೈರೇಗೌಡ

ಕೇರಳದಲ್ಲಿ ಏನಾಗಬಹುದು?

ಕೇರಳದಲ್ಲಿ ಸಮೀಕ್ಷೆಯನ್ನು ಮೀರಿ LDF ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲಿದೆ. ಶಿಸ್ತುಬದ್ಧ ಸರ್ಕಾರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿರುವುದರಿಂದ ಜನರು ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ. ಕೇರಳದಲ್ಲಿ ಈ ಕೆಳಗಿನಂತೆ ಚುನಾವಣಾ ಫಲಿತಾಂಶ ಬರಬಹುದು.

LDF 70-80( ಗರಿಷ್ಠ 85)
UDF 50-65

ಎಲ್‌ಡಿಎಫ್‌ಗೆ ಮತ್ತೊಮ್ಮೆ ಅವಕಾಶವೇಕೆ?

  1. ಬಿಜೆಪಿ ಕೇರಳದಲ್ಲಿ ನೆಲೆಯೂರಲು ಶತ ಪ್ರಯತ್ನ ನಡೆಸುತ್ತಿದ್ದು ಕಾಂಗ್ರೆಸ್/ ಮೈತ್ರಿ ಸರಕಾರಗಳು ಬಿಜೆಪಿಗೆ ಹೆಚ್ಚಿನ ಸಾಧ್ಯತೆಗಳನ್ನು ಹುಟ್ಟು ಹಾಕಲಿದೆ. ಅಂತಹ ಇತಿಹಾಸಗಳು ಕಣ್ಣ ಮುಂದಿರುವಾಗ ಪ್ರಬುದ್ಧ ಮತದಾರರಿರುವ ಕೇರಳದಲ್ಲಿ ಸೂಕ್ಷ್ಮ ಮತ ಚಲಾವಣೆಗೆ ಕಾರಣವಾಗಬಹುದು. ಹಾಗಾಗಿ ಎಲ್‌ಡಿಎಫ್‌ಗೆ ಮತ್ತೊಮ್ಮೆ ಅವಕಾಶ ನೀಡಬಹುದು.
  2. ಹಲವು ಜನಪರ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅದರ ವ್ಯಾಪಕ ಪ್ರಚಾರವು ಸರ್ಕಾರದ ಬಗ್ಗೆ ಯುವ ಜನತೆಯಲ್ಲಿ ಭರವಸೆ ಮೂಡಿಸಿರುವ ಕಾರಣ, ಸರ್ಕಾರದ ಪರವಾಗಿ ಸಕಾರಾತ್ಮಕವಾಗಿ ಮತ ಚಲಾಯಿಸಲು ಕಾರಣವಾಗಬಹುದು.
  3. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕತ್ವವು ಕೇವಲ ಆರೋಪಗಳಿಗೆ ಸೀಮಿತವಾಗಿದ್ದು, ತಳಮಟ್ಟದಲ್ಲಿ ಸಕಾರಾತ್ಮಕ ಜನಾಭಿಪ್ರಾಯ ಮೂಡಿಸುವಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಯಶಸ್ವಿಯಾಗಿಲ್ಲ.

ಒಟ್ಟಾರೆಯಾಗಿ, ಬಿಜೆಪಿಗೆ ಕಬ್ಬಿಣದ ಕಡಲೆಯಂತಿರುವ ರಾಜ್ಯಗಳು ಇನ್ನು ನುಂಗಲಾಸಾಧ್ಯವಾದ ಫಲಿತಾಂಶವನ್ನು ನೀಡುವ ಸಾಧ್ಯತೆಯೇ ಹೆಚ್ಚಿದೆ. ಈ ಫಲಿತಾಂಶಗಳು ಸಕಾರಾತ್ಮಕವಾಗಿದ್ದಲ್ಲಿ, ಅದನ್ನು ದೇಶಾದ್ಯಂತ ಗಂಭೀರವಾಗಿ ಪ್ರೇರಕ ಶಕ್ತಿಯಾಗಿ ಬಳಸಿದರೆ ಮತ್ತು ಪ್ರಾಯೋಗಿಕವಾಗಿ ಕೆಲಸ ಮಾಡಿದರೆ, ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವು ಮತ್ತಷ್ಟು ಸುಲಭವಾಗಬಹುದು.

?s=150&d=mp&r=g
ಫಯಾಝ್ ದೊಡ್ಡಮನೆ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...