ಚಳವಳಿಗಳ ಬೇರು ಇನ್ನೂ ಜೀವಂತ: ಪಶ್ಚಿಮ ಬಂಗಾಳ ಬಿಜೆಪಿಗೆ ಅಷ್ಟೊಂದು ಸುಲಭದ ತುತ್ತಲ್ಲ

Date:

ಪಶ್ಚಿಮ ಬಂಗಾಳ ಕೋಮುವಾಧಾರಿತವಾಗಿ ಧ್ರುವೀಕರಣಗೊಂಡಿದ್ದರೂ, ಜನ ಚಳವಳಿಗಳ ಬೇರುಗಳು ಇಂದಿಗೂ ಜೀವಂತವಾಗಿವೆ. ಎಡಪಕ್ಷಗಳು ವಿವಿಧ ಭಾಗಗಳಾಗಿ ಹಂಚಿ ಹೋಗಿದ್ದರೂ ತಮ್ಮದೇ ನೆಲೆಗಟ್ಟಿನಲ್ಲಿ ಜನರನ್ನು ನಿರಂತರವಾಗಿ ಸಂಘಟಿಸುತ್ತಿರುವುದರಿಂದ ಕೋಮು ವಿಷಬೀಜ ವ್ಯಾಪಕವಾಗಿ ಬೇರೂರಿಲ್ಲ ಎಂಬುವುದು ಕೂಡ ಅಷ್ಟೇ ಸತ್ಯ.

ಮತದಾನೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿವೆ. ರಾಷ್ಟ್ರೀಯ ಸುದ್ದಿ ವಾಹಿನಿಗಳು ದಿನವಿಡಿ ಚರ್ಚೆಯನ್ನು ನಡೆಸುತ್ತಿವೆ. ಬಿಜೆಪಿ ಪರವಾದ ವಾಹಿನಿಗಳಂತೂ ಪಶ್ಚಿಮ ಬಂಗಾಳದ ಸುದ್ದಿಯನ್ನು ಇಂಚಿಂಚೂ ಚರ್ಚಿಸುತ್ತಿವೆ. ಆದರೆ ಪ್ರಜಾಪ್ರಭುತ್ವದ ಪರಿಕಲ್ಪನೆ ದಿಕ್ಕೆಟ್ಟು ನಿಂತಿರುವ ಈ ಸಂದರ್ಭದಲ್ಲಿ, ಮತದಾರರ ಹಕ್ಕುಗಳು ನಿರಾಕರಿಸಲ್ಪಟ್ಟಿರುವ ಹೊಸ ಸ್ವರೂಪವನ್ನು ಈ ದೇಶದ ಜನತೆ ಅನುಭವಿಸುತ್ತಿವೆ. ಭಾರತದ ಕೆಲವೇ ಕೆಲವು ರಾಜ್ಯಗಳು ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡುತ್ತಲೇ ಇರುವುದರಿಂದ ಬಿಜೆಪಿಯು ಕೂಡ ಈ ರಾಜ್ಯಗಳ ಗೆಲುವಿನ ನೀರಿಕ್ಷೆಯಲ್ಲಿ ಎಲ್ಲಾ ಅನಾಚಾರ ಅನಾಗರಿಕ ಪ್ರಯತ್ನವನ್ನು ಮಾಡಿವೆ.

- Advertisement -

ಮತದಾನೋತ್ತರ ಸಮೀಕ್ಷೆ ಎಂದರೆ ಪೂರ್ಣ ಸ್ವರೂಪದ ಫಲಿತಾಂಶವಲ್ಲ. ಹಲವು ಸಂದರ್ಭಗಳಲ್ಲಿ ಒಟ್ಟು ಮತದಾರರ ಅಭಿಪ್ರಾಯವೂ ಸ್ಪಷ್ಟವಾಗಿ ಗೋಚರಿಸುತ್ತವೆ. ತದ್ವಿರುದ್ಧವಾಗಿ ಎಷ್ಟೋ ಸಮೀಕ್ಷೆಗಳನ್ನು ಮೀರಿ ಚುನಾವಣಾ ಫಲಿತಾಂಶಗಳು ಬಂದಿವೆ. ಮತದಾನೋತ್ತರ ಸಮೀಕ್ಷೆಗಳು ಹೆಚ್ಚು ನಗರ ಕೇಂದ್ರಿತ ಆಗಿರುವುದರಿಂದ ಅದನ್ನು ಸಂಪೂರ್ಣವಾಗಿ ಒಪ್ಪುವುದು ಕೂಡ ಸರಿಯಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | 15 ಮತಗಟ್ಟೆಗಳಲ್ಲಿ ಮರು ಮತದಾನ: ಜನರು ಮತ್ತೆ ‘ದೀದಿ’ಗೆ ಮತ ಹಾಕುತ್ತಾರೆ ಎಂದ ಟಿಎಂಸಿ

ಪಶ್ಚಿಮ ಬಂಗಾಳ ಬಿಜೆಪಿಗೆ ಅಷ್ಟೊಂದು ಸುಲಭದ ತುತ್ತಲ್ಲ

ಪಶ್ಚಿಮ ಬಂಗಾಳದ ಸಮೀಕ್ಷೆಗಳು ಹೆಚ್ಚು ಬಿಜೆಪಿಯ ಕಡೆ ಮುಖ ಮಾಡಿರುವುದು ಆತಂಕಕಾರಿಯಾದರೂ ನಂಬಲರ್ಹ ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಯಾಕೆಂದರೆ ಬಂಗಾಳ ಬಿಜೆಪಿಗೆ ಅಷ್ಟೊಂದು ಸುಲಭದ ತುತ್ತಲ್ಲ ಎಂದೇ ಹೇಳಬಹುದು.

ಎಡಪಕ್ಷಗಳಂತ ಕೇಡರ್ ಆಧಾರಿತ ಪಕ್ಷದ 34 ವರ್ಷಗಳ ಆಡಳಿತವನ್ನು ಕೊನೆಗಾಣಿಸುವುದು ಎಂದರೆ ಕಠಿಣವಾದ ಕೆಲಸ. ಆದರೆ ಅಂತ ಅಸಾಧ್ಯವನ್ನು ನಂದಿಗ್ರಾಮ ಚಳುವಳಿಯ Narration ಮೂಲಕ ಗೆದ್ದು ಬೀಗಿದ ಮಮತಾ ಬ್ಯಾನರ್ಜಿ, ತದನಂತರ ಎಡ ಪಕ್ಷಗಳಂತೆ ತಳಮಟ್ಟದಲ್ಲಿ ಪಕ್ಷದ Structureಗಳನ್ನು ಗಟ್ಟಿಗೊಳಿಸಿದರು (ಎಡಪಕ್ಷಗಳ ಕಾರ್ಯಕರ್ತರನ್ನು Capitalize ಮಾಡುವುದರ ಮೂಲಕ). ಅದರಿಂದಾಗಿ ಸತತವಾಗಿ ಗೆಲ್ಲಲು ಸಾಧ್ಯವಾಗಿದ್ದು.

ಆದರೆ ಕಳೆದ ಬಾರಿ ಬಿಜೆಪಿಯ ನೆಗೆಟಿವ್ ನರೇಷನ್ ಬಂಗಾಳಿಗಳಲ್ಲಿ ಸ್ವಲ್ಪಮಟ್ಟಿನ ಫಲ ನೀಡಿದ್ದರಿಂದ 77 ಸೀಟುಗಳನ್ನು ಗಳಿಸಲು ಸಾಧ್ಯವಾಗಿದೆ. ಹಾಗಾಗಿ ಅದನ್ನೇ ಬಂಡವಾಳ ಮಾಡಿರುವ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವುದು ಶತಸಿದ್ದ ಎಂಬಂತೆ ಕಾದಾಟಕ್ಕೆ ಇಳಿದಿದೆ. ದೇಶದಾದ್ಯಂತ ಕಟ್ಟಿದ ಹಿಂದುತ್ವದ ಧ್ರುವೀಕರಣವನ್ನು ಬಂಗಾಳದಲ್ಲಿ ನೆಲೆಗೊಳಿಸಲು ಶಕ್ತಿಮೀರಿ ಪ್ರಯತ್ನಿಸಿದೆ.

ಆದರೆ ತೃಣಮೂಲ ಕಾಂಗ್ರೆಸ್ ಗೆಲುವು ನಿಶ್ಚಿತದಂತೆ ಕಾಣುತ್ತಿದೆ. SIR ಮೂಲಕ ಲಕ್ಷಾಂತರ ಮತದಾರರು ಅವಕಾಶ ವಂಚಿತರಾದ ನಂತರವೂ ಮತದಾನದ ಪ್ರಮಾಣ 91% ಆಗಿರುವುದು ಮಮತಾ ಬ್ಯಾನರ್ಜಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಂತಹ ಸನ್ನಿವೇಶವು ಆಗಿರಬಹುದು.

ಇದನ್ನು ಓದಿದ್ದೀರಾ? EVMನಲ್ಲಿ ಬಿಜೆಪಿಗೆ ಹೆಚ್ಚು ಮತ: ಪರಿಶೀಲನೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

TMC 180-200
BJP 70-90( ಗರಿಷ್ಠ 110)
Left /others 10-20

ಕಾರಣಗಳೇನು?

  1. ಬಂಗಾಳದಾದ್ಯಂತ ಬೂತ್ ಮಟ್ಟದಲ್ಲಿ ಗಟ್ಟಿಯಾಗಿ ನೆಲೆ ನೆಲೆಯೂರಿರುವ ಪಕ್ಷ ಟಿಎಂಸಿ ಮಾತ್ರ. ಎಡಪಕ್ಷಗಳ ಸಂಪೂರ್ಣ structureಗಳು ಇಂದು ಟಿಎಂಸಿ ಪಕ್ಷದಲ್ಲಿ ವಿಲೀನ ವಾಗಿದೆ. ಹಾಗಾಗಿ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಬೇರೆ ಯಾವ ಪಕ್ಷಗಳಿಗೂ ಈ ಮಟ್ಟದಲ್ಲಿ ಸಿಗಲಿಲ್ಲ ಅನ್ನುವುದು ದೊಡ್ಡ ಗೆಲುವು.
  2. ಬಂಗಾಳದಲ್ಲಿ ಬಿಜೆಪಿ ಬಗ್ಗೆ ಹೊರಗಿನ ಪಕ್ಷ ಎಂಬ ಭಾವನೆ ಇದೆ. ಚುರುಮುರಿ ಸಿಕ್ಕಿಂ ಫುಟ್ಬಾಲ್‌ಗಳು ಕೇವಲ ನಾಟಕಗಳು ಎಂಬುದನ್ನು ಬಂಗಾಳಿಗಳು ಅರ್ಥ ಮಾಡಿಕೊಂಡಿರಬಹುದಾದ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಮಮತಾ ಬ್ಯಾನರ್ಜಿಯ ನಿರಂತರ ಜನರ ಜೊತೆಗಿನ ಪಾಲ್ಗೊಳ್ಳುವಿಕೆ ಜನರನ್ನು ತಲುಪಿರಬಹುದು.
  3. ಗ್ರಾಮ ಪಂಚಾಯತಿಯಂತಹ ಚುನಾವಣೆಗಳಲ್ಲಿಯೂ ಕೂಡ ಹಲವು ಜೀವಗಳು ಬಲಿ ಆಗುತ್ತಿರುವುದು ಬಂಗಾಳದ ಚುನಾವಣೆಯ ವಿಶೇಷತೆ. ಪಕ್ಷ, ಚುನಾವಣೆ ಎಂಬುದು ಬೆಂಗಾಲಿಗರಿಗೆ ಎಲ್ಲಕ್ಕಿಂತಲೂ ಮಿಗಿಲು ಎಂಬ ಭಾವನೆ ಇದೆ. ಈ ಹಿಂದೆ ಸಿದ್ದಾಂತ ಪ್ರಮುಖ ವಿಚಾರವಾಗಿದ್ದರೆ, ಈಗ ಪಕ್ಷ ಮತ್ತು ನಾಯಕತ್ವ ಮುನ್ನೆಲೆಗೆ ಬಂದು ನಿಂತಿವೆ. ಹಾಗಾಗಿ ಹಿಂಸಾಚಾರಗಳನ್ನು ಕೇವಲ ಭಾವನಾತ್ಮಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲು ಸಾಧ್ಯವಿಲ್ಲ.
  4. ಬಂಗಾಳ ಕೋಮುವಾಧಾರಿತವಾಗಿ ಧ್ರುವೀಕರಣಗೊಂಡಿದ್ದರೂ, ಜನ ಚಳವಳಿಗಳ ಬೇರುಗಳು ಇಂದಿಗೂ ಜೀವಂತವಾಗಿವೆ. ಎಡಪಕ್ಷಗಳು ವಿವಿಧ ಭಾಗಗಳಾಗಿ ಹಂಚಿ ಹೋಗಿದ್ದರೂ ತಮ್ಮದೇ ನೆಲೆಗಟ್ಟಿನಲ್ಲಿ ಜನರನ್ನು ನಿರಂತರವಾಗಿ ಸಂಘಟಿಸುತ್ತಿರುವುದರಿಂದ ಕೋಮು ವಿಷಬೀಜ ವ್ಯಾಪಕವಾಗಿ ಬೇರೂರಿಲ್ಲ ಎಂಬುವುದು ಕೂಡ ಅಷ್ಟೇ ಸತ್ಯ. ಅಲ್ಲಿ ಸಂಘರ್ಷಗಳು ಪಕ್ಷಾಧಾರಿತವಾಗಿರುತ್ತವೆಯೋ ಹೊರತು ಕೇವಲ ಕೋಮುವಾಧಾರಿತವಾಗಿರುವುದಿಲ್ಲ. ಆದರೆ ಕೋಮ ಸಂಘರ್ಷವೇ ನಡೆಯುವುದಿಲ್ಲ ಎಂದು ಧೈರ್ಯದಿಂದ ಹೇಳಲು ಸಾಧ್ಯವಿಲ್ಲ.
  5. ಬಿಜೆಪಿಯು ದೆಹಲಿಯಲ್ಲಿ ಜನ ವಿರೋಧಿ ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ತಂದಾಗಲೆಲ್ಲಾ ಮಮತಾ ಬ್ಯಾನರ್ಜಿ ಜನರ ಜೊತೆಗೂಡಿ ಬಲಿಷ್ಠವಾಗಿ ಬೀದಿಯಲ್ಲಿ ಹೋರಾಟಗಳ ಮೂಲಕ ಪ್ರತಿರೋಧ ಒಡ್ದುತ್ತಿರುವುದು ಕೂಡ ಬಿಜೆಪಿ ಬಗ್ಗೆ ನೆಗೆಟಿವ್ ನರೇಷನ್‌ಗಳನ್ನು ಹುಟ್ಟು ಹಾಕುತ್ತಲೇ ಇವೆ. ಮಮತಾ ಬ್ಯಾನರ್ಜಿ ಹೋರಾಟಗಳು 100% ಸೈದ್ಧಾಂತಿಕವಾಗಿ ಅಲ್ಲದಿದ್ದರೂ, ರಾಜಕೀಯ ಕಾರಣಗಳು ಏನೇ ಇದ್ದರೂ ಜನರ ಮನಸ್ಸಿನಲ್ಲಿ ಬಿಜೆಪಿ ಬಗ್ಗೆ ತಾತ್ಸಾರ ಭಾವನೆಯನ್ನು ಹುಟ್ಟು ಹಾಕುತ್ತಲೇ ಇರುವುದರಲ್ಲಿ ತಕ್ಕಮಟ್ಟಿಗೆ ಸಫಲ ವಾಗಿವೆ.
  6. ಮಮತಾ ಬ್ಯಾನರ್ಜಿ ಕಾಂಗ್ರೆಸ್ ನಾಯಕರ ರೀತಿಯ ಕೇವಲ ಐಷಾರಾಮಿ ನಾಯಕರಲ್ಲ ಅಥವಾ ಕೇವಲ ಭಾಷಣಕಾರರಲ್ಲ. ಬದಲಿಗೆ ಜನರಿಂದಲೇ ಬೆಳೆದು ಬಂದ ನಾಯಕಿ. ಬೀದಿಯಲ್ಲಿ ಅಕ್ಷರಶ ಹೋರಾಡಿ, ಜನರ ನಡುವೆಯೇ ಬೆಳೆದು ಬಂದ ನಾಯಕಿ. ಅದೇ ಧೈರ್ಯ, ಗಟ್ಟಿತನ ಉಳಿಸಿಕೊಂಡು ಈಗಲೂ Realistic ಆಗಿ ಕೆಲಸ ಮಾಡುತ್ತಿರುವ ಪ್ರಬಲ ನಾಯಕಿ (ಆದರೆ ಸೈದ್ಧಾಂತಿಕವಾಗಿ ಗಟ್ಟಿತನ ಇದೆ ಎಂದು ಹೇಳಲು ಸಾಧ್ಯವಿಲ್ಲ). ರಾಹುಲ್ ಗಾಂಧಿಯನ್ನು ಎದುರಿಸಿದಂತೆ ಸುಲಭವಾಗಿ ಮಣಿಸಲು ಸಾಧ್ಯವಿಲ್ಲದ ಕಾರಣ ಬಿಜೆಪಿ ಸಾಕಷ್ಟು ಪರದಾಟ ನಡೆಸಲೇಬೇಕಾಗಿದೆ.

ಹೀಗಾಗಿ ಹಲವು ಕಾರಣಗಳಿಂದಾಗಿ ಬಿಜೆಪಿ ತನ್ನ ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಳೆದೆರಡು ಚುನಾವಣೆಗಳಲ್ಲಿ ಸಂಪೂರ್ಣ ಶೂನ್ಯಕ್ಕೆ ಇಳಿದಿರುವ ಎಡಪಕ್ಷಗಳು ಈ ಬಾರಿಯಂತೂ ಅಲ್ಪಮಟ್ಟಿಗೆ ಚೇತರಿಕೆ ಕಾಣಲಿವೆ. ಯುವ ಹೋರಾಟಗಾರರು ಅಭ್ಯರ್ಥಿಗಳಾಗಿರುವುದು ಮತ್ತು ಮಮತಾ ಬ್ಯಾನರ್ಜಿ ಆಡಳಿತ ಬೇಸತ್ತ ಯುವ ಸಮೂಹ ಮತ್ತೆ ಎಡಪಕ್ಷಗಳ ಪರ್ಯಾಯದ ಬಗ್ಗೆ ಯೋಚಿಸುತ್ತಿರುವುದು ತಕ್ಕಮಟ್ಟಿಗೆ ಪರಿಣಾಮ ಬೀರಲಿದೆ. ಹಾಗಾಗಿ ಪಶ್ಚಿಮ ಬಂಗಾಳದ ಫಲಿತಾಂಶವು ತಕ್ಕಮಟ್ಟಿಗೆ ದೇಶದ ಜನತೆಗೆ ಸಮಾಧಾನ ನೀಡಬಹುದು ಅಂತ ಅನಿಸಿಕೆ.

?s=150&d=mp&r=g
ಫಯಾಝ್ ದೊಡ್ಡಮನೆ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್...

ವಿಜಯಪುರ | ರೇಬಿಸ್ ತಡೆಗೆ ಜಾಗೃತಿ ಮುಖ್ಯ; ಬೀದಿ ನಾಯಿ ಕಡಿತದ ಬಗ್ಗೆ ಜನರಲ್ಲಿ ಅರಿವು

ರೇಬಿಸ್ ವೈರಾಣು ಹರಡುವಿಕೆ, ನಾಯಿ ಕಡಿತದಿಂದ ಉಂಟಾಗಬಹುದಾದ ಅಪಾಯ ಹಾಗೂ ಮುನ್ನೆಚ್ಚರಿಕಾ...