ಕೊಪ್ಪಳ | 9 ಕಾರ್ಖಾನೆಗಳಿಗೆ ನೋಟಿಸ್ : ಸ್ಥಳಾಂತರವೇ ಶಾಶ್ವತ ಪರಿಹಾರ

Date:

ಕೊಪ್ಪಳ ಜಿಲ್ಲೆಯಲ್ಲಿ 9 ಕಾರ್ಖಾನೆಗಳಿಗೆ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗಿನ ಸಮ್ಮತಿ ಪತ್ರದಲ್ಲಿನ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದಲ್ಲಿ 9 ಕಾರ್ಖಾನೆಗಳಿಗೆ ಪ್ರಾಸ್ತಾವಿತ ನಿರ್ದೇಶನಗಳ ಸೂಚನೆ ಅಂದರೆ NPD ಜಾರಿಯಾಗಿದೆ.

- Advertisement -

ಕೊಪ್ಪಳ ಬಳಿಯ ಹಿರೇಬಗನಾಳ ಗ್ರಾಮದ ಮೆ. ತನುಷ್ ಇಸ್ಪಾತ್ ಯುನಿಟ್ 1 (ಶರವಣ ಅಲಾಯ್ಸ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್), ಯುನಿಟ್ 2 (ಹರೇಕೃಷ್ಣ ಮೆಟಾಲಿಕ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್), ಧ್ರುವದೇಶ್ ಮೆಟಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್, ಚಿಕ್ಕಬಗನಾಳದ ಬಾಬಾ ಅಖಿಲಾ ಸಾಯಿಜ್ಯೋತಿ ಇಂಡಸ್ಟ್ರೀಸ್, ಕುಣಿಕೇರಿಯ ಐಎಲ್ ಸಿ ಐರನ್ ಮತ್ತು ಸ್ಟೀಲ್, ಭದ್ರಶ್ರೀ ಸ್ಟೀಲ್ ಮತ್ತು ಪವರ್ ಲಿಮಿಟೆಡ್, ಹಾಲವರ್ತಿಯ ಮೆ.ಪಿ. ಬಾಲಸುಬ್ಬಶೆಟ್ಟಿ ಅಂಡ್ ಸನ್ಸ್, ಎಸ್.ಕೆ. ಸ್ಟೀಲ್ ಟೆಕ್ ಪ್ರೈವೇಟ್ ಲಿಮಿಟೆಡ್, ಕೆರೆಹಳ್ಳಿ ಗ್ರಾಮದ ಕೊಪ್ಪಳ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ NPD ಜಾರಿ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಕೆಲವು ದಿನಗಳ ಹಿಂದಷ್ಟೇ ಎರಡು ಕಾರ್ಖಾನೆಗಳನ್ನು ಸೀಜ್ ಮಾಡಲಾಗಿತ್ತು. ಪಿಬಿಎಸ್ ಹಾಗೂ ಹೊಸಪೇಟೆ ಇಸ್ಪಾತ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಗಿತ್ತು. ಇದೀಗ ಮತ್ತೆ 9 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, 15 ದಿನ ಕಾಲಾವಕಾಶ ನೀಡಲಾಗಿದೆ. ಮಾಲೀಕರು ಉತ್ತರಿಸಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತಾ ಜಿಲ್ಲಾಧಿಕಾರಿ ಸುರೇಸ್ ಬಿ. ಇಟ್ನಾಳ್ ಹೇಳಿದ್ದಾರೆ.

ಇನ್ನು ಮಾಲಿನ್ಯಕಾರಕ ಕಾರ್ಖಾನೆಗಳನ್ನು ಬಂದ್ ಮಾಡಬೇಕು. ಕಾರ್ಖಾನೆಗಳ ವಿಸ್ತರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಆಗ್ರಹಿಸಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ಕಳೆದ 209 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ. ಇದೀಗ 9 ಕಾರ್ಖಾನೆಗಳಿಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವೇದಿಕೆಯಲ್ಲಿ ಸಿಹಿ ಹಂಚಿ ಹೋರಾಟಗಾರರು ಸಂಭ್ರಮಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಂಟಿ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾದ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ಈಗ ನೋಟಿಸ್ ಕೊಟ್ಟಿರುವ ಮತ್ತು ನೋಟಿಸ್ ಜಾರಿಯಾಗದೇ ಇರುವ ಎಲ್ಲಾ ಕಾರ್ಖಾನೆಗಳನ್ನು ಮುಚ್ಚಿಸಬೇಕು. ಕೇವಲ ತೋರಿಕೆಗೆ ನೋಟಿಸ್ ಕೊಟ್ಟರೆ ಸಾಲದು. ಸರಿಯಾಗಿ ಕಾರ್ಯರೂಪಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಂಟಿ ಕ್ರಿಯಾ ಸಮಿತಿಯ ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ ಮಾತನಾಡಿ ಕೊಪ್ಪಳ ಪರಿಸರವನ್ನು 40% ಹಾಳು ಮಾಡುವ ಕಾರ್ಖಾನೆಗಳಿಗೆ ನೋಟಿಸ್ ನೀಡಿಲ್ಲ. ಬಲ್ಡೋಟಾ ಎಂಎಸ್ ಪಿಎಲ್, ಎಕ್ಸ್ ಇಂಡಿಯಾ, ಟಾಕೂರ್, ಪಿಬಿಎಸ್ ಯೂನಿಟ್ 2 ಹಾಗೂ ಕೆಪಿಆರ್ ಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಆ್ಯಸಿಡ್ ಉತ್ಪಾದನೆ ಮಾಡುವ ಕಂಪನಿಗಳಾದ ನವಭಾರತ್ ಸೇರಿದಂತೆ ಇನ್ನಿತರ ಕಾರ್ಖಾನೆಗಳಿಗೆ ನೋಟಿಸ್ ಕೊಡಬೇಕಿತ್ತು. ಆದರೆ ಯಾವ ಕಾರಣಕ್ಕೆ ನೋಟಿಸ್ ಜಾರಿಯಾಗಿಲ್ಲ ಎನ್ನುವುದು ಗೊತ್ತಾಗಬೇಕು ಅಂದಿದ್ದಾರೆ.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಭೀಮಸೇನ ಕಲಕೇರಿ ಮಾತನಾಡಿ, ನೋಟಿಸ್ ಜಾರಿ ಮಾಡಿದ್ದು ಕ್ವಿಟ್ ಬಲ್ಡೋಟಾ ಹೋರಾಟಕ್ಕೆ ಸಿಕ್ಕ ಗೆಲುವು. ಕೇವಲ ನೋಟಿಸ್ ಕೊಟ್ಟರೆ ಸಾಲದು, ಕಾರ್ಖಾನೆಗಳನ್ನು ಸಂಪೂರ್ಣವಾಗಿ ಜಾಗ ಖಾಲಿ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

“ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಗವಿಸಿದ್ದಪ್ಪ ಮಾತನಾಡಿ, “ನೋಟಿಸ್ ಕೊಡುವುದು, ಅವರು ಸ್ವಲ್ಪ ದಿನ ಕಾರ್ಖಾನೆ ಬಂದ್ ಮಾಡುವುದು ಒಂದು ರೀತಿಯ ಕಣ್ಣಾಮುಚ್ಚಾಲೆ ಆಟ. ಸ್ವಲ್ಪ ದಿನದ ಬಳಿಕ ನ್ಯಾಯಾಲಯದಿಂದ ಆರ್ಡರ್ ತಂದು ಮತ್ತೆ ಪುನಾರಂಭ ಮಾಡಿದ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ, ಇದನ್ನೆಲ್ಲಾ ಬಿಟ್ಟು ಕಾರ್ಖಾನೆಗಳನ್ನು ಸ್ಥಳಾಂತರ ಮಾಡುವ ಶಾಶ್ವತ ಪರಿಹಾರವನ್ನು ದೊರಕಿಸಿ” ಎಂದು ಆಗ್ರಹಿಸಿದ್ದಾರೆ.

a3ff2423 937c 4613 a478 01689560f6a0

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ವದ್ನಾಳ್ ಮಾತನಾಡಿ, “ಕಾರ್ಖಾನೆಗಳು ಸೂಸುವ ಹೊಗೆಯಿಂದ ನಮ್ಮ ಆರೋಗ್ಯ ಮತ್ತು ಕೃಷಿ ಹಾಳಾಗಿದೆ. ಹೀಗಾಗಿ, ಕಾರ್ಖಾನೆಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

ಕಾರ್ಖಾನೆಗಳು ವಿಷಮಕಾರಿ ಹೊಗೆ ಜನರ ಬದುಕನ್ನು ಕಾರ್ಬನ್ ಪೇಪರ್ ನಂತೆ ಮಾಡುತ್ತಿದೆ. ಕೊಪ್ಪಳ, ಭಾಗ್ಯನಗರ, ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಕಾಸನಕಂಡಿ, ಲಾಚನಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ ಸೇರಿ ಹಲವು ಹಳ್ಳಿಗಳ 2 ಲಕ್ಷ ಜನರ ಆರೋಗ್ಯಕ್ಕೆ ಕುತ್ತು ಉಂಟಾಗಿದೆ. ಅದೆಷ್ಟೋ ಜನರು ಶ್ವಾಸಕೋಶ, ಕ್ಯಾನ್ಸರ್, ಟಿಬಿ ಹಾಗೂ ಹೃದಯದ ಕಾಯಿಲೆಗಳಿಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈಗಲಾದರೂ ಮಾನವೀಯ ನೆಲೆಗಟ್ಟಿ‌ನಲ್ಲಿ ಯೋಚಿಸಿ ಸರ್ಕಾರ ಈ ಜನರನ್ನು ಕರಿ ಹೊಗೆಯ ವರ್ತುಲದಿಂದ ರಕ್ಷಿಸಬೇಕಿದೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...