ಆರ್‌ಎಸ್‌ಎಸ್‌ ಬಗ್ಗೆ ‘ಕೋಟ’ ಲೇಖನ; ಅಸಲಿ ಸಂಗತಿ ಬಿಚ್ಚಿಟ್ಟು ದೇವನೂರು ತಿರುಗೇಟು

Date:

ಆರ್‌ಎಸ್‌ಎಸ್‌ ಬಗ್ಗೆ ಅಂಬೇಡ್ಕರ್ ಹೀಗೆ ಹೇಳುತ್ತಾರೆ: ‘ಹಿಂದೂ ಮಹಾಸಭಾ ಅಥವಾ ಆರ್‌ಎಸ್‌ಎಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ’, ‘ಆರ್‌ಎಸ್‌ಎಸ್ ಒಂದು ಅಪಾಯಕಾರಿ ಸಂಘಟನೆ...'

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಇತ್ತೀಚೆಗೆ ‘ಪ್ರಜಾವಾಣಿ’ ಪತ್ರಿಕೆಗೆ ಬರೆದ ‘ಆರ್‌ಎಸ್‌ಎಸ್‌ಗೆ ನೂರು ವರ್ಷಗಳಂತೆ! ಹೌದಾ?’ ಲೇಖನ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ‘ದೇವನೂರರಿಗೊಂದು ದಾಳಿಂಬೆ ಕೊಡಿ’ ಎಂಬ ಲೇಖನ ಬರೆದಿದ್ದರು. ಇದಕ್ಕೆ ಮತ್ತೆ ದೇವನೂರರು ತಿರುಗೇಟು ನೀಡಿದ್ದು, ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಇಂದು (ಶನಿವಾರ) ‘ಪ್ರಜಾವಾಣಿ’ಯ ಸಂಗತದಲ್ಲಿ ದೇವನೂರರ ಪ್ರತಿಕ್ರಿಯೆ ಪ್ರಕಟವಾಗಿದೆ.

- Advertisement -

“ಕೋಟ ಶ್ರೀನಿವಾಸ ಪೂಜಾರಿಯವರ ಕರೆಗೆ ಓಗೊಟ್ಟು ಆರ್‌ಎಸ್‌ಎಸ್‌, ಬಿಜೆಪಿ, ಸಂಘಪರಿವಾರಗಳ ಕಾರ್ಯಕರ್ತರ ಸಮೂಹದಿಂದ ದಾಳಿಂಬೆ ಬಂದರೆ ನಾನೊಂದು ಗೋಡೌನ್ ಕಟ್ಟಿಸಬೇಕಾಗುತ್ತದೆ. ಇಲ್ಲ, ನಾನು ಗೋಡೌನ್ ಕಟ್ಟಿಸುವುದಿಲ್ಲ. ಬದಲಿಗೆ ಬರುವ ದಾಳಿಂಬೆಯಲ್ಲಿ ನಾನೂ ಒಂದು ಸೇವಿಸುತ್ತೇನೆ. ಪೂಜಾರಿಯವರಿಗೂ ಎರಡು ಕೊಡುತ್ತೇನೆ. ಹಾಗೇ ಎಲ್ಲಾ ಸಂಘಟನೆಗಳಿಗೂ ಹಂಚುವೆ. ವಿಶೇಷವಾಗಿ, ಸಮ್ಮೋಹನಕ್ಕೆ ಒಳಗಾಗಿ ಪ್ರಜ್ಞಾಹೀನರಾಗಿ ಹುಸಿ ದೇಶಪ್ರೇಮ, ಹುಸಿ ಧರ್ಮಪ್ರೇಮ ಗೀಳಿನ ಮತಾಂಧ ಅತಿರೇಕದ ಸಂಘಟನೆಗಳಿಗೂ ಹೆಚ್ಚು ಪಾಲು ನೀಡುವೆ. ಸಮಾನತಾವಾದಿ ನ್ಯಾಯಮೂರ್ತಿಗೆ ಚಪ್ಪಲಿ ಎಸೆಯಲು ಯತ್ನಿಸಿದ ಸನಾತನವಾದಿ ಭೂತಕಾಲದ ಪಳೆಯುಳಿಕೆ ರಾಕೇಶ್ ಕಿಶೋರ್ ಅಂಥವರಿಗೂ ಎಲ್ಲರಿಗಿಂತ ಹೆಚ್ಚೇ ನೀಡುವೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

“1939ರ ಮೇ 12ರಂದು ಪುಣೆಯ ಆರ್‌ಎಸ್‌ಎಸ್‌ ಶಿಬಿರಕ್ಕೆ ಅಂಬೇಡ್ಕರ್ ಭೇಟಿ ನೀಡಿ ಆರ್‌ಎಸ್‌ಎಸ್‌ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು ಎಂದು (ಪೂಜಾರಿ) ಬರೆದಿದ್ದಾರೆ. ಈ ಸುಳ್ಳಿನ ಹಿಂದಿರುವ ಸತ್ಯ ಹೀಗಿದೆ: ಆಯುಸ್ ನದೀಂಪಳ್ಳಿ ಮತ್ತು ರಾಹುಲ್ ಶಾಸ್ತ್ರಿ ಬರೆದಿರುವ ‘The Founder of RSS: Dr. Hedgewar Seer Patriot and Nation Builder’ ಪುಸ್ತಕದಲ್ಲಿ ಈ ಸುಳ್ಳನ್ನು ಬಿತ್ತರಿಸಲಾಗಿದೆ. ಇದಕ್ಕೆ ಯಾವುದೇ ಮಾಹಿತಿ ಮೂಲಗಳನ್ನು ತಿಳಿಸಿಲ್ಲ. ಪತ್ರಿಕಾ ವರದಿ, ಫೋಟೊ ಇತ್ಯಾದಿ ಸಾಕ್ಷಿಗಳನ್ನೂ ತಿಳಿಸಿಲ್ಲ. ಇಂತಹ ಕಟ್ಟುಕತೆಯ ಆಧಾರಗಳನ್ನೇ ನಮ್ಮ ಸಂಸದರು ತಮ್ಮ ಲೇಖನಕ್ಕೆ ಬಳಸಿಕೊಂಡಿದ್ದಾರೆ. ದಯವಿಟ್ಟು ಗಮನಿಸಿ, ಅಂಬೇಡ್ಕರ್ ಆರ್‌ಎಸ್‌ಎಸ್‌ ಬಗ್ಗೆ ಹೀಗೆ ಹೇಳುತ್ತಾರೆ: ‘ಹಿಂದೂ ಮಹಾಸಭಾ ಅಥವಾ ಆರ್‌ಎಸ್‌ಎಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ’ (ಬಾಬಾ ಸಾಹೇಬ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಪುಟ 359), ‘ಆರ್‌ಎಸ್‌ಎಸ್ ಒಂದು ಅಪಾಯಕಾರಿ ಸಂಘಟನೆ’ (ಇಂಗ್ಲಿಷ್ ಸಂಪುಟ 15, ಪುಟ 560) – ಹೀಗೆಲ್ಲಾ ಎಚ್ಚರಿಸಿದ್ದಾರೆ” ಎಂದು ದೇವನೂರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿರಿ: ನಿಮ್ಮ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!

“1962ರ ಭಾರತ–ಚೀನಾ ಯುದ್ಧದ ಉದ್ವಿಗ್ನತೆಯಲ್ಲಿ ಅಂದಿನ ಪ್ರಧಾನಿ ನೆಹರೂ ಏರ್ಪಡಿಸಿದ್ದ ದುಂಡುಮೇಜಿನ ಸಭೆಯಲ್ಲಿ ಗೋಲ್ವಲ್ಕರ್ ಆಹ್ವಾನದ ಮೇಲೆ ಭಾಗವಹಿಸಿದ್ದಾರೆಂದೂ, ಆ ಸಭೆಯಲ್ಲಿ ವಿಪಕ್ಷಗಳು ನೆಹರೂ ಸರ್ಕಾರವನ್ನು ಟೀಕಿಸುತ್ತ, ‘ಚೀನಿ’ ಸರ್ಕಾರ ಭಾರತದ ಭೂಭಾಗ ಆವರಿಸಿಕೊಳ್ಳುವಾಗ ನಿಮ್ಮ ಸೇನೆ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿದರೆಂದೂ, ಆಗ ಗೋಲ್ವಲ್ಕರ್ ‘ನಿಮ್ಮ ಸೇನೆ ಎನ್ನುವ ಬದಲು ನಮ್ಮ ಸೇನೆ ಎಂಬ ಶಬ್ದ ಪ್ರಯೋಗ ಮಾಡಬಹುದೆ?’ ಎಂದು ತಿದ್ದಿ ಹೇಳಿದರೆಂದೂ, ಗೋಲ್ವಲ್ಕರ್ ಮಾತಿಗೆ ನೆಹರೂ ಕಣ್ಣಲ್ಲೇ ಕೃತಜ್ಞತೆ ಅರ್ಪಿಸಿದ್ದರೆಂದೂ (ಪೂಜಾರಿ) ಬರೆದಿದ್ದಾರೆ. ಈ ವಾಕ್ಯಗಳನ್ನು, ಅಲ್ಲೇ ಇದ್ದು ಕಣ್ಣಾರೆ ಕಂಡಂತೆ ಪೂಜಾರಿಯವರು ವಿವರಿಸಿದ್ದಾರೆ. ಆದರೆ ಈ ಬಗ್ಗೆ ಆರ್ಕೈವ್ಸ್ ಪರಿಶೀಲಿಸಿದರೆ, ಅವರು ಹೇಳುವ ಯಾವ ದಾಖಲೆಗಳೂ ಇಲ್ಲ! ಇದೇನು ಕಥೆ? ಈ ಕಟ್ಟುಕಥೆಯನ್ನು ಕಟ್ಟಿ ವಾಸ್ತವ ಎಂಬಂತೆ ಆರ್‌ಎಸ್‌ಎಸ್‌ ರತನ್ ಶ್ರದ್ಧಾ ಅವರು 2018ರಲ್ಲಿ ಬರೆದ ‘ಆರ್‌ಎಸ್‌ಎಸ್ 360’ ಪುಸ್ತಕದಲ್ಲಿ ಹುಟ್ಟಿಸಿದ್ದು, ಇದನ್ನೇ ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದವರು ಜಪಿಸುತ್ತಾ ತಿರುಗುತ್ತಿದ್ದಾರೆ. ಈ ಕಥನಶೈಲಿಯ ಮಾಯಾಜಾಲವು ಮುಸುಕುಧಾರಿ ಸಂಘಟನೆಗಳಿಗೆ ಉಸಿರಾಟದಂತಾಗಿ ಬಿಟ್ಟಿದೆ” ಎಂದು ಕುಟುಕಿದ್ದಾರೆ.

“ಲೇಖಕರೊಬ್ಬರು ಬರೆದಿದ್ದ ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕಕ್ಕೆ ಪೂರಕ ಪ್ರಾಸ್ತಾವಿಕ ನುಡಿ ಬರೆದ ಗಣ್ಯರೊಬ್ಬರು ‘ಈ ಕಿರುಪುಸ್ತಕ ಆರ್‌ಎಸ್‌ಎಸ್‌ನ ನಿಜಸ್ವರೂಪವನ್ನು ತಿಳಿಸಿ, ಭಾರತದ ಸಂವಿಧಾನದ ಮತ್ತು ದೇಶದ ಏಕತೆಯನ್ನು ಗಟ್ಟಿಗೊಳಿಸಲು ಶಕ್ತಿ ನೀಡುತ್ತದೆ ಎಂದು ಘೋಷಿಸಿದ್ದರು’ ಎಂದು ಪೂಜಾರಿ ಬರೆದಿದ್ದಾರೆ. ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕ ಬರೆದವನು ನಾನೇ ಅಲ್ಲವೆ? ಪೂರಕ ಪ್ರಾಸ್ತಾವಿಕ ನುಡಿಯ ಪ್ರಸ್ತಾಪ ನನಗೇ ಗೊತ್ತೇ ಇಲ್ಲವಲ್ಲ! ಇದೆಂಥ ಬಾಯಿಚಳಕ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಬಿಹಾರ ಚುನಾವಣೆ | ಸವಾಲು ಮುರಿದು ಗೆಲುವಿನ ಹಾದಿ ಹಿಡಿಯುವುದೇ ‘ಮಹಾಘಟಬಂಧನ್’

ಮುಂದುವರಿದು, “ಸರ್, ಪೂಜಾರಿಯವರೇ, ತಾವು ಸರಳ ಸಜ್ಜನರೆಂದು ಕೇಳಿದ್ದೇನೆ, ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ವ್ಯಕ್ತಿತ್ವದವರೆಂದೂ ಕೇಳಿದ್ದೇನೆ. ಈ ವಿಶ್ವಾಸದಿಂದ ಸದ್ಯಕ್ಕೆ ಒಂದೆರೆಡು ವಿಚಾರಗಳನ್ನು ತಮ್ಮ ಮುಂದಿಡುವೆ. ಸನಾತನ(ಶಾಶ್ವತ)ಗಳೆಂದು ಹೇಳಿಕೊಳ್ಳುವವರಿಗೆ ಪರಮಪೂಜ್ಯರೆನ್ನಿಸಿಕೊಂಡ ಗೋಲ್ವಲ್ಕರ್, ಸಾವರ್ಕರ್ ಅವರ ಎದೆಯೊಳಗಿನ ಎರಡು ಮಾತುಗಳನ್ನು ಇಲ್ಲಿ ಉಲ್ಲೇಖಿಸುವೆ. ತಾವು ಈಗಾಗಲೇ ಓದಿರುವ ನನ್ನ ಲೇಖನ ‘ಆರ್‌ಎಸ್‌ಎಸ್‌ಗೆ ನೂರು ವರ್ಷಗಳಂತೆ! ಹೌದಾ?’ದಲ್ಲಿ ಇದನ್ನು ವಿವರವಾಗಿ ಬರೆದಿರುವೆ. ನನ್ನ ಪ್ರಶ್ನೆ ಇಷ್ಟೆ: ಗೋಲ್ವಲ್ಕರ್ ಅವರು– ‘ಈ ಚತುರ್ವಿಧ (ಚಾತುರ್ವರ್ಣ) ವ್ಯವಸ್ಥೆ ಹೊಂದಿದವರು ಎಂದರೆ ಹಿಂದೂ ಜನಾಂಗ, ಇದೇ ನಮ್ಮ ದೇವರು’ ಎಂದರೆ, ಸಾವರ್ಕರ್ ಅವರು ‘ಇವತ್ತು ಮನುಸ್ಮೃತಿಯೇ ಹಿಂದೂ ಕಾಯ್ದೆ’ ಎಂದಿದ್ದಾರೆ. ಈಗ ನಾನು ತಮ್ಮಲ್ಲಿ ವಿನಂತಿಸುವುದು ಇಷ್ಟೇ: 1. ದೇವನೂರರು ಉಲ್ಲೇಖಿಸಿರುವ ಗೋಲ್ವಲ್ಕರ್, ಸಾವರ್ಕರ್ ಹೇಳಿಕೆಗಳನ್ನು ಸುಳ್ಳು ಎಂದಾದರೂ ಹೇಳಿರಿ, 2. ಆ ಉಲ್ಲೇಖಗಳನ್ನು ಗೋಲ್ವಲ್ಕರ್, ಸಾವರ್ಕರ್ ಹೇಳಿದ್ದಾರೆ, ಅದನ್ನು ಸಮ್ಮತಿಸುತ್ತೇನೆ ಎಂದಾದರೂ ಹೇಳಿರಿ, 3. ಗೋಲ್ವಲ್ಕರ್, ಸಾವರ್ಕರ್ ಹೇಳಿರುವ ಉಲ್ಲೇಖಗಳನ್ನು ನಾನು ಸಮ್ಮತಿಸುವುದಿಲ್ಲ ಎಂದಾದರೂ ಹೇಳಿರಿ. ದಯವಿಟ್ಟು ಯಾವುದಾದರೂ ಒಂದನ್ನು ತಿಳಿಸುವಿರಾ?” ಎಂದು ಛಾಟಿ ಬೀಸಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...

‘ಎಫ್ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲೋದೆ ಇಲ್ಲ’: ಪಟ್ಟು ಹಿಡಿದು ಕುಳಿತ ಸಿಎಂ

'ಎಫ್ಐಆರ್ ದಾಖಲಾಗುವವರೆಗೂ ಕದಲುವುದೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ....

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...