ಬೀಫ್ ರಫ್ತಿನಲ್ಲಿ ಮೋದಿ ಸರ್ಕಾರ ದಾಖಲೆ: ಸ್ವದೇಶದಲ್ಲಿ ಗೋರಕ್ಷಣೆ ನಾಟಕ, ವಿದೇಶಕ್ಕೆ ಕೋಟಿ ಕೋಟಿ ವಹಿವಾಟು!

Date:

ಬಿಜೆಪಿ ಹೇಳುವುದು ಒಂದು ಮಾಡುವುದು ಇನ್ನೊಂದು. ಹಾಗಿರುವುದು ನಂಬುವುದು ಹೇಗೋ ಕಾಣೆ! ಒಂದೆಡೆ ಹಿಂದೂಗಳ ಓಲೈಕೆಗೆ, ಮತ ಬ್ಯಾಂಕ್‌ಗಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ಗೋಹತ್ಯೆ ನಿಷೇಧವನ್ನು ಪ್ರತಿಪಾದಿಸುವುದು, ಇನ್ನೊಂದೆಡೆ ಎಮ್ಮೆ ಮಾಂಸದ ರಫ್ತಿಗೆ ಬೆಂಬಲ ನೀಡುವುದು, ಅದರಿಂದ ಖಜಾನೆ ತುಂಬಿಸುವುದು ಬಿಜೆಪಿಯ ರಾಜಕೀಯದಾಟ.

ಕಳೆದೆರಡು ದಶಕಗಳಲ್ಲಿ ಅಂದರೆ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶೀಯವಾಗಿ ‘ಗೋರಕ್ಷಣೆ’ ಮತ್ತು ‘ಬೀಫ್ ನಿಷೇಧ’ ಪ್ರಮುಖ ರಾಜಕೀಯ ವಿಷಯ. ಗೋರಕ್ಷಣೆ ನೆಪದಲ್ಲಿ ತುಂಬಿಕೊಂಡ ಮತಬ್ಯಾಂಕ್ ಎಷ್ಟೋ, ಧಾರ್ಮಿಕ ವಿಂಗಡನೆ ಎಷ್ಟೋ! ಆದರೆ ಇದೇ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾದ ಬಳಿಕ ವಿದೇಶಕ್ಕೆ ಮಾತ್ರ ಬೀಫ್ ಅಥವಾ ಕಾರಬೀಫ್ ಅಂದರೆ ಎಮ್ಮೆಯ ಮಾಂಸ ಸಾರಸಗಟಾಗಿ ರಫ್ತಾಗುತ್ತಿದೆ. ಅದರಿಂದ ಬರುವ ಆದಾಯವೂ ವರ್ಷ ಕಳೆದಂತೆ ಅಧಿಕವಾಗುತ್ತಲೇ ಇದೆ! ಅಂದರೆ ಸ್ವದೇಶದಲ್ಲಿ ಗೋರಕ್ಷಣೆ, ವಿದೇಶಕ್ಕೆ ಕೋಟಿ ಕೋಟಿ ವಹಿವಾಟು!

- Advertisement -

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ APEDA (Agricultural and Processed Food Products Export Development Authority) ಮತ್ತು DGCIS ದತ್ತಾಂಶಗಳ ಆಧಾರದಲ್ಲೇ ಹೇಳುವುದಾದರೆ ಭಾರತದ ಮಾಂಸ ರಫ್ತು ವಹಿವಾಟು ಪ್ರತಿವರ್ಷವೂ ಏರಿಕೆ ಕಾಣುತ್ತಲೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನೂ ಓದಿ: ಬೀಫ್ ರಫ್ತುದಾರರ ಪೈಕಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ಮೋದಿ ಸರ್ಕಾರದ ಅವಧಿಯಲ್ಲಿ ರಫ್ತು ಪ್ರಮಾಣ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ನಂತರವಂತೂ ಭಾರತದ ಎಮ್ಮೆ ಮಾಂಸ ರಫ್ತು ಗಮನಾರ್ಹವಾಗಿ ಬೆಳೆದಿದೆ.ಇತ್ತೀಚಿನ ಆರ್ಥಿಕ ವರ್ಷಗಳ ದತ್ತಾಂಶದಂತೆ, ಭಾರತದಿಂದ ಎಮ್ಮೆ ಮಾಂಸದ (Carabeef) ರಫ್ತು ವಹಿವಾಟು $5.1 ಶತಕೋಟಿ (ಅಂದರೆ ಸುಮಾರು ₹48,000 ಕೋಟಿಗೂ ಅಧಿಕ) ದಾಟಿದೆ. ಈ ಮೂಲಕ ಕೃಷಿ-ಉತ್ಪನ್ನಗಳ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2014-15ರಲ್ಲಿ ₹30,000 ಕೋಟಿಯಷ್ಟಿದ್ದ ಈ ಉದ್ಯಮ, ಇಂದು ಜಾಗತಿಕವಾಗಿ ಬ್ರೆಜಿಲ್ ಮತ್ತು ಆಸ್ಟ್ರೇಲಿಯಾಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿದೆ. ಸದ್ಯ ವಿಯೆಟ್ನಾಂ, ಈಜಿಪ್ಟ್, ಮಲೇಷ್ಯಾ, ಸೌದಿ ಅರೇಬಿಯಾ, ಯುಎಇ ಮತ್ತು ಇಂದೋನೇಷ್ಯಾಗಳು ಭಾರತೀಯ ಎಮ್ಮೆ ಮಾಂಸದ ಪ್ರಮುಖ ಗ್ರಾಹಕ ದೇಶಗಳಾಗಿವೆ.

ಟಾಪ್ ಐದು ರಫ್ತುದಾರರಲ್ಲಿ ಹಿಂದೂಗಳೇ ಹೆಚ್ಚು!

ಬೀಫ್, ಕಾರಬೀಫ್ ಅಥವಾ ಎಮ್ಮೆಮಾಂಸ ಎಂದಾಕ್ಷಣ ದೇಶದಲ್ಲಿ ಹಲವು ಜನರ ತಲೆಯಲ್ಲಿ ಬರುವುದು ಮುಸ್ಲಿಮರು. ಬಿಜೆಪಿ ಮುಸ್ಲಿಮರ ವಿರುದ್ಧ ಗೋಪೂಜೆ ಮಾಡುವ ಹಿಂದೂಗಳಲ್ಲಿ ದ್ವೇಷ ಹುಟ್ಟಿಸಲು ಬಳಸಿಕೊಂಡಿರುವುದೇ ಈ ಬೀಫ್ ಎಂಬುದನ್ನು. ಆದರೆ ನಮ್ಮ ದೇಶದ ಟಾಪ್ ಐದು ಬೀಫ್ ರಫ್ತುದಾರರಲ್ಲಿ ಮೂವರು ಹಿಂದೂಗಳಾಗಿದ್ದಾರೆ. ಮೊದಲ ಸ್ಥಾನದಲ್ಲಿರುವ ಅಲ್ಲಾನಾ ಗ್ರೂಪ್ ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ, ಈಜಿಪ್ಟ್‌ಗೆ ಬೀಫ್ ರಫ್ತು ಮಾಡುತ್ತದೆ. ಇದರ ಮಾಲೀಕ ಶಿರಾಜ್ ಅಲ್ಲಾನಾ (Shiraz Allana) ಮತ್ತು ಕುಟುಂಬ. ಇದು ಮುಸ್ಲಿಂ ಕುಟುಂಬ. ಎರಡನೇ ಸ್ಥಾನದಲ್ಲಿರುವ ಸಂಸ್ಥೆ ಅಲ್-ಕಬೀರ್ ಎಕ್ಸ್‌ಪೋರ್ಟ್ಸ್ ಮಾಲೀಕ ಸತೀಶ್ ಸಬರ್‌ವಾಲ್.

ಬೀಫ್ ರಫ್ತಿನಲ್ಲಿ ಟಾಪ್ ಉತ್ತರ ಪ್ರದೇಶ!

ಉತ್ತರ ಪ್ರದೇಶದಲ್ಲಿ ಬೀಫ್ ವಿಚಾರದಲ್ಲಿ ಆಗಾಗೇ ಕೊಲೆ, ಗಲಭೆಗಳು ನಡೆಯುತ್ತಲೇ ಇರುತ್ತದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ನಿರಂತರವಾಗಿ ಆಹಾರ ಸ್ವಾತಂತ್ರ್ಯವನ್ನು ಧಮನ ಮಾಡುತ್ತಾ, ಬೀಫ್ ತಿನ್ನುವವರ ವಿರುದ್ಧ ದ್ವೇಷ ಹುಟ್ಟುವಂತೆ ಮಾಡುತ್ತಾ ಬಂದಿರುವವರು. “ನಮ್ಮ ಶಾಸ್ತ್ರಗಳು ಗೋವನ್ನು ತಾಯಿ ಎಂದರೆ, ನಿರ್ಲಜ್ಜ ಜನರು ಗೋಮಾಂಸದ ಹಕ್ಕನ್ನು ನೀಡುತ್ತೇವೆ ಎನ್ನುತ್ತಾರೆ” ಎಂದು ತಮ್ಮ ಚುನಾವಣಾ ಪ್ರಚಾರದಲ್ಲಿ ಬೊಬ್ಬಿಟ್ಟವರು ಯೋಗಿ ಆದಿತ್ಯನಾಥ್. ಆದರೆ ವಿಚಿತ್ರವೆಂದರೆ ಅದೇ ಬೀಫ್ ಅಥವಾ ಎಮ್ಮೆ ಮಾಂಸ ರಫ್ತಿನಲ್ಲಿ ಇದೇ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅಂದರೆ ನಮ್ಮ ರಾಜ್ಯದಲ್ಲಿ ತಿನ್ನಬೇಡಿ, ನಾವು ಹೊರ ದೇಶಕ್ಕೆ ರಫ್ತು ಮಾಡಿ ಹಣ ಮಾಡುತ್ತೇವೆ ಎಂದು ಯೋಗಿ ಅವರು ಹೇಳುವುದೇ?

ಇದನ್ನೂ ಓದಿ: ವಿಷಮ ಭಾರತ | ಧಾರಾವಿಯ ‘ಚಮಾರ್ ಸ್ಟುಡಿಯೋ’ ಎಂಬೊಂದು ದಲಿತ ತುಂಬೆಯ ಕತೆ

ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಮತ್ತು ಪಶುಸಂಗೋಪನೆ ಮತ್ತು ಕ್ಷೀರ ಅಭಿವೃದ್ಧಿ ಇಲಾಖೆ (DAHD) ಯ ಅಧಿಕೃತ ದತ್ತಾಂಶದ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಎಮ್ಮೆ ಮಾಂಸ ಉತ್ಪಾದನೆ ಹಾಗೂ ರಫ್ತು ಮಾಡುವ ರಾಜ್ಯ ಉತ್ತರ ಪ್ರದೇಶ. ದೇಶದಲ್ಲಿ ಒಟ್ಟು ರಫ್ತಾಗುವ ಎಮ್ಮೆ ಮಾಂಸ ಉತ್ಪನ್ನಗಳ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ಎಮ್ಮೆಗಳ ಸಂಖ್ಯೆಯಲ್ಲಿ ಶೇ. 30 ಪಾಲು ಉತ್ತರ ಪ್ರದೇಶದ್ದಾಗಿದೆ.

ಅಷ್ಟು ಮಾತ್ರವಲ್ಲದೆ ಕೇಂದ್ರ ಸರ್ಕಾರ ಹಾಗೂ APEDAದಿಂದ ಮಾನ್ಯತೆ ಪಡೆದ ಅತಿ ಹೆಚ್ಚು ಆಧುನಿಕ ಮಾಂಸ ಸಂಸ್ಕರಣಾ ಮತ್ತು ರಫ್ತು ಘಟಕಗಳು ಉತ್ತರ ಪ್ರದೇಶದಲ್ಲೇ ಕೇಂದ್ರೀಕೃತವಾಗಿವೆ. ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರ, ತೆಲಂಗಾಣ, ಮತ್ತು ಪಂಜಾಬ್ ರಾಜ್ಯಗಳು ದೇಶದ ಮಾಂಸ ಸಂಸ್ಕರಣೆ ಮತ್ತು ರಫ್ತು ಜಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಚುನಾವಣಾ ಬಾಂಡ್ ಮೂಲಕ ಬೀಫ್ ಸಂಸ್ಥೆಗಳಿಂದ ದೇಣಿಗೆ ಪಡೆದ ಬಿಜೆಪಿ

ಬೀಫ್ ವಿರುದ್ಧವಾಗಿ ಅಭಿಯಾನ ನಡೆಸುವ ಇದೇ ಬಿಜೆಪಿ ಚುನಾವಣಾ ಬಾಂಡ್ ಮೂಲಕ ಅದೇ ಬೀಫ್ ರಫ್ತು ಸಂಸ್ಥೆಗಳಿಂದ ದೇಣಿಗೆ ಪಡೆದುಕೊಂಡಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ 2024ರ ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಎಂದು ಹೇಳಿ ಸಂಪೂರ್ಣವಾಗಿ ರದ್ದು ಮಾಡಿದೆ. ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಯಾರು ಹಣ ನೀಡುತ್ತಿದ್ದಾರೆ ಎಂಬ ವಿವರಗಳು ರಹಸ್ಯವಾಗಿರುತ್ತಿದ್ದವು. ಇದು ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ಮತದಾರರಿಗಿರುವ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಹೇಳಿದೆ. ಅದಾದ ಮೇಲೆ ಬಾಂಡ್ ಮಾಹಿತಿ ಹೊರಬೀಳುತ್ತಿದ್ದಂತೆ ಬಿಜೆಪಿ ಸರ್ಕಾರವು ಪಕ್ಷಕ್ಕೆ ದೇಣಿಗೆ ಪಡೆದು ಸವಲತ್ತು ಅಥವಾ ಪರವಾನಗಿಗಳನ್ನು ನೀಡಿರುವ Quid Pro Quo ಸಂಸ್ಕೃತಿ ಮತ್ತು ಭ್ರಷ್ಟಾಚಾರ ಬಹಿರಂಗವಾಗಿತ್ತು.

ಅಧಿಕೃತ ಚುನಾವಣಾ ಬಾಂಡ್ ದತ್ತಾಂಶಗಳ ಪ್ರಕಾರ ಮಾಂಸ ಸಂಸ್ಕರಣೆ ಮತ್ತು ರಫ್ತು ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಸ್ಥೆಗಳು ಈ ಬಾಂಡ್ ಖರೀದಿಸಿರುವುದು ದೃಢಪಟ್ಟಿದೆ. ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್ & ಫ್ರಿಗೋರಿಫಿಕೋ ಅಲ್ಲಾನಾ ಎಂಬ ಭಾರತದ ಅತಿ ದೊಡ್ಡ ಎಮ್ಮೆ ಮಾಂಸ ರಫ್ತುದಾರ ಸಮೂಹವಾದ ಅಲ್ಲಾನಾ ಗ್ರೂಪ್ ಸಹೋದರ ಸಂಸ್ಥೆ ಚುನಾವಣಾ ಬಾಂಡ್ ಮೂಲಕ 2019ರ ಅಕ್ಟೋಬರ್‌ನಲ್ಲಿ ಬಿಜೆಪಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇನ್ನು ಎಮ್ಮೆ ಮಾಂಸ ರಫ್ತು ಮಾಡುವ MKJ ಎಂಟರ್‌ಪ್ರೈಸಸ್‌ನ ಸಹೋದರ ಸಂಸ್ಥೆ ಕೆವೆಂಟರ್ ಫುಡ್‌ಪಾರ್ಕ್ ಇನ್‌ಫ್ರಾ ಲಿಮಿಟೆಡ್‌ನಿಂದ ಚುನಾವಣಾ ಬಾಂಡ್ ಮೂಲಕ ಬಿಜೆಪಿ ₹144 ಕೋಟಿಗೂ ಅಧಿಕ ದೇಣಿಗೆ ಪಡೆದಿದೆ.

ಹೀಗೆ ಬಿಜೆಪಿ ಹೇಳುವುದು ಒಂದು ಮಾಡುವುದು ಇನ್ನೊಂದು. ಹಾಗಿರುವುದು ನಂಬುವುದು ಹೇಗೋ ಕಾಣೆ! ಒಂದೆಡೆ ಹಿಂದೂಗಳ ಒಲೈಕೆಗೆ, ಮತ ಬ್ಯಾಂಕ್‌ಗಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ಗೋಹತ್ಯೆ ನಿಷೇಧವನ್ನು ಪ್ರತಿಪಾದಿಸುವುದು, ಇನ್ನೊಂದೆಡೆ ಎಮ್ಮೆ ಮಾಂಸದ ರಫ್ತಿಗೆ ಬೆಂಬಲ ನೀಡುವುದು, ಅದರಿಂದ ಖಜಾನೆ ತುಂಬಿಸುವುದು ಬಿಜೆಪಿಯ ರಾಜಕೀಯದಾಟ.

ಹಸುವಿನ ಸಂರಕ್ಷಣೆ ಮತ್ತು ಎಮ್ಮೆ ಮಾಂಸದ ವಾಣಿಜ್ಯಿಕ ವ್ಯಾಪಾರದ ನಡುವೆ ವ್ಯತ್ಯಾಸವಿದೆ ಎಂಬ ಪ್ರತಿಪಾದನೆಗೆ ಪ್ರತಿ ಬಾರಿ ಬಿಜೆಪಿ ಇಳಿಯುತ್ತದೆ. ಆದರೆ ನೀತಿ ಮತ್ತು ನಡವಳಿಕೆಯ ನಡುವಿನ ವಿರೋಧಾಭಾಸ ಸ್ಪಷ್ಟವಾಗಿ ಕಾಣಿಸುತ್ತದೆ. ಅದಕ್ಕೆ ಚುನಾವಣಾ ಬಾಂಡ್ ದತ್ತಾಂಶಗಳು ಮತ್ತು ಪ್ರಮುಖ ರಫ್ತುದಾರ ಸಂಸ್ಥೆಗಳ ಮಾಹಿತಿ ಇನ್ನಷ್ಟು ಪುಷ್ಠಿ ನೀಡುತ್ತದೆ. ಒಟ್ಟಾರೆಯಾಗಿ, ಭಾವನಾತ್ಮಕ ರಾಜಕೀಯ ನರೇಟಿವ್‌ಗಳು ಮುಂದಿಟ್ಟು ರಾಜಕೀಯ ಮಾಡುವುದಷ್ಟೇ ಬಿಜೆಪಿಗೆ ಗೊತ್ತಿರುವುದು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...