ವಿಶ್ವದ ಪ್ರತಿ ಐವರು ನಾವಿಕರಲ್ಲೊಬ್ಬರು ಭಾರತೀಯರು: ‘ಸಾಗರ ಯೋಧ’ರ ಕಣ್ಣೀರಿನ ಕಥನ ಬಲ್ಲಿರಾ?

Date:

ಈ ನಾವಿಕರ ಬದುಕು ವಾಸ್ತವದಲ್ಲಿ ಅಷ್ಟೇ ಒಂಟಿತನ, ಅಪಾಯಗಳಿಂದ ಕೂಡಿದ್ದು. ವಿಶಾಲವಾದ ನೀಲಿ ಸಾಗರದ ಮಧ್ಯೆ ಕೇವಲ ಒಂದು ಹಡಗು, ಅದೇ ಪ್ರಪಂಚ, ಸಹೋದ್ಯೋಗಿಗಳೇ ಕುಟುಂಬ. ಸಾಗರದ ರಕ್ಕಸ ಅಲೆಗಳು, ಭೀಕರ ಚಂಡಮಾರುತದ ಆತಂಕ ಒಂದೆಡೆ, ಇನ್ನೊಂದೆಡೆ ಕಡಲ್ಗಳ್ಳರ ದಾಳಿ ಮತ್ತು ಕ್ಷಿಪಣಿ ದಾಳಿಗಳ ಭೀತಿ.

ವಿಶ್ವದ ಮಹಾಸಾಗರಗಳು ಕೇವಲ ವ್ಯಾಪಾರದ ಮಾರ್ಗಗಳಲ್ಲ, ಅವು ಸಾಹಸ, ಸವಾಲು ಮತ್ತು ನಿರಂತರ ಆತಂಕದಿಂದಲೇ ದಿನದೂಡಬೇಕಾದ ಮಹಾ ಪ್ರಪಂಚ. ಇಂದು ಜಾಗತಿಕವಾಗಿ ಒಟ್ಟು ವ್ಯಾಪಾರದ ಶೇ.90ರಷ್ಟು ಸಮುದ್ರ ಮಾರ್ಗಗಳ ಮೂಲಕವೇ ನಡೆಯುತ್ತವೆ. ಪ್ರತಿನಿತ್ಯ ನಾವು ಬಳಸುವ ಇಂಧನ, ಆಹಾರ, ತಂತ್ರಜ್ಞಾನದಿಂದ ಹಿಡಿದು ಪ್ರತಿಯೊಂದು ವಸ್ತುವಿನ ಹಿಂದೆ ನಮ್ಮ ಕಣ್ಣಿಗೆ ಕಾಣದ ಲಕ್ಷಾಂತರ ನಾವಿಕರ ಕಠಿಣ ಪರಿಶ್ರಮವಿದೆ. ಈ ಬೃಹತ್ ಜಾಗತಿಕ ಮರ್ಚೆಂಟ್ ನೇವಿ (Merchant Navy) ಕ್ಷೇತ್ರದಲ್ಲಿ ಇಂದು ಭಾರತೀಯ ನಾವಿಕರು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರಸ್ತುತ ಜಾಗತಿಕ ನೌಕಾ ವಲಯದಲ್ಲಿ ಐವರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ಅಂದರೆ ಒಟ್ಟು ನಾವಿಕರಲ್ಲಿ ಸುಮಾರು ಶೇ.20ರಷ್ಟು ಭಾರತೀಯರಿದ್ದಾರೆ.

- Advertisement -

ಆದರೆ, ಈ ಕಣ್ಣು ಕೋರೈಸುವ ಬಿಳಿ ಸಮವಸ್ತ್ರ, ಆಕರ್ಷಕ ಡಾಲರ್ ಸಂಪಾದನೆ ಮತ್ತು ವಿಶ್ವ ಪರ್ಯಟನೆಯ ರೋಮಾಂಚನ ಆಕರ್ಷಣೆಯ ಹಿಂದೆ ನಮಗೆ ಗೋಚರಿಸದ ಕರಾಳ ಮತ್ತು ಕಠಿಣ ಸತ್ಯಗಳಡಗಿವೆ. ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ದಾಳಿಯಿಂದ ಇಬ್ಬರು ಭಾರತೀಯ ನಾವಿಕರು ಬಲಿಯಾಗಿರುವುದು ‘ಸಾಗರ ಯೋಧ’ರ ವೃತ್ತಿಯ ಭೀಕರತೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಇದನ್ನು ಓದಿದ್ದೀರಾ? ನಾವಿಕರ ಸಾವು, ಭಾರಿ ಸುಂಕದ ನಡುವೆ ಟ್ರಂಪ್ ಹೊಗಳಿಕೆಗೆ ಮಾರುಹೋದವೇ ಭಾರತೀಯ ಮಾಧ್ಯಮಗಳು?

ಮರ್ಚೆಂಟ್ ನೇವಿಯಲ್ಲಿ ಸಿಗುವ ಸಂಬಳ ಅತ್ಯಂತ ಆಕರ್ಷಕವಾದುದ್ದು. ಜೊತೆಗೆ ಇದು ತೆರಿಗೆ ಮುಕ್ತ ಆದಾಯ. ಹಾಗಾಗಿ ಈ ಉದ್ಯೋಗಕ್ಕೆ ಯುವಕರು ಆಕರ್ಷಿತರಾಗುತ್ತಾರೆ. ಜತೆಗೆ ವಿವಿಧ ದೇಶಗಳನ್ನು ಸಂದರ್ಶಿಸುವ, ವಿಭಿನ್ನ ಸಂಸ್ಕೃತಿ ಮತ್ತು ಜನರನ್ನು ಹತ್ತಿರದಿಂದ ನೋಡುವ ಅವಕಾಶವೂ ಈ ಉದ್ಯೋಗದಲ್ಲಿದೆ. ಅದರೊಂದಿಗೆ 4ರಿಂದ 6 ತಿಂಗಳು ಸತತ ಕೆಲಸ ಮಾಡಿದ ನಂತರ, ಅಷ್ಟೇ ಅವಧಿಯ ಸುದೀರ್ಘ ರಜೆ ಸಿಗುತ್ತದೆ. ಈ ಸಮಯದಲ್ಲಿ ಅವರು ಕಟುಂಬದೊಂದಿಗೆ ಕಾಲ ಕಳೆಯಬಹುದು. ಇಷ್ಟೆಲ್ಲ ಆಕರ್ಷಣೆಯ ನಡುವೆ ಕಠಿಣ ಸವಾಲುಗಳೂ ಇವೆ.

ಆಳ ಸಾಗರದ ನಾವಿಕರ ಕಠಿಣ ಸವಾಲುಗಳು

ಈ ಆಳ ಸಾಗರದ ಮೇಲೆ ತಿಂಗಳುಗಟ್ಟಲೆ ಕಾಲ ದೂಡುವ ನಾವಿಕರ ಬದುಕು ನಮ್ಮ-ನಿಮ್ಮ ಕಣ್ಣಿಗೆ ಸುಂದರವಾಗಿ ಕಾಣಬಹುದು. ಆದರೆ ಈ ನಾವಿಕರ ಬದುಕು ವಾಸ್ತವದಲ್ಲಿ ಅಷ್ಟೇ ಒಂಟಿತನ, ಅಪಾಯಗಳಿಂದ ಕೂಡಿದ್ದು. ವಿಶಾಲವಾದ ನೀಲಿ ಸಾಗರದ ಮಧ್ಯೆ ಕೇವಲ ಒಂದು ಹಡಗು, ಅದೇ ಪ್ರಪಂಚ, ಸಹೋದ್ಯೋಗಿಗಳೇ ಕುಟುಂಬ. ಸಾಗರದ ರಕ್ಕಸ ಅಲೆಗಳು, ಭೀಕರ ಚಂಡಮಾರುತದ ಆತಂಕ ಒಂದೆಡೆ, ಇನ್ನೊಂದೆಡೆ ಕಡಲ್ಗಳ್ಳರ ದಾಳಿ ಮತ್ತು ಕ್ಷಿಪಣಿ ದಾಳಿಗಳ ಭೀತಿ. ಹೀಗೆ ಈ ‘ಸಾಗರ ಯೋಧ’ರು ಪ್ರತಿಕ್ಷಣವೂ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕು.

ಇತ್ತೀಚಿನ ದಿನಗಳಲ್ಲಿ ಹಾರ್ಮುಜ್ ಜಲಸಂಧಿ, ಕೆಂಪು ಸಮುದ್ರ (Red Sea) ಮತ್ತು ಏಡೆನ್ ಗಲ್ಫ್‌ ಪ್ರಾಂತ್ಯಗಳು ಯುದ್ಧ ಪೀಡಿತ ವಲಯಗಳಾಗಿ ಬದಲಾಗಿವೆ. ಅಲ್ಲಲ್ಲಿ ಡ್ರೋನ್ ದಾಳಿಗಳು, ಕ್ಷಿಪಣಿ ದಾಳಿಗಳು ಮತ್ತು ಕಡಲ್ಗಳ್ಳರ ಭಯದ ನೆರಳಿನಲ್ಲೇ ಈ ನಾವಿಕರು ಪ್ರಯಾಣಿಸುವಂತಾಗಿದೆ. ಇವೆಲ್ಲವುದರ ನಡುವೆ ಈ ನಾವಿಕರು ತಿಂಗಳುಗಟ್ಟಲೆ ಕುಟುಂಬ, ಸ್ನೇಹಿತರಿಂದ ದೂರವಿರಬೇಕು. ಹಡಗಿನಲ್ಲಿ ಇಂಟರ್ನೆಟ್ ಸೌಲಭ್ಯವಿರುತ್ತದೆ. ಆದರೆ ಅದು ಸೀಮಿತವಾಗಿರುತ್ತದೆ. ಹಬ್ಬ ಹರಿದಿನಗಳು, ಕೌಟುಂಬಿಕ ತುರ್ತು ಸಂದರ್ಭಗಳು ಅಥವಾ ಪ್ರೀತಿಪಾತ್ರರ ಅಗಲಿಕೆಯ ಸಮಯದಲ್ಲೂ ತಕ್ಷಣ ಮನೆಗೆ ಮರಳಲು ಈ ನಾವಿಕರಿಗೆ ಸಾಧ್ಯವಾಗುವುದಿಲ್ಲ.

ಸಂಶೋಧನಾ ವರದಿಗಳು ಏನು ಹೇಳುತ್ತವೆ?

ಆಳ ಸಾಗರದಲ್ಲಿ ನಾವಿಕರು ಎದುರಿಸುವ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಹಲವು ಸಂಶೋಧನೆಗಳು ನಡೆದಿವೆ. ಕಾರ್ಡಿಫ್ ವಿಶ್ವವಿದ್ಯಾಲಯದ (Cardiff University Seafarers International Research Centre) ನಾವಿಕರ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ ನಡೆಸಿದ ಪ್ರಸಿದ್ಧ ಅಧ್ಯಯನದ ಪ್ರಕಾರ ಪ್ರಕಾರ, ಮರ್ಚೆಂಟ್ ನೇವಿಯಲ್ಲಿ ಕಾರ್ಯನಿರ್ವಹಿಸುವ ಶೇ.50ಕ್ಕಿಂತ ಅಧಿಕ ನಾವಿಕರು ತೀವ್ರವಾದ ಒಂಟಿತನ, ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ಹಾಗೆಯೇ ದೀರ್ಘಾವಧಿಯ ಶಿಫ್ಟ್‌ಗಳು ಮತ್ತು ಕೌಟುಂಬಿಕ ಸಂಪರ್ಕದ ಕೊರತೆಯು ನಾವಿಕರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಡಗುಗಳಲ್ಲಿ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆ ತೀರಾ ಕಳಪೆಯಾಗಿದೆ.

ಇದನ್ನು ಓದಿದ್ದೀರಾ? ಸುತ್ತಾಟ | ಕುದುರೆಮುಖದ ಕಣಿವೆಯಾಳದ ಕತ್ತಲಲ್ಲಿ ಮಿಂಚುಹುಳಗಳ ಬೆಳಕಿನ ನೃತ್ಯೋತ್ಸವ

ಇನ್ನು ಸೀಫೇರರ್ಸ್ ಹ್ಯಾಪಿನೆಸ್ ಇಂಡೆಕ್ಸ್ (Seafarers Happiness Index) ‘ಮಿಷನ್ ಟು ಸೀಫೇರರ್ಸ್’ (The Mission to Seafarers) ಸಂಸ್ಥೆಯು ತ್ರೈಮಾಸಿಕವಾಗಿ ಬಿಡುಗಡೆ ಮಾಡುವ ವರದಿಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಹಾರ್ಮುಜ್ ಮತ್ತು ಕೆಂಪು ಸಮುದ್ರದಂತಹ ಸಂಘರ್ಷ ವಲಯಗಳಲ್ಲಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿವೆ. ಇದರಿಂದಾಗಿ ನಾವಿಕರ ‘ಸುರಕ್ಷತೆಯ ಭಾವನೆ’ ತೀವ್ರವಾಗಿ ಕುಸಿದಿದೆ. ಒಪ್ಪಂದದ ಅವಧಿ ಮುಗಿದರೂ ಸಕಾಲಕ್ಕೆ ಹಡಗಿನಿಂದ ಇಳಿಯಲು ಸಾಧ್ಯವಾಗುತ್ತಿಲ್ಲ. ಇದು ನಾವಿಕರಲ್ಲಿ ನಿರಾಸೆ ಮತ್ತು ತೀವ್ರ ಆಯಾಸಕ್ಕೆ ಕಾರಣವಾಗುತ್ತಿದೆ.

ಭಾರತೀಯ ಯುವಕರು ಈ ಉದ್ಯೋಗವನ್ನೇ ಆಯ್ಕೆ ಮಾಡುತ್ತಿರುವುದೇಕೆ?

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ನಾವಿಕರ ಸಂಖ್ಯೆ ಅಭೂತಪೂರ್ವವಾಗಿ ಬೆಳೆದಿದೆ. 2010ರಲ್ಲಿ ಕೇವಲ 62,267ರಷ್ಟಿದ್ದ ಸಕ್ರಿಯ ಭಾರತೀಯ ನಾವಿಕರ ಸಂಖ್ಯೆ, 2024ರ ಹೊತ್ತಿಗೆ 3.08 ಲಕ್ಷಕ್ಕೂ ಅಧಿಕ ದಾಟಿದೆ. ಅಂದರೆ ಕಳೆದ ಒಂದೂವರೆ ದಶಕದಲ್ಲಿ ಭಾರತೀಯ ನಾವಿಕರ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ. ಇಂದು ಜಾಗತಿಕ ಹಡಗುಗಳ ಸಿಬ್ಬಂದಿಯಲ್ಲಿ ಸುಮಾರು 17% ರಿಂದ 20% ರಷ್ಟು ಮಂದಿ ಭಾರತೀಯರಾಗಿದ್ದಾರೆ.

ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಹೆಲ್ತ್ (IMH) ಮತ್ತು ಜಾಗತಿಕ ಮಾರುಕಟ್ಟೆ ಅಧ್ಯಯನಗಳ ಪ್ರಕಾರ ಮರ್ಚೆಂಟ್ ನೇವಿಗೆ ಸೇರುವ ಶೇ 90ರಷ್ಟು ‘ರೇಟಿಂಗ್ಸ್’ ಮತ್ತು ಸಾಮಾನ್ಯ ಸಿಬ್ಬಂದಿ ಭಾರತದ ಟೈರ್-2, ಟೈರ್-3 ನಗರಗಳಿಂದ ಹಾಗೂ ಗ್ರಾಮೀಣ ಭಾಗಗಳಿಂದ ಬಂದವರು. ಅಂದರೆ ಹೆಚ್ಚಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ಸೇರಿದವರು. ಭಾರತದ ಗ್ರಾಮೀಣ ಭಾಗದಲ್ಲಿ ಒಂದು ಕುಟುಂಬದ ಸರಾಸರಿ ಆದಾಯ ತಿಂಗಳಿಗೆ $100 (ಸುಮಾರು 8,000 ರೂ.) ಇದ್ದರೆ, ಮರ್ಚೆಂಟ್ ನೇವಿಯ ಆರಂಭಿಕ ಸಿಬ್ಬಂದಿಯೇ ತಿಂಗಳಿಗೆ ಕನಿಷ್ಠ $2,000 (ಸುಮಾರು 1.6 ಲಕ್ಷ ರೂ.) ಗಳಿಸುತ್ತಾರೆ. ಈ ಭಾರಿ ಆರ್ಥಿಕ ಜಿಗಿತವು ಯುವಕರನ್ನು ಆಕರ್ಷಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಡತನ.

ಬ್ರಿಟನ್‌ನ ಕಾರ್ಡಿಫ್ ವಿಶ್ವವಿದ್ಯಾಲಯ ನಡೆಸಿದ ಕಾರ್ಡಿಫ್ ವಿಶ್ವವಿದ್ಯಾಲಯದ ಸಂಶೋಧನಾ ವರದಿ ಪ್ರಕಾರ, “ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಮತ್ತು ಫಿಲಿಪೈನ್ಸ್‌ನಿಂದ ಮರ್ಚೆಂಟ್ ನೇವಿಗೆ ಸೇರುವ ಶೇಕಡ 70ಕ್ಕಿಂತ ಹೆಚ್ಚು ಯುವಕರು ಕೆಳ-ಮಧ್ಯಮ ವರ್ಗ ಅಥವಾ ಕಡು ಬಡತನದ ಹಿನ್ನೆಲೆಯಿಂದ ಬಂದವರು. ಇವರಲ್ಲಿ ಬಹುತೇಕರು ತಮ್ಮ ತಂದೆ-ತಾಯಿ ಮಾಡಿರುವ ಕೃಷಿ ಸಾಲವನ್ನು ತೀರಿಸಲು, ತಂಗಿಯ ಮದುವೆ ಮಾಡಲು ಅಥವಾ ಸ್ವಂತ ನಿವಾಸವನ್ನು ಹೊಂದುವ ಉದ್ದೇಶದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ದೇಶದ ದೇಶೀಯ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಅತಿ ಕಡಿಮೆ ಅವಧಿಯಲ್ಲಿ ಗಳಿಸಲು ಸಾಧ್ಯವಿಲ್ಲ ಎಂಬ ಆರ್ಥಿಕ ಅಸಹಾಯಕತೆಯೇ ಇವರನ್ನು ಆಳ ಸಾಗರದ ಅಪಾಯಕ್ಕೆ ದೂಡುತ್ತದೆ.”

ಸೂಕ್ತ ಭದ್ರತೆ ಮತ್ತು ಗೌರವ ಅತ್ಯಗತ್ಯ

ಸಮುದ್ರಮಾರ್ಗಗಳು ಜಾಗತಿಕ ಆರ್ಥಿಕತೆಯ ನಿಜವಾದ ಬೆನ್ನೆಲುಬು ಮತ್ತು ಬುನಾದಿ. ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ (IMO) ಮತ್ತು ವಿಶ್ವ ಬ್ಯಾಂಕ್ (World Bank) ನೀಡಿರುವ ಅಧಿಕೃತ ದತ್ತಾಂಶಗಳ ಪ್ರಕಾರ, ಇಂದು ಶೇ.90ರಷ್ಟು ವ್ಯಾಪಾರವು ಸಮುದ್ರ ಮಾರ್ಗಗಳ ಮೂಲಕವೇ ನಡೆಯುತ್ತವೆ. ಹಾಗಿದ್ದಾಗ ಸಾಗರದ ಮೇಲಿನ ಹಡಗುಗಳು ಒಂದು ಕ್ಷಣ ಸ್ತಬ್ಧಗೊಂಡರೂ ಇಡೀ ಜಗತ್ತಿನ ಆರ್ಥಿಕತೆ ನಿಂತ ನೀರಾಗುತ್ತದೆ ಎಂಬುದು ಖಚಿತ. 2021ರಲ್ಲಿ ‘ಎವರ್ ಗಿವೆನ್’ ಎಂಬ ಒಂದೇ ಒಂದು ಬೃಹತ್ ಸರಕು ಹಡಗು ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಾಗ, ಜಾಗತಿಕ ವ್ಯಾಪಾರಕ್ಕೆ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟವಾಗಿತ್ತು! ಇದು ಜಾಗತಿಕ ಆರ್ಥಿಕತೆ ಎಷ್ಟು ಸೂಕ್ಷ್ಮವಾಗಿ ಸಮುದ್ರ ಮಾರ್ಗದ ಮೇಲೆ ಅವಲಂಬಿತವಾಗಿದೆ ಎಂಬುದಕ್ಕೆ ಜ್ವಲಂತ ಉದಾಹರಣೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಈ ಬೃಹತ್ ಆರ್ಥಿಕ ಚಕ್ರದ ನಿಜವಾದ ಚಾಲಕರು ನಮ್ಮ ನಾವಿಕರು. ಅದರಲ್ಲೂ ಈ ಜಾಗತಿಕ ವ್ಯಾಪಾರದ ಚಕ್ರ ಉರುಳುವಂತೆ ಮಾಡುವಲ್ಲಿ ಭಾರತೀಯ ನಾವಿಕರ ಪಾತ್ರ ಅನನ್ಯ. ಹಾರ್ಮುಜ್‌ನಂತಹ ಅಪಾಯಕಾರಿ ಜಲಸಂಧಿಗಳಲ್ಲಿ ಪ್ರಾಣದ ಹಂಗು ತೊರೆದು ದುಡಿಯುವ ಈ ‘ಸಾಗರ ಯೋಧರು’ ಆಳ ಸಮುದ್ರದ ಕಣ್ಣೀರು ಮತ್ತು ಸವಾಲುಗಳನ್ನು ನುಂಗಿ ಜಗತ್ತಿಗೆ ಬೆಳಕಾಗುತ್ತಿದ್ದಾರೆ. ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಸೂಕ್ತ ಭದ್ರತೆ ಮತ್ತು ಗೌರವ ಸಿಗಬೇಕಿರುವುದು ಅತ್ಯಗತ್ಯ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿಐ ಪಾವತಿಗೆ ಶುಲ್ಕ; ಕೇಂದ್ರ ಸಚಿವರು ಪಿಕ್ ಪಾಕೆಟ್‌ನಲ್ಲಿ ಪಿಎಚ್‌ಡಿ: ಸಿಎಂ ಡಿ ಕೆ ಶಿವಕುಮಾರ್

"ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್...

SIR | ಒಂದೇ ಮತಗಟ್ಟೆಯಲ್ಲಿ ಶೇ. 62ರಷ್ಟು ಮತದಾರರ ಹೆಸರು ಡಿಲೀಟ್: ಚುನಾವಣಾ ಆಯೋಗಕ್ಕೆ ರಮೇಶ್ ಬಾಬು ದೂರು

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)...

ಹೆಸರಾಯಿತು ಕಲ್ಯಾಣ ಕರ್ನಾಟಕ; ಬದಲಾಗದ ಜನರ ಬದುಕು!

ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನ. ಒಂದು...