ಪಂಚಮಸಾಲಿ ಪೀಠಗಳ ಗೊಂದಲ- ಭಾಗ 19 | ಪಂಚಮಸಾಲಿ ಸಂಘಟನೆ ಮತ್ತು ಟ್ರಸ್ಟ್ ಗಳಲ್ಲಿ ಅವ್ಯವಸ್ಥೆ

Date:

ಹರಿಹರ ಟ್ರಸ್ಟ್ ಮತ್ತು ಪೀಠಗಳು ಹುಟ್ಟಿ ಅನೇಕ ದಶಕಗಳೆ ಕಳೆದಿದ್ದರೂ ಅವು ತಮ್ಮ ಉದ್ದೇಶಿತ ಗುರಿ ತಲುಪಲು ನಿರ್ಧಿಷ್ಟ ಕಾರ್ಯಯೋಜನೆ ಸಿದ್ಧಪಡಿಸಿಲ್ಲ ಎನ್ನುವುದು ಹೆಜ್ಜೆ ಹೆಜ್ಜೆಗೆ ರುಜುವಾತಾಗುತ್ತಾ ಬಂದಿದೆ. ಟ್ರಸ್ಟ್ ಮತ್ತು ಪೀಠಗಳು ತಮ್ಮ ಉದ್ದೇಶಿತ ಹಾದಿಯಲ್ಲಿ ಸಾಗುವುದು ಇನ್ನಷ್ಟು ತಡವಾದರೂ ಪರವಾಗಿಲ್ಲ, ಆದರೆ ಟ್ರಸ್ಟ್ ಮತ್ತು ಪೀಠಗಳು ಸ್ಥಾಪನೆಯಾಗಿದ್ದು ವೀರಶೈವ ಪಂಚಪೀಠಗಳಿಂದ ಪಂಚಮಸಾಲಿ ಉಪವರ್ಗವನ್ನು ವಿಮೋಚನೆಗೊಳಿಸುವ ಕಠಿಣ ಮಾರ್ಗಸೂಚಿ ಅನುಸರಿಸದೆ ಇರುವುದು ದುರಂತದ ಸಂಗತಿ.

- Advertisement -

ಪಂಚಮಸಾಲಿ ಸಂಘಟನೆಯೂಯು ಆ ಉಪವರ್ಗದ ಒಂದು ಸಂಪೂರ್ಣ ರಾಜಕೀಯ ಶಕ್ತಿ ಪ್ರದರ್ಶನದ ಉದ್ದೇಶ ಹೊಂದಿತ್ತೇ ಹೊರತು ಬಡ ಪಂಚಮಸಾಲಿ ಜನರ ಕ್ಷೇಮಾಭಿವೃದ್ಧಿಯ ಉದ್ದೇಶ ಹೊಂದಿದಂತೆ ಕಾಣುವುದಿಲ್ಲ. ಸಂಘಟನೆ ಕಟ್ಟುವ ಚರ್ಚೆ ಆರಂಭವಾಗಿದ್ದೇ ಪಂಚಮಸಾಲಿ ಉಪವರ್ಗದ ಶಾಸಕರ ಮತ್ತು ಸಂಸದರ ಸಂಖ್ಯೆಯ ಸುತ್ತ ಎನ್ನುವುದು ನಿರ್ವಿವಾದ. ಸಂಘಟನೆ ಮಾಡಲು ಸೇರಿದವರಲ್ಲಿ ಬಹುತೇಕರಿಗೆ ಪಂಚಮಸಾಲಿ ಸಮುದಾಯದ ಆರ್ಥಿಕ, ಶೈಕ್ಷಣಿಕ ಹಾಗು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಮಾಹಿತಿಯಾಗಲಿ, ಕಾಳಜಿಯಾಗಲಿ ಇರಲಿಲ್ಲ. ಸಂಘಟನೆ ಆರಂಭಗೊಂಡ ಆ ಸಮಯದಿಂದ ಇಲ್ಲಿಯ ವರೆಗೆ ಸಂಘಟನೆಯಿಂದ ಸಾಮಾನ್ಯ ಪಂಚಮಸಾಲಿ ಜನರಿಗೆ ಆದ ಉಪಯೋಗವೇನು ಎಂದರೆ ಏನೂ ಇಲ್ಲ ಎನ್ನುವುದೇ ಉತ್ತರ. ಆದರೆ ಸಂಘಟನೆಯ ಮುಂಚೂಣಿಯಲ್ಲಿದ್ದ ನಾಯಕರು ಮತ್ತು ಪೀಠಗಳ ಮುಖ್ಯಸ್ಥರ ಆರ್ಥಿಕ ಸ್ಥಿತಿಗತಿಯಲ್ಲಾದ ಏರಿಕೆಯನ್ನು ಸ್ಪಷ್ಟವಾಗಿ ಕಾಣಬಹುದು. ಮುಂಚೂಣಿ ರಾಜಕಾರಣಿಗಳು ತಮ್ಮ ತಮ್ಮ ಪಕ್ಷವನ್ನು ಹೆದರಿಸಿ ರಾಜಕೀಯ ಸ್ಥಾನಮಾನ ಪಡೆದವರೆ, ಅಂಥವರು ಕುಟುಂಬದ ಆರ್ಥಿಕ ಸ್ಥಿತಿಗತಿಗಳು ಕೂಡ ಗಮನಾರ್ಹವಾಗಿ ಪ್ರಗತಿ ಕಂಡಿವೆ. ಇದನ್ನು ನೋಡಿ ನಮ್ಮವರು ಶಾಸಕ, ಸಂಸದ, ಮಂತ್ರಿಗಳಾದರೆಂದು ಒಣ ಋಷಿ ಪಟ್ಟದ್ದು ಬಿಟ್ಟರೆ ಸಾಮಾನ್ಯ ಪಂಚಮಸಾಲಿ ಜನರು ಪಡೆದಿದ್ದು ಸೊನ್ನೆ. ಟ್ರಸ್ಟ್ ಮತ್ತು ಪೀಠಳಿಗೆ ಅಪಾರ ಪ್ರಮಾಣದ ದೇಣಿಗೆ ನೀಡಿ ಸೋತವರು ಸಾಮಾನ್ಯ ಪಂಚಮಸಾಲಿ ಜನರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ವಿಶೇಷವಾಗಿ ಹರಿಹರ ವೀರಶೈವ ಪಂಚಮಸಾಲಿ ಟ್ರಸ್ಟ್ ನ ಇತ್ತೀಚಿನ ಬೆಳವಣಿಗೆಗಳನ್ನು ತಾವೆಲ್ಲಾ ಗಮನಿಸಿರುತ್ತೀರಿ. ಅಲ್ಲಿ ನಡೆಯುತ್ತಿರುವ ಹೈಡ್ರಾಮಾಗಳು, ಲೆಕ್ಕ ಕೊಡಿ ಅಭಿಯಾನ, ಪೀಠದ ಆವರಣದಲ್ಲಿನ ಗಲಾಟೆಗಳು ಇವು ಪಂಚಮಸಾಲಿ ಉಪವರ್ಗದ ಮಾನ, ಯರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದು ಮಾತ್ರವಲ್ಲ ಅದು ಇಡೀ ಲಿಂಗಾಯತ ಸಮಾಜ ತಲೆ ಎತ್ತಿ ತಿರುಗದಂತೆ ಮಾಡಿದೆ‌. ಅಲ್ಲಿನ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಮತ್ತೊಂದು ಗುಂಪು ಮಾಡುತ್ತಿರುವ ಗಲಾಟೆ ಸ್ಪಷ್ಟವಾಗಿ ಅಲ್ಲಿ ಅನೇಕ ಪ್ರತ್ಯೇಕ ಗುಂಪುಗಳಿದ್ದು ಅವೆಲ್ಲ ಅನಾರೋಗ್ಯಕರ ಗುಂಪುಗಾರಿಕೆಯಲ್ಲಿ ತೊಡಗಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆ ಟ್ರಸ್ಟ್ ಹಾಗು ಪೀಠಕ್ಕೆ ಅಪಾರ ದೇಣಿಗೆ ಕೊಟ್ಟು ಬೆಳೆಸಿರುವ ಶ್ರಮಿಕ ವರ್ಗದ ಮುಗ್ಧ, ಅಮಾಯಕ, ಸಾಮಾನ್ಯ ಪಂಚಮಸಾಲಿ ಜನರು ಮೂಕವಾಗಿ ಈ ಅಹಿತಕರ ಬೆಳವಣಿಗೆಗಳನ್ನು ನೋಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಿಂದ ಹರಿಹರ ಟ್ರಸ್ಟ್ ಗುಂಪುಗಾರಿಕೆ, ಗಲಾಟೆ, ಮತ್ತು ಹಗರಣಗಳಿಂದ ತುಂಬಿಹೋಗಿದೆ. ಟ್ರಸ್ಟ್ ಆರಂಭವಾದಾಗಿನಿಂದ ಪಂಚಮಸಾಲಿ ಸಮಾಜ ಸಂಘಟನೆ ನಡೆದಿದೆಯಾ, ನಡೆದಿದ್ದರೆ ಯಾವ ರೀತಿಯಲ್ಲಿ ನಡೆದಿದೆ, ಟ್ರಸ್ಟ್ ವತಿಯಿಂದ ಪಂಚಮಸಾಲಿ ಉಪವರ್ಗಕ್ಕೆ ಪ್ರಯೋಜನವಾಗುವ ಯಾವ, ಯಾವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಮುಂತಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳನ್ನು ಆರಂಭದಲ್ಲಿಯೇ ಕೇಳಬೇಕಾದ ಭಿನ್ನಮತೀಯ ಗುಂಪು ತನ್ನ ಜವಾಬ್ದಾರಿ ಮರೆತಿದೆ.

ಹರಿಹರ ಪಂಚಮಸಾಲಿ ಟ್ರಸ್ಟ್ ಬಹುತೇಕ ಸದಸ್ಯರು ಅದು ವೀರಶೈವ ವಿಶೇಷಣದಿಂದ ಅಲಂಕಾರಗೊಂಡಿದ್ದಕ್ಕೊ ಏನೊ ಪಂಚಮಸಾಲಿ ಉಪವರ್ಗಕ್ಕಿಂತ ವೀರಶೈವ ಪಂಚಪೀಠಗಳಿಗೆ ಹೆಚ್ಚು ನಿಷ್ಠರು ಎನ್ನಲು ಅನೇಕ ಘಟನೆಗಳನ್ನು ಉದಾಹರಣೆಯಾಗಿ ಕೊಡಬಹುದು. ಬಸವರಾಜ್ ದಿಂಡೂರ್ ಅವರು ಅನೇಕ ವೇಳೆ ಬಸವಣ್ಣನವರ ಮೂಲದ ಕುರಿತು ಎಡಬಿಡಂಗಿ ಹೇಳಿಕೆ ನೀಡಿರುವುದು, ಕಳೆದ ವಾರದ ಹಿಂದೆ ಉಮಾಪತಿಯವರು ಬೆಂಗಳೂರಿನಲ್ಲಿ ವೀರಶೈವ ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಮಠದ ಸ್ವಾಮಿಯನ್ನು ಭೇಟಿಯಾಗಿದ್ದು, ಈ ಟ್ರಸ್ಟ್ ನ ಅವ್ಯವಹಾರಗಳನ್ನು ಈಗ ಪ್ರಶ್ನಿಸುತ್ತಿರುವ ಮಾಜಿ ಶಾಸಕ ಶಿವಶಂಕರ ಕುಟುಂಬ ಯಾವತ್ತೂ ರಂಭಾಪುರಿ ಮಠದ ಭಕ್ತರಾಗಿದ್ದದ್ದು, ಹೀಗೆ ಅನೇಕ ವೇಳೆ ವೀರಶೈವ ಪಂಚಪೀಠಗಳೊಂದಿಗೆ ಈ ಟ್ರಸ್ಟ್ ನವರ ಒಡನಾಟ ಒಂದು ದೊಡ್ಡ ಸಂಶಯಕ್ಕೆ ಎಡೆಮಾಡುತ್ತದೆ. ಈ ಪೀಠದ ಇಂದಿನ ಉಚ್ಛಾಟಿತ ಸ್ವಾಮಿ ಲಿಂಗಾಯತ ವಿರೋಧಿ, ಬಸವ ವಿರೋಧಿ ಮಠಾಧೀಶರೊಂದಿಗೆ ಕೈಜೋಡಿಸಿರುವುದೂ ಕಾಕತಾಳಿಯವಲ್ಲ. ಟ್ರಸ್ಟ್ ಮುನ್ನಡೆಸುವ ಮುಖಂಡರು ಪಂಚಮಸಾಲಿ ಸಂಘಟನೆಯನ್ನು ಹಾಗು ಪೀಠವನ್ನು ಉಪವರ್ಗದ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದೆ ಎನ್ನುವ ಮೂಲಭೂತ ಉದ್ದೇಶವನ್ನೆ ಮರೆತಂತಿದೆ. ಮೇಲಾಗಿ ಈ ಟ್ರಸ್ಟ್ ‌ಮತ್ತು ಪೀಠ ಸ್ಥಾಪನೆಯಾಗಿದ್ದು ಪಂಚಮಸಾಲಿ ಉಪವರ್ಗವನ್ನು ವೀರಶೈವ ಪಂಚಪೀಠಗಳಿಂದ ಬಿಡುಗಡೆ ಮಾಡಲು ಎನ್ನುವುದನ್ನು ಇವರಿಗೆ ಯಾರೂ ಜ್ಞಾಪಿಸುತ್ತಿಲ್ಲ.

ಹರಿಹರ ಟ್ರಸ್ಟ್ ಮತ್ತು ಪೀಠಗಳು ಹುಟ್ಟಿ ಅನೇಕ ದಶಕಗಳೆ ಕಳೆದಿದ್ದರೂ ಅವು ತಮ್ಮ ಉದ್ದೇಶಿತ ಗುರಿ ತಲುಪಲು ನಿರ್ಧಿಷ್ಟ ಕಾರ್ಯಯೋಜನೆ ಸಿದ್ಧಪಡಿಸಿಲ್ಲ ಎನ್ನುವುದು ಹೆಜ್ಜೆ ಹೆಜ್ಜೆಗೆ ರುಜುವಾತಾಗುತ್ತಾ ಬಂದಿದೆ. ಟ್ರಸ್ಟ್ ಮತ್ತು ಪೀಠಗಳು ತಮ್ಮ ಉದ್ದೇಶಿತ ಹಾದಿಯಲ್ಲಿ ಸಾಗುವುದು ಇನ್ನಷ್ಟು ತಡವಾದರೂ ಪರವಾಗಿಲ್ಲ, ಆದರೆ ಟ್ರಸ್ಟ್ ಮತ್ತು ಪೀಠಗಳು ಸ್ಥಾಪನೆಯಾಗಿದ್ದು ವೀರಶೈವ ಪಂಚಪೀಠಗಳಿಂದ ಪಂಚಮಸಾಲಿ ಉಪವರ್ಗವನ್ನು ವಿಮೋಚನೆಗೊಳಿಸುವ ಕಠಿಣ ಮಾರ್ಗಸೂಚಿ ಅನುಸರಿಸದೆ ಇರುವುದು ದುರಂತದ ಸಂಗತಿ. ಪಂಚಮಸಾಲಿ ಉಪವರ್ಗವನ್ನು ವೀರಶೈವ ಪಂಚಪೀಠಗಳು ಯಾವ ರೀತಿಯಲ್ಲಿ ಹಿಡಿದಿಟ್ಟುಕೊಂಡಿದ್ದವೆಂದರೆ ಇಂದಿಗೂ ದಾವಣಗೆರೆ ಆ ಕಡೆಗೆ ಪಂಚಮಸಾಲಿಗಳನ್ನು ಪಂಚಪೀಠದವರು ಎಂದು ಗುರುತಿಸಿಕೊಳ್ಳುವಂತೆ ಭ್ರಮೆ ಹುಟ್ಟಿಸಲಾಗಿದೆ. ಇದುವರೆಗೆ ಈ ಟ್ರಸ್ಟ್ ಮಧ್ಯ ಕರ್ನಾಟಕ ಭಾಗದಲ್ಲಿ ಒಂದು ದೊಡ್ಡ ಸಂಘಟನೆಯಾಗಿ ಬೆಳೆಯಬೇಕಿತ್ತು, ಅದರಡಿಯಲ್ಲಿ ಕನಿಷ್ಠ ತಾಲೂಕಿಗೆ ಒಂದಾದರೂ ಉಚಿತ ಪ್ರಸಾದ ನಿಲಯಗಳು ತಲೆ ಎತ್ತಬೇಕಾಗಿತ್ತು. ಪೀಠದ ಶಾಖೆಗಳು ಇಡೀ ಮಧ್ಯೆ ಕರ್ನಾಟಕದ ಪ್ರತಿ ಹೋಬಳಿ ಕೇಂದ್ರದಲ್ಲಿ ಸ್ಥಾಪನೆಯಾಗಿ ಪಂಚಮಸಾಲಿ ಜನರಿಗೆ ಲಿಂಗಾಯತ ಧಾರ್ಮಿಕ ಆಚರಣೆಗಳು ಅನುಸರಿಸುವಂತೆ ಸಿದ್ಧಗೊಳಿಸಬಹುದಿತ್ತು. ಆದರೆ ಟ್ರಸ್ಟ್ ಮತ್ತು ಪೀಠ ಎರಡೂ ಈ ವಿಷಯದಲ್ಲಿ ಏನೂ ಮಾಡಲಿಲ್ಲ ಎನ್ನುವುದು ಬೇಸರದ ಸಂಗತಿ.

ಪಂಚಮಸಾಲಿ ಉಪವರ್ಗಕ್ಕೆ ಎರಡು ಟ್ರಸ್ಟ್ ಮತ್ತು ಪೀಠಗಳು ಆಗಬಾರದಿತ್ತು. ಪಂಚಮಸಾಲಿಗಳು ಸಂಘಟಿತರಾಗಿ ಪ್ರತ್ಯೇಕ ಪೀಠ ಮಾಡಬೇಕೆಂದು ಚಟುವಟಿಕೆ ಆರಂಭಿಸಿದಾಗ ಅಂದು ಹೆಚ್ಚು ವಿಚಲಿತಗೊಂಡವರು ವೀರಶೈವ ಪಂಚಪೀಠದವರು. ಆ ಸಮಯದಲ್ಲಿ ಪಂಚಪೀಠಗಳಲ್ಲಿ ಒಂದು ಪೀಠವನ್ನು ಪಂಚಮಸಾಲಿ ಉಪವರ್ಗಕ್ಕೆ ಬಿಟ್ಟುಕೊಡುವಂತೆ ವೀರಶೈವರಿಗೆ ಕೇಳಲಾಗಿತ್ತು. ಆದರೆ ಪಂಚಾಚಾರ್ಯರು ಅದಕ್ಕೆ ಸಿದ್ಧರಾಗಲಿಲ್ಲ. ಒಂದು ಪೀಠ ಕೊಡದಿದ್ದರೆ ಹೋಗಲಿ ಪಂಚಮಸಾಲಿ ಪೀಠ ಮಾಡುವುದೆ ಪಂಚಾಚಾರ್ಯರಿಗೆ ಬೇಕಿರಲಿಲ್ಲ. ಪಂಚಮಸಾಲಿ ಪೀಠಗಳ ಸ್ಥಾಪನೆ ತಡೆಯುವಲ್ಲಿ ವಿಫಲವಾದ ನಂತರ ವೀರಶೈವರು ತುಂಬಾ ಜಾಣತನದಿಂದ ಆಟ ಆಡಿದರು. ಕಳೆದ ವಾರ ಬಿ. ಸಿ. ಉಮಾಪತಿಯವರು ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಭಾಪುರಿ ಪೀಠದ ಮಠದಲ್ಲಿ ಸ್ವಾಮಿಯನ್ನು ಭೇಟಿ ಆಗಿದ್ದು ಅನುಮಾನಕ್ಕೆ ಕಾರಣವಾಗುವ ನಡೆ. ಪಂಚಮಸಾಲಿ ಪೀಠ ಆರಂಭಿಸುವ ಸಮಯದಲ್ಲಿ ದಾವಣಗೆರೆಯಲ್ಲಿ ಪಂಚಮಸಾಲಿ ಮುಖಂಡರು ಮತ್ತು ಪಂಚಾಚಾರ್ಯರ ನಡುವೆ ನಡೆದ ಘರ್ಷಣೆಯನ್ನು ಉಮಾಪತಿಯವರು ಮರೆತದ್ದು ವಿಪರ್ಯಾಸ. ಅವರೊಬ್ಬ ವ್ಯಕ್ತಿಯಾಗಿ, ಉದ್ಯಮಿಯಾಗಿ ಭೇಟಿಯಾದರೆ ಆಕ್ಷೇಪಣೆ ಇಲ್ಲ. ಆದರೆ ಪಂಚಮಸಾಲಿಗಳಿಗೆ ತಮ್ಮದೇ ಪೀಠಗಳು ಇರುವಾಗ, ಮತ್ತು ಈಗ ಪೀಠ ಹಾಗು ಟ್ರಸ್ಟ್ ನಲ್ಲಿ ಗಲಾಟೆ ನಡೆಯುತ್ತಿರುವಾಗ ಈ ಭೇಟಿ ಅಗತ್ಯವಿರಲಿಲ್ಲ.

ಹರಿಹರ ಪಂಚಮಸಾಲಿ ಪೀಠ ಮತ್ತು ಟ್ರಸ್ಟ್ ಹಾಗು ಕೂಡಲಸಂಗಮ ಪಂಚಮಸಾಲಿ ಪೀಠ ಮತ್ತು ಟ್ರಸ್ಟ್ ಎರಡು ಆರಂಭದಿಂದ ಪ್ರತ್ಯೇಕ ಅಸ್ಥಿತ್ವ ಇಟ್ಟುಕೊಂಡಿವೆ. ಆದರೆ ಇಡೀ ಪಂಚಮಸಾಲಿ ಉಪವರ್ಗದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡೂ ಪೀಠಗಳ ಸ್ವಾಮಿಗಳು ಒಂದಾಗಲಿಲ್ಲ. ಒಬ್ಬ ಸ್ವಾಮಿಯ ಬೆನ್ನಿಗಿರುವ ರಾಜಕಾರಣಿ ಮತ್ತೊಬ್ಬ ಸ್ವಾಮಿಯನ್ನು ಹೇಯವಾಗಿ ಟೀಕಿಸುವ ಕೃತ್ಯಗಳು ಉದ್ದಕ್ಕೂ ನಡೆದಿವೆ. ಹೀಗೆ ಒಂದು ಪೀಠದ ಸ್ವಾಮಿಯ ಹಿಂದೆ ಒಬ್ಬ ಪುಢಾರಿ, ಮತ್ತೊಂದು ಪೀಠದ ಸ್ವಾಮಿಯ ಹಿಂದೆ ಮತ್ತೊಬ್ಬ ಪುಢಾರಿ, ಸದಾ ಒಬ್ಬರ ವಿರುದ್ಧ ಮತ್ತೊಬ್ಬರು ಪರಸ್ಪರ ಕೆಸರೆರಚುವ ಕೃತ್ಯಗಳು ಇಡೀ ಪಂಚಮಸಾಲಿ ಲಿಂಗಾಯತ ಸಮಾಜ ತಲೆ ತಗ್ಗಿಸುವಂತೆ ಮಾಡಿವೆ. ವಿಶೇಷವೆಂದರೆ ಹರಿಹರ ಪಂಚಮಸಾಲಿ ಟ್ರಸ್ಟ್ ಹಾಗು ಪೀಠ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ನಡೆದ ಹೋರಾಟದ ಪರವಾಗಿರಲಿಲ್ಲ ಎನ್ನುವುದು. ಹರಿಹರ ಪೀಠದಿಂದ ಇತ್ತೀಚಿಗೆ ಉಚ್ಛಾಟನೆಗೊಂಡ ಸ್ವಾಮಿಯಂತೂ ಎಂದು ಲಿಂಗಾಯತ ಧರ್ಮದ ತತ್ವಗಳನ್ನು ಪ್ರಚಾರ ಮಾಡಲಿಲ್ಲ, ಪಂಚಮಸಾಲಿ ಮುಗ್ಧ ಜನರಿಗೆ ಯಾವುದೆ ಧರ್ಮೋಪದೇಶ ಮಾಡಲಿಲ್ಲ. ಬದಲಾಗಿ ಬಸವಾದಿ ಶರಣರು ತೀವ್ರವಾಗಿ ವಿರೋಧಿಸಿದ ವೈದಿಕ ಮೌಢ್ಯಗಳನ್ನು ತಲೆ ಮೇಲೆ ಹೊತ್ತು ಮೆರೆಸುವ ಕಾರ್ಯಗಳಲ್ಲಿ ಮಗ್ನರಾದರು ಮತ್ತು ಬಸವ ತತ್ವದ ಪರವಾಗಿರುವ ಮಠಾಧೀಶರನ್ನು ವಿರೋಧಿಸುವ ಫ್ರಿಂಜ್ ಎಲೆಮೆಂಟ್ ಗಳೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ.

ಮುಂದುವರೆಯುವುದು..

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...