ಪರವಾನಗಿ ಇಲ್ಲದೆಯೇ 900 ವಿಮಾನಗಳನ್ನು ಹಾರಿಸಿದ್ದ ಪೈಲಟ್ ಬಂಧನ

Date:

ಏರ್ ಕೆನಡಾದ ಮಾಜಿ ಪೈಲಟ್ ಒಬ್ಬರು ದೊಡ್ಡ ಪ್ರಯಾಣಿಕರ ವಿಮಾನಗಳನ್ನು ಚಲಾಯಿಸಲು ಅಗತ್ಯವಿರುವ ಪರವಾನಗಿ (ಲೈಸೆನ್ಸ್) ಇಲ್ಲದೆಯೇ ನೂರಾರು ವಾಣಿಜ್ಯ ವಿಮಾನಗಳನ್ನು ಹಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 17 ವರ್ಷಗಳ ಕಾಲ ಬೃಹತ್ ವಿಮಾನಗಳನ್ನು ಹಾರಿಸಿದ್ದ  ಪೈಲಟ್ ಜಾಫ್ರಿ ವಾಲ್ ಅವರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

- Advertisement -

ನಾಲ್ಕು ತಿಂಗಳ ಸುದೀರ್ಘ ತನಿಖೆಯ ನಂತರ ಒಂಟಾರಿಯೊದ ಪೀಲ್ ಪೊಲೀಸರು, ಒಂಟಾರಿಯೊದ ಬ್ಯಾರಿ ನಿವಾಸಿಯಾದ ಜಾಫ್ರಿ ವಾಲ್ (59) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಅಧಿಕಾರಿಗಳ ಪ್ರಕಾರ, ವಾಲ್ ಅವರು 2009ರಿಂದ 2025ರವರೆಗೆ ವಿಮಾನಯಾನ ಸಂಸ್ಥೆಯ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ, ಅವರು ವಾಣಿಜ್ಯ ವಿಮಾನಗಳ ಕ್ಯಾಪ್ಟನ್‌ಗಳಿಗೆ ಕಡ್ಡಾಯವಾಗಿ ಬೇಕಾಗುವ ಅತ್ಯುನ್ನತ ಮಟ್ಟದ ‘ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಲೈಸೆನ್ಸ್’ (ATPL) ಇಲ್ಲದೆಯೇ 900ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಹಾರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಇದೀಗ, ಜೂನ್ 1ರಂದು ಜಾಫ್ರಿ ವಾಲ್ ಅವರನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ವಾಲ್ ಅವರು ಮಾನ್ಯವಾದ ವಾಣಿಜ್ಯ ಪೈಲಟ್ ಪರವಾನಗಿಯನ್ನು ಹೊಂದಿದ್ದರು. ಆದರೆ, ಅವರ ಹುದ್ದೆಗೆ ಅಗತ್ಯವಿರುವ ATPLಅನ್ನು ಹೊಂದಿರಲಿಲ್ಲ. ಅವರು ಹಲವಾರು ವರ್ಷಗಳ ಕಾಲ ಏರ್ ಕೆನಡಾ ಮತ್ತು ಕೆನಡಾದ ವಿಮಾನಯಾನ ಅಧಿಕಾರಿಗಳಿಗೆ ತಮ್ಮ ಅರ್ಹತೆಯ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿ, ವಂಚಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇತ್ತೀಚೆಗೆ, ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ವಾಲ್‌ ಅವರಿಗೆ ಸಂಬಂಧಿಸಿದಂತೆ ಕೆಲವು ಅನುಮಾನಾಸ್ಪದ ಸಂಗತಿಗಳು ಬೆಳಕಿಗೆ ಬಂದಿವೆ. ಬಳಿಕ, ಕೆನಡಾದ ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ‘ಟ್ರಾನ್ಸ್‌ಪೋರ್ಟ್ ಕೆನಡಾ’ ಪೊಲೀಸರನ್ನು ಸಂಪರ್ಕಿಸಿದ್ದು, ತನಿಖೆ ನಡೆಸಿದೆ. ವಾಲ್ ಅವರು ತಮ್ಮ ಪೈಲಟ್ ದಾಖಲೆಗಳು ಕಳ್ಳತನವಾಗಿವೆ ಎಂದು ಸುಳ್ಳು ದೂರನ್ನು ಸಹ ದಾಖಲಿಸಿದ್ದರು. ಆದರೆ, ಅವರು 2025ರಲ್ಲಿ ನಿವೃತ್ತರಾಗುವ ಮುನ್ನ ತಮ್ಮ ಅರ್ಹತೆಗಳ ಬಗ್ಗೆ ವಿಮಾನಯಾನ ಸಂಸ್ಥೆ ಮತ್ತು ನಿಯಂತ್ರಕರನ್ನು ವಂಚಿಸಿದ್ದಾರೆ ಎಂಬುದಕ್ಕೆ ಪುರಾವೆಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್

ವಾಲ್ ವಿರುದ್ಧ ಒಂದು ವಂಚನೆ ಪ್ರಕರಣ, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಎರಡು ಪ್ರಕರಣಗಳು, ನಕಲಿ ಟ್ರೇಡ್‌ಮಾರ್ಕ್ ಹೊಂದಿದ್ದ ಮೂರು ಪ್ರಕರಣಗಳು ಹಾಗೂ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ ಒಂದು ಪ್ರಕರಣವನ್ನು ದಾಖಲಿಸಲಾಗಿದೆ.

ನಕಲಿ ದಾಖಲೆಗಳನ್ನು ಬಳಸಿಕೊಂಡು ಅವರು ಏರ್ ಕೆನಡಾದ ಅತಿ ದೊಡ್ಡ ಬೋಯಿಂಗ್ ಜೆಟ್‌ಗಳಾದ 787, 777 ಹಾಗೂ 767 ವಿಮಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಒಟ್ಟು 29 ಲಕ್ಷ ಡಾಲರ್ (ಸುಮಾರು 24 ಕೋಟಿ ರೂಪಾಯಿ) ಸಂಬಳ ಗಳಿಸಿದ್ದಾರೆ ಎಂದು ಡೆಪ್ಯುಟಿ ಚೀಫ್ ನಿಕ್ ಮಿಲಿನೋವಿಚ್ ತಿಳಿಸಿದ್ದಾರೆ. ಸದ್ಯ ಈ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದಲ್ಲಿ ಗ್ಯಾನೇಶ್‌ ಕುಮಾರ್ ಏಕಪಕ್ಷೀಯ ನಿರ್ಧಾರ; ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ...

ವಿಜಯಪುರ ಪೊಲೀಸರ ಕಾರ್ಯಾಚರಣೆ: ರೂ. 1.07 ಕೋಟಿ ಮೌಲ್ಯದ 537 ಮೊಬೈಲ್ ಪತ್ತೆ!

ಸಾರ್ವಜನಿಕರು ಕಳೆದುಕೊಂಡಿದ್ದ, ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ...

ಕಿವೀಸ್ ಬಗ್ಗುಬಡಿದ ಭಾರತ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ, 3-0 ಅಂತರದಲ್ಲಿ ಸರಣಿ ಕೈವಶ

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ಹೆನ್ರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ ಆತಿಥೇಯ ನ್ಯೂಜಿಲೆಂಡ್...

ಬೀದರ್‌ | ಬಿಸಿಲಿನ ತಾಪ ಹೆಚ್ಚಳ: ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಲು ಸಿಇಒ ಸಲಹೆ

ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆರೋಗ್ಯದ...