ಪ್ರವಾಸಿಗರ ಮೇಲೆ ಅತ್ಯಾಚಾರ: ಕಾಮುಕರ ವಿಕೃತಿಗೆ ಮಹಿಳೆ ಮಾತ್ರವಲ್ಲ ದೇಶದ ಪ್ರತಿಷ್ಠೆಯೂ ಬಲಿ

Date:

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಬಿಡುಗಡೆ ಮಾಡಿದ ದಾಖಲೆ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. 2021ರಲ್ಲಿ 14 ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಈ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಭಾರತವು ಜಗತ್ತಿಗೆ ‘ಅತಿಥಿ ದೇವೋ ಭವ’ (ಅತಿಥಿಯೇ ದೇವರು) ಎಂಬ ಸಂಸ್ಕೃತಿಯನ್ನು ಪರಿಚಯಿಸಿದ ದೇಶ. ಆದರೆ ನಮ್ಮ ದೇಶದಲ್ಲಿ ಸದ್ಯ ನಡೆಯುತ್ತಿರುವುದೇನು? ಅತಿಥಿಗಳನ್ನು ನಮ್ಮವರು ಕನಿಷ್ಠ ಮನುಷ್ಯರನ್ನಾಗಿಯಾದರೂ ಕಾಣುತ್ತಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಅತಿಥಿ ಬಿಡಿ ಕನಿಷ್ಠ ಅವರೂ ಮನುಷ್ಯರು ಎಂದು ಕಾಣುತ್ತಿದ್ದರೆ ನಮ್ಮಲ್ಲಿ ಪ್ರವಾಸಿಗರ ಮೇಲೆ ಅತ್ಯಾಚಾರ ನಡೆಯುತ್ತಿರಲಿಲ್ಲ. ವಿದೇಶಿಯರ ಕಣ್ಣಿನಲ್ಲಿ ಭಾರತ ಮಹಿಳೆಯರಿಗೆ ‘ಸುರಕ್ಷಿತವಲ್ಲದ ದೇಶ’ ಎಂದೆನಿಸಿಕೊಳ್ಳುವ ಮಟ್ಟಿಗೆ ತಲುಪಿದೆ!

- Advertisement -

ಹಂಪಿ, ಕೊಡಗು, ಗೋವಾ, ಜಾರ್ಖಂಡ್ – ಹೀಗೆ ಕಳೆದ ಹಲವು ವರ್ಷಗಳಿಂದ ದೇಶದಲ್ಲಿ ಪ್ರವಾಸಕ್ಕೆ ಬಂದ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಭೀಭಿತ್ಸ ಕೃತ್ಯಗಳು ನಡೆದಿವೆ. ಪ್ರವಾಸಿಗರ ಮೇಲೆ ನಡೆದ ಈ ಕೃತ್ಯಗಳು ದೇಶದಲ್ಲಿ ಮಾತ್ರವಲ್ಲ ಜಾಗತಿಕವಾಗಿ ಸದ್ದು ಮಾಡಿವೆ. ಕಾಮುಕರ ಈ ವಿಕೃತಿಗೆ ಮಹಿಳೆಯರು ಮಾತ್ರವಲ್ಲ ದೇಶದ ಪ್ರತಿಷ್ಠೆಯೂ ಬಲಿಯಾಗುತ್ತಿದೆ. ಪ್ರವಾಸೋದ್ಯಮಕ್ಕೂ ನಿಧಾನವಾಗಿ ಏಟು ಬೀಳುತ್ತಲಿದೆ. ಅಮೆರಿಕ, ಯುಕೆ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು “ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲ” ಎಂಬ ಎಚ್ಚರಿಕೆಯನ್ನು ತಮ್ಮ ಪ್ರವಾಸಿಗರಿಗೆ ನೀಡುವ ಹಂತಕ್ಕೆ ದೇಶದ ಪ್ರತಿಷ್ಠೆ ಸ್ಥಾನಮಾನ ಇಳಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ | ನಾರಿಯರು ‘ಆಡಳಿತಗಾರ್ತಿ’ಯರಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಬಿಡುಗಡೆ ಮಾಡಿದ ದಾಖಲೆ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. 2021ರಲ್ಲಿ 14 ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಈ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ 2025 ಮತ್ತು 2026ರಲ್ಲಿ ಕೊಡಗು ಮತ್ತು ಕೊಪ್ಪಳದ ಹಂಪಿಯಲ್ಲಿ ನಡೆದ ಅತ್ಯಾಚಾರ ಕೃತ್ಯಗಳು ದೇಶವನ್ನು ಬೆಚ್ಚಿಬೀಳಿಸಿತ್ತು.

ಕೊಪ್ಪಳ: ಇಸ್ರೇಲ್ ಮಹಿಳೆ ಅತ್ಯಾಚಾರ, ಕೊಲೆ

2025ರ ಮಾರ್ಚ್‌ 6ರಂದು ಕೊಪ್ಪಳದ ಹಂಪಿ ಸಮೀಪದ ಸಣಾಪುರ ಕೆರೆಯ ಬಳಿ ನಡೆದ ಈ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಇಸ್ರೇಲ್ ಮೂಲದ ಮಹಿಳೆ ಮತ್ತು ಆಕೆಯ ಸ್ನೇಹಿತರು ನಕ್ಷತ್ರ ವೀಕ್ಷಣೆಗೆ (Stargazing) ಹೋದಾಗ ಮೂವರು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಈ ವೇಳೆ ಇಸ್ರೇಲ್ ಮಹಿಳೆ ಮತ್ತು ಸ್ಥಳೀಯ ಹೋಂಸ್ಟೇ ಮಾಲೀಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಪ್ರವಾಸಿಗರ ಗುಂಪಿನಲ್ಲಿದ್ದ ಒಡಿಶಾ ಮೂಲದ ಬಿಬಾಸ್ ಕುಮಾರ್ ಎಂಬುವವರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಲಾಗಿತ್ತು. ಮತ್ತೊಬ್ಬ ಅಮೆರಿಕದ ಪ್ರವಾಸಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕೊಪ್ಪಳ ನ್ಯಾಯಾಲಯವು ಕೇವಲ 9 ತಿಂಗಳ ಅವಧಿಯಲ್ಲಿ ವಿಚಾರಣೆ ಮುಗಿಸಿ ಐತಿಹಾಸಿಕ ತೀರ್ಪು ನೀಡಿದೆ. ಈ ಘೋರ ಕೃತ್ಯ ಎಸಗಿದ ಮೂವರು ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಕೊಡಗು ಹೋಂಸ್ಟೇ ಅತ್ಯಾಚಾರ ಪ್ರಕರಣ

ಕೊಡಗಿನ ಕುಟ್ಟ ಸಮೀಪದ ಖಾಸಗಿ ಹೋಂಸ್ಟೇನಲ್ಲಿ ಇತ್ತೀಚೆಗೆ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಗೆ ಮಾದಕ ದ್ರವ್ಯ ಮಿಶ್ರಿತ ಪಾನೀಯ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಮುಚ್ಚಿಹಾಕುವ ಯತ್ನವೂ ನಡೆದಿತ್ತು. ಅತ್ಯಾಚಾರದ ನಂತರ ಮಹಿಳೆಗೆ ಹೊರಗಿನವರನ್ನು ಸಂಪರ್ಕಿಸಲು ಸಾಧ್ಯವಾಗದಂತೆ ಹೋಂಸ್ಟೇನ ವೈಫೈ ಕಡಿತಗೊಳಿಸಲಾಗಿತ್ತು. ಆಕೆಯನ್ನು ಅಲ್ಲಿಯೇ ಕೂಡಿಹಾಕುವ ಪ್ರಯತ್ನ ನಡೆದಿತ್ತು. ಸಂತ್ರಸ್ತೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮೈಸೂರಿಗೆ ಬಂದು, ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಜಾರ್ಖಂಡ್ ಮೂಲದ ಮುಖ್ಯ ಆರೋಪಿಯನ್ನು ಹಾಗೂ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಹೋಂಸ್ಟೇ ಮಾಲೀಕನನ್ನು ಬಂಧಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಸ್ಪೇನ್ ಮೂಲಕ ಮಹಿಳೆ ಮೇಲೆ ಅತ್ಯಾಚಾರ

ಸ್ಪೇನ್ ಮೂಲದ ದಂಪತಿಗಳು ಬೈಕ್ ಮೂಲಕ ಪ್ರವಾಸ ಕೈಗೊಂಡಿದ್ದರು. 2024ರ ಮಾರ್ಚ್ 1ರಂದು ರಾತ್ರಿ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಹಂಸದಿಹಾ ಬಳಿ ಟೆಂಟ್ ಹಾಕಿ ತಂಗಿದ್ದಾಗ, ಸುಮಾರು 7 ರಿಂದ 10 ಜನರ ತಂಡವೊಂದು ದಂಪತಿಗಳ ಮೇಲೆ ಹಲ್ಲೆ ನಡೆಸಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿತ್ತು. ಈ ಘಟನೆ ಬಳಿಕ ಜಾರ್ಖಂಡ್ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಅನ್ವಯ, ಸಂತ್ರಸ್ತ ಮಹಿಳೆಗೆ ಜಿಲ್ಲಾ ಆಡಳಿತವು ₹10 ಲಕ್ಷ ಮಧ್ಯಂತರ ಪರಿಹಾರ ಧನವನ್ನು ನೀಡಿದೆ.

ಇದನ್ನು ಓದಿದ್ದೀರಾ? ‘ಏ ದೀದಿ, ಓ ದೀದಿ’ – ಇದು ಅಮಿತ್ ಶಾ, ಮೋದಿಯವರ ನಾರಿ ಶಕ್ತಿ ವಂದನೆಯೇ?

ಗೋವಾದಲ್ಲಿ ಪ್ರವಾಸಿಗರ ಮೇಲೆ ಅತ್ಯಾಚಾರ

ಗೋವಾದಲ್ಲಿ ಪ್ರವಾಸಿಗರ ಮೇಲೆ ಅತ್ಯಾಚಾರ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿದೆ. ದಕ್ಷಿಣ ಗೋವಾದ ಕೆಲವು ಶಾಂತ ಮತ್ತು ನಿರ್ಜನ ಬೀಚ್‌ಗಳಲ್ಲಿ ಭದ್ರತೆಯ ಕೊರತೆಯನ್ನು ಬಳಸಿಕೊಂಡು ಪ್ರವಾಸಿಗರ ಮೇಲೆ ಅತ್ಯಾಚಾರ ಕೃತ್ಯಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ ಪಾಲೋಲೆಮ್ (Palolem) ಸಮೀಪ ಬ್ರಿಟಿಷ್ ಪ್ರವಾಸಿ ಮಹಿಳೆಯ ಮೇಲೆ ನಡೆದ ದೌರ್ಜನ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಲವು ನಕಲಿ ಮಸಾಜ್ ಪಾರ್ಲರ್‌ಗಳಲ್ಲಿ ಅಥವಾ ಅಸುರಕ್ಷಿತ ವಾಸ್ತವ್ಯದ ಸ್ಥಳಗಳಲ್ಲಿ ಪ್ರವಾಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವ ಘಟನೆಗಳು ಆಗಾಗ ವರದಿಯಾಗುತ್ತಿವೆ.

ಈ ಎಲ್ಲ ಘಟನೆಗಳು ದೇಶದ ಪ್ರವಾಸೋದ್ಯಮದ ಮೇಲೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ದೇಶಗಳು ತಮ್ಮ ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಭಾರತ ಪ್ರವಾಸದ ಬಗ್ಗೆ ಕಟ್ಟುನಿಟ್ಟಿನ ‘ಟ್ರಾವೆಲ್ ಅಡ್ವೈಸರಿ’ (ಪ್ರವಾಸ ಸಲಹೆ) ನೀಡುತ್ತಿವೆ.

ಅಮೆರಿಕವು ಭಾರತವನ್ನು ‘Level 2’ (ಹೆಚ್ಚಿನ ಜಾಗರೂಕತೆ ವಹಿಸಿ) ಪಟ್ಟಿಯಲ್ಲಿಟ್ಟಿದೆ. “ಭಾರತದಲ್ಲಿ ಅತ್ಯಾಚಾರವು ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ. ಪ್ರವಾಸಿ ತಾಣಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಘಟನೆಗಳು ವರದಿಯಾಗುತ್ತಿವೆ” ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ. ಅಮೆರಿಕ ತನ್ನ ಮಹಿಳಾ ಪ್ರವಾಸಿಗರಿಗೆ “ಭಾರತದಲ್ಲಿ ಒಬ್ಬರೇ ಪ್ರಯಾಣಿಸಬೇಡಿ” ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ.

ಇನ್ನು ಯುನೈಟೆಡ್ ಕಿಂಗ್‌ಡಮ್ ಭಾರತದಲ್ಲಿನ ಸುರಕ್ಷತೆಯ ಬಗ್ಗೆ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. “ಬ್ರಿಟಿಷ್ ಮಹಿಳೆಯರು ಭಾರತದ ವಿವಿಧ ರಾಜ್ಯಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪ್ರವಾಸಿ ತಾಣಗಳಲ್ಲಿ ಮತ್ತು ನಗರಗಳಲ್ಲಿ ಗುಂಪುಗಳಿಂದ ಅಥವಾ ವ್ಯಕ್ತಿಗಳಿಂದ ದೈಹಿಕ ಹಾಗೂ ಮೌಖಿಕ ಕಿರುಕುಳ ಸಾಮಾನ್ಯವಾಗಿದೆ” ಎಂದು ಯುಕೆ ಹೇಳಿದೆ. ಬೀಚ್‌ಗಳು ಅಥವಾ ಏಕಾಂತ ಪ್ರದೇಶಗಳಿಗೆ ಒಬ್ಬರೇ ಹೋಗಬಾರದು ಮತ್ತು ಸ್ಥಳೀಯ ಸಂಪ್ರದಾಯಕ್ಕೆ ತಕ್ಕಂತೆ ಉಡುಗೆ ಧರಿಸಬೇಕು ಎಂದು ಸೂಚಿಸಿದೆ! (ಈ ವೇಳೆ ಮಹಿಳೆಯ ಮೇಲೆ ಅತ್ಯಾಚಾರ ನಡೆಯಲು ಬಟ್ಟೆ ಕಾರಣವಲ್ಲ, ನೋಡುವ ದೃಷ್ಟಿ ಎಂಬುದನ್ನು ನಾವು ನೆನೆಪಿಸಿಕೊಳ್ಳುವುದು ಉತ್ತಮ)

ಇದನ್ನು ಓದಿದ್ದೀರಾ? ಮುಟ್ಟಿನ ನೋವು-ಸಂಕಟಗಳ ನುಂಗಿ ಮುನ್ನುಗ್ಗುತ್ತಿರುವ ಮಹಿಳಾ ಕ್ರಿಕೆಟ್ ಕಲಿಗಳಿಗೊಂದು ಸಲಾಮ್!

ಕೆನಡಾವು “ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ. ಸಾರ್ವಜನಿಕ ಸಾರಿಗೆ, ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವಾಗ ಅತ್ಯಂತ ಜಾಗರೂಕರಾಗಿರಿ” ಎಂದು ತಿಳಿಸಿದೆ. ಅಪರಿಚಿತರು ನೀಡುವ ಆಹಾರ ಅಥವಾ ಪಾನೀಯಗಳನ್ನು ಸ್ವೀಕರಿಸಬೇಡಿ. ಅದರಲ್ಲಿ ಮಾದಕದ್ರವ್ಯ ಮಿಶ್ರಣ ಮಾಡಿರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಆಸ್ಟ್ರೇಲಿಯಾ ಕೂಡ ಭಾರತವನ್ನು “ಹೆಚ್ಚಿನ ಜಾಗರೂಕತೆ ಅಗತ್ಯವಿರುವ ದೇಶ” ಎಂದು ವರ್ಗೀಕರಿಸಿದೆ. “ಆಸ್ಟ್ರೇಲಿಯಾದಲ್ಲಿ ಇರುವುದಕ್ಕಿಂತ ಹೆಚ್ಚಿನ ಮಟ್ಟದ ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯವನ್ನು ಮಹಿಳೆಯರು ಭಾರತದಲ್ಲಿ ಎದುರಿಸಬೇಕಾಗಬಹುದು” ಎಂದು ಸ್ಪಷ್ಟವಾಗಿ ಹೇಳಿದೆ. ದೊಡ್ಡ ನಗರಗಳಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿಯೂ ಒಬ್ಬರೇ ಸಂಚರಿಸುವುದನ್ನು ತಪ್ಪಿಸಿ ಎಂದು ಸಲಹೆ ನೀಡಿದೆ.

ಇಂತಹ ಎಚ್ಚರಿಕೆಗಳಿಂದಾಗಿ ವಿದೇಶಿ ಮಹಿಳಾ ಪ್ರವಾಸಿಗರು ಭಾರತಕ್ಕೆ ಬರಲು ಹಿಂಜರಿಯುತ್ತಿದ್ದಾರೆ. 2024-25ರ ಅಂಕಿಅಂಶಗಳ ಪ್ರಕಾರ, ‘ಸೋಲೋ ಫೀಮೇಲ್ ಟ್ರಾವೆಲರ್ಸ್’ (ಒಬ್ಬರೇ ಪ್ರಯಾಣಿಸುವ ಮಹಿಳೆಯರು) ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಜತೆ ಜತೆಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇಂತಹ ಪ್ರಕರಣಗಳು ದೊಡ್ಡ ಸುದ್ದಿಯಾಗುವುದರಿಂದ, ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಕೆಳಕ್ಕೆ ಹೋಗುತ್ತಿದೆ.

ಪ್ರವಾಸೋದ್ಯಮ ಒಂದಕ್ಕೆ ಒಂದು ನಂಟು ಹೊಂದಿರುವಂತದ್ದು. ಹೋಟೆಲ್‌ಗಳು, ಟ್ಯಾಕ್ಸಿ ಚಾಲಕರು, ಟೂರ್ ಗೈಡ್‌ಗಳು ಮತ್ತು ಸಣ್ಣ ವ್ಯಾಪಾರಿಗಳು ಪ್ರವಾಸಿಗರನ್ನೇ ನಂಬಿರುತ್ತಾರೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾದಷ್ಟೂ ಈ ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ಸಂಚಕಾರ ಬರುತ್ತದೆ. ವಿದೇಶಿ ಪ್ರವಾಸಿಗರಿಂದ ಬರುವ ವಿದೇಶಿ ಕರೆನ್ಸಿಯು ದೇಶದ ಆರ್ಥಿಕತೆಗೆ ಬಲ ನೀಡುತ್ತದೆ. ಭಯದ ವಾತಾವರಣ ನಿರ್ಮಾಣವಾದಾಗ ಈ ಆದಾಯ ಕುಸಿಯುವ ಅಪಾಯವೂ ಇದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಣ್ಣೆಕಾಳು ಉತ್ಪಾದನೆ ಸ್ವಾವಲಂಬನೆ ಅಗತ್ಯ : ಡಿಸಿ ಶಿಲ್ಪಾ ಶರ್ಮಾ

ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಕುಸುಬೆ,...

ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಟ: ಇಲಾಖೆಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ

ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ಸಂಬಂಧಿಸಿದಂತೆ ರೈಲ್ವೆ...

ಈ ದಿನ ಸಂಪಾದಕೀಯ | ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ

ಒಂದು ಕಡೆ ಚೀನಾ ನಮ್ಮ ಗಡಿ ಅತಿಕ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಅದೇ...

ಬೆಂಗಳೂರು ಮೆಟ್ರೋ ಬ್ಲೂ ಲೈನ್ ಕಾಮಗಾರಿಗೆ ಸುಪ್ರೀಂ ಅಸ್ತು; ನಿರ್ಮಾಣ ಮುಂದುವರಿಸಲು ಅನುಮತಿ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿರೀಕ್ಷೆಯಿರುವ ನಮ್ಮ ಮೆಟ್ರೋದ ಬ್ಲೂ...