2025ರಲ್ಲಿ ಧರ್ಮಾಧಾರಿತ ಹಿಂಸಾಚಾರ, ಗುಂಪು ದಾಳಿಗಳು ಹೆಚ್ಚಳ !- ವರದಿ

Date:

ವರದಿಯಲ್ಲಿ ಕೋಮು ಗಲಭೆಗಳ ಸಂಖ್ಯೆ ಕಡಿಮೆಯಾಗಿದ್ದರೂ, ‘ಧರ್ಮಾಧಾರಿತ ಸಂಘರ್ಷ ಮತ್ತು ದ್ವೇಷ’ದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಕೋಮುದ್ವೇಷವು ವಿಭಿನ್ನ ಆಯಾಮ ಮತ್ತು ಹಾದಿಯನ್ನು ತೆಗೆದುಕೊಂಡಿದೆ.

ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಕೋಮುದ್ವೇಷ ಭಾಷಣಗಳು, ಕೋಮು ಗಲಭೆ, ಹಿಂಸಾಚಾರಗಳು ಹೆಚ್ಚುತ್ತಿವೆ. ಕೋಮುದ್ವೇಷ ಹಳ್ಳಿ-ಹಳ್ಳಿಗಳನ್ನೂ ವ್ಯಾಪಿಸುತ್ತಿದೆ. ಇಡೀ ಜಗತ್ತು ಸಾಮರಸ್ಯ, ಸಹಬಾಳ್ವೆಯತ್ತ ಮುನ್ನಡೆಯುತ್ತಿದ್ದರೆ, ಭಾರತವು ಕೋಮು ದಳ್ಳುರಿಗೆ ಒಳಗಾಗುತ್ತಿದೆ ಎಂಬುದನ್ನು ಇತ್ತೀಚಿನ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ನಡೆದ ಘಟನೆಗಳು ತೋರಿಸಿವೆ.

- Advertisement -

ಕ್ರಿಸ್‌ಮಸ್ ಸಮಯದಲ್ಲಿ ಚರ್ಚ್‌ಗಳು ಸೇರಿದಂತೆ ಹಬ್ಬದ ಸಂಭ್ರಮವಿದ್ದ ಸ್ಥಳಗಳ ಮೇಲೆ ಹಿಂದುತ್ವ ಕೋಮುವಾದಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇದೆಲ್ಲದರ ನಡುವೆಯೂ, 2024ಕ್ಕೆ ಹೋಲಿಸಿದರೆ, 2025ರಲ್ಲಿ ದೇಶದಾದ್ಯಂತ ನಡೆದ ಕೋಮು ಗಲಭೆಗಳ ಸಂಖ್ಯೆ 50%ಕ್ಕಿಂತ ಕಡಿಮೆಯಾಗಿದೆ ಎಂದು ವರದಿಯೊಂದು ಹೇಳಿದೆ. ಅಲ್ಲದೆ, ಗಲಭೆಗಳ ಸಂಖ್ಯೆ ಕಡಿಮೆಯಾಗಿದ್ದರೂ, ಪರಿಸ್ಥಿತಿಯೇನೂ ಸುಧಾರಿಸಿಲ್ಲ. ಧರ್ಮ ಆಧಾರಿತ ಹಿಂಸಾಚಾರ, ಗುಂಪು ದಾಳಿಗಳು ಮತ್ತು ಕೋಮು ವಿಭಜನೆಗಳು ಇನ್ನಷ್ಟು ವ್ಯವಸ್ಥಿತ, ಸಂಘಟಿತ ಮತ್ತು ಆಕ್ರಮಣಕಾರಿ ಸ್ವರೂಪವನ್ನು ಪಡೆದಿವೆ ಎಂಬುದನ್ನೂ ವರದಿ ಒತ್ತಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

‘ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲರಿಸಂ’ ನಡೆಸಿದ ಅಧ್ಯಯನದ ಪ್ರಕಾರ 2024ರಲ್ಲಿ 59 ಕೋಮು ಗಲಭೆಗಳು ನಡೆದಿದ್ದವು. 2025ರಲ್ಲಿ 28 ಕೋಮು ಗಲಭೆಗಳು ಮಾತ್ರ ಸಂಭವಿಸಿವೆ. ಇದು 52%ರಷ್ಟು ಇಳಿಕೆಯನ್ನು ಸೂಚಿಸುತ್ತದೆ. ಈ 28 ಗಲಭೆಗಳಲ್ಲಿ 4 ಮಂದಿ ಸಾವನ್ನಪ್ಪಿದ್ದು, 360 ಜನರು ಗಾಯಗೊಂಡಿದ್ದಾರೆ.

ಗಲಭೆಗಳ ಸಂಖ್ಯೆ ಇಳಿಕೆಯಾಗಿದ್ದರೂ, ಗುಂಪು ಹಿಂಸಾಚಾರ ಹೆಚ್ಚಾಗಿದೆ. 2025ರಲ್ಲಿ 14 ಗುಂಪು ಹಿಂಸಾಚಾರಗಳು ವರದಿಯಾಗಿದ್ದು, ಈ ಹಿಂಸಾಚಾರದಲ್ಲಿ 8 ಜೀವಗಳು ಬಲಿಯಾಗಿವೆ. 2024ಕ್ಕೆ ಹೋಲಿಸಿದರೆ, ಒಂದು ಘಟನೆ ಹೆಚ್ಚಾಗಿದೆ. ಆ ವರ್ಷ 13 ಹಿಂಸಾಚಾರದ ಪ್ರಕರಣಗಳು ದಾಖಲಾಗಿದ್ದವು ಮತ್ತು 11 ಸಾವುಗಳು ಸಂಭವಿಸಿದ್ದವು.

ವರದಿಯಲ್ಲಿ ಕೋಮು ಗಲಭೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತನ್ನ ವಿಶ್ಲೇಷಣೆ ತೋರಿಸಿದ್ದರೂ, ‘ಧರ್ಮಾಧಾರಿತ ಸಂಘರ್ಷ ಮತ್ತು ದ್ವೇಷ’ದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಕೋಮುದ್ವೇಷವು ವಿಭಿನ್ನ ಆಯಾಮ ಮತ್ತು ಹಾದಿಯನ್ನು ತೆಗೆದುಕೊಂಡಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ವಿರುದ್ಧದ ಸಾಂಸ್ಥಿಕ ತಾರತಮ್ಯ, ಸಾರ್ವಜನಿಕ ಸ್ಥಳಗಳಲ್ಲಿ ಅವರ ಸಂಸ್ಕೃತಿಗಳನ್ನು ಬಲವಂತವಾಗಿ ನಿರ್ಬಂಧಿಸುವುದು, ಅಲ್ಪಸಂಖ್ಯಾತರ ಆಚರಣೆಗಳನ್ನು ಮೂಲೆಗುಂಪು ಮಾಡುವುದು, ದ್ವೇಷ ಭಾಷಣದ ಪ್ರಸರಣ ಹಾಗೂ ಹಿಂದುತ್ವ ಭಯೋತ್ಪಾದಕ ಗುಂಪುಗಳಿಗೆ ಯಾವುದೇ ನಿರ್ಬಂಧ-ನಿಯಂತ್ರಣ ವಿಧಿಸದೇ ಇರುವುದು ಹೆಚ್ಚಾಗಿದೆ.

Hero Image 19 e1592829631647

ಇಷ್ಟು ಮಾತ್ರವಲ್ಲ, ಹಿಂದು ಹಬ್ಬಗಳ ಸಮಯದಲ್ಲಿ ಹಿಂದುತ್ವವಾದಿಗಳು ದಾಂಧಲೆ, ಪ್ರಚೋದನೆ, ಉದ್ವಿಗ್ನತೆಗೆ ಕಾರಣವಾಗಿರುವುದು ಕಂಡುಬಂದಿವೆ. ಸಾರ್ವಜನಿಕ ಸ್ಥಳಗಳಲ್ಲಿ ಹಿಂದುತ್ವದ ಸೂಚಕಗಳು, ಆಚರಣೆಗಳು, ಕೋಮು ದ್ವೇಷ ಪ್ರಚೋದಿಸುವ ಕೃತ್ಯಗಳು ಹೆಚ್ಚಾಗಿವೆ. ಇದು, ‘ಬಹುಸಂಖ್ಯಾತ ಸಾಂಸ್ಕೃತಿಕ ಪ್ರಾಬಲ್ಯವನ್ನು’ ಉತ್ಪ್ರೇಕ್ಷಿಸಿದೆ ಎಂದು ಅಧ್ಯಯನ ವಿವರಿಸಿದೆ.

ಮುಖ್ಯವಾಗಿ, ಇಡೀ ದೇಶದಲ್ಲಿ 28 ಕೋಮುಗಲಭೆಗಳು ನಡೆದಿದ್ದರೂ, ಬಿಜೆಪಿ ನೇತೃತ್ವದ ಮಹಾಯುತಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿಯೇ 7 ಗಲಭೆಗಳು ಸಂಭವಿಸಿದೆ. ನಂತರದ ಸ್ಥಾನದಲ್ಲಿ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ ಮತ್ತು ಬಿಜೆಪಿ ಅಧಿಕಾರ ಹಿಡಿಯಲು ಶತಪ್ರಯತ್ನ ಮಾಡುತ್ತಿರುವ ಪಶ್ಚಿಮ ಬಂಗಾಳ ರಾಜ್ಯಗಳಿವೆ. ಈ ಎರಡೂ ರಾಜ್ಯಗಳಲ್ಲಿ ತಲಾ 4 ಕೋಮು ಗಲಭೆಗಳು ಸಂಭವಿಸಿವೆ. ಉಳಿದಂತೆ, ಬಿಜೆಪಿಯೇ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಮೂರು, ಉತ್ತರ ಪ್ರದೇಶ, ಜಾರ್ಖಂಡ್, ಅಸ್ಸಾಂ, ಉತ್ತರಾಖಂಡದಲ್ಲಿ ತಲಾ ಎರಡು ಹಾಗೂ ಬಿಹಾರ ಮತ್ತು ಒಡಿಶಾದಲ್ಲಿ ತಲಾ ಒಂದು ಕೋಮುಗಲಭೆಗಳು ವರದಿಯಾಗಿವೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಯಾವುದೇ ಕೋಮು ಗಲಭೆಗಳು ನಡೆಯದೇ ಇದ್ದರೂ, ಕರ್ನಾಟಕ ಸೇರಿದಂತೆ ಹಲವೆಡೆ ಕೋಮು ಭಾವನೆ ಪ್ರಚೋದಿಸುವ ಹಿಂದುತ್ವ ಕೋಮುವಾದಿಗಳ ದಾಂಧಲೆಗಳು ಹೆಚ್ಚಾಗಿವೆ.

2025ರಲ್ಲಿ ನಡೆದಿರುವ ಕೋಮು ಗಲಭೆಗಳಲ್ಲಿ 9 ಗಲಭೆಗಳು ಧಾರ್ಮಿಕ ಮೆರವಣಿಗೆಗಳು ಮತ್ತು ಹಬ್ಬಗಳ ಸಮಯದಲ್ಲಿ ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ರಾಮ ನವಮಿ ಮೆರವಣಿಗೆಗಳ ಸಮಯದಲ್ಲಿ ಮಸೀದಿಗಳ ಎದುರು ಹಿಂದುತ್ವವಾದಿಗಳು ನಡೆಸಿದ ದಾಂಧಲೆಯಿಂದ ಘರ್ಷಣೆಗಳು ನಡೆದಿವೆ. ಅಂತೆಯೇ, ಮಧ್ಯಪ್ರದೇಶದಲ್ಲಿ ಹನುಮಾನ್ ಜಯಂತಿ ಮೆರವಣಿಗೆ ವೇಳೆ ಕೋಮು ಸಂಘರ್ಷ ನಡೆದಿದ್ದರೆ, ಅಸ್ಸಾಂನಲ್ಲಿ ಈದ್ ಆಚರಣೆ ವೇಳೆ ಮತ್ತು ಗುಜರಾತ್‌ನಲ್ಲಿ ಗಾರ್ಬಾ ಕಾರ್ಯಕ್ರಮಗಳ ವೇಳೆ ಘರ್ಷಣೆಗಳು ನಡೆದಿವೆ. ಉಳಿದಂತೆ, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ಸಮಯದಲ್ಲಿ ಕೆಲವು ಗಲಭೆಗಳು ನಡೆದಿವೆ.

ಗಂಭೀರ ವಿಚಾರವೆಂದರೆ, ಸರ್ಕಾರಗಳು ಗಲಭೆ ಪ್ರಕರಣಗಳಲ್ಲಿ ತಾರತಮ್ಯ ಧೋರಣೆ ಅನುಸರಿಸಿವೆ. ಕೋಮು ಹಿಂಸಾಚಾರಕ್ಕೆ ಹಿಂದು ಸಮುದಾಯದವರು ಸಾವನ್ನಪ್ಪಿದ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರಗಳು ಪ್ರಯತ್ನಿಸಿವೆ. ಆದರೆ, ಸಂತ್ರಸ್ತರು ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಕರಣಗಳಲ್ಲಿ ತನಿಖೆ, ವಿಚಾರಣೆ, ನ್ಯಾಯ ಎಲ್ಲವೂ ವಿಳಂಬ ಧೋರಣೆಯನ್ನು ಅನುಸರಿಸಿವೆ. ಇದು, ಸಾಂಸ್ಥಿಕ ಪಕ್ಷಪಾತದ ಕುರಿತು ಗಮನಾರ್ಹ ಕಳವಳವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ.

ವಿಶೇಷವಾಗಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು, ಹಿಂದುತ್ವವಾದಿ ಗಲಭೆಕೋರರ ಪರವಾಗಿ ಧೋರಣೆಗಳನ್ನು ತೆಗೆದುಕೊಂಡಿವೆ. ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಪ್ರಕರಣಗಳನ್ನು ದಾಖಲಿಸಿವೆ ಎಂದು ಅಧ್ಯಯನ ಒತ್ತಿ ಹೇಳಿದೆ.

648843 violence communal 020718

ಇದೆಲ್ಲವೂ, ಗುಂಪು ಹಿಂಸಾಚಾರಕ್ಕೆ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಯು ಪಕ್ಷಪಾತಿ ಧೋರಣೆಯನ್ನು ಅನುಸರಿಸಿವೆ. ದುರ್ಬಲ ಸಮುದಾಯಗಳನ್ನು ರಕ್ಷಿಸಲು ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ನಿಷ್ಪಕ್ಷಪಾತ ಕಾನೂನು ಜಾರಿ, ಹೊಣೆಗಾರಿಕೆ ಹಾಗೂ ಸಾಂಸ್ಥಿಕ ಸುಧಾರಣೆಯಲ್ಲಿ ವಿಫಲವಾಗಿವೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಜೊತೆಗೆ, ಗಲಭೆಗಳ ಸಮಯದಲ್ಲಿ ಮಾಧ್ಯಮಗಳೂ ಕೂಡ ಹಿಂದುತ್ವ ಕೋಮುವಾದಿಗಳ ಪರವಾದ ಕೋಮು ನಿರೂಪಣೆಗಳನ್ನು ಪ್ರಸಾರ ಮಾಡಿವೆ. ಮುಸ್ಲಿಮರ ಮೇಲೆ ಹಿಂಸಾಚಾರದ ಸಂಪೂರ್ಣ ಹೊಣೆಯನ್ನು ಹೊರಿಸಿವೆ. ಜನರ ಮನದಲ್ಲಿ ಕೋಮು ದ್ವೇಷವನ್ನು ವರ್ಧಿಸಿವೆ. ಮಾಧ್ಯಮಗಳು, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ‘ಮುಸ್ಲಿಂ ಮಾಸ್ಟರ್ ಮೈಂಡ್ಸ್’ ಅಥವಾ ‘ಕಿಂಗ್ಪಿನ್‌ಗಳು’ ಎಂಬ ಧೋರಣೆಯನ್ನು ಪ್ರತಿಪಾದಿಸಿವೆ. ಮುಸ್ಲಿಂ ಸಮುದಾಯದ ಸದಸ್ಯರ ವಿರುದ್ಧ ಬಲವಂತದ ಪೊಲೀಸ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ವರದಿಯ ಸಾರಿ ಹೇಳುತ್ತದೆ.

ದೇಶದಲ್ಲಿ ಮುಸ್ಲಿಮರ ಮೇಲೆ ಮಾತ್ರವಲ್ಲ, ಕ್ರಿಶ್ಚಿಯನ್ನರ ಮೇಲೂ ದಾಳಿಗಳು ನಡೆದಿವೆ. ಇತ್ತೀಚೆಗೆ, ನಡೆದ ಕ್ರಿಸ್‌ಮಸ್ ಆಚರಣೆಯ ಸಮಯದಲ್ಲಿ ಚರ್ಚ್‌ಗಳು ಮತ್ತು ಕ್ರಿಸ್‌ಮಸ್ ಕಾರ್ಯಕ್ರಮಗಳ ಮೇಲೆ ಹಲವಾರು ದಾಳಿಗಳು ನಡೆದಿವೆ. ಇದು, ಮತ್ತೊಂದು ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಿಂದುತ್ವದ ಕೋಮು ದ್ವೇಷವನ್ನು ಸೂಚಿಸುತ್ತದೆ. 2024 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಕ್ರಿಸ್‌ಮಸ್ ಆಚರಣೆಗಳ ಮೇಲೆ ಕೆಲವು ದಾಳಿಗಳು ನಡೆದಿದ್ದರೂ, 2025ರಲ್ಲಿ ಈ ದಾಳಿಗಳು ಹೆಚ್ಚು ಸಂಘಟಿತ ಮತ್ತು ಆಕ್ರಮಣಕಾರಿಯಾಗಿ ಹೆಚ್ಚಾಗಿವೆ ಎಂದು ವರದಿ ವಿವರಿಸಿದೆ.

ಈ ಸುದ್ದಿ ಓದಿದ್ದೀರಾ? ಸ್ಮರಣೆಯೊಂದೇ ಸಾಕೇ? ಸಾಕಾರವಾಗಬೇಕಿದೆ ಅವರ ಕನಸು

2025ರಲ್ಲಿ ನವೆಂಬರ್ ಅಂತ್ಯದ ವರೆಗೆ, ದೇಶಾದ್ಯಂತ ಕ್ರಿಶ್ಚಿಯನ್ನರ ವಿರುದ್ಧ 706 ಹಿಂಸಾಚಾರ ಘಟನೆಗಳು ನಡೆದಿವೆ. ಅವುಗಳಲ್ಲಿ ಹಲವು ಮತಾಂತರ ವಿರೋಧಿ ಆರೋಪದ ನಿರೂಪಣೆಗಳೊಂದಿಗೆ ನಡೆದಿರುವ ದಾಳಿಗಳಾಗಿವೆ. ವಿಶೇಷವಾಗಿ ತೀವ್ರವಾದ ಹಿಂಸಾಚಾರವು ಕ್ರಿಶ್ಚಿಯನ್ನರಿಗೆ ಸಮಾಧಿ ಹಕ್ಕುಗಳನ್ನು ನಿರಾಕರಿಸುವುದನ್ನು ಒಳಗೊಂಡಿವೆ ಎಂಬುದನ್ನು ವರದಿ ಗಮನಿಸಿದೆ.

ಇನ್ನು ಕೋಮು ಗಲಭೆಗಳ ಸಂಖ್ಯೆಯಲ್ಲಿ ಕಂಡುಬರುವ ಇಳಿಕೆ ದೇಶದಲ್ಲಿ ಶಾಂತಿ ನೆಲೆಸುತ್ತಿದೆ ಎಂಬ ಭ್ರಮೆಯನ್ನ ಮೂಡಿಸಬಾರದು. 2025ರ ವಾಸ್ತವ ಚಿತ್ರಣ ಆತಂಕಕಾರಿಯಾಗಿದೆ. ಗಲಭೆಗಳು ಕಡಿಮೆಯಾದರೂ, ದ್ವೇಷ ರಾಜಕಾರಣ ಹೆಚ್ಚು ವ್ಯವಸ್ಥಿತವಾಗಿದೆ. ಹಿಂಸಾಚಾರ ಇನ್ನಷ್ಟು ಕ್ರೂರವಾಗಿದೆ. ಇದು ಆಕಸ್ಮಿಕ ಹಿಂಸೆಯ ಯುಗವಲ್ಲ, ಬದಲಾಗಿ ಸಂಘಟಿತ ಕೋಮು ಹಿಂಸೆಯ ಯುಗ ಎಂಬುದನ್ನು ಈ ವರದಿ ಸ್ಪಷ್ಟವಾಗಿ ತೋರಿಸುತ್ತದೆ.

194004 drvuilbyhz 1694495675

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ನಿರಂತರವಾಗಿ ಗುರಿಯಾಗಿಸುವುದು, ಅವರ ಧಾರ್ಮಿಕ–ಸಾಂಸ್ಕೃತಿಕ ಅಸ್ತಿತ್ವವನ್ನು ಸಾರ್ವಜನಿಕ ವಲಯದಿಂದ ತಳ್ಳಿಹಾಕುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಇವುಗಳು ದೇಶದ ಧರ್ಮನಿರಪೇಕ್ಷ ಸಂವಿಧಾನಾತ್ಮಕ ಆಧಾರವನ್ನು ಒಳಗಿನಿಂದಲೇ ಕುಸಿತಗೊಳಿಸುತ್ತಿವೆ. ಹಬ್ಬಗಳು, ಮೆರವಣಿಗೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಶಾಂತಿಯ ಸಂಕೇತವಾಗಬೇಕು. ಆದರೆ, ಅವು ಇಂದು ಪ್ರಾಬಲ್ಯ ಪ್ರದರ್ಶನ ಮತ್ತು ಭೀತಿಯ ಉಪಕರಣಗಳಾಗುತ್ತಿರುವುದು ದುರಂತ.

ನ್ಯಾಯ, ಕಾನೂನು ಮತ್ತು ಆಡಳಿತ ವ್ಯವಸ್ಥೆಗಳು ದುರ್ಬಲ ಸಮುದಾಯಗಳ ರಕ್ಷಣೆಗೆ ನಿಂತಿಲ್ಲದಾಗ, ಹಿಂಸಾಚಾರವು ಸಾಮಾನ್ಯವಾಗುತ್ತದೆ. ಮಾಧ್ಯಮಗಳ ಕೋಮು ನಿರೂಪಣೆಗಳು ಈ ದ್ವೇಷವನ್ನು ಸಾಮಾನ್ಯೀಕರಿಸುತ್ತಿರುವುದು ಅಪಾಯದ ಗಂಟೆಯಾಗಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!

​ಅಧಿಕಾರದ ಉತ್ತುಂಗದ ಸಂಭ್ರಮದ ನಡುವೆ, ಜನಸಾಮಾನ್ಯರ ಕಮರಿದ ಕನಸುಗಳ ಕಥೆಯೊಂದು ಮರೆಯಾಗುತ್ತಿದೆ....

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...