ಪೋಕ್ಸೋ ಪ್ರಕರಣದ ದೂರು ತಿರುಚಿದ ಆರೋಪ; ಇನ್ಸ್‌ಪೆಕ್ಟರ್ ವಿರುದ್ಧ ಸಂತ್ರಸ್ತೆಯ ತಾಯಿ ಆಕ್ರೋಶ

Date:

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆಆರ್ ಪೇಟೆ) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಭೀರವಾದ ಪೋಕ್ಸೋ (POCSO) ಪ್ರಕರಣವೊಂದನ್ನು ದಾಖಲಿಸುವ ವೇಳೆ, ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ ತಮಗೆ ಇಷ್ಟಬಂದಂತೆ ಎಫ್.ಐ.ಆರ್ (FIR) ದಾಖಲಿಸಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಮತ್ತು ಸಾಮಾಜಿಕ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.

- Advertisement -

​​ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ಸಂತ್ರಸ್ತೆಯ ತಾಯಿ ವಸಂತ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದೇಗೌಡ ಸಂತ್ರಸ್ತೆ ಮತ್ತು ಆಕೆಯ ತಾಯಿ ನೀಡಿದ ನಿಖರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ, ಪ್ರಕರಣದ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೂರಿನ ಅಂಶಗಳನ್ನು ಬದಲಾಯಿಸಿದ್ದಾರೆ ಎಂದು ದೂರಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

​​ಸಂತ್ರಸ್ತೆಯ ತಾಯಿ ವಸಂತ ಮಾತನಾಡಿ, “ನಾನು ಮೊದಲೇ ಒಂದು ಹೇಳಿಕೆ ನೀಡಿದ್ದೆ. ಆದರೆ ಪೊಲೀಸರು ನೆಟ್‌ವರ್ಕ್ ಇಲ್ಲ ಎಂಬ ನೆಪ ಹೇಳಿ ಸಮಯ ಕಳೆದರು. ನಂತರ ನನಗೆ ತಿಳಿಯದಂತೆ ಬೇರೆಯದೇ ರೀತಿಯ ದೂರು ಪತ್ರ ಸಿದ್ಧಪಡಿಸಿ, ಅದರ ಮೇಲೆ ಸಹಿ ಹಾಕುವಂತೆ ಒತ್ತಡ ಹೇರಿದರು. ಅತ್ಯಂತ ಅವಸರವಾಗಿ ನನ್ನಿಂದ ಸಹಿ ಪಡೆದುಕೊಂಡಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಆರೋಪಿ ಕಿರಣ್ ಎಂ ಎನ್ ನನಗೆ ಹಾಗೂ ನನ್ನ ಮಗಳಿಗೆ “ನನ್ನ ಮೇಲೆ ದೂರು ದಾಖಲಿಸಿದರೆ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಫೋನಿನ ಮೂಲಕ ಬೆದರಿಕೆ ಪತ್ರ ಕಳುಹಿಸಿರುತ್ತಾನೆ ಎಂಬ ಮಾಹಿತಿ ನೀಡಿದರು.

ಪೊಕ್ಸೋ ಪ್ರಕರಣದಲ್ಲಿ ರಾಜಿ ಪಂಚಾಯಿತಿಗೆ ಅನುವು ಇಲ್ಲದಿದ್ದರೂ ನ್ಯಾಯ ಕೊಡಿಸುವುದಾಗಿ ಮಣಿಪುರಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ತೆಯಿಂದ ಲಕ್ಷಾಂತರ ಹಣ ದುಂದು ವೆಚ್ಚ ಮಾಡಿಸಿ ಮೋಸ ಮಾಡಿ ನಮಗೇ ಬೆದರಿಕೆ ಹಾಕುತ್ತಿರುವ ರಜನಿರಾಜ್ ಎಂಬ ಮಹಿಳೆಯ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ​ದೂರಿನಲ್ಲಿ ಉಲ್ಲೇಖಿಸಲಾಗಿದ್ದರೂ ಇವರ ಹೆಸರುಗಳನ್ನು ಕೈಬಿಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶವೂ ಸಂತ್ರಸ್ತೆಯ ತಾಯಿಯ ಹೇಳಿಕೆಯಿಂದ ತಿಳಿದುಬಂದಿದೆ.

​​ಈ ಕುರಿತು ಮಾತನಾಡಿದ ‘ಮಹಿಳಾ ಮುನ್ನಡೆ’ ಸಂಘಟನೆಯ ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ, “ಪೊಲೀಸರು ಸಂತ್ರಸ್ತೆಯ ಪರವಾಗಿ ನಿಲ್ಲುವ ಬದಲು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ-ಮಗಳು ನೀಡಿದ ದೂರಿನಂತೆ ಎಫ್.ಐ.ಆರ್ ದಾಖಲಿಸದೆ, ಇನ್ಸ್‌ಪೆಕ್ಟರ್ ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಇದನ್ನು ವಿರೋಧಿಸಿದಾಗ ಸಂತ್ರಸ್ತೆಯನ್ನೇ ಅಪರಾಧಿಯಂತೆ ಕಂಡು ಠಾಣೆಯಲ್ಲಿ ಕೂರಿಸುವ ಮೂಲಕ ದರ್ಪ ಪ್ರದರ್ಶಿಸಿದ್ದಾರೆ” ಎಂದು ಆರೋಪಿಸಿದರು.

​​ಈಗಾಗಲೇ ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಮತ್ತು ಜಿಲ್ಲಾಧಿಕಾರಿಗಳ (DC) ಗಮನಕ್ಕೆ ತರಲಾಗಿದೆ. ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಮತ್ತು ತಿರುಚಲಾದ ಎಫ್.ಐ.ಆರ್ ಅನ್ನು ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದನ್ನೂ ಓದಿ: ಮಂಡ್ಯ | ಅಸಂಘಟಿತ ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಸಚಿವ ಸಂತೋಷ್‌ ಲಾಡ್

ಠಾಣೆಗೆ ಭೇಟಿ ನೀಡಿದ ಅತ್ಯಾಚಾರ ವಿರೋಧಿ ಆಂದೋಲನ’ದ ನಿಯೋಗದಲ್ಲಿ ಪದಾಧಿಕಾರಿಗಳಾದ ಕರ್ನಾಟಕ ಜನಶಕ್ತಿ ಸಿದ್ದರಾಜು, ಕರ್ನಾಟಕ ರೈತ ಸಂಘದ ಲತಾಶಂಕರ್, ಮಹಿಳಾ ಮುನ್ನಡೆಯ ಶಿಲ್ಪ, ಗಂಗಾಧರ್ ಬಿಎಸ್‌ಪಿ, ರವಿ, ಜಾಗೃತ ಕರ್ನಾಟಕದ ಜಗದೀಶ್ ನಗರಕೆರೆ ಇನ್ನೂ ಮುಂತಾದವರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹50 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ; ಕೈಗಾರಿಕಾ ವಲಯಕ್ಕೆ ಸರ್ಕಾರದ ಬಿಗ್ ಪ್ಲಾನ್

ರೈತರಿಗೆ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವುದರಿಂದ ಹಿಡಿದು ಹೂಡಿಕೆ ಮತ್ತು ಉದ್ಯೋಗ...

ರಾಜ್ಯದಲ್ಲಿ ಭೀಕರ ಬರ: 46,000 ಕೋಟಿ ರೂ. ನಷ್ಟ; ಜಿಎಸ್‌ಟಿ ಆದಾಯದ ಮೇಲೆ ಪರಿಣಾಮ

ಕರ್ನಾಟಕದಲ್ಲಿ ಈ ಬಾರಿ ಹಿಂದೆಂದೂ ಕಾಣದಂತಹ ಭೀಕರ ಬರ ಪರಿಸ್ಥಿತಿ ತಲೆದೋರಿದೆ‌....

ರಾಜ್ಯದಲ್ಲಿ ಹೆಚ್ಚುತ್ತಿದೆ ಮಳೆ ಆರ್ಭಟ; 19 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಇಂದು...

ದೆಹಲಿ ಪತ್ರಕರ್ತೆಗೆ ಪೊಲೀಸರಿಂದ ಲೈಂಗಿಕ ಕಿರುಕುಳ: ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಖಂಡನೆ

ದೆಹಲಿಯ ಜಂತ‌ರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...