ʼಇಂಕ್ವಿಲಾಬ್‌ ಜಿ಼ಂದಾಬಾದ್ʼ ಎನ್ನುತ್ತಲೇ ಗಲ್ಲಿಗೇರಿದ ಪ್ರತೀಕಾರದ ಪ್ರತೀಕ ಶಹೀದ್ ಉಧಮ್ ಸಿಂಗ್ ಪುಣ್ಯಸ್ಮರಣೆ

Date:

ಟಿಪ್ಪು ಸುಲ್ತಾನನ ಹುಲಿಯಂತೆ, ಬೋಸ್‌ರ ಐಎನ್‌ಎ ಹುಲಿಯಂತೆ, ಉಧಮ್ ಸಿಂಗ್ ಪ್ರತೀಕಾರದ ಹುಲಿಯಾಗಿದ್ದರು. ಸರ್ದಾರ್ ಉಧಮ್ ಸಿಂಗ್ ಕೇವಲ ಒಬ್ಬ ಕ್ರಾಂತಿಕಾರಿಯಲ್ಲ; ಅವರು ದೇಶಪ್ರೇಮಿಗಳಿಗೆ ಒಂದು ಸಂದೇಶ. ʼಅನ್ಯಾಯವನ್ನು ಸಹಿಸುವುದೂ ಕೂಡ ಮಹಾ ಪಾಪʼ ಎಂಬ ಸಂದೇಶದಿಂದ ಯುವ ಸ್ವಾತಂತ್ರ್ಯ ಹೋರಾಟಗಾರರೂ ಕೂಡ ಉಧಮ್ ಸಿಂಗ್‌ನಿಂದ ಪ್ರೇರಣೆ ಪಡೆದಿದ್ದರು.

ʼನಾನು ಹುತಾತ್ಮನಾಗುತ್ತಿದ್ದೇನೆ, ಆದರೆ ನನ್ನ ರಕ್ತದಿಂದ ಸ್ವಾತಂತ್ರ್ಯದ ಬೆಳೆ ಬೆಳೆಯಲಿದೆʼ ಎಂದು ಕೊನೆಯ ಉಸಿರಿನವರೆಗೂ ʼಇಂಕ್ವಿಲಾಬ್‌ ಜಿ಼ಂದಾಬಾದ್ʼ ಘೋಷಣೆ ಕೂಗಿದ ಮಹಾನ್ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಅವರ 86ನೇ ಪುಣ್ಯಸ್ಮರಣೆ ಇಂದು. ಪ್ರತಿ ವರ್ಷ ಜುಲೈ 31ರಂದು ಇಡೀ ದೇಶ ಅವರ ತ್ಯಾಗವನ್ನು ಸ್ಮರಿಸುತ್ತದೆ.

- Advertisement -

ಸ್ವಾತಂತ್ರ ಹೋರಾಟ ಎಂಬುದು ಇತಿಹಾಸದಲ್ಲೇ ಭಾರತೀಯರು ಮರೆಯಲಾಗದ ಕರಾಳ ಘಟನೆ. 1919ರ ಏಪ್ರಿಲ್ 13ರಂದು ಪಂಜಾಬ್ ರಾಜ್ಯದ ಅಮೃತಸರ ನಗರದ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ವೈಶಾಖಿ ಹಬ್ಬದ ಸಭೆ ನಡೆಯುತ್ತಿತ್ತು. ಬ್ರಿಟಿಷ್ ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡೈಯರ್ ಆದೇಶದಂತೆ ಬ್ರಿಟಿಷ್ ಸೈನ್ಯ ಮನಬಂದಂತೆ ಗುಂಡಿನ ದಾಳಿ ನಡೆಸಿತು. ಈ ವೇಳೆ ಸಾವಿರಕ್ಕೂ ಹೆಚ್ಚು ನಿರಾಯುಧ ಭಾರತೀಯರು ಹುತಾತ್ಮರಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಗಾಯವಾದ 21 ವರ್ಷದ ಯುವಕನೇ ಸರ್ದಾರ್ ಉಧಮ್ ಸಿಂಗ್. ಗುಂಡು ತಗುಲಿ ಪ್ರಜ್ಞೆ ತಪ್ಪಿ ಬಿದ್ದರು. ಸತ್ತವರ ರಾಶಿಯಲ್ಲಿ ರಕ್ತದ ಮಡುವಿನೊಂದಿಗೆ ಮಲಗಿದ್ದ ಆತನ ಕಣ್ಣ ಮುಂದೆ ಸಾವಿರಾರು ಅಮಾಯಕರ ಸಾವು ಕಂಡಿತು. ಆ ದಿನವೇ ಆತ ʼಈ ರಕ್ತಕ್ಕೆ ಪ್ರತೀಕಾರ ತೀರಿಸುತ್ತೇನೆʼ ಎಂದು ಪ್ರತಿಜ್ಞೆ ಮಾಡಿದ.

21 ವರ್ಷಗಳವರೆಗೂ ಪ್ರತೀಕಾರದ ಯೋಜನೆ

ಗಾಯದಿಂದ ಚೇತರಿಸಿಕೊಂಡ ಉಧಮ್ ಸಿಂಗ್ ದೇಶ ಬಿಟ್ಟು ಹೋದರು. ಆಫ್ರಿಕಾ, ಅಮೆರಿಕ, ಜರ್ಮನಿ ಸುತ್ತಿದರು. ಅವರ ಒಂದೇ ಗುರಿ ಎಂದರೆ ಡೈಯರ್‌ನನ್ನು ಕೊಲ್ಲುವುದು. 1940ರ ಮಾರ್ಚ್ 13ರಂದು ಲಂಡನ್‌ನ ಕೇಕ್ಸ್ಟನ್ ಹಾಲ್‌ನಲ್ಲಿ ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿ ಸಭೆ ಇತ್ತು. ಅಲ್ಲಿ ಅತಿಥಿಯಾಗಿ ಬಂದಿದ್ದ ಪಂಜಾಬ್‌ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಡೈಯರ್‌ನ ಎದೆಯೊಳಗೆ ಉಧಮ್ ಸಿಂಗ್ 6 ಗುಂಡು ಹಾರಿಸಿದರು. ಡೈಯರ್ ಸ್ಥಳದಲ್ಲೇ ಕುಸಿದು ಬಿದ್ದ. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಉಧಮ್‌ ಸಿಂಗ್‌ ಈ ಐತಿಹಾಸಿಕ ಕೃತ್ಯವನ್ನು ಎಸಗಿದ್ದರು.

ಬ್ರಿಟಿಷ್ ಪೊಲೀಸರು ಆತನನ್ನು ಬಂಧಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶ ʼನಿನ್ನ ಹೆಸರೇನು?ʼ ಎಂದು ಕೇಳಿದಾಗ ʼರಾಮ್ ಮೊಹಮ್ಮದ್ ಸಿಂಗ್ ಆಜಾದ್ʼ ಎಂದು ಉತ್ತರಿಸಿದರು. ಇದರ ಅರ್ಥ: ಭಾರತದ ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಒಂದೇ ಎಂಬುದಾಗಿತ್ತು.

1940ರ ಜುಲೈ 31ರಂದು ಲಂಡನ್‌ನ ಪೆಂಟನ್ ವಿಲ್ಲೆ ಜೈಲಿನಲ್ಲಿ ಉಧಮ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು. ಕೊನೆಯವರೆಗೂ ಆತನ ಮುಖದಲ್ಲಿ ಭಯವಿರಲಿಲ್ಲ. ʼನಾನು ಭಾರತದ ಮಗ. ನನ್ನ ಕೆಲಸ ಮುಗಿಸಿದೆʼ ಎಂದು ನಗುತ್ತಲೇ ಗಲ್ಲು ಹತ್ತಿದನು. ಆ ದೇಶಪ್ರೇಮಿಯ ಚಿತಾಭಸ್ಮವನ್ನು 33 ವರ್ಷಗಳ ನಂತರ 1974ರಲ್ಲಿ ಭಾರತಕ್ಕೆ ತರಲಾಯಿತು. ಇಂದು ಪಂಜಾಬ್‌ನ ಸುನಾಮ್‌ನಲ್ಲಿ ಆತನ ಸಮಾಧಿ ಇದೆ.

ಉಧಮ್ ಸಿಂಗ್ ನಮಗೆ ಕೊಟ್ಟ ಪಾಠವೇ ಸ್ವಾಭಿಮಾನ. ತನ್ನ ನೆಲದ ಅವಮಾನವನ್ನು ಸಹಿಸದ ಛಲ ಮತ್ತು ಸಾಮರಸ್ಯ ರಾಮ್-ಮೊಹಮ್ಮದ್-ಸಿಂಗ್ ಎಂಬ ಹೆಸರಿನಲ್ಲಿ ಧರ್ಮಾತೀತ ಭಾರತದ ಕನಸು ಇತ್ತು. ಅವರ ತ್ಯಾಗ ವೈಯಕ್ತಿಕ ಜೀವನ, ಸುಖ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಜೀವನ ಸಮರ್ಪಣೆ ಮಾಡಿದರು.

ಇದನ್ನೂ ಓದಿದ್ದೀರಾ? ತುಮಕೂರು | ಎಸ್ಐಆರ್ ಗೊಂದಲ: 1.38 ಲಕ್ಷ ಮಂದಿ ಮತದಾರರು ಹೊರಗುಳಿಯುವ ಆತಂಕ

ಟಿಪ್ಪು ಸುಲ್ತಾನನ ಹುಲಿಯಂತೆ, ಬೋಸ್‌ರ ಐಎನ್‌ಎ ಹುಲಿಯಂತೆ, ಉಧಮ್ ಸಿಂಗ್ ಪ್ರತೀಕಾರದ ಹುಲಿಯಾಗಿದ್ದರು. ಸರ್ದಾರ್ ಉಧಮ್ ಸಿಂಗ್ ಕೇವಲ ಒಬ್ಬ ಕ್ರಾಂತಿಕಾರಿಯಲ್ಲ; ಅವರು ದೇಶಪ್ರೇಮಿಗಳಿಗೆ ಒಂದು ಸಂದೇಶ. ʼಅನ್ಯಾಯವನ್ನು ಸಹಿಸುವುದೂ ಕೂಡ ಮಹಾ ಪಾಪʼ ಎಂಬ ಸಂದೇಶದಿಂದ ಯುವ ಸ್ವಾತಂತ್ರ್ಯ ಹೋರಾಟಗಾರರೂ ಕೂಡ ಉಧಮ್ ಸಿಂಗ್‌ನಿಂದ ಪ್ರೇರಣೆ ಪಡೆದಿದ್ದರು.

ಇಂಥ ದೇಶಪ್ರೇಮಿಯ ಪುಣ್ಯಸ್ಮರಣೆಯಂದು, ʼದೇಶದ ಗೌರವಕ್ಕೆ ಚ್ಯುತಿಯಾದಾಗ ಮೌನವಾಗುವುದಿಲ್ಲʼವೆಂದು ಭಾರತೀಯರಾದ ನಾವೆಲ್ಲರೂ ಪ್ರತಿಜ್ಞೆ ಮಾಡೋಣ.

WhatsApp Image 2026 07 27 at 18.26.00
ಕೆ ಎಸ್ ಜಯಶಂಕರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅಂಬೇಡ್ಕರವರ ಅಧ್ಯಯನವೆಂದರೆ ಜಗತ್ತಿನ ಪ್ರಗತಿಯ ಅಧ್ಯಯನ : ಜಗನ್ನಾಥ ಹೆಬ್ಬಾಳೆ

ಡಾ.ಬಿ.ಆರ್.ಅಂಬೇಡ್ಕರ ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ. ಅವರು ಇಡೀ ಮನುಕುಲದ...

ಬೀದರ್‌ | ಸಂವಿಧಾನ ಮೌಲ್ಯಗಳಿಂದ ಸಾಮರಸ್ಯ ಸಮಾಜ ನಿರ್ಮಾಣ : ಸಚಿವ ಈಶ್ವರ ಖಂಡ್ರೆ

ವಿಶ್ವದಲ್ಲೇ ಅತ್ಯಂತ ಮಾದರಿಯಾದ ಹಾಗೂ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ಭಾರತದಲ್ಲಿ...

ಉಡುಪಿ | UAPA, NSA ಕಾಯ್ದೆಗಳು ಸಂವಿಧಾನಿಕ ಹಕ್ಕುಗಳ ದಮನಕ್ಕೆ ಅಸ್ತ್ರವಾಗುತ್ತಿವೆ : ಪ್ರೊ. ಫಣಿರಾಜ್

ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವಾಗಿ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ,...

ಸೆ.17ರಂದು ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ದತ್ತಿ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ವಾರ್ಷಿಕ ದತ್ತಿ...