ತುಮಕೂರು | ಎಸ್ಐಆರ್ ಗೊಂದಲ: 1.38 ಲಕ್ಷ ಮಂದಿ ಮತದಾರರು ಹೊರಗುಳಿಯುವ ಆತಂಕ

Date:

ಮತದಾರರ ಪಟ್ಟಿಯ ಶುದ್ಧೀಕರಣ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅರ್ಹ ಮತದಾರರ ಹೆಸರು ತಪ್ಪಾಗಿ ಕೈಬಿಡದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಹೊಣೆಗಾರಿಕೆಯೂ ಆಗಿದೆ. ವಿಶೇಷವಾಗಿ ಫಾರಂ ತಲುಪದವರು, ಎಪಿಕ್ ಕಾರ್ಡ್ ಇದ್ದರೂ ಹೆಸರು ಕಾಣದವರು, ಒಂದೇ ಕುಟುಂಬದ ಕೆಲವರ ಹೆಸರು ಮಾತ್ರ ಉಳಿದಿರುವಂತಹ ಪ್ರಕರಣಗಳಲ್ಲಿ ತಕ್ಷಣ ಸ್ಪಷ್ಟನೆ ಹಾಗೂ ಪರಿಹಾರ ನೀಡಬೇಕಿದೆ. 

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(Special Intensive Revision) ಪ್ರಕ್ರಿಯೆ ತುಮಕೂರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ, ಅರ್ಹ ಮತದಾರರ ಹೆಸರನ್ನೂ ಕೂಡ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜುಲೈ 28ರವರೆಗಿನ ಮಾಹಿತಿಯಂತೆ ಜಿಲ್ಲಾದ್ಯಂತ 1,38,550 ಮಂದಿ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಕಂಡುಬಂದಿದ್ದು, ಸಾವಿರಾರು ಮತದಾರರಲ್ಲಿ ಆತಂಕ ಮನೆ ಮಾಡಿದೆ.

- Advertisement -

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 22,98,879 ಮತದಾರರು ಇದ್ದಾರೆ. ಚುನಾವಣಾ ಅಧಿಕಾರಿಗಳ ಮಾಹಿತಿ ಪ್ರಕಾರ ಶೇ.100ರಷ್ಟು ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ. ಆದರೆ ವಿವಿಧ ಕಾರಣಗಳಿಂದ ಹಲವು ಅರ್ಹ ಮತದಾರರಿಗೆ ಫಾರಂಗಳೇ ತಲುಪಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ವಿತರಿಸಿದ ಫಾರಂಗಳ ಪೈಕಿ ಸುಮಾರು ಶೇ.85ರಷ್ಟು ಫಾರಂಗಳು ವಾಪಸ್ಸಾಗಿದ್ದು, ಆನ್‌ಲೈನ್ ಮೂಲಕ 11,447 ಅರ್ಜಿಗಳು ಸಲ್ಲಿಕೆಯಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಎಎಸ್‌ಡಿಡಿಓ ಪಟ್ಟಿಯಲ್ಲಿರುವ ಒಟ್ಟ 1.38 ಲಕ್ಷ ಮಂದಿ

ವಿವರಸಂಖ್ಯೆ
ಎಎಸ್‌ಡಿಡಿಓ ಪಟ್ಟಿಯಲ್ಲಿ ಒಟ್ಟು1,38,550
ಪತ್ತೆಯಾಗದವರು11,278
ಶಾಶ್ವತವಾಗಿ ಸ್ಥಳಾಂತರಗೊಂಡವರು73,353
ನಿಧನ ಹೊಂದಿದವರು41,226
ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿದವರು12,250
ಇತರೆ443 ಎಂದು ಗುರುತಿಸಲಾಗಿದೆ.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ, “ಈ ವರ್ಗಕ್ಕೆ ಸೇರಿದ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲಾಗುತ್ತದೆ. ಆದರೆ ಈ ಪಟ್ಟಿಯಲ್ಲಿಯೇ ಹಲವಾರು ಅರ್ಹ ಮತದಾರರೂ ಸೇರಿದ್ದಾರೆ” ಎಂಬ ಆರೋಪಗಳು ಕೇಳಿಬರುತ್ತಿವೆ.

ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದ ಹಲವರ ಹೆಸರುಗಳು ಈಗ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ. ಒಂದೇ ಕುಟುಂಬದಲ್ಲಿ ಮೂವರು ಮತದಾರರಿದ್ದರೆ ಒಬ್ಬರ ಹೆಸರು ಮಾತ್ರ ಉಳಿದು, ಉಳಿದ ಇಬ್ಬರ ಹೆಸರುಗಳು ಕಾಣೆಯಾಗಿರುವ ಉದಾಹರಣೆಗಳು ಬೆಳಕಿಗೆ ಬಂದಿವೆ. ಕೆಲ ಮನೆಗಳಲ್ಲಿ ಪತಿಗೆ ಎನುಮರೇಷನ್ ಫಾರಂ ನೀಡಲಾಗಿದ್ದರೆ, ಪತ್ನಿಯನ್ನು “ಪತ್ತೆಯಾಗದವರು” ಎಂದು ವರ್ಗೀಕರಿಸಲಾಗಿದೆ. ಇನ್ನೂ ಕೆಲವೆಡೆ ಪತ್ನಿಯ ಹೆಸರು ಪಟ್ಟಿಯಲ್ಲಿದ್ದರೆ, ಪತಿಯ ಹೆಸರು ಸಂಪೂರ್ಣವಾಗಿ ಕಾಣಿಸುತ್ತಿಲ್ಲ. ಇದರಿಂದ ʼಎಪಿಕ್ (EPIC) ಕಾರ್ಡ್ ಇದ್ದರೂ ಹೆಸರು ಏಕೆ ಇಲ್ಲʼ ಎಂಬುದು ಮತದಾರರ ಪ್ರಶ್ನೆಯಾಗಿದೆ.

ʼನಾಟ್ ಫೌಂಡ್ʼ, ʼಎರರ್ʼ ತೋರಿಸುತ್ತಿರುವ ಪೋರ್ಟಲ್

ಹೆಸರು ಕಾಣೆಯಾಗಿರುವ ಹಲವರು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ʼNot Foundʼ ಅಥವಾ ʼErrorʼ ಎಂಬ ಮಾಹಿತಿ ಬರುತ್ತಿದ್ದು, ಎಪಿಕ್ ಕಾರ್ಡ್ ಕೈಯಲ್ಲಿದ್ದರೂ ಹೆಸರು ಕಾಣದಿರುವುದು ಮತದಾರರಲ್ಲಿ ಗೊಂದಲ ಉಂಟುಮಾಡಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.

ಎನ್ಯುಮರೇಷನ್ ಫಾರಂ ಸಿಗದವರು ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಗದೆ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೆಲ ಅಧಿಕಾರಿಗಳು ಆಗಸ್ಟ್ ನಂತರ ಅರ್ಜಿ ನೀಡಿ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಆಗಸ್ಟ್ 25ರ ನಂತರ ಎಂದು ಸೂಚಿಸುತ್ತಿದ್ದಾರೆ. ಮತ್ತಷ್ಟು ಕಡೆಗಳಲ್ಲಿ ನಮೂನೆ-6 ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಎಂದು ತಿಳಿಸಲಾಗುತ್ತಿದೆ. ಒಂದೇ ವಿಷಯಕ್ಕೆ ವಿಭಿನ್ನ ಮಾಹಿತಿ ಸಿಗುತ್ತಿರುವುದರಿಂದ ಮತದಾರರು ಇನ್ನಷ್ಟು ಗೊಂದಲಕ್ಕೀಡಾಗಿದ್ದಾರೆ.

ಜೀವಂತ ವ್ಯಕ್ತಿಯನ್ನೇ ‘ಮೃತ’ ಎಂದು ಗುರುತು

ಕೆಲವೆಡೆ ಜೀವಂತವಾಗಿರುವ ಮತದಾರರನ್ನು ʼಮೃತʼ ಎಂದು ವರ್ಗೀಕರಿಸಿರುವ ಆರೋಪಗಳೂ ಕೇಳಿಬಂದಿವೆ. ತಿಪಟೂರು ವಿಧಾನಸಭಾ ಕ್ಷೇತ್ರದ ಕಂಚಾಘಟ್ಟ ಮತಗಟ್ಟೆಯಲ್ಲಿ ಕೆಲವು ಮತದಾರರ ಹೆಸರು ʼಡೆತ್ʼ ಎಂದು ದಾಖಲಿಸಲಾಗಿದೆ ಎನ್ನಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲೆ ಹೆಚ್ಚು ಅನರ್ಹ ಮತದಾರರನ್ನು ಗುರುತಿಸಲಾಗಿದೆ.

ವಿವರಸಂಖ್ಯೆ
ಒಟ್ಟು ಮತದಾರರು2,73,825
ಮೃತರು5,772
ಪತ್ತೆಯಾಗದವರು8,841
ಶಾಶ್ವತ ಸ್ಥಳಾಂತರ23,892
ಬೇರೆಡೆ ನೋಂದಣಿ1,640
ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ38,709

ಕರುಡು ಪಟ್ಟಿಯಿಂದ 38,709 ಮಂದಿ ಹೊರಗುಳಿಯುವ ಸಾಧ್ಯತೆ ಇದೆ. ಇವರಲ್ಲಿ ಬಹುತೇಕರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು, ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾರ್ಡ್ ಬದಲಿಸಿ ವಾಸವಾಗಿರುವವರೂ ಸೇರಿದ್ದಾರೆ ಎನ್ನಲಾಗಿದೆ. ಇಂತಹವರ ಹೆಸರುಗಳು ಹಳೆಯ ಮತಗಟ್ಟೆಯಲ್ಲೂ ಇಲ್ಲ, ಹೊಸ ಸ್ಥಳದಲ್ಲೂ ಇಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ದೂರುಗಳು ಕೇಳಿಬರುತ್ತಿವೆ.

ಶುದ್ಧೀಕರಣ ಅಗತ್ಯ, ಆದರೆ ಅರ್ಹರು ಕೈಬಿಡಬಾರದು

ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಮತದಾರರ ಪಟ್ಟಿಯ ಶುದ್ಧೀಕರಣಕ್ಕೆ ಅಗತ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ. ಹಲವು ವರ್ಷಗಳಿಂದ ಮೃತರ ಹೆಸರುಗಳು ಹಾಗೂ ಡುಪ್ಲಿಕೇಟ್ ಹೆಸರುಗಳು ಪಟ್ಟಿಯಲ್ಲೇ ಉಳಿದಿದ್ದವು. ಇವುಗಳನ್ನು ತೆರವುಗೊಳಿಸುವುದರಿಂದ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಹೆಚ್ಚಲಿದೆ. ಆದರೆ, ಇದೇ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರೂ ಕೈಬಿಡುತ್ತಿರುವ ಆರೋಪಗಳು ಗಂಭೀರವಾಗಿದ್ದು, ಪ್ರತಿಯೊಂದು ಪ್ರಕರಣವನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರ ಪ್ರಕಾರ, “ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಒಂದು ಶುದ್ಧೀಕರಣ ಪ್ರಕ್ರಿಯೆಯಾಗಿದ್ದು, ಅರ್ಹರನ್ನು ಕೈಬಿಡುವ ಉದ್ದೇಶ ಇಲ್ಲ; ಅರ್ಹ ಮತದಾರರು ಆತಂಕ ಪಡುವ ಅಗತ್ಯವಿಲ್ಲ. ಆಗಸ್ಟ್ 8ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರವೂ ಹೆಸರು ಸೇರ್ಪಡೆಗೆ ಅವಕಾಶ ಇರುತ್ತದೆ. ಹೆಸರು ಕೈಬಿಟ್ಟಿದ್ದರೆ ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತದೆ. ಈಗ ನಡೆಯುತ್ತಿರುವುದು ಕರಡು ಪಟ್ಟಿಯ ಪ್ರಕ್ರಿಯೆ ಮಾತ್ರ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ? ವಿಜಯಪುರ | ಮನೆಗೂ ಬಾರದ, ಕರೆಗೂ ಸಿಗದ ಬಿಎಲ್‌ಒ; ಪಟ್ಟಿಯಿಂದ ಹೊರಗುಳಿವ ಆತಂಕದಲ್ಲಿ ಮತದಾರ

ಮತದಾರರ ಪಟ್ಟಿಯ ಶುದ್ಧೀಕರಣ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅರ್ಹ ಮತದಾರರ ಹೆಸರು ತಪ್ಪಾಗಿ ಕೈಬಿಡದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಹೊಣೆಗಾರಿಕೆಯೂ ಆಗಿದೆ. ವಿಶೇಷವಾಗಿ ಫಾರಂ ತಲುಪದವರು, ಎಪಿಕ್ ಕಾರ್ಡ್ ಇದ್ದರೂ ಹೆಸರು ಕಾಣದವರು, ಒಂದೇ ಕುಟುಂಬದ ಕೆಲವರ ಹೆಸರು ಮಾತ್ರ ಉಳಿದಿರುವಂತಹ ಪ್ರಕರಣಗಳಲ್ಲಿ ತಕ್ಷಣ ಸ್ಪಷ್ಟನೆ ಹಾಗೂ ಪರಿಹಾರ ನೀಡಬೇಕಿದೆ. ಕರಡು ಪಟ್ಟಿ ಪ್ರಕಟವಾಗುವ ಮುನ್ನವೇ ಈ ಗೊಂದಲಗಳಿಗೆ ತೆರೆ ಬೀಳದಿದ್ದರೆ, ಅಂತಿಮ ಮತದಾರರ ಪಟ್ಟಿಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.

WhatsApp Image 2024 08 09 at 10.52.48 1578a566
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸನಗರ | ರೂ. 4 ಲಕ್ಷ ಮೌಲ್ಯದ ಸಾಗುವಾನಿ ನಾಟ ವಶ!

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ...

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮೈಶುಗರ್ ಸಕ್ಕರೆ ಗೋದಾಮಿಗೆ ರೈತರ ಮುತ್ತಿಗೆ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ...

ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ...

ಕಬ್ಬು ಬೆಳೆಗಾರರ ರಕ್ಷಣೆಗೆ ಪ್ರತ್ಯೇಕ ವಿಮೆ, ನ್ಯಾಯಯುತ ಬೆಲೆ ಸೇರಿದಂತೆ 12 ಬೇಡಿಕೆ

ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹6,000 ಕನಿಷ್ಠ...