SIR | ಚುನಾವಣಾ ಆಯೋಗ ತೆರೆದಿರುವ ಹೆಲ್ಪ್‌ ಡೆಸ್ಕ್‌ ಬಗ್ಗೆ ತಿಳಿಯಿರಿ; ಪ್ರಶ್ನೆ ಕೇಳಿ – ನಿಮ್ಮ ಮತ ಉಳಿಸಿಕೊಳ್ಳಿ!

Date:

ರಾಜ್ಯದಲ್ಲಿ ಇಂದಿನಿಂದ (ಜೂನ್ 30) SIR ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದಕ್ಕಾಗಿ 2002ರ ಮತಪಟ್ಟಿ ಪಡೆಯಬೇಕು. ಈ ಎಲ್ಲ ವಿಚಾರಕ್ಕೆ ನಿಮಗೆ ಸಹಾಯ ಬೇಕಾದರೆ, ಗೊಂದಲಗಳಿದ್ದರೆ ಚುನಾವಣಾ ಆಯೋಗವು ಪ್ರತಿ ಬೂತ್‌ ಮಟ್ಟದಲ್ಲಿ ತೆರೆದಿರುವ ವೋಟರ್ ಫೆಸಿಲಿಟೇಶನ್ ಸೆಂಟರ್‌ನ ಪ್ರಯೋಜನ ಪಡೆಯಬಹುದು. ನಿಮ್ಮ ಹೆಸರು ಸಿಗದಿದ್ದರೆ, ದಾಖಲೆ ಇಲ್ಲದಿದ್ದರೆ ಎಲ್ಲವನ್ನು ಅವರಿಂದ ಕೇಳಿ ತಿಳಿದುಕೊಳ್ಳಬಹುದು.

- Advertisement -

ನಿಮ್ಮ ಹೆಲ್ಫ್ ಡೆಸ್ಕ್ ಎಲ್ಲಿದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ನಿಮ್ಮ ಬಿಎಲ್‌ಓ ನಂಬರ್, ತಹಶೀಲ್ದಾರ್ ನಂಬರ್, ಎಸಿ ನಂಬರ್ ಪಡೆಯುವುದು ಈಗ ಸುಲಭ. ಗೂಗಲ್‌ನಲ್ಲಿ ceo karnataka ಎಂದು ಸರ್ಚ್ ಮಾಡಿದರೆ ಸಿಗುವ ಕರ್ನಾಟಕ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ know your Voter Facilitation Center ಎಂದು ಪಾಪ್ ಅಪ್ ಆಗುತ್ತಿರುವುದರ ಮೇಲೆ ಕ್ಲಿಕ್ ಮಾಡಿ. ನಂತರ, ಜಿಲ್ಲೆ ಆಯ್ಕೆ ಮಾಡಿ, ನಿಮ್ಮ ಪ್ರಸ್ತುತ ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿ ಮತ್ತು ಮೂರನೇ ಕಾಲಂನಲ್ಲಿ ನಿಮ್ಮ ಬೂತ್ ಯಾವುದು ಎಂದು ಸ್ಕ್ರೋಲ್ ಮಾಡುತ್ತ ಆಯ್ಕೆ ಮಾಡಿ.

ಆಗ ಕೆಳಗೆ ತನ್ನಿಂದ ತಾನೇ ನಿಮ್ಮ ಬೂತ್‌ನ ಬಿಎಲ್‌ಎ ಹೆಸರು ಮತ್ತು ಫೋನ್ ನಂಬರ್, Voter Facilitation Center ಯಾವುದು? ಬಿಎಲ್‌ಒ ಸೂಪರ್ ವೈಸರ್ ಹೆಸರು ಮತ್ತು ಫೋನ್ ನಂಬರ್ ಯಾವುದು? ಬಿಎಲ್‌ಒ Facilitation Center ಯಾವುದು? AERO ಅಂದರೆ ತಹಶೀಲ್ದಾರ್ ಹೆಸರು ಮತ್ತು ಫೋನ್ ನಂಬರ್, AERO ಅಂದರೆ ಎಸಿ ಹೆಸರು ಮತ್ತು ಫೋನ್ ನಂಬರ್ ಕಾಣುತ್ತದೆ. ಅದನ್ನು ಬರೆದಿಟ್ಟುಕೊಂಡು ಬಿಎಲ್‌ಒಗೆ ಫೋನ್ ಮಾಡಿ ಏನೇ ಗೊಂದಲ ಇದ್ದರೂ ಬಗೆಹರಿಸಿಕೊಳ್ಳಬಹುದು.

ಈ ರೀತಿ ಮಾಡಿದಾಗ ಕೆಲವು ಬೂತ್‌ಗಳಲ್ಲಿ ತಪ್ಪಾಗಿ ಪಕ್ಕದ ಬೂತ್‌ ಬಿಎಲ್‌ಒ ನಂಬರ್ ಬಂದುಬಿಟ್ಟಿರುತ್ತದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲುಕಿನ 50ನೇ ಬೂತ್‌ನಲ್ಲಿ ಈ ತಪ್ಪು ಆಗಿದೆ. ತಿದ್ದಿಕೊಳ್ಳಿ ಎಂದು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಯಾವುದಕ್ಕೂ ನೀವು ನಿಮ್ಮ ಬಿಎಲ್‌ಗೆ ಫೋನ್ ಮಾಡಿ ನಿಮ್ಮದೇ ಬೂತ್‌ನ ಜವಾಬ್ದಾರಿ ಅವರಿಗಿದೆ ಅಲ್ಲವೇ ಎಂದು ಕನ್ಫರ್ಮ್ ಮಾಡಿಕೊಳ್ಳಬೇಕು.

ನೀವು ಬಿಎಲ್‌ಒ Facilitation Centerಗೆ ಹೋಗಿ 2002ರ ಮತಪಟ್ಟಿ ಪಡೆಯಬಹುದು. ನಿಮ್ಮದು ಸರಿಯಾಗಿ ಮ್ಯಾಪಿಂಗ್ ಆಗಿದೆಯೇ ಎಂದು ಚೆಕ್ ಮಾಡಬಹುದು. ತಪ್ಪಾಗಿದ್ದರೆ ಅವರಿಗೆ ತಿಳಿ ಹೇಳಿ ಎನ್ಯುಮರೇಷನ್ ಫಾರ್ಮ್ ತುಂಬುವಾಗ ಸರಿಯಾಗಿ ಅಪ್ಲೋಡ್ ಮಾಡಿ ಎಂದು ತಾಕೀತು ಮಾಡಬಹುದು. ಚುನಾವಣಾ ಆಯೋಗವು ಒಬ್ಬ ಅರ್ಹ ವ್ಯಕ್ತಿಯ ಮತ ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಿದೆ. ಆದರೆ, ಮ್ಯಾಪಿಂಗ್-ಮ್ಯಾಚಿಂಗ್ ಹೆಸರಲ್ಲಿ ನಮಗೆ ಏಕೆ ತೊಂದರೆ ಕೊಡುತ್ತೀರಿ? ದಾಖಲೆಗಾಗಿ ಅಲೆದಾಡಿಸುತ್ತಿರಿ ಎಂದು ಕೇಳಬೇಕು. ಆ ಮೂಲಕ ನಿಮ್ಮ ಬೂತ್‌ನ ಒಬ್ಬ ಅರ್ಹ ವ್ಯಕ್ತಿಯ ಮತ ಸಹ ಪಟ್ಟಿಯಲ್ಲಿ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

SIR ವಿವಾದದ ನಡುವೆ ಒಡಿಶಾ ಮುಖ್ಯ ಚುನಾವಣಾಧಿಕಾರಿ ಸ್ವಯಂ ನಿವೃತ್ತಿಗೆ ಅರ್ಜಿ; ಆರ್ ಎಸ್ ಗೋಪಾಲನ್ ಹೇಳಿದ್ದೇನು?

ಒಡಿಶಾದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ...

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಕಾರ ಆರೋಪ; ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ

ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ 20 ವರ್ಷದ ಬುಡಕಟ್ಟು (ದಲಿತ) ಮಹಿಳೆಯೊಬ್ಬರು...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್ ಭಾಷಣದ ಹಿಂದಿದೆ ಮೋದಿ ಸರ್ಕಾರದ ವೈಫಲ್ಯದ ಮುಖವಾಡ

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು...