ಪುಣೆ ನೆಲದಲ್ಲಿ ‘Smash the Patriarchy’ ಮುಖಾಮುಖಿ: ಪಿತೃಪ್ರಧಾನ ಕೋಟೆಯಲ್ಲಿ ಮಹಿಳಾ ಸ್ವಾತಂತ್ರ್ಯದ ಧ್ವನಿ

Date:

"ನೀವೇ ಶಕ್ತಿ, ನೀವೇ ದೇಶದ ಅಧಿಪತಿ, ನೀವೇ ಭವಿಷ್ಯ. ಈ ಪಿತೃಪ್ರಧಾನ ವ್ಯವಸ್ಥೆ ನಿಮ್ಮನ್ನು ತುಳಿಯುತ್ತದೆ, ಬೆದರಿಸುತ್ತದೆ. ನಾವೆಲ್ಲರೂ ಸೇರಿ ಇದನ್ನು ಮುಗಿಸಬೇಕು. Smash the Patriarchy" ಅಂದರೆ — "ಪಿತೃಪ್ರಧಾನ ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯಿರಿ"

ನಿನ್ನೆ ಪುಣೆಯಲ್ಲಿ ನಡೆದ ‘ಚಾತ್ರೋಂ ಕೀ ಗೂಂಜ್’ ವಿದ್ಯಾರ್ಥಿನಿಯರ ಸಮಾವೇಶದಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಪ್ರಥಮ ಬಾರಿಗೆ ಪಿತೃಪ್ರಧಾನ ವ್ಯವಸ್ಥೆಯ ಕುರಿತು ಘರ್ಜಿಸಿದ್ದಾರೆ.

- Advertisement -

ಇಡೀ ಸಮಾವೇಶದಲ್ಲಿ ಭಾರತದ ಮಹಿಳೆಯರ ಸ್ಥಿತಿಗತಿಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸುವುದರ ಜತೆಗೆ, ಕೆಲವು ಪೀಡಿತ ಮಹಿಳೆಯರಿಗೆ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದು ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳಾ ಕಥನಕ್ಕೆ ಒಂದು ಅದ್ಭುತ ಉದಾಹರಣೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಇದನ್ನೂ ಓದಿ: ‘ಮಹಿಳೆಯರು ಭಾರತದ ಅತಿದೊಡ್ಡ ಆಸ್ತಿ, ಪುರುಷರೊಂದಿಗಿನ ಸಂಬಂಧದಿಂದಷ್ಟೇ ಗುರುತಿಸಿಕೊಳ್ಳಬಾರದು’: ರಾಹುಲ್ ಗಾಂಧಿ

ಪೇಶ್ವೆಗಳ ರಾಜಧಾನಿ, ಮನುವಾದಿ ಚಿಂತನೆಯ ಐತಿಹಾಸಿಕ ನೆಲವಾದ ಪುಣೆಯಲ್ಲಿ ನಿಂತು ಮನುವಾದ ಮತ್ತು ಪಿತೃಪ್ರಧಾನತೆಯ ವಿರುದ್ಧ ಗುಡುಗಿದ್ದು ರೋಚಕವಾಗಿತ್ತು. ಸಾಂಸ್ಕೃತಿಕವಾಗಿ ಮಹಿಳೆಯರನ್ನು ಯಾವ ರೀತಿ ಬಂಧನದಲ್ಲಿಡಲಾಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದು ಸಮಾಜದ ವಾಸ್ತವವನ್ನೇ ಅಣಕಿಸುವಂತಿತ್ತು.

ಮಹಿಳೆಯನ್ನು ಸ್ವತಂತ್ರ ವ್ಯಕ್ತಿಯಾಗಿ ಗುರುತಿಸುವ ಬದಲು, ಯಾರದ್ದೋ ಮಗಳು, ಸೊಸೆ ಅಥವಾ ಹೆಂಡತಿಯ ರೂಪದಲ್ಲೇ ಸಂಬೋಧಿಸುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಹೆಚ್ಚಾಗಿ ಆಕೆಯ ಗುರುತನ್ನು ತಂದೆ ಅಥವಾ ಗಂಡನ ಹೆಸರಿನೊಂದಿಗೆ ಜೋಡಿಸಲಾಗುತ್ತದೆ. ಆಕೆಯನ್ನು ‘ಆಕೆ’ಯಾಗಿ ನೋಡುವುದಕ್ಕಿಂತ, ಯಾವುದೋ ಪುರುಷನ ಸಂಬಂಧದ ಮೂಲಕ ಗುರುತಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮೂಲ ಸಮಸ್ಯೆ.

ಹಾಗಾಗಿಯೇ ಸ್ವಾತಂತ್ರ್ಯ ಬಂದು ಎಂಬತ್ತು ವರ್ಷಗಳು ಕಳೆದರೂ, ಆಕೆ ಇನ್ನೂ ಅನೇಕ ನೆಲೆಗಳಲ್ಲಿ ದ್ವಿತೀಯ ದರ್ಜೆಯ ಪ್ರಜೆಯಂತೆ ಬದುಕಬೇಕಾದ ಪರಿಸ್ಥಿತಿ ಇದೆ. ಆದರೆ ಇಂದು ವಿರೋಧ ಪಕ್ಷದ ನಾಯಕರು ಹೇಳಿರುವ ಮಾತು ನಿಜಕ್ಕೂ ಗಮನಾರ್ಹ.

ರಾಹುಲ್ ಗಾಂಧಿ ಅವರು ಸ್ಪಷ್ಟವಾಗಿ ಹೇಳುತ್ತಾರೆ —

“ನೀವೇ ಶಕ್ತಿ, ನೀವೇ ದೇಶದ ಅಧಿಪತಿ, ನೀವೇ ಭವಿಷ್ಯ. ಈ ಪಿತೃಪ್ರಧಾನ ವ್ಯವಸ್ಥೆ ನಿಮ್ಮನ್ನು ತುಳಿಯುತ್ತದೆ, ಬೆದರಿಸುತ್ತದೆ. ನಾವೆಲ್ಲರೂ ಸೇರಿ ಇದನ್ನು ಮುಗಿಸಬೇಕು. Smash the Patriarchy.”

ಅಂದರೆ — “ಪಿತೃಪ್ರಧಾನ ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯಿರಿ.”

ಇದು ಅಗತ್ಯವೂ ಹೌದು.

ಮಹಿಳೆಯರು ಮನೆಯಲ್ಲಿ ಹನ್ನೆರಡು–ಹದಿಮೂರು ಗಂಟೆಗಳ ಕಾಲ ಸಂಬಳವಿಲ್ಲದೆ ದುಡಿಯುತ್ತಾರೆ. ಆದರೆ ಆ ಶ್ರಮಕ್ಕೆ ಸಿಗುವ ಪ್ರತಿಫಲವೇನು?

ಅದನ್ನೇ ಮಹಿಳೆಯರ ‘ನೈಸರ್ಗಿಕ ಕರ್ತವ್ಯ’ ಎಂದು ವೈಭವೀಕರಿಸಲಾಗುತ್ತದೆ.

rahul gandhi 83
ಪುಣೆಯಲ್ಲಿ ನಡೆದ ‘ಚಾತ್ರೋಂ ಕೀ ಗೂಂಜ್’ ವಿದ್ಯಾರ್ಥಿನಿಯರ ಸಮಾವೇಶ

ಇದನ್ನೂ ಓದಿ: ಜೆನ್ ಝೀಗಳ‌ ಕ್ರಷ್ ಆದ್ರಾ ರಾಹುಲ್ ಗಾಂಧಿ? – ಪುಣೆ ಸಂವಾದದಲ್ಲಿ ಯುವತಿಯರ ಲವ್‌ ಮೆಸೇಜ್!

ಪಿತೃಪ್ರಧಾನ ಸಮಾಜದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು, ಮನೆ ಸಂಭಾಳಿಸುವುದು ಮಹಿಳೆಯ ಕೆಲಸ; ಪುರುಷ ಹೊರಗೆ ಹೋಗಿ ದುಡಿಯಬೇಕು ಎಂಬ ಲಿಂಗಾಧಾರಿತ ಕೆಲಸದ ವಿಭಜನೆ ಇಂದಿಗೂ ಗಟ್ಟಿಯಾಗಿ ಬೇರೂರಿದೆ. ಪುರುಷನ ಹೊರಗಿನ ದುಡಿಮೆಗೆ ಸಂಬಳ ಸಿಗುತ್ತದೆ. ಆದರೆ ಮಹಿಳೆಯ ಮನೆಯೊಳಗಿನ ದುಡಿಮೆಗೆ ಸಿಗುವುದೇನು?

“ನಿನ್ನ ಮಗುವನ್ನು ನೀನು ನೋಡಿಕೊಳ್ಳದಿದ್ದರೆ ಇನ್ನಾರು ನೋಡಿಕೊಳ್ಳುತ್ತಾರೆ?” ಎಂಬ ಪ್ರಶ್ನೆಯ ಮೂಲಕ ಮನೆಯ ಜವಾಬ್ದಾರಿಯನ್ನೆಲ್ಲ ಮಹಿಳೆಯ ಹೆಗಲಿಗೆ ಹಾಕುವುದನ್ನೇ ಸಹಜವೆಂದು ಬಿಂಬಿಸಲಾಗುತ್ತದೆ.

ಮಹಿಳೆಯರ ಸಮಸ್ಯೆಗಳ ಕುರಿತು ಇಷ್ಟೊಂದು ಪ್ರಾಮುಖ್ಯತೆಯಿಂದ ಒಬ್ಬ ಪ್ರಮುಖ ರಾಜಕೀಯ ನಾಯಕ ಬಹಿರಂಗವಾಗಿ ಮಾತನಾಡುತ್ತಿರುವುದನ್ನು ನಾನು ಮೊದಲ ಬಾರಿಗೆ ನೋಡುತ್ತಿದ್ದೇನೆ. ನಿಜಕ್ಕೂ ನಾನು ದಿಗ್ಭ್ರಮೆಗೊಂಡಿದ್ದೇನೆ.

ಸಂಪೂರ್ಣ ಸಮಾವೇಶವನ್ನು ವೀಕ್ಷಿಸಿದಾಗ ಮಹಿಳೆಯರು ತಮ್ಮ ಬದುಕಿನಲ್ಲಿ ಎದುರಿಸುವ ಸಂಕಷ್ಟಗಳ ಸುತ್ತಲೇ ಚರ್ಚೆ ಸಾಗಿರುವುದು ಕಾಣುತ್ತದೆ.

ಹಲವು ಮಹಿಳೆಯರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಮನೆಯಿಂದ ಹೊರಗೆ ಬರಲು ಬಿಡುವುದಿಲ್ಲ. ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ಸಿಗುವುದಿಲ್ಲ. ಕುಟುಂಬ ಮತ್ತು ಸಮಾಜದ ಒತ್ತಡದಿಂದ ಬೇಗನೆ ಮದುವೆ ಮಾಡಲಾಗುತ್ತದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಮಕ್ಕಳ ಜವಾಬ್ದಾರಿ ಹೆಗಲೇರುತ್ತದೆ. ನಂತರ ಸಂಸಾರದ ಜಂಜಾಟದಲ್ಲಿ ಸಿಲುಕಿ ತಮ್ಮ ಕನಸು ಮತ್ತು ಸ್ವಂತ ಬದುಕಿನಿಂದ ದೂರವಾಗುತ್ತಾರೆ.

ಮನುವಾದದ ಕುರಿತು ಮಾತನಾಡುವಾಗ ಮನುಸ್ಮೃತಿಯ ಉದಾಹರಣೆಯನ್ನೂ ನೀಡಲಾಯಿತು. ಮಹಿಳೆ ಜೀವನದ ವಿವಿಧ ಹಂತಗಳಲ್ಲಿ ಪುರುಷರ ಅಧೀನದಲ್ಲಿರಬೇಕು ಎಂಬ ಮನುಸ್ಮೃತಿಯ ಪ್ರಸಿದ್ಧ ವ್ಯಾಖ್ಯಾನವನ್ನು ಉಲ್ಲೇಖಿಸಲಾಯಿತು —

ಮದುವೆಗೆ ಮೊದಲು ತಂದೆಯ ಅಧೀನ, ನಂತರ ಪತಿಯ ಅಧೀನ ಮತ್ತು ನಂತರ ಮಗನ ಅಧೀನ. “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” — ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಮನುವಾದಿ ಚಿಂತನೆಯ ವಿರುದ್ಧವೇ ನಾವು ನಿಲ್ಲಬೇಕಾಗಿದೆ ಎಂಬ ಸಂದೇಶ ಅಲ್ಲಿ ಸ್ಪಷ್ಟವಾಗಿತ್ತು.

ಇದನ್ನೂ ಓದಿ: ‘ಸೈಲೆಂಟ್ ಗಾರ್ಡಿಯನ್, ರಿಯಲ್ ಲೈಫ್ ಬ್ಯಾಟ್‌ಮ್ಯಾನ್’- ರಾಹುಲ್ ಗಾಂಧಿ ಪೋಸ್ಟರ್ ವೈರಲ್!

ಈ ರೀತಿಯ ಚರ್ಚೆ ಮತ್ತು ಬೆಂಬಲ ಮಹಿಳೆಯರಿಗೆ ದೇಶದ ವಿರೋಧ ಪಕ್ಷದ ನಾಯಕರಿಂದ ದೊರೆಯುತ್ತಿರುವುದು ಸಮಾಧಾನ ತರುವ ಸಂಗತಿ. ನಿಜ ಹೇಳಬೇಕೆಂದರೆ — ಇಪ್ಪತ್ತೊಂದನೇ ಶತಮಾನದ ರಾಜಕೀಯದಲ್ಲಿ ಇಂತಹ ಚರ್ಚೆಗಳೇ ಹೆಚ್ಚಾಗಬೇಕು. ಹಿಂದುಳಿದ ವರ್ಗಗಳ ಮಹಿಳೆಯರಷ್ಟೇ ಅಲ್ಲದೆ, ಜಾತಿ–ಸಮುದಾಯಗಳ ಗಡಿ ಮೀರಿ ಅವಕಾಶವಂಚಿತ ಮತ್ತು ಶೋಷಿತ ಮಹಿಳೆಯರ ಸಮಸ್ಯೆಗಳ ಬಗ್ಗೆಯೂ ಇಲ್ಲಿ ಮಾತನಾಡಲಾಯಿತು.

ಅವರು ಹೇಳಿದ ಮತ್ತೊಂದು ಮಾತು ಬಹಳ ಮುಖ್ಯ —

“ನೀವು ಯಾರದ್ದೋ ಮಗಳು, ಸೊಸೆ ಅಥವಾ ಹೆಂಡತಿಯಾಗುವ ಮೊದಲು ಒಬ್ಬ ಮಹಿಳೆ. ಅದೇ ನಿಮ್ಮ ನಿಜಗುರುತು.”

ಈ ಮಾತು ಪುಣೆಯ ಅದೇ ಐತಿಹಾಸಿಕ ನೆಲದಲ್ಲಿ ಮೊಳಗಿರುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ.

ಬಹಳ ಮುಖ್ಯವಾಗಿ, ಜಂತರ್ ಮಂತರ್‌ನಲ್ಲಿ ಯುವತಿಯರು ಬಳಸಿದ ಭಾಷೆ ತಮಗೆ “cultural shock” ನೀಡಿತು ಎಂಬ ಪ್ರಧಾನಮಂತ್ರಿಯವರ ಹೇಳಿಕೆಗೆ ಪ್ರತಿಯಾಗಿ, ನೇಹಾ ಸಿಂಗ್ ರಾಥೋಡ್ ಅವರ ಮೂಲಕ ಬಿಜೆಪಿ ಐಟಿ ಸೆಲ್‌ನ ಭಾಷೆ ಮತ್ತು ಸಂಸ್ಕೃತಿಯ ಕುರಿತು ಪ್ರಶ್ನೆಗಳನ್ನು ಎತ್ತಿ, “cultural shock”ಗೆ “cultural current shock” ಮೂಲಕ ತಿರುಗೇಟು ನೀಡಿದ ರೀತಿ ಗಮನ ಸೆಳೆಯಿತು.

rahul gandhi1
ಪುಣೆಯಲ್ಲಿ ನಡೆದ ‘ಚಾತ್ರೋಂ ಕೀ ಗೂಂಜ್’ ವಿದ್ಯಾರ್ಥಿನಿಯರ ಸಮಾವೇಶ

ಇಲ್ಲಿ ಓದುಗರಿಗೆ ಸಹಜವಾಗಿಯೇ ಮತ್ತೊಂದು ಪ್ರಶ್ನೆ ಮೂಡಬಹುದು —

ಇಂದು ಕಾಂಗ್ರೆಸ್ ಪಕ್ಷದಲ್ಲಿಯೇ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ಕಾಣದಿರುವುದಕ್ಕೂ ಇದೇ ಪುರುಷಪ್ರಧಾನ ವ್ಯವಸ್ಥೆ ಕಾರಣವಲ್ಲವೇ?

“ರಾಹುಲ್ ಗಾಂಧಿಯವರೇ ಕಾಂಗ್ರೆಸ್‌ನ ಪ್ರಮುಖ ನಾಯಕತ್ವದಲ್ಲಿರುವಾಗ ಪಕ್ಷದಲ್ಲಿ ಈ ಅನ್ಯಾಯವೇಕೆ” ಎಂಬ ಪ್ರಶ್ನೆಗೂ ನನ್ನ ನೇರ ಉತ್ತರ ಇಷ್ಟೇ —

ಇಡೀ ಸಮಾಜವೇ ಮಹಿಳೆಯರ ಕುರಿತು ಸಂಕುಚಿತವಾಗಿ ಯೋಚಿಸುತ್ತಿರುವಾಗ, ಒಂದು ರಾಜಕೀಯ ಪಕ್ಷ ಮಾತ್ರ ಅದರ ಪ್ರಭಾವದಿಂದ ಸಂಪೂರ್ಣ ಹೊರಗಿರಲು ಹೇಗೆ ಸಾಧ್ಯ? ಆದರೆ ಅದನ್ನೇ ನೆಪ ಮಾಡಿಕೊಂಡು ಅನ್ಯಾಯವನ್ನು ಮುಂದುವರಿಸಲಾಗದು. ಬದಲಾವಣೆ ಹಠಾತ್ತನೆ ಸಂಭವಿಸುವುದಿಲ್ಲ; ಆದರೆ ಬದಲಾವಣೆಯ ಮೊದಲ ಹೆಜ್ಜೆ ಇಡುವುದು ನಾಯಕತ್ವದ ಹೊಣೆ.

ರಾಹುಲ್ ಗಾಂಧಿಯವರು ಆ ಹೆಜ್ಜೆಯನ್ನು ಇಟ್ಟಿದ್ದಾರೆ. ಮಹಿಳಾ ಪ್ರಾತಿನಿಧ್ಯವನ್ನು ವಾಸ್ತವದಲ್ಲಿ ಹೆಚ್ಚಿಸುವುದಕ್ಕೆ ಸಮಯ ಹಿಡಿಯಬಹುದು; ಆದರೆ ಅದು ಖಂಡಿತವಾಗಿಯೂ ಅಸಾಧ್ಯವಲ್ಲ. ಅವರ ಮಾತು ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಮಹಿಳಾ ಪ್ರಾತಿನಿಧ್ಯದಲ್ಲಿಯೂ ಪ್ರತಿಫಲಿಸಬೇಕು. ಆಗ ಮಾತ್ರ ಈ ಘೋಷಣೆಗೆ ಇನ್ನಷ್ಟು ಅರ್ಥ ಮತ್ತು ವಿಶ್ವಾಸಾರ್ಹತೆ ಸಿಗುತ್ತದೆ.

ಒಟ್ಟಾರೆಯಾಗಿ, ಪುಣೆಯ ನೆಲದಲ್ಲಿ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ “Smash the Patriarchy” ಎಂದು ಘೋಷಿಸುವ ಮೂಲಕ ಒಂದು ಗಟ್ಟಿಯಾದ ಸಾಂಸ್ಕೃತಿಕ ಸಂದೇಶವನ್ನು ರಾಹುಲ್ ಗಾಂಧಿಯವರು ನೀಡಿದ್ದಾರೆ.

ಮಹಿಳೆಯನ್ನು ಯಾರದ್ದೋ ಮಗಳು, ಪತ್ನಿ, ಸೊಸೆ ಅಥವಾ ತಾಯಿಯಾಗಿ ಮಾತ್ರವಲ್ಲ — ತನ್ನದೇ ಗುರುತು, ಕನಸು, ಸ್ವಾತಂತ್ರ್ಯ ಮತ್ತು ಹಕ್ಕುಗಳಿರುವ ಸ್ವತಂತ್ರ ವ್ಯಕ್ತಿಯಾಗಿ ನೋಡುವ ರಾಜಕೀಯ ಧ್ವನಿ ಗಟ್ಟಿಯಾಗುತ್ತಿರುವುದು ಸಮಾಧಾನಕರ ಸಂಗತಿ.

ಮಹಿಳೆಯ ನೋವನ್ನು ರಾಜಕೀಯದ ವಿಷಯವನ್ನಾಗಿ ಮಾತ್ರವಲ್ಲ, ಸಮಾಜದ ಆತ್ಮಾವಲೋಕನದ ವಿಷಯವನ್ನಾಗಿ ಮುನ್ನೆಲೆಗೆ ತಂದ ರಾಹುಲ್ ಗಾಂಧಿಯವರು — ಮಾತೃಹೃದಯದ ನಾಯಕರಾಗಿ ಹೊರಹೊಮ್ಮುತ್ತಿರುವುದು ಆಶಾದಾಯಕ ಬೆಳವಣಿಗೆ.

WhatsApp Image 2025 04 02 at 16.54.22 95e2f575
ಶೈಲಜಾ ಹಿರೇಮಠ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...

ಎಐ ದುರ್ಬಳಕೆ; ಅಶ್ಲೀಲ ವಿಡಿಯೋ, ಫೋಟೋ ವೈರಲ್: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಎಐ ತಂತ್ರಜ್ಞಾನ ಬಳಸಿ ರಚಿಸಲಾದ ಅಶ್ಲೀಲ ಮತ್ತು ನಕಲಿ...

ಬೀದರ್‌ | ನ.28, 29ರಂದು ಅನುಭವ ಮಂಟಪ ಉತ್ಸವ : ತುಮಕೂರು ಸಿದ್ಧಗಂಗೆ ಶ್ರೀಗಳಿಗೆ ಆಹ್ವಾನ

ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಗರದ ಅನುಭವ ಮಂಟಪ ಪರಿಸರದಲ್ಲಿ ನವೆಂಬರ್ 28...

ಪ್ರಧಾನಿ ಮೋದಿ ‘ವೋಟ್ ಚೋರ್, ಗದ್ದಿ ಚೋರ್’ – ಪ್ರಕಾಶ್ ರಾಜ್ ಆಕ್ರೋಶ

ಬೆಂಗಳೂರಿನಲ್ಲಿ 'ಎಸ್‌ಐಆರ್ ವಿರೋಧಿ ಕರ್ನಾಟಕ' ಸಂಘಟನೆಯು ಆಯೋಜಿಸಿದ್ದ 'ಜನತಾ ನ್ಯಾಯಾಲಯ' ಕಾರ್ಯಕ್ರಮದಲ್ಲಿ...