ಮುಖವಾಡ ಮತ್ತು ಜಂಟಿ ಹೊಣೆಗಾರಿಕೆಯ ಇಕ್ಕಟ್ಟು: ಸಂಘಕ್ಕೊಂದು ಸಾಂವಿಧಾನಿಕ ಪಾಠ

Date:

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಿಜವಾಗಿಯೂ ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ಗೌರವ ಇದ್ದರೆ, ಮೊದಲು ತನ್ನ ಇಡೀ ಸಂಘಟನೆಯನ್ನು ದೇಶದ ನೋಂದಣಿ ಕಾಯ್ದೆಗಳ ಅಡಿಯಲ್ಲಿ,ಇಂದು ಜಂಟಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲಿ. ಬೇರೆಯವರನ್ನು ತೋರಿಸಿ ಮಿಸ್‌ಲೀಡಿಂಗ್ ಮಾಡೋ ಈ ಜಗಳದ ಆಟ ಇನ್ಮುಂದೆ ನಡೆಯಲ್ಲ ಅನ್ನೋದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಾದ ಜರೂರತ್ತ ಇವತ್ತು ಎಂದಿಗಿಂತಲೂ ಬಾಳ ಜರೂರ.

- Advertisement -

ಇವತ್ತು ದೇಶದಾಗ ಒಂದು ದೊಡ್ಡ ಮಿಸ್‌ಲೀಡಿಂಗ್ (ದಾರಿ ತಪ್ಪಿಸೋ) ಆಟ ನಡೀಲಾಕತ್ತೈತಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಪ್ರಮುಖರು ಮತ್ತು ಅವರ ಬೆಂಬಲಿಗರು ಸಾರ್ವಜನಿಕವಾಗಿ ನಿಂತು, “ನಮ್ಮದು ಸಂವಿಧಾನದ ಆರ್ಟಿಕಲ್ 19(1)(c) ಅಡಿಯಲ್ಲಿ ಸ್ಥಾಪಿತವಾದ ಸಂಘಟನೆ, ನಮಗೆ ಸಂವಿಧಾನವೇ ವಿಧಿಲಿಖಿತವಾಗಿ ಸಂಘ ಕಟ್ಟೋ ಹಕ್ಕನ್ನು ಕೊಟ್ಟೈತಿ” ಅಂತ ಭಾಷಣ ಬಿಗಿತಾರ. ಈ ಮಾತನ್ನು ಕೇಳಿ ಜನಸಾಮಾನ್ಯರು ನಿಜ ಇರಬಹುದು ಅಂತ ನಂಬಿಬಿಡ್ತಾರೆ. ಆದರೆ ಇದರ ಹಿಂದಿರೋ ತಾಂತ್ರಿಕ, ಕಾರ್ಯಕಾರಿ ಮತ್ತು ಭಾವನಾತ್ಮಕ ಮೌಲ್ಯಗಳ (Technical, Functional & Emotional Values) ಅಸಲಿ ಮರ್ಮ ಯಾರಿಗೂ ಅರ್ಥ ಆಗ್ತಾ ಇಲ್ಲ.

ಇವತ್ತು ಇಡೀ ದೇಶಕ್ಕೆ ಸಂವಿಧಾನದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವ ಈ ಶಕ್ತಿಗಳಿಗೆ ಸಂವಿಧಾನದ ಭಾಷೆಯಲ್ಲೇ, ಅಪ್ಪಟ ಕನ್ನಡದ ನೆಲದ ನುಡಿಯಲ್ಲಿ ಒಂದು ಪಾಠ ಕಲಿಸಬೇಕಾದ ಅನಿವಾರ್ಯತೆ ಇವತ್ತು ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ ಎಂಡಿಆರ್‌ವರೆಗೆ...

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’ (Retailers Association of India - RAI) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆ ಡಿಜಿಟಲ್ ಆರ್ಥಿಕತೆಯನ್ನು ನುಚ್ಚುನೂರು...

ಗಾಳ್ಯಾಗ ಗುಂಡು ಹಾರಸುದಕ್ಕು, ಗದ್ದುಗೆಯ ಜವಾಬ್ದಾರಿಗೂ ಇರೋ ವ್ಯತ್ಯಾಸವೇನು?

ಮೊದಲನೆಯದಾಗಿ ನಾವಿಲ್ಲಿ ಒಂದು ಸರಳ ಸತ್ಯವನ್ನು ಅರ್ಥ ಮಾಡ್ಕೋಬೇಕು. ಇವತ್ತು ಯಾರೋ ನಾಲ್ಕು ಜನ ಸೇರಿ ಎಕ್ಸ್ (ಟ್ವಿಟರ್) ಸ್ಪೇಸ್‌ನಾಗೋ, ಫೇಸ್ಬುಕ್ ಲೈವ್‌ನಾಗೋ ಅಥವಾ ಒಂದು ವಾಟ್ಸಾಪ್ ಗ್ರೂಪ್ ಮಾಡ್ಕೊಂಡು ಮಾತಾಡಿದ್ರೆ, ಅದಕ್ಕೆ ಸಂವಿಧಾನದ ಆರ್ಟಿಕಲ್ 19(1)(c) ಅಡಿಯಲ್ಲಿ ಸಂಘಟನೆಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕೇ ಸಿಗತೈತಿ. ಅದು ವಿಧಿಲಿಖಿತ (article based) ಹಕ್ಕು. ಅದಕ್ಕೆ ಹೋಗಿ ಸರ್ಕಾರದ ಆಫೀಸ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿಸೋ ಅಗತ್ಯ ಇರಲ್ಲ.
ಆದರೆ, ಆರ್.ಎಸ್.ಎಸ್ ಅನ್ನೋದು ಬರೀ ಗಾಳಿಯಲ್ಲಿ ಮಾತಾಡೋ ನಾಲ್ಕು ಜನರ ಆನ್‌ಲೈನ್ ಗ್ರೂಪ್ ಅಲ್ಲ! ಅದು ಇಡೀ ದೇಶದ ರಾಜಕಾರಣವನ್ನು, ಸಾಂಸ್ಕೃತಿಕ ವಲಯವನ್ನು ಮತ್ತು ಸಾಮಾಜಿಕ ವ್ಯವಸ್ಥೆಯನ್ನು ತೆರೆಯ ಮರೆಯಿಂದ ನಿಯಂತ್ರಿಸೋ ಅತ್ಯಂತ ಪ್ರಭಾವಿ ಶಕ್ತಿ. ಇಷ್ಟೊಂದು ಅಪಾರವಾದ ಪವರ್ ಹೊಂದಿರುವ ಸಂಸ್ಥೆ, ದೇಶದಲ್ಲಿ ಏನಾದರೂ ಹಿಂಸೆ, ಹತ್ಯೆಗಳು ಅಥವಾ ಅಶಾಂತಿ ಉಂಟಾದಾಗ “ನಮಗೂ ಅದಕ್ಕೂ ಸಂಬಂಧ ಇಲ್ಲ, ನಾವು ಬರೀ ಆರ್ಟಿಕಲ್ 19(1)(c) ಕೆಳಗೆ ಇರೋ ಸ್ವತಂತ್ರ ಸಂಘ” ಅಂತ ಜಾರಿಕೊಳ್ಳುವುದು ಯಾವ ನ್ಯಾಯ? ಉದಾಹರಣೆ ಮಹಾತ್ಮ ಗಾಂಧಿ ಹತ್ಯೆ.

ನಮ್ಮ ನೇರವಾದ ಪ್ರಶ್ನೆ ಏನಪ್ಪಾ ಅಂದ್ರೆ,ನೀವು ದೇಶದ ಮೇಲೆ ಅಷ್ಟೊಂದು ಪ್ರಭಾವ ಬೀರೋ ಶಕ್ತಿಯಾಗಿದ್ದ ಮೇಲೆ, ಕಾನೂನಿನ ಮುಂದೆ ಕಲೆಕ್ಟಿವ್ಲಿ ರೆಸ್ಪಾನ್ಸಿಬಲ್ (ಜಂಟಿ ಹೊಣೆಗಾರರು) ಆಗಿರಲು ಯಾಕೆ ಹೆದರ್ತೀರಿ?

ಮುಸಲ್ಮಾನರನ್ನು ತೋರಿಸಿ ಜಗಳ ಹಚ್ಚುವ ಕಪಟತನ ಮತ್ತು ವಕ್ಫ್ ವಾಸ್ತವ

ನಾವು ಇಂತಹ ಪ್ರಶ್ನೆಗಳನ್ನು ಕೇಳಿದ ತಕ್ಷಣ, ಸಂಘದ ಕಡೆಯಿಂದ “ಮುಸಲ್ಮಾನರ ಸಂಸ್ಥೆಗಳು, ಮಸೀದಿಗಳು ರಿಜಿಸ್ಟರ್ ಆಗ್ಯಾವೇನು?” ಅಂತ ಜನರ ನಡುವೆ ಕೋಮು ಜಗಳ ಹಚ್ಚಾಕ ಮತ್ತು ದಾರಿ ತಪ್ಪಿಸಾಕ ಮತ್ತೊಂದು ವಾದ ತೆಗೀತಾರೆ. ಆದರೆ ಇತಿಹಾಸ ಮತ್ತು ಕಾನೂನು ಗೊತ್ತಿರೋರಿಗೆ ಅಸಲಿ ಸತ್ಯ ಚೆನ್ನಾಗಿ ಗೊತ್ತಿರ್ತೈತಿ. ಮುಸಲ್ಮಾನರ ಧಾರ್ಮಿಕ ಮತ್ತು ಸಾಮಾಜಿಕ ಆಸ್ತಿಗಳನ್ನು ನಿರ್ವಹಿಸುವ ವಕ್ಫ್ ಬೋರ್ಡ್ (Waqf Board) ಇವತ್ತಿನದಲ್ಲ. ಅದು ಬ್ರಿಟಿಷರ ಕಾಲದ ಅತ್ಯಂತ ಹಳೆಯ ಚಾರಿಟೇಬಲ್ ಕಾಯ್ದೆ ಮತ್ತು ಭಾರತ ಸರ್ಕಾರದ ವಿಶೇಷ ವಕ್ಫ್ ಆಕ್ಟ್ ಅಡಿಯಲ್ಲಿ ಪಕ್ಕಾ ನೋಂದಣಿಯಾಗಿರೋ (Register ಆಗಿರೋ) ಕಾನೂನುಬದ್ಧ ಸಂಸ್ಥೆ.

ಅಷ್ಟೇ ಯಾಕೆ, ಅವರ ಸ್ಥಳೀಯ ಕಮಿಟಿಗಳು, ಅಂಜುಮನ್‌ಗಳು ಮತ್ತು ಮದರಸಾಗಳು ಕೂಡ ದೇಶದ ಸೊಸೈಟಿ ಆಕ್ಟ್ ಅಥವಾ ಟ್ರಸ್ಟ್ ಆಕ್ಟ್ ಅಡಿಯಲ್ಲೇ ರಿಜಿಸ್ಟರ್ ಆಗಿ, ನಿಯಮಿತವಾಗಿ ಸರ್ಕಾರದ ಮುಂದೆ ಆಡಿಟ್ ರಿಪೋರ್ಟ್ ಇಡ್ತಾವೆ. ಹಾಗಿರುವಾಗ, ಕಾನೂನುಬದ್ಧವಾಗಿ ನೋಂದಣಿಯಾಗಿರೋ ಮುಸಲ್ಮಾನರ ಸಂಸ್ಥೆಗಳನ್ನು ತೋರಿಸಿ ಸಮಾಜದಲ್ಲಿ ಜಗಳ ಹಚ್ಚೋದು ಬಿಟ್ಟು, “ಅವರ ತರಹ ನೀವೇಕೆ ನಿಮ್ಮ ಇಡೀ ಸಂಘಟನೆಯನ್ನು ನೆಲದ ಕಾನೂನಿನಡಿ ನೋಂದಣಿ ಮಾಡಿಸಲ್ಲ?” ಅನ್ನೋ ನಿಮ್ಮ ಕಪಟತನಕ್ಕೆ ಇವತ್ತು ಉತ್ತರವಿಲ್ಲ.

ಚಾರಿಟೇಬಲ್ ಆಕ್ಟ್ ಅಥವಾ ಸೊಸೈಟಿ ಆಕ್ಟ್ ಅಡಿಯಲ್ಲಿ ಬನ್ನಿ!

ಸಂವಿಧಾನದ ಆರ್ಟಿಕಲ್ 19(1)(c) ನಿಮಗೆ ಸಂಘ ಕಟ್ಟೋ ಹಕ್ಕನ್ನು ಕೊಟ್ಟರೆ, ಆ ಸಂಘವನ್ನು ನೆಲದ ಕಾನೂನಿನ ಅಡಿಯಲ್ಲಿ ಜವಾಬ್ದಾರಿಯುತ ಸಂಸ್ಥೆಯನ್ನಾಗಿ ಮಾಡಲು ನಮ್ಮ ದೇಶದಲ್ಲಿ ಕಾಯ್ದೆಗಳಿವೆ (Acts). ನಿಮಗೆ ಪಾರದರ್ಶಕತೆ ಮೇಲೆ ನಂಬಿಕೆ ಇದ್ದರೆ ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್, 1960 (ಕೇಂದ್ರದ 1860 ರ ಕಾಯ್ದೆ) ಅಡಿಯಲ್ಲಿ ಬನ್ನಿ. ಕನಿಷ್ಠ ಏಳು ಜನ ಸದಸ್ಯರನ್ನು ಇಟ್ಟುಕೊಂಡು, ಪ್ರತಿ ವರ್ಷ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆ ನಡೆಸಿ, ಸದಸ್ಯರ ಪಟ್ಟಿಯನ್ನು ಸರ್ಕಾರದ ಮುಂದೆ ಇಟ್ಟು ಆಡಿಟ್ ರಿಪೋರ್ಟ್ ಒಪ್ಪಿಸಿರಿ. ಅದೂ ಬೇಡ ಅಂದರೆ, ಚಾರಿಟೇಬಲ್ ಟ್ರಸ್ಟ್ ಆಕ್ಟ್ ಅಡಿಯಲ್ಲಾದರೂ ಇಡೀ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೇ ಪೂರ್ಣ ಪ್ರಮಾಣದಲ್ಲಿ ನೋಂದಣಿ ಮಾಡಿಸಿರಿ.

ಆದರೆ ಸಂಘ ಈ ಎರಡು ದಾರಿಗಳಿಗೂ ಬರಲ್ಲ. ಇಡೀ ಸಂಘಟನೆಯನ್ನು ರಿಜಿಸ್ಟ್ರೇಷನ್ ಮಾಡಿಸದೇ ಒಂದು ‘ಅಜ್ಞಾತ ಶಕ್ತಿ’ಯಾಗಿ ಇಡಲಾಗುತ್ತದೆ. ಆಸ್ತಿ-ಪಾಸ್ತಿ ನಿಭಾಯಿಸಲು ಮಾತ್ರ ತೆರೆಯ ಮರೆಯಲ್ಲಿ ಸಣ್ಣ ಸಣ್ಣ ಟ್ರಸ್ಟ್‌ಗಳನ್ನು ಮಾಡಿಕೊಳ್ಳಲಾಗುತ್ತದೆ. ಅಂದರೆ, ಹಕ್ಕುಗಳನ್ನು ಚಲಾಯಿಸಲು ಸಂವಿಧಾನದ 19(1)(c) ಮುಖವಾಡ, ಆದರೆ ಆ ಸಿದ್ಧಾಂತದ ನೆರಳಿನಲ್ಲಿ ದೇಶದಾಗ ಹಿಂಸೆ, ಹತ್ಯೆಗಳು ನಡೆದಾಗ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ‘ನೋಂದಣಿ ಇಲ್ಲದ ಸಂಘ’ ಎನ್ನುವ ಮೌನದ ಆಟ!

ಸಂವಿಧಾನದ ನೈತಿಕತೆ ಮತ್ತು ಕೊನೆಯ ಮಾತು

ಯಾವ ಶಕ್ತಿಗಳು ಸಂವಿಧಾನದ ನಿಯಮಗಳನ್ನು, ಆರ್ಟಿಕಲ್ 15 ರಿಂದ 18 ರವರೆಗಿನ ಸಮಾನತೆಯ ಹಕ್ಕುಗಳನ್ನು ಸಮಾಜದಲ್ಲಿ ಎತ್ತಿ ಹಿಡಿಯಲು ಒಪ್ಪುವುದಿಲ್ಲವೋ, ಅವುಗಳಿಗೆ ಸಂವಿಧಾನದ ಆರ್ಟಿಕಲ್ 19ರ ಬಗ್ಗೆ ಮಾತಾಡೋ ನೈತಿಕ ಹಕ್ಕೇ ಇರುವುದಿಲ್ಲ. ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿರೋದು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲೋ ಹೊರತು, ಕಾನೂನಿನ ಕಣ್ಣಿಗೆ ಮಣ್ಣೆರಚಲು ಅಲ್ಲ.

ಇದನ್ನೂ ಓದಿ ಸಂವಿಧಾನದ ಮಡಿಲಲ್ಲಿ ‘ನೋಂದಣಿ’ಯ ನ್ಯಾಯ: ಶರಣರ ಆಶಯ ಮತ್ತು ಆರೆಸ್ಸೆಸ್‌ನ ಮೌನ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಿಜವಾಗಿಯೂ ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ಗೌರವ ಇದ್ದರೆ, ಮೊದಲು ತನ್ನ ಇಡೀ ಸಂಘಟನೆಯನ್ನು ದೇಶದ ನೋಂದಣಿ ಕಾಯ್ದೆಗಳ ಅಡಿಯಲ್ಲಿ,ಇಂದು ಜಂಟಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲಿ. ಬೇರೆಯವರನ್ನು ತೋರಿಸಿ ಮಿಸ್‌ಲೀಡಿಂಗ್ ಮಾಡೋ ಈ ಜಗಳದ ಆಟ ಇನ್ಮುಂದೆ ನಡೆಯಲ್ಲ ಅನ್ನೋದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಾದ ಜರೂರತ್ತ ಇವತ್ತು ಎಂದಿಗಿಂತಲೂ ಬಾಳ ಜರೂರ.

WhatsApp Image 2026 02 02 at 12.22.13 e1770015405615
ಬಸವ ಪಾಟೀಲ್‌
+ posts

ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

ಪೋಸ್ಟ್ ಹಂಚಿಕೊಳ್ಳಿ:

ಬಸವ ಪಾಟೀಲ್‌
ಬಸವ ಪಾಟೀಲ್‌
ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದವಡೆ ಜಜ್ಜಿಸಿಕೊಂಡ ಆಪರೇಷನ್ ಎಪಿಕ್ ಫ್ಯೂರಿ: ಇರಾನ್ ಕಾಳಗದಲ್ಲಿ ಅಮೆರಿಕಕ್ಕೆ ಆದ ನಷ್ಟಗಳೇನೇನು?

ಬೃಹತ್ ಮೊತ್ತದ ಬಜೆಟ್, ದುಬಾರಿ ಬೆಲೆಯ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ...

ಅಪೌಷ್ಟಿಕತೆಯ ನೆರಳಲ್ಲಿ ಕಲ್ಯಾಣ ಕರ್ನಾಟಕ; ರಾಯಚೂರಿನ ಶೇ. 49.5 ಮಕ್ಕಳಲ್ಲಿ ಪೋಷಕಾಂಶದ ಕೊರತೆ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS 2023–24) ಕಲ್ಯಾಣ ಕರ್ನಾಟಕ...

ಬೆಂಗಳೂರು | ಪತ್ನಿ ಮೇಲೆ ಆಸಿಡ್ ಸುರಿದು, ಮಚ್ಚಿನಿಂದ ಹಲ್ಲೆಗೈದ ವಿಕೃತ ಪತಿ

ನಡುರಸ್ತೆಯಲ್ಲೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹೃದಯವಿದ್ರಾವಕ...

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....