ಭಯೋತ್ಪಾದಕತೆಯ ಸಸಿತೋಟ ಪಾಕ್‌ಗೆ ಶಾಂತಿದೂತನ ಪಾತ್ರ: ತಾನೇ ‘ವಿಶ್ವಗುರು’ ಎನ್ನುತ್ತಿದ್ದ ಮೋದಿ ಮೂಕ ಪ್ರೇಕ್ಷಕ!

Date:

ಭಾರತ ವಿಶ್ವಗುರು ಅಥವಾ ಮೋದಿ ವಿಶ್ವಗುರು ಎಂಬ ಪರಿಕಲ್ಪನೆಯನ್ನು ಜಾಗತಿಕವಾಗಿ ಬಿತ್ತರಿಸುವ ಯತ್ನವನ್ನು ಕೇಂದ್ರ ಸರ್ಕಾರ ಸಾಕಷ್ಟು ಮಾಡಿದೆ. ಆದರೆ ಆ ಪ್ರಯತ್ನವೆಲ್ಲವೂ 'ಟುಸ್' ಪಟಾಕಿಯಾಗಿದೆ. ಕೇವಲ 'ವಿಶ್ವಗುರು' ಎಂಬ ಬಿರುದುಗಳನ್ನು ತಮಗೆ ತಾವೇ ಇಟ್ಟುಕೊಟ್ಟು ಹೊತ್ತು ತಿರುಗುವುದಕ್ಕಿಂತ, ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ನಿರ್ಣಾಯಕ ಪಾತ್ರ ವಹಿಸಿ ಸ್ಥಾನವನ್ನು ಸಾಬೀತುಪಡಿಸುವುದು ತುರ್ತು ಅಗತ್ಯವಲ್ಲವೇ?

ನಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ಭಯೋತ್ಪಾದಕತೆಯ ಸಸಿತೋಟ. ತಮ್ಮ ದೇಶವು ದಶಕಗಳಿಂದ ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿರುವುದನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತು ಸಂಸದೆ ಶೆರ್ರಿ ರೆಹಮಾನ್ ಅವರೇ ಬಹಿರಂಗವಾಗಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಇದೀಗ ಅದೇ ಭಯೋತ್ಪಾದನೆಯ ನೆಲೆ ಪಾಕ್‌ಗೆ ಶಾಂತಿದೂತನ ಪಾತ್ರ ನೀಡಲಾಗಿದೆ. ಈ ನಡುವೆ ಈವರೆಗೆ ತಾನೇ ‘ವಿಶ್ವಗುರು’ ಎಂದು ಡಂಗೂರ ಸಾರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಮೂಕ ಪ್ರೇಕ್ಷಕರಾಗಿದ್ದಾರೆ.

- Advertisement -

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ ಪರಿಣಾಮ ಬೀರಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಂತಿ ಮಾತುಕತೆ ಆರಂಭವಾಗಿದ್ದು ಅದರ ಮಧ್ಯಸ್ಥಿಕೆಯ ವೇದಿಕೆಯಲ್ಲಿ ಭಾರತ ಕಾಣಿಸಬಹುದು ಎಂಬ ನಿರೀಕ್ಷೆ ಹುಟ್ಟಿಸುವಂತಹ ‘ಇಮೇಜ್’ ಅನ್ನು ಈವರೆಗೆ ಪ್ರಧಾನಿ ನರೇಂದ್ರ ಮೋದಿ ಸೃಷ್ಟಿಸಿಕೊಳ್ಳುತ್ತಾ ಬಂದವರು. ಆದರೆ ಅನಿರೀಕ್ಷಿತವಾಗಿ ಈ ಮಧ್ಯಸ್ಥಿಕೆ ಪಾತ್ರದಲ್ಲಿ ಪಾಕಿಸ್ತಾನದ ಹೆಸರು ಕೇಳಿಬಂದಿದ್ದು ಅಚ್ಚರಿ ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಇದನ್ನು ಓದಿದ್ದೀರಾ? ಪಾಕ್‌ಗೆ ‘ಮಧ್ಯಸ್ಥಿಕೆ’ ಹಿರಿಮೆ ದೊರೆಯಲು ಮೋದಿ ವೈಫಲ್ಯವೇ ಕಾರಣ: ಕಾಂಗ್ರೆಸ್

ಪಾಕಿಸ್ತಾನ ದಶಕಗಳಿಂದ ಭಯೋತ್ಪಾದನೆಯ ‘ಪೋಷಕ ರಾಷ್ಟ್ರ’ ಎಂಬ ಹಣೆಪಟ್ಟಿಯನ್ನು ಹೊತ್ತಿರುವುದು ಮಾತ್ರವಲ್ಲ, ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿರುವ ದೇಶ, ಆಂತರಿಕವಾಗಿ ಸೇನಾ ಹಿಡಿತದಲ್ಲಿರುವ ದೇಶ. ಇಂತಹ ದೇಶವೊಂದು ಇರಾನ್ ಮತ್ತು ಇಸ್ರೇಲ್‌ನಂತಹ ಪ್ರಬಲ ದೇಶಗಳ ನಡುವಿನ ಸಂಧಾನಕಾರ ದೇಶವಾಗಿ ಪಾತ್ರ ವಹಿಸುವಂತಾಗುವುದಕ್ಕೆ ಕಾರಣ ಯಾರು? ಅಷ್ಟಕ್ಕೂ ಇದು ಅರ್ಹತೆಯಿಂದ ದೊರೆತ ಜವಾಬ್ದಾರಿಯಲ್ಲ ಎಂಬುದು ಸ್ಪಷ್ಟ. ರಾಜತಾಂತ್ರಿಕ ತಂತ್ರವೋ ಎಂಬ ಪ್ರಶ್ನೆಯೂ ಇದೆ. ಇವೆಲ್ಲವೂ ಪ್ರಧಾನಿ ಮೋದಿ ‘ವಿಶ್ವಗುರು’ ಎಂಬ ಪ್ರಚಾರಕ್ಕೆ ಕುತ್ತು ತಂದಿರುವುದು ಸತ್ಯ.

ಪ್ರಧಾನಿ ಮೋದಿಯ ವಿಶ್ವಗುರು ಇಮೇಜ್‌ಗೆ ಕುತ್ತು

ಕೇಂದ್ರ ಸರ್ಕಾರವು ಕಳೆದೊಂದು ದಶಕದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ‘ವಿಶ್ವಗುರು’ ಆಗಿದೆ ಎಂದು ಬಿಂಬಿಸಲು ಸತತ ಪ್ರಯತ್ನ ಮಾಡುತ್ತಲೇ ಬಂದಿದೆ. ಭಾರತ ವಿಶ್ವಗುರು ಅಥವಾ ಮೋದಿ ವಿಶ್ವಗುರು ಎಂಬ ಪರಿಕಲ್ಪನೆಯನ್ನು ಜಾಗತಿಕವಾಗಿ ಬಿತ್ತರಿಸುವ ಯತ್ನವನ್ನೂ ಸಾಕಷ್ಟು ಮಾಡಿದೆ. ಆದರೆ, ಆ ಪ್ರಯತ್ನವೆಲ್ಲವೂ ‘ಟುಸ್’ ಪಟಾಕಿಯಾಗಿದೆ.

ಪ್ರಧಾನಿ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ 2026ರ ಏಪ್ರಿಲ್‌ವರೆಗೆ ಒಟ್ಟು 99 ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. ಈ ಮೂಲಕ ವಿಶ್ವದ 79 ದೇಶಗಳಿಗೆ ಭೇಟಿ ನೀಡಿದ್ದಾರೆ. ತನ್ನ ಈ ಪ್ರವಾಸವನ್ನೇ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ತನ್ನ ಈ ಪ್ರವಾಸದಿಂದಾಗಿ ಭಾರತವನ್ನು ಜಗತ್ತಿನ ಮಾರ್ಗದರ್ಶಕ ಮತ್ತು ಶಾಂತಿ ಪ್ರವರ್ತಕ ದೇಶವನ್ನಾಗಿಸಿದ್ದೇನೆ ಎಂಬ ಪ್ರಚಾರ ಮಾಡಿಸಿಕೊಂಡಿದ್ದಾರೆ. ತನ್ನ ಭಕ್ತರ ಮುಂದೆ ‘ವಿಶ್ವಗುರು’ ಎಂಬ ಇಮೇಜ್ ಗಟ್ಟಿಗೊಳಿಸಲು ಜಿ-20 ಶೃಂಗಸಭೆ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ನೀಡಿದ ‘ಇದು ಯುದ್ಧದ ಯುಗವಲ್ಲ’ ಎಂಬ ಹೇಳಿಕೆಗಳನ್ನು ಬಳಸಿಕೊಂಡಿದ್ದಾರೆ. ಆ ಎಲ್ಲ ಪ್ರಯತ್ನಗಳು ಈಗ ನೀರ ಮೇಲಿನ ಹೋಮವಾಗಿದೆ. ಪಾಕಿಸ್ತಾನದಂತಹ ದೇಶಕ್ಕೆ ‘ಮಧ್ಯಸ್ಥಿಕೆ’ ಹಿರಿಮೆ ದೊರೆಯುವುದಾದರೆ ಈ ಹಿಂದೆ ಭಾರತಕ್ಕಿದ್ದ ಸ್ಥಾನವನ್ನೂ ಪಿಎಂ ಮೋದಿ ಕೆಳಕ್ಕಿಳಿಸಿರುವುದಲ್ಲದೇ ಮತ್ತೇನು?

ಇದನ್ನು ಓದಿದ್ದೀರಾ? ಯುದ್ಧವೋ? ಶಾಂತಿಯೋ? ಸೇನಾ ಭದ್ರಕೋಟೆಯಾಗಿರುವ ಇಸ್ಲಾಮಾಬಾದ್‌ನತ್ತ ನೆಟ್ಟಿದೆ ಜಗತ್ತಿನ ಕಣ್ಣು

ಜಿ-20 ಶೃಂಗಸಭೆಯ ಸಂದರ್ಭದಲ್ಲಿ “ಭಾರತವು ಜಾಗತಿಕ ಸವಾಲುಗಳಿಗೆ ಪರಿಹಾರ ನೀಡುವ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ನಾವು ಕೇವಲ ಒಂದು ಮಾರುಕಟ್ಟೆಯಲ್ಲ, ಬದಲಿಗೆ ಇಡೀ ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸುವ ‘ವಿಶ್ವಬಂಧು’ ಮತ್ತು ‘ವಿಶ್ವಗುರು’ ಆಗುವತ್ತ ಹೆಜ್ಜೆ ಹಾಕುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದರು. 2015ರಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಸೇರಿದಂತೆ ಈವರೆಗ ತಾವು ಹೋದ ಬಹುತೇಕ ದೇಶಗಳಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ, “21ನೇ ಶತಮಾನವು ಭಾರತದ್ದಾಗಿದೆ. ಒಂದು ಕಾಲದಲ್ಲಿ ಜಗತ್ತಿಗೆ ಜ್ಞಾನದ ಹಸಿವು ನೀಗಿಸಿದ ಭಾರತ, ಇಂದು ಮತ್ತೊಮ್ಮೆ ಜಾಗತಿಕ ನಾಯಕತ್ವ ವಹಿಸಲು ಸಿದ್ಧವಾಗಿದೆ. ಭಾರತವು ತನ್ನ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಧುನಿಕ ತಂತ್ರಜ್ಞಾನದ ಸಮನ್ವಯದೊಂದಿಗೆ ವಿಶ್ವಗುರು ಸ್ಥಾನವನ್ನು ಮರಳಿ ಪಡೆಯಲಿದೆ” ಎಂದೂ ಪ್ರಧಾನಿ ಹೇಳಿದ್ದಾರೆ. ಹೀಗೆ ಹಲವಾರು ಸಂದರ್ಭದಲ್ಲಿ ತನ್ನ ನೇತೃತ್ವದಲ್ಲಿ ಭಾರತ ವಿಶ್ವಗುರು ಎಂದು ನಗಾರಿ ಬಾರಿಸುತ್ತಾ ಬಂದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ, ಈಗ ವಾಸ್ತವದಲ್ಲಿ ನಡೆಯುತ್ತಿರುವುದೇನು?

ಈ ಹಿಂದೆ ಹಲವು ಯುದ್ಧಗಳ ಸಂದರ್ಭದಲ್ಲಿ ಭಾರತ ಅಲಿಪ್ತ ನೀತಿಯನ್ನು ಹೊಂದಿದ್ದರೂ ರಾಜತಾಂತ್ರಿಕವಾಗಿ ದೃಢವಾದ ನಿಲುವೊಂದನ್ನು ಹೊಂದಿತ್ತು. ಆದರೆ ಮೋದಿ ಪ್ರಧಾನಿಯಾದಾಗಿನಿಂದ ಈ ರಾಜತಾಂತ್ರಿಕತೆ ಬುಡಮೇಲಾಗಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಲ್ಲಿ ಭಾರತವು ಬಹುತೇಕ ‘ಮೌನ ಪ್ರೇಕ್ಷಕ’ನಂತೆಯೇ ವರ್ತಿಸುತ್ತಿದೆ. ಇದರಿಂದಾಗಿ ಭಾರತದ ಬದಲಾಗಿ ಅನರ್ಹವಾದ ಪಾಕಿಸ್ತಾನ ‘ವಿಶ್ವಗುರು’ ಎಂಬಂತೆ ಕಾಣಿಸಿಕೊಳ್ಳುತ್ತಿದೆ. ಇದು ಭಾರತದ ವಿದೇಶಾಂಗ ನೀತಿಯ ವೈಫಲ್ಯವೇ ಅಥವಾ ತಾಂತ್ರಿಕ ಹಿನ್ನಡೆಯಲ್ಲವೇ?

ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಯಾವುದೇ ದೇಶದ ಸ್ಥಾನವು ಕೇವಲ ಪದಗುಚ್ಛಗಳ ಪ್ರಯೋಗ, ಪ್ರಚಾರದಿಂದ ನಿರ್ಧಾರವಾಗುವುದಲ್ಲ. ಬದಲಾಗಿ ಪ್ರಭಾವಶಾಲಿ ಕ್ರಮಗಳಿಂದ ನಿರ್ಧಾರವಾಗುತ್ತದೆ ಎಂಬುದು ಸ್ಪಷ್ಟ. ಪಾಕಿಸ್ತಾನ ಶಾಂತಿದೂತನ ಮುಖವಾಡ ಧರಿಸಿರುವುದು ಭಾರತಕ್ಕೆ ಖಂಡಿತವಾಗಿಯೂ ಎಚ್ಚರಿಕೆ ಗಂಟೆ. ಕೇವಲ ‘ವಿಶ್ವಗುರು’ ಎಂಬ ಬಿರುದುಗಳನ್ನು ತಮಗೆ ತಾವೇ ಇಟ್ಟುಕೊಂಡು ಹೊತ್ತು ತಿರುಗುವುದಕ್ಕಿಂತ, ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ನಿರ್ಣಾಯಕ ಪಾತ್ರ ವಹಿಸಿ ಸ್ಥಾನವನ್ನು ಸಾಬೀತುಪಡಿಸುವುದು ತುರ್ತು ಅಗತ್ಯವಲ್ಲವೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಿಎಸ್‌ಟಿ ಕರಾಳ ಶಾಸನಕ್ಕೆ ತೇಪೆ ಹಾಕುವ ಯತ್ನ: ತಮ್ಮದೇ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಹೊಸ ನಾಟಕ!

ಜಿಎಸ್‌ಟಿಗೆ ಸಂಬಂಧಿಸಿದ "ಶೇಕಡಾ 99ರಷ್ಟು ಸಮಸ್ಯೆಗಳು" ಬಗೆಹರಿದಿವೆ ಮತ್ತು ಮುಂದಿನ ಬದಲಾವಣೆಗಳಿಗೆ...

ಬೀದರ್‌ | ʼಕರೇಜ್‌ʼ ದೇಶದ ಜಲಸಂರಕ್ಷಣೆಗೆ ಮಾದರಿ : ಕೇಂದ್ರದ ಅಧಿಕಾರಿಗಳ ಮೆಚ್ಚುಗೆ

ಬೀದರ್‌ನ ಐತಿಹಾಸಿಕ ʼಕರೇಜ್‌ʼ ಜಲವ್ಯವಸ್ಥೆ ದೇಶದ ಜಲಸಂರಕ್ಷಣೆಗೆ ಮಾದರಿಯಾಗಬಲ್ಲದು ಎಂದು ಕೇಂದ್ರ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...