ವಿಶ್ವ ಗುಬ್ಬಚ್ಚಿ ದಿನ | ಎತ್ತ ಹೋದಿರೇ ಪುಟ್ಟ ಗುಬ್ಬಿಗಳಾ…

Date:

ಗುಬ್ಬಚ್ಚಿಗಳ ಚೀಂವ್ ಚೀಂವ್ ಮರಳಿ ಕೇಳಬೇಕೆಂದರೆ, ಕಡೆಪಕ್ಷ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕರುಣೆ ಮತ್ತು ಪ್ರಕೃತಿಯ ಮೇಲಿನ ಗೌರವ ಇರಬೇಕು. 'ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ; ನಾವು ಪ್ರಕೃತಿಯ ಒಂದು ಭಾಗ' ಎನ್ನುವ ಮಾತು ಸದಾ ನಮ್ಮನ್ನು ಎಚ್ಚರಿಸುತ್ತಿರಬೇಕು.

“ಗುಬ್ಬಚ್ಚಿ ಚಿಲಿಪಿಲಿ ಯಾಕೆ ಹೋಯ್ತು ಹೇಳಿ ನೋಡೋಣ? ಮೊದಲು ನಮ್ಮಮ್ಮ ಭತ್ತ ಕೇರ್ತಾ ಇರಬೇಕಾದರೆ ಹಿಂಡಾಗಿ ಬಂದು ಕೂತಿರುತ್ತಿದ್ವು ಮೈಸೂರಲ್ಲಿ. ಗುಬ್ಬಚ್ಚಿಗಳು ಮನುಷ್ಯನೊಂದಿಗೆ ಎಷ್ಟು ಅಡಾಪ್ಟ್‌ ಆಗಿದ್ದಾವೆ ಅಂತ ಹೇಳಿದರೆ, ದೇ ಕಾಂಟ್‌ ಸರ್ವೈವ್‌ ಇನ್‌ ದಿ ವೈಲ್ಡ್‌ ಎನ್ವಿರಾನ್ಮೆಂಟ್.‌ ನಮ್ಮಲ್ಲಿ ಪೇಟೆಗಳಲ್ಲಿ ಆರ್ಕಿಟೆಕ್ಟಲ್‌ ಚೇಂಜಸ್‌ ಹೆಂಚಿನ ಮನೆಗಳು ಹೋದ ಮೇಲೆ ಅವಕ್ಕೆ ಗೂಡು ಕಟ್ಟೋಕೆ ಜಾಗ ಇಲ್ಲ! ಇಲ್ಲಿ ಜಾಗ ಕೊಡದಿದ್ದರೆ ಪರವಾಗಿಲ್ಲ ಅಂತ ಹೇಳಿದರೆ ಅವಕ್ಕೆ ಕಾಡಲ್ಲಿ ಗೂಡು ಕಟ್ಟೋಕೆ ಬರೋದಿಲ್ಲ. ಹಿಂದೆ ನೀವು ನೋಡಿರಲ್ಲ ಬಿಡಿ. ನೀವು ತುಂಬಾ ಈಚಿನೋರು. ಗುಬ್ಬಚ್ಚಿಗಳು ಗೂಡು ಕಟ್ಟಲಿ ಅಂತಾನೇ ಮನೆಗಳಲ್ಲಿ ಸೂರಿನಡಿಯಲ್ಲಿ ಅಲ್ಲಿ ಇಲ್ಲಿ ಜಾಗ ಬಿಡೋರು. ಗುಬ್ಬಚ್ಚಿಗಳಿಂದ ಏನು ಉಪಯೋಗ ಆಗುತ್ತೆ ಅಂದರೆ ಅವು ಆ ಸೂರಿನ ಸಂದಿಯಲ್ಲಿ ಇನ್ಸ್‌ಪೆಕ್ಟ್‌ ಮಾಡಿ ಒಂದೇ ಒಂದು ಕೀಟಗಳು ಇಲ್ಲದ ಹಾಗೆ ಕ್ಲೀನ್‌ ಮಾಡ್ತಿದ್ದವು. ಅದಕ್ಕೋಸ್ಕರ ಗುಬ್ಬಚ್ಚಿಗಳು ಬಂದು ಗೂಡು ಕಟ್ಟಿಕೊಳ್ಳಲಿ ಅಂತ ಸೂರಿನಡಿಯಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಿ ಬಿಟ್ಟಿರೋರು. ಈವಾಗ ಕಾಂಕ್ರೀಟ್‌ ರೂಫಿಂಗ್‌ ಬಂದ್ಬಿಟ್ಟು, ಅಲ್ಲೂ ಗೂಡು ಕಟ್ಟೋಕೆ ಅವಕ್ಕೆ ಜಾಗ ಇಲ್ಲ. ಈವಾಗ ಅಲ್ಲಿ ಇಲ್ಲಿ ರೈಸ್‌ ಮಿಲ್‌, ದಿನಸಿ ಅಂಗಡಿ ಹತ್ತಿರ ಎಲ್ಲಾ ಇರ್ತಾವೆ.” ಇವು ಅಪ್ಪಟ ಪರಿಸರ ಪ್ರೇಮಿ, ಖ್ಯಾತ ಬರೆಹಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಹೊಸ ವಿಚಾರಗಳು’ ಕೃತಿಯ ನುಡಿಮುತ್ತುಗಳು. ಇದೊಂದು ಭಾಗ ಸಾಕು ಹಿಟಿಯಷ್ಟು ಗಾತ್ರದ ಗುಬ್ಬಿಗಳ ಮಹತ್ವ ತಿಳಿಯಲು.

- Advertisement -
image 2026 03 20T160307.115

ಮುಂಜಾನೆಯೇ ಬಂದು ಅಂಗಳದ ತುಂಬೆಲ್ಲಾ ಹಾರಾಡುತ್ತಾ, ಧಾನ್ಯದ ಕಾಳುಗಳಿಗಾಗಿ ಜಗಳವಾಡುತ್ತಾ, ಕಿಟಕಿಯ ಸರಳುಗಳ ಮೇಲೆ ಕುಳಿತು ‘ಚೀಂವ್ ಚೀಂವ್’ ಎಂದು ಹರಟೆ ಹೊಡೆಯುತ್ತಿದ್ದ ಆ ಪುಟ್ಟ ಗುಬ್ಬಚ್ಚಿಗಳು ಇಂದು ಎಲ್ಲಿ ಹೋಗಿರಬಹುದು? ಅಥವಾ ಅವನ್ನು ಯಾರೋ ಎಲ್ಲಿಗೋ ಅಟ್ಟಿರಬಹುದಾ? ಮಗುವಿನ ಆಟಕ್ಕೆ, ಮನೆಯ ಒಡನಾಟಕ್ಕೆ ದಶಕಗಳ ಕಾಲ ನಮ್ಮೊಂದಿಗಿದ್ದ ಈ ಕಂದು ಬಣ್ಣದ ಪುಟ್ಟ ಹಕ್ಕಿಗಳು ಇಂದು ಬಹುಶಃ ನೆನಪಿನ ಪುಟಗಳಲ್ಲಿ ಮಾತ್ರ ಉಳಿದಿವೆಯೇನೋ. ಇಂದು ಮಾರ್ಚ್ 20, ವಿಶ್ವ ಗುಬ್ಬಚ್ಚಿ ದಿನ. ನಮ್ಮ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಅಳಿವಿನ ಅಂಚಿನಲ್ಲಿ ನಿಂತಿರುವ ಆ ನಿರುಪದ್ರವಿ ಜೀವಿಯ ಅಳಿಲು ಸೇವೆಯನ್ನು ಸ್ಮರಿಸಲು ಮತ್ತು ಅವುಗಳನ್ನು ಉಳಿಸಿಕೊಳ್ಳಲು ಮಿಡಿಯುವ ಒಂದು ಭಾವನಾತ್ಮಕ ಕ್ಷಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ಗುಬ್ಬಚ್ಚಿಗಳ ಇತಿಹಾಸ ಮನುಷ್ಯನ ನಾಗರಿಕತೆಯಷ್ಟೇ ಹಳೆಯದು. ಮನುಷ್ಯ ಎಲ್ಲಿ ನೆಲೆಸಿದನೋ ಅಲ್ಲಿ ಗುಬ್ಬಚ್ಚಿಗಳೂ ಅತಿಥಿಗಳಾಗಿ ಬಂದವು. ಈ ಅವಿನಾಭಾವ ಸಂಬಂಧವನ್ನು ಗುರುತಿಸಿ, ಅವುಗಳ ಸಂಖ್ಯೆಯಲ್ಲಿ ಉಂಟಾಗುತ್ತಿರುವ ಆತಂಕಕಾರಿ ಇಳಿತವನ್ನು ಜಗತ್ತಿಗೆ ಸಾರಲು ಭಾರತದ ‘ನೇಚರ್ ಫಾರೆವರ್ ಸೊಸೈಟಿ’ಯು ಮೊಹಮ್ಮದ್ ದಿಲಾವರ್ ಅವರ ನೇತೃತ್ವದಲ್ಲಿ 2010ರಲ್ಲಿ ಮೊದಲ ಬಾರಿಗೆ ವಿಶ್ವ ಗುಬ್ಬಚ್ಚಿ ದಿನವನ್ನು ಜಾರಿಗೆ ತಂದಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಈ ದಿನವು ಮನುಷ್ಯ ಮತ್ತು ಗುಬ್ಬಚ್ಚಿಯ ನಡುವಿನ ಆ ಮಧುರ ಬಾಂಧವ್ಯವನ್ನು ನೆನಪಿಸುತ್ತಲೇ ಇದೆ. ಆದರೆ, ಇಷ್ಟು ಜಾಗೃತಿಯ ನಡುವೆಯೂ ನಮ್ಮ ಅಂಗಳದಲ್ಲಿ ಹಾರಾಡುತ್ತಿದ್ದ ಗುಬ್ಬಿಗಳ ಚಿಲಿಪಿಲಿ ಮಾತ್ರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇರುವುದು ವಿಷಾದನೀಯ.

ಇಂದು ಗುಬ್ಬಚ್ಚಿಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲು ಯಾವುದೇ ಸಂಶೋಧನೆಯ ಅಗತ್ಯವಿಲ್ಲ. ನಮ್ಮ ಖಾಲಿ ಬಿದ್ದ ಕಾಂಕ್ರೀಟ್ ಅಂಗಳಗಳೇ ಅದಕ್ಕೆ ಸಾಕ್ಷಿ. ಸಿಮೆಂಟ್ ಕಾಡುಗಳಾದ ನಗರಗಳಲ್ಲಿ ಅವುಗಳಿಗೆ ಗೂಡು ಕಟ್ಟಲು ಹಳೆಯ ಮಾದರಿಯ ಹೆಂಚಿನ ಮನೆಗಳಾಗಲಿ ಅಥವಾ ಮರದ ಪೊಟರೆಗಳಾಗಲಿ ಸಿಗುತ್ತಿಲ್ಲ. ‌ಎಲ್ಲರಿಗೂ ಗ್ಲಾಸ್ ಫಿನಿಶಿಂಗ್‌ನ ಆಧುನಿಕ ಕಟ್ಟಡಗಳೇ ಬೇಕು! ಎಂತ ದೊಡ್ಡವರಾದರೂ ಈ ಪುಟ್ಟ ಜೀವಿಗೆ ಆಶ್ರಯ ನೀಡಲು ನಿರಾಕರಿಸುತ್ತಿದ್ದಾರೆ. ಜೊತೆಗೆ ಕೃಷಿಯಲ್ಲಿ ಅತಿಯಾಗಿ ಬಳಸುತ್ತಿರುವ ಕೀಟನಾಶಕಗಳು ಗುಬ್ಬಚ್ಚಿಗಳ ಪ್ರಧಾನ ಆಹಾರವಾದ ಸಣ್ಣ ಕೀಟಗಳನ್ನು ನಾಶಪಡಿಸುತ್ತಿವೆ. ಆಹಾರವಿಲ್ಲದೆ, ಗೂಡು ಕಟ್ಟಲು ಜಾಗವಿಲ್ಲದೆ ಇವು ಅನಾಥವಾಗಿವೆ. ಮಿಗಿಲಾಗಿ, ನಾವು ಅತಿಯಾಗಿ ಅವಲಂಬಿಸಿರುವ ಮೊಬೈಲ್ ಟವರ್‌ಗಳ ವಿಕಿರಣಗಳು ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಆದರೆ ಮಾಡುವುದೆಂತು!

image 2026 03 20T160350.533

ಗುಬ್ಬಿಗಳ ಕುರಿತಾದ ಕೆಲ ಕುತೂಹಲಕಾರಿ ಸಂಗತಿಗಳು ಬಹುಶಃ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ...

  • ಲೈಂಗಿಕ ದ್ವಿರೂಪತೆ (Sexually Dimorphic): ಗಂಡು ಮತ್ತು ಹೆಣ್ಣು ಹಕ್ಕಿಗಳ ನೋಟದಲ್ಲಿ ವ್ಯತ್ಯಾಸವಿರುತ್ತದೆ. ಗಂಡು ಗುಬ್ಬಚ್ಚಿಗಳು ಕೆಂಪು ಬಣ್ಣದ ಬೆನ್ನು ಮತ್ತು ಕುತ್ತಿಗೆಯ ಕೆಳಗೆ ಕಪ್ಪು ಬಣ್ಣದ ಗುರುತನ್ನು (Bib) ಹೊಂದಿರುತ್ತವೆ. ಹೆಣ್ಣು ಗುಬ್ಬಚ್ಚಿಗಳು ಕಂದು ಬಣ್ಣದ ಬೆನ್ನಿನ ಮೇಲೆ ಪಟ್ಟೆಗಳನ್ನು ಹೊಂದಿರುತ್ತವೆ. ಅಲ್ಲದೆ, ಹೆಣ್ಣು ಗುಬ್ಬಚ್ಚಿಗಳು ಗಂಡು ಗುಬ್ಬಚ್ಚಿಗಳಿಗಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುತ್ತವೆ.
  • ಸಾಮೂಹಿಕ ಜೀವನ: ಇವು ಹಿಂಡುಗಳಲ್ಲಿ ಅಥವಾ ಕಾಲನಿಗಳಲ್ಲಿ ವಾಸಿಸಲು ಇಷ್ಟಪಡುತ್ತವೆ.
  • ಈಜು: ತಮಗೆ ಯಾವುದಾದರೂ ಅಪಾಯದ ಮುನ್ಸೂಚನೆ ಸಿಕ್ಕರೆ, ಗುಬ್ಬಚ್ಚಿಗಳು ನೀರಿನಲ್ಲಿ ಅತ್ಯಂತ ವೇಗವಾಗಿ ಈಜಬಲ್ಲವು.
  • ರಕ್ಷಣಾತ್ಮಕ ಸ್ವಭಾವ: ಗುಬ್ಬಚ್ಚಿಗಳು ತಮ್ಮ ಪ್ರದೇಶದ ಬಗ್ಗೆ ಹಠ ಹಿಡಿಯುವ ಸ್ವಭಾವದವಲ್ಲ (Not territorial) ನಮ್ಮಂತೆ. ತಮಗೆ ಎಲ್ಲಿ ರಕ್ಷಣೆ ಸಿಗುತ್ತದೆ ಎನಿಸುತ್ತದೋ ಅಂತಹ ಯಾವುದೇ ಜಾಗದಲ್ಲಿ ಇವು ಗೂಡು ಕಟ್ಟಿಕೊಳ್ಳುತ್ತವೆ.
  • ಗೂಡು ಕಟ್ಟುವ ಗಂಡು ಗುಬ್ಬಚ್ಚಿ: ಹೆಣ್ಣು ಗುಬ್ಬಚ್ಚಿಗಳನ್ನು ಆಕರ್ಷಿಸಲು ಸಾಮಾನ್ಯವಾಗಿ ಗಂಡು ಗುಬ್ಬಚ್ಚಿಗಳೇ ಮೊದಲು ಗೂಡು ಕಟ್ಟಲು ಮುಂದಾಗುತ್ತವೆ.
  • ಕುಟುಂಬ: ಮನೆ ಗುಬ್ಬಚ್ಚಿಗಳು (House Sparrow) ‘ಪಾಸೆರಿಡೇ’ (Passeridae) ಕುಟುಂಬಕ್ಕೆ ಸೇರಿವೆ.
  • ಮನುಷ್ಯರೊಂದಿಗೆ ಒಡನಾಟ: ಇವು ಇತರೆ ಪ್ರಾಣಿ-ಪಕ್ಷಿಗಳಿಗಿಂತ ಮನುಷ್ಯರೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಆದ್ದರಿಂದಲೇ ಮನುಷ್ಯರು ನಿರ್ಮಿಸಿದ ಹಳ್ಳಿ ಅಥವಾ ನಗರ ಪ್ರದೇಶಗಳೆರಡರಲ್ಲೂ ಇವು ಸುಲಭವಾಗಿ ಹೊಂದಿಕೊಂಡು ವಾಸಿಸುತ್ತವೆ.
  • ಜೀವಿತಾವಧಿ: ಕಾಡಿನಲ್ಲಿ ವಾಸಿಸುವ ಗುಬ್ಬಚ್ಚಿಗಳ ಸರಾಸರಿ ಜೀವಿತಾವಧಿ ಸುಮಾರು 10 ವರ್ಷ.

ಈ ಪುಟ್ಟ ಜೀವಿಯ ನಾಶ ಎಂದರೆ ಪ್ರಕೃತಿಯ ಸಮತೋಲನದ ಒಂದು ಕೊಂಡಿ ಕಳಚಿದಂತೆ. ಗುಬ್ಬಚ್ಚಿಗಳು ಪರಿಸರದ ಅತ್ಯಂತ ಸೂಕ್ಷ್ಮ ಸೂಚಕಗಳು. ಅವುಗಳ ಅನುಪಸ್ಥಿತಿ ನಮ್ಮ ಸುತ್ತಮುತ್ತಲಿನ ಪರಿಸರ ಮನುಷ್ಯನ ವಾಸಕ್ಕೆ ಯೋಗ್ಯವಾಗಿ ಉಳಿದಿಲ್ಲ ಎಂದರ್ಥ. ಹಳೆ ಕಾಲದ ಮನೆಯ ಅಜ್ಜಿಯಂದಿರು ಅಕ್ಕಿ ಕೇರುವಾಗ ಬೇಕೆಂದೇ ನಾಲ್ಕು ಕಾಳುಗಳನ್ನು ಕೆಳಗೆ ಬೀಳಿಸುತ್ತಿದ್ದರು. ಆ ಪ್ರೀತಿ, ಸಹಬಾಳ್ವೆ ಗುಣ ಇಂದು ಖಂಡಿತ ಎಲ್ಲೂ ಇಲ್ಲ. ನಾವು ಕೇವಲ ಸ್ವಾರ್ಥಕ್ಕಾಗಿ ಪರಿಸರವನ್ನು ಬದಲಾಯಿಸಿಕೊಳ್ಳುತ್ತಾ ಹೋದರೆ, ಮುಂದಿನ ಪೀಳಿಗೆಗೆ ಗುಬ್ಬಚ್ಚಿ ಎಂದರೆ ಕೇವಲ ಚಿತ್ರಪಟಗಳಲ್ಲಿ ಕಾಣುವ ಕಾಲ್ಪನಿಕ ಹಕ್ಕಿಯಾದೀತು.

ಇದನ್ನೂ ಓದಿ: ಮಾನವನ ನಂಬರ್ 1 ಶತ್ರು ಸೊಳ್ಳೆ! ಈ ಪುಟ್ಟ ಅರಿಯನ್ನು ಗೆಲ್ಲುವ ಪರಿ ಗೊತ್ತೇ?

ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ಮನೆಯ ಬಾಲ್ಕನಿಯಲ್ಲಿ ಒಂದು ಸಣ್ಣ ಪಾತ್ರೆಯಲ್ಲಿ ನೀರು, ಒಂದು ಹಿಡಿ ನವಣೆ ಅಥವಾ ಭತ್ತದ ಕಾಳುಗಳನ್ನು ಇಟ್ಟರೆ ಸಾಕು. ಆ ಪುಟ್ಟ ಜೀವಿಯ ಹಸಿವು ನೀಗಬಹುದು. ಮರದ ಪೆಟ್ಟಿಗೆಗಳಿಂದ ಮಾಡಿದ ಕೃತಕ ಗೂಡುಗಳನ್ನು ಅಳವಡಿಸುವ ಮೂಲಕ ಅವುಗಳಿಗೆ ಮತ್ತೆ ಆಶ್ರಯ ನೀಡಬಹುದು. ಗುಬ್ಬಚ್ಚಿಗಳ ಚೀಂವ್ ಚೀಂವ್ ಮರಳಿ ಕೇಳಬೇಕೆಂದರೆ, ಕಡೆಪಕ್ಷ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕರುಣೆ ಮತ್ತು ಪ್ರಕೃತಿಯ ಮೇಲಿನ ಗೌರವ ಇರಬೇಕು. ‘ಪ್ರಕೃತಿ ನಮ್ಮಲ್ಲಿ ಒಂದು ಭಾಗವಲ್ಲ; ನಾವು ಪ್ರಕೃತಿಯ ಒಂದು ಭಾಗ’ ಎನ್ನುವ ಮಾತು ಸದಾ ನಮ್ಮನ್ನು ಎಚ್ಚರಿಸುತ್ತಿರಬೇಕು. ಈ ಗುಬ್ಬಚ್ಚಿ ದಿನದಂದು ನೆನಪು ಮಾಡಿಕೊಳ್ಳದೆ; ಅವು ನಮ್ಮ ಬದುಕಿನ ಭಾಗವೆಂದು ಭಾವಿಸಬೇಕು, ಅವುಗಳನ್ನೂ ಬದುಕಲು ಬಿಡಬೇಕು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...