IPL ಟಿಕೆಟ್ ಹುಚ್ಚು: ಇನ್‌ಸ್ಟಾಗ್ರಾಮ್ ವಂಚಕನ ಬಲೆಗೆ ಬಿದ್ದು 1.46 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ

Date:

ಬಹುನಿರೀಕ್ಷಿತ ಐಪಿಎಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸುವ ಆಸೆಯಿಂದ ಸಾಮಾಜಿಕ ಜಾಲತಾಣದ ಮೂಲಕ ಟಿಕೆಟ್ ಖರೀದಿಸಲು ಹೋದ 25 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಬರೋಬ್ಬರಿ 1.46 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ಘಟನೆ ನಗರದಲ್ಲಿ ವರದಿಯಾಗಿದೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

- Advertisement -

ಭಾನುವಾರ ನಿಗದಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಪಂದ್ಯದ ಟಿಕೆಟ್‌ಗಾಗಿ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ನಕಲಿ ಟಿಕೆಟ್ ಮಾರಾಟಗಾರನೊಬ್ಬನ ಖಾತೆಯನ್ನು ಅವರು ಸಂಪರ್ಕಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

​ಈ ಆನ್‌ಲೈನ್ ವಂಚಕನು ಯುವಕನಿಗೆ ಕೇವಲ ಪಂದ್ಯದ ಟಿಕೆಟ್ ಮಾತ್ರವಲ್ಲದೆ, ‘ವಿಐಪಿ ಸೌಲಭ್ಯಗಳು’ ಉಚಿತ ಆಹಾರದ ಕೂಪನ್‌ಗಳು ಮತ್ತು ಸ್ನೇಹಿತರ ಪ್ರವೇಶಕ್ಕಾಗಿ ಹೆಚ್ಚುವರಿ ಐಡಿ ಕಾರ್ಡ್‌ಗಳನ್ನು ಒದಗಿಸುವುದಾಗಿ ನಂಬಿಸಿದ್ದನು. ವಂಚಕನ ಈ ಭರವಸೆಗಳನ್ನು ನಂಬಿದ ಟೆಕ್ಕಿ ಆತನ ಬಲೆಗೆ ಬಿದ್ದಿದ್ದಾರೆ.

ಆನ್‌ಲೈನ್ ಮೂಲಕ ಟಿಕೆಟ್ ಮತ್ತು ವಿಐಪಿ ಪಾಸ್ ಪಡೆಯುವ ಉತ್ಸಾಹದಲ್ಲಿ, ಟೆಕ್ಕಿಯು ವಂಚಕನಿಗೆ ಯುಪಿಐ ಮೂಲಕ ಹಂತ-ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ತನ್ನ ಬ್ಯಾಂಕ್ ಖಾತೆ ಮಾತ್ರವಲ್ಲದೆ, ತನ್ನ ತಾಯಿಯ ಖಾತೆಯನ್ನು ಬಳಸಿಯೂ ಹಣ ಕಳುಹಿಸಿದ್ದಾರೆ. ಒಟ್ಟಾರೆ 1.46 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದ ಬಳಿಕ, ವಂಚಕನು ಯಾವುದೇ ಟಿಕೆಟ್ ನೀಡದೆ ಸಂಪರ್ಕ ಕಡಿದುಕೊಂಡು ಪರಾರಿಯಾಗಿದ್ದಾನೆ.

ಇದನ್ನು ಓದಿದ್ದೀರಾ? ‘ಸಂಜು ಬಂದರೆ ಋತುರಾಜ್‌ಗೆ ನಡುಕ’: CSK ನಾಯಕನ ಭವಿಷ್ಯದ ಬಗ್ಗೆ ಮಾಜಿ ದಿಗ್ಗಜರ ಅಚ್ಚರಿಯ ಹೇಳಿಕೆ

ಹಣ ಕಳೆದುಕೊಂಡ ಬಳಿಕ ತಾನು ವಂಚನೆಗೆ ಒಳಗಾಗಿರುವುದು ಯುವಕನಿಗೆ ಅರಿವಾಗಿದೆ. ಈ ಸಂಬಂಧ ಅವರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ.

ಐಪಿಎಲ್ ಪಂದ್ಯಗಳ, ಅದರಲ್ಲೂ ವಿಶೇಷವಾಗಿ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಗಳ ಟಿಕೆಟ್‌ಗೆ ಇರುವ ಭಾರಿ ಬೇಡಿಕೆಯ ಲಾಭವನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಟಿಕೆಟ್ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದಾರೆ.

​ಕ್ರಿಕೆಟ್ ಅಭಿಮಾನಿಗಳು ಕೇವಲ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳ ಮೂಲಕ ಮಾತ್ರವೇ ಟಿಕೆಟ್ ಖರೀದಿಸಬೇಕು. ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಅಥವಾ ಅವರು ಕಳುಹಿಸುವ ಕ್ಯೂಆರ್ ಕೋಡ್‌ಗಳಿಗೆ ಹಣ ವರ್ಗಾವಣೆ ಮಾಡಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ‘ಋತು ತಾರೆ’ ಪ್ರಾಯೋಗಿಕ ಜಾರಿಗೆ ಸಿದ್ಧತೆ: ಆರೋಗ್ಯಾಧಿಕಾರಿ ಮಾಹಿತಿ

ಮಧ್ಯ ವಯಸ್ಕ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಋತುಬಂಧ ಸಮಸ್ಯೆಗಳಿಗೆ ಪೂರಕವಾಗಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ ಕಾರ್ಮಿಕರ ಬದುಕಿಗಿಲ್ಲ ಭದ್ರತೆ!

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ...

ಮಣಿಪುರ ಕಳ್ಳಭಟ್ಟಿ ದುರಂತ: ಮೂರು ದಿನಗಳಲ್ಲಿ ಎಂಟು ಮಂದಿ ಸಾವು, ಜಿಲ್ಲಾಡಳಿತದಿಂದ ಹೈಅಲರ್ಟ್

ಮಣಿಪುರ ಕಳ್ಳಭಟ್ಟಿ ದುರಂತದಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಚಾಂದೇಲ್ ಜಿಲ್ಲೆಯಲ್ಲಿ...

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್‌ ಮಾರಾಟಕ್ಕೆ ಬ್ರೇಕ್‌: ತೀವ್ರ ಕಾರ್ಯಾಚರಣೆಗೆ ಎಡಿಸಿ ಸೂಚನೆ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುವ ಹಾಗೂ ಕಾನೂನುಬಾಹಿರವಾಗಿ ಸಿಗರೇಟ್, ತಂಬಾಕು...