IND vs WI 2nd Test | ಭಾರತಕ್ಕೆ ಅಲ್ಪ ಗುರಿ; ಗಮನ ಸೆಳೆದ ಕ್ಯಾಂಪ್‌ಬೆಲ್‌, ಹೋಪ್ ಶತಕ

Date:

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್‌ ಇಂಡೀಸ್‌ ಎರಡನೇ ಟೆಸ್ಟ್‌ನ ನಾಲ್ಕನೇ ದಿನ ವಿಂಡೀಸ್‌ ತಂಡ ಶ್ರೇಷ್ಠ ಹೋರಾಟ ತೋರಿಸಿತು. ಜಾನ್‌ ಕ್ಯಾಂಪ್‌ಬೆಲ್‌ (115) ಹಾಗೂ ಶಾಯ್‌ ಹೋಪ್‌ (103) ಅವರ ಅದ್ಭುತ ಶತಕದ ನೆರವಿನಿಂದ ಫಾಲೊಆನ್‌ನಿಂದ ತಪ್ಪಿಸಿಕೊಂಡ ಕ್ಯಾರೆಬಿಯನ್‌ ತಂಡವು 390 ರನ್‌ಗಳ ಎರಡನೇ ಇನಿಂಗ್ಸ್‌ ಕಟ್ಟಿತು. ಭಾರತಕ್ಕೆ 121 ರನ್‌ಗಳ ಸಾಧಾರಣ ಗುರಿ ದೊರೆತಿದ್ದು, ದಿನದಾಟದ ಅಂತ್ಯಕ್ಕೆ 18 ಓವರ್‌ಗಳಲ್ಲಿ 63/1 ರನ್‌ ಗಳಿಸಿ ಜಯದತ್ತ ಪಯಣ ಆರಂಭಿಸಿದೆ.

- Advertisement -

ಮೊದಲ ಇನಿಂಗ್ಸ್‌ನಲ್ಲಿ ಕೇವಲ 248 ರನ್‌ಗಳಿಗೆ ಸೀಮಿತಗೊಂಡಿದ್ದ ವಿಂಡೀಸ್‌ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಬಲಿಷ್ಠ ಪ್ರತಿರೋಧ ತೋರಿಸಿತು. ಆರಂಭದಲ್ಲೇ ಚಂದರ್‌ಪಾಲ್‌ (10) ಹಾಗೂ ಅಥನಾಜೆ (7) ಔಟಾದರೂ, ಕ್ಯಾಂಬೆಲ್‌ ಮತ್ತು ಹೋಪ್‌ ಶತಕದ ಜೊತೆಯಾಟ ಕಟ್ಟಿದರು. ಇಬ್ಬರ ಮಧ್ಯೆ 195 ರನ್‌ಗಳ ಜೊತೆಯಾಟ ತಂಡಕ್ಕೆ ಉತ್ತಮ ಆಧಾರ ನೀಡಿತು. ಕ್ಯಾಂಬೆಲ್‌ 12 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 115 ರನ್‌ ಗಳಿಸಿದರೆ, ಹೋಪ್‌ 103 ರನ್‌ಗಳ ಇನಿಂಗ್ಸನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು .

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

10ನೇ ವಿಕೆಟ್‌ ಜೊತೆಯಾಟದಲ್ಲಿ ಗ್ರೀವ್ಸ್‌–ಸೀಲ್ಸ್‌ ಹೋರಾಟ
ಮಧ್ಯಮ ಕ್ರಮ ಕುಸಿತದ ನಂತರ ಜಸ್ಟಿನ್‌ ಗ್ರೀವ್ಸ್‌ (ಅಜೇಯ 50) ಮತ್ತು ಜೇಡನ್‌ ಸೀಲ್ಸ್‌ (32) ಕೊನೆಯ ವಿಕೆಟ್‌ಗಾಗಿ ಅತ್ಯುತ್ತಮ ಇನಿಂಗ್ಸ್ ಕಟ್ಟಿದರು. ಇವರಿಬ್ಬರ ಜೊತೆಯಾಟದಲ್ಲಿ 22 ಓವರ್‌ಗಳಲ್ಲಿ 79 ರನ್‌ಗಳ ಜೊತೆಯಾಟ ಬಂತು. ಅವರ ಹೋರಾಟದಿಂದ ವಿಂಡೀಸ್‌ 390 ರನ್‌ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು.

ಇದಕ್ಕೂ ಮುನ್ನ, ಭಾರತವು ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ಯಶಸ್ವಿ ಜೈಸ್ವಾಲ್‌ (175), ಶುಭ್ಮನ್‌ ಗಿಲ್‌ (129), ಸಾಯಿ ಸುಧರ್ಷನ್‌ (87), ಧ್ರುವ್‌ ಜುರೇಲ್‌ (44) ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ (43) ಅವರ ಬೆಂಬಲದಿಂದ ಭಾರತ 518/5ಕ್ಕೆ ಇನಿಂಗ್ಸ್‌ ಘೋಷಿಸಿತ್ತು.

ಇದನ್ನು ಓದಿದ್ದೀರಾ? ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಸಿದ್ದ; ಶುಭಮನ್ ಗಿಲ್‌ಗೆ ನಾಯಕತ್ವ – ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್

ವಿಂಡೀಸ್‌ನ ಎರಡನೇ ಇನಿಂಗ್ಸ್‌ನಲ್ಲಿ ಕುಲ್‌ದೀಪ್‌ ಯಾದವ್, ಬುಮ್ರಾ ತಲಾ ಮೂರು, ಸಿರಾಜ್‌ 2, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ 1 ವಿಕೆಟ್‌ ಕಿತ್ತರು

ಫಾಲೊಆನ್‌ ನೀಡಿದ ಬಳಿಕ 121 ರನ್‌ಗಳ ಗುರಿ ಎದುರಿಸಿದ ಭಾರತ, ದಿನದ ಅಂತ್ಯಕ್ಕೆ 22/1 ರನ್‌ ಗಳಿಸಿದೆ. ಯಶಸ್ವಿ ಜೈಸ್ವಾಲ್‌ (8) ಔಟಾದರೆ, ಕೆ.ಎಲ್‌. ರಾಹುಲ್‌ (25) ಮತ್ತು ಸಾಯಿ ಸುಧರ್ಷನ್‌ (30) ಕ್ರೀಸ್‌ನಲ್ಲಿ ಉಳಿದಿದ್ದಾರೆ. ಇನ್ನೂ 58 ರನ್‌ಗಳ ಅಗತ್ಯವಿರುವ ಭಾರತವು ಐದನೇ ದಿನದ ಬೆಳಗಿನ ಮೊದಲ ಆವೃತ್ತಿಯಲ್ಲಿಯೇ ಗೆಲುವು ಸಾಧಿಸುವ ಸಾಧ್ಯತೆಯಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...