ಹಾಕಿ ವಿಶ್ವಕಪ್ 2026: ವೇಲ್ಸ್ ವಿರುದ್ಧ ಭಾರತಕ್ಕೆ 3-1 ಗೋಲುಗಳ ಭರ್ಜರಿ ಜಯ

Date:

ನೆದರ್‌ಲ್ಯಾಂಡ್ಸ್‌ನ ವ್ಯಾಗನರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಫ್‌ಐಹೆಚ್ ಪುರುಷರ ಹಾಕಿ ವಿಶ್ವಕಪ್ 2026ರ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ವೇಲ್ಸ್ ವಿರುದ್ಧ 3-1 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿ ಅಭಿಯಾನವನ್ನು ಆರಂಭಿಸಿದೆ.

- Advertisement -

ಸ್ವಾತಂತ್ರ್ಯ ದಿನಾಚರಣೆಯಂದೇ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಹಾಗೂ ಸಂಜಯ್ ರಾಣಾ ಒಂದು ಗೋಲು ಗಳಿಸಿ ಗೆಲುವಿನ ರೂವಾರಿಯಾದರು. ಈ ಮಹತ್ವದ ಗೆಲುವಿನೊಂದಿಗೆ ಭಾರತ ತಂಡವು ‘ಪೂಲ್ ಡಿ’ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಅಗ್ರಸ್ಥಾನಕ್ಕೇರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...

ಪಂದ್ಯ ಆರಂಭವಾದ ಮೊದಲ ಕ್ವಾರ್ಟರ್‌ನಲ್ಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ತಮ್ಮ ಚೊಚ್ಚಲ ವಿಶ್ವಕಪ್ ಆಡುತ್ತಿರುವ 25 ವರ್ಷದ ಸಂಜಯ್ ರಾಣಾ ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ನಂತರ 11ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಮ್ಮ ಕ್ಲಾಸಿಕ್ ಡ್ರ್ಯಾಗ್ ಫ್ಲಿಕ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ವೇಲ್ಸ್ ತಂಡವು ತನ್ನ ರಕ್ಷಣಾ ತಂತ್ರವನ್ನು ಬಲಪಡಿಸಿಕೊಂಡಿದ್ದರಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಬಳಿಕ 42ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಹರ್ಮನ್‌ಪ್ರೀತ್ ವೈಯಕ್ತಿಕ ಎರಡನೇ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು.

ನಾಲ್ಕನೇ ಕ್ವಾರ್ಟರ್‌ನ 57ನೇ ನಿಮಿಷದಲ್ಲಿ ವೇಲ್ಸ್ ತಂಡದ ಸ್ಯಾಮ್ ವೆಲ್ಷ್ ತಮ್ಮ ತಂಡದ ಪರ ಏಕೈಕ ಸಮಾಧಾನಕರ ಗೋಲು ಗಳಿಸಿದರು. ಈ ಗೋಲಿನ ಸಂದರ್ಭದಲ್ಲಿ ಅಂಪೈರ್ ವಿಜಿಲ್ ಜಾರಿ ಬಿದ್ದು ಗಾಯಗೊಂಡ ನಾಟಕೀಯ ಬೆಳವಣಿಗೆ ನಡೆಯಿತಾದರೂ, ಟಿವಿ ಅಂಪೈರ್ ಪರಿಶೀಲನೆಯ ನಂತರ ಗೋಲು ನೀಡಲಾಯಿತು. ಪಂದ್ಯದ ವೇಳೆ ಭಾರತದ ಕೋಚ್ ಕ್ರೇಗ್ ಫುಲ್ಟನ್ ಗೋಲ್‌ಕೀಪರ್ ರೊಟೇಷನ್ ತಂತ್ರ ಅನುಸರಿಸಿ ಸೂರಜ್ ಕರ್ಕೆರಾ ಬದಲಿಗೆ ಮೋಹಿತ್ ಅವರನ್ನು ಕಣಕ್ಕಿಳಿಸಿದರು. ಮೋಹಿತ್ 54ನೇ ನಿಮಿಷದಲ್ಲಿ ಅದ್ಭುತವಾಗಿ ಗೋಲು ತಡೆದು ತಂಡದ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಇದೇ ವೇಳೆ ಭಾರತದ ಆಟಗಾರ ಶಿಲಾನಂದ್ ಲಾಕ್ರಾ ಗಾಯಗೊಂಡು ಮೈದಾನ ತೊರೆದರು.

ವಿಶ್ವಕಪ್ ಅಭಿಯಾನದಲ್ಲಿ ಶುಭಾರಂಭ ಕಂಡಿರುವ ಭಾರತ ಪುರುಷರ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಆಗಸ್ಟ್ 17 ರಂದು ಸಂಜೆ 6:30ಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ, ಭಾರತದ ಮಹಿಳಾ ಹಾಕಿ ತಂಡವು ಆಗಸ್ಟ್ 16 ರಂದು ಚೀನಾ ವಿರುದ್ಧ ಸೆಣಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಾವು ಹೋದಾಗ ನೀವು ಬರ್ತೀರಿ’ ಎಂದಿದ್ದ ಮೋದಿ ಮಾತಿನ ಮರ್ಮವೇನು? ರಾಹುಲ್ ಈ ಘಟನೆ ನೆನೆದದ್ದು ಯಾಕೆ?

ಚುನಾವಣಾ ಆಯೋಗದ ಪಾರದರ್ಶಕತೆ ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ನಿರ್ಣಾಯಕ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ ಪುನಃ ಭುಗಿಲೆಬ್ಬಿಸಿದ ವಿವಾದ

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ...

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಇಲ್ಲ: ಬಡತನ ಮೆಟ್ಟಿ ನಿಂತು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ನೀರು ದಂಡಾ

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಸೇರಿದಂತೆ ಯಾವೊಂದು ಸೌಕರ್ಯವೂ ಇಲ್ಲ. ಕೈಯಲ್ಲಿ ಬಿಪಿಎಲ್...

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್‌ಗಳ ಸರಣಿ ಸ್ಫೋಟ

ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಭಾರೀ ಅನಾಹುತ‌ವೊಂದು ತಪ್ಪಿದೆ. ಕಗ್ಗದಾಸಪುರದ...