ಸಾನಿಯಾ ಮಿರ್ಝಾರೊಂದಿಗಿನ ದಾಂಪತ್ಯ ಜೀವನ ಅಂತ್ಯ: ಪಾಕ್ ನಟಿಯ ಕೈ ಹಿಡಿದ ಶೋಯೆಬ್ ಮಲಿಕ್

Date:

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್, ಶನಿವಾರ ಪಾಕ್ ನಟಿ ಸನಾ ಜಾವೇದ್ ಅವರೊಂದಿಗಿನ ವಿವಾಹವನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಘೋಷಿಸಿದ್ದಾರೆ. ಆ ಮೂಲಕ ಭಾರತೀಯ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರೊಂದಿಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದನ್ನು ಖಚಿತಪಡಿಸಿದ್ದಾರೆ.

ಶೋಯೆಬ್ ಮಲಿಕ್ ಅವರು, ಸನಾ ಅವರೊಂದಿಗಿನ ಮದುವೆಯ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಇದನ್ನು ಖಚಿತಪಡಿಸಿದ್ದಾರೆ. ಮಲಿಕ್ ಅವರ ಮ್ಯಾನೇಜರ್ ಕೂಡ ಸನಾ ಜಾವೇದ್ ಅವರೊಂದಿಗಿನ ವಿವಾಹವಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ಕಳೆದ ಕೆಲ ವರ್ಷದಿಂದಲೂ ವ್ಯಾಪಕವಾಗಿ ಹರಿದಾಡುತ್ತಿದ್ದವು. ಈ ಗಾಸಿಪ್‌ಗಳ ನಡುವೆಯೇ ಕಳೆದ ವರ್ಷ ಜೊತೆಯಾಗಿಯೇ ಇಬ್ಬರೂ ದುಬೈನಲ್ಲಿ ತಮ್ಮ ಪ್ರೀತಿಯ ಮಗನ ಹುಟ್ಟುಹಬ್ಬ ಆಚರಿಸಿ ನಾವು ಜೊತೆಯಾಗಿದ್ದೇವೆ ಎಂಬ ಸಂದೇಶ ನೀಡಿದ್ದರು. ಇದರ ಮಧ್ಯೆ ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಝಾ, ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬದುಕಿನಲ್ಲಿರುವ ಕಷ್ಟಗಳ ಬಗ್ಗೆ ಪೋಸ್ಟ್ ಮಾಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಮಗ ಇಝಾನ್‌ನೊಂದಿಗೆ ಸಾನಿಯಾ ಮಿರ್ಝಾ, ಶೋಯೆಬ್ ಮಲಿಕ್

“ಮದುವೆಯೂ ಕಷ್ಟ ವಿಚ್ಛೇದನವೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಬೊಜ್ಜುತನವೂ ಕಷ್ಟ, ಫಿಟ್ ಆಗಿ ಇರೋದು ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಸಾಲ ಹೊಂದಿರುವುದು ಕೂಡ ಕಷ್ಟ ಅರ್ಥಿಕವಾಗಿ ಸುಸ್ಥಿರವಾಗಿರುವುದು ಕೂಡ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಮಾತನಾಡಿದರೂ ಕಷ್ಟ ಮಾತನಾಡದೇ ಇದ್ದರೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಜೀವನ ಎಂದಿಗೂ ಸುಲಭವಾಗಿರುವುದಿಲ್ಲ, ಅದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ಬುದ್ಧಿವಂತಿಕೆಯಿಂದ ನಮ್ಮ ಕಷ್ಟ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು” ಎಂಬಂತಹ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಶೋಯೆಬ್ ಮಲಿಕ್, ಶನಿವಾರ ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

ಸಾನಿಯಾ ಮಿರ್ಝಾ ಮತ್ತು ಶೋಯೆಬ್ ಮಲಿಕ್ 2010ರಲ್ಲಿ ಮದುವೆಯಾಗಿದ್ದರು. ಇಝಾನ್ ಎಂಬ ಗಂಡು ಇದೆ. ಅಕ್ಟೋಬರ್ 2018ರಲ್ಲಿ ಮಗುವಿನ ಜನನವಾಗಿತ್ತು.

ಶೋಯೆಬ್ ಈಗ ಕೈ ಹಿಡಿದಿರುವ ಪಾಕಿಸ್ತಾನಿ ನಟಿ ಸನಾ, ಈ ಹಿಂದೆ ಗಾಯಕ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ 2020ರಲ್ಲಿ ಮದುವೆಯಾಗಿದ್ದರು. ಅವರ ವಿವಾಹ ವಿಚ್ಚೇದನೆಯ ಹಿಂದಿನ ಕಾರಣ ತಿಳಿದಿಲ್ಲ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4ನೇ ಟೆಸ್ಟ್‌ | ಇಂಗ್ಲೆಂಡ್‌ ಸ್ಪಿನ್‌ ದಾಳಿಗೆ ನಲುಗಿದ ಟೀಮ್ ಇಂಡಿಯಾ; ಯಶಸ್ವಿ ಜೈಸ್ವಾಲ್ ಹೊಸ ದಾಖಲೆ

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ...

ನಾಲ್ಕನೇ ಟೆಸ್ಟ್ | ರೂಟ್ ಶತಕ, ಇಂಗ್ಲೆಂಡ್ 302/7; ಸ್ಪಿನ್ನರ್ ಅಶ್ವಿನ್ ಮತ್ತೊಂದು ಮೈಲಿಗಲ್ಲು

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್...

ನಾಲ್ಕನೇ ಟೆಸ್ಟ್ | ಚೊಚ್ಚಲ ಪಂದ್ಯದಲ್ಲೇ ಆಕಾಶ್‌ ದೀಪ್‌ಗೆ 3 ವಿಕೆಟ್: ಇಂಗ್ಲೆಂಡ್‌ನ 5 ವಿಕೆಟ್ ಪತನ

ಭಾರತ - ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ರಾಂಚಿಯ ಜೆಎಸ್‌ಸಿಎ...

ಐಪಿಎಲ್ 2024 | ಪಂದ್ಯಗಳ ವೇಳಾಪಟ್ಟಿ ಪ್ರಕಟ: ಚೆನ್ನೈ-ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ

ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ...