ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್

Date:

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಅಂತಿಮ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬೆನ್ ಸ್ಟೋಕ್ಸ್ ಪಡೆ, ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 218 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಗಿತ್ತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ, ದಿನದಾಟದ ಮುಕ್ತಾಯದ ವೇಳೆ ಕೇವಲ 1 ವಿಕೆಟ್ ಕಳೆದುಕೊಂಡು 135 ರನ್‌ಗಳನ್ನು ಪೇರಿಸಿದೆ.

ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿ, ಮಿಂಚಿದರು. ಶೋಯೆಬ್ ಬಶೀರ್ ಎಸೆತದಲ್ಲಿ ಸ್ಟಂಪ್ ಔಟಾಗುವುದಕ್ಕೂ ಮುನ್ನ ಮೂರು ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿ ಮಿಂಚಿದರು. ಈ ಅರ್ಧಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ನ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ ಬರೆದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್, ಮೊದಲ ರನ್ ಗಳಿಸುವುದರೊಂದಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 700+ ರನ್ ಕಲೆಹಾಕಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. 2002ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ 6 ಇನಿಂಗ್ಸ್​ಗಳಲ್ಲಿ 602 ರನ್, 2016ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವಿರಾಟ್ ಕೊಹ್ಲಿ, 8 ಇನಿಂಗ್ಸ್​ಗಳ ಮೂಲಕ 655 ರನ್ ಬಾರಿಸಿದ್ದರು. ಇವರಿಬ್ಬರೂ ಬಲಗೈ ಬ್ಯಾಟರ್‌ಗಳು.

ಸದ್ಯ ಟೆಸ್ಟ್ ಸರಣಿಯೊಂದರಲ್ಲಿ ಟೀಮ್ ಇಂಡಿಯಾ ಪರ 700+ ರನ್ ಕಲೆಹಾಕಿದ ಮೊದಲ ಎಡಗೈ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ನಿರ್ಮಿಸಿದ್ದಾರೆ.

ಜೈಸ್ವಾಲ್ 5 ಪಂದ್ಯಗಳಲ್ಲಿ 712 ರನ್ ಗಳಿಸಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಎಲೈಟ್‌ ಕ್ಲಬ್‌ಗೆ ಎಂಟ್ರಿ

ಈ ಸರಣಿಯಲ್ಲಿ ಈಗಾಗಲೇ ಎರಡು ದ್ವಿಶತಕ ಸಿಡಿಸಿರುವ ಅವರು ಇದೀಗ ಮತ್ತೊಂದು ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ಈ ಸರಣಿಯಲ್ಲಿ ಜೈಸ್ವಾಲ್ 700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಒಟ್ಟು 712 ರನ್‌ಗಳು ದಾಖಲಾಗಿವೆ. ಇದರಲ್ಲಿ ವಿಶೇಷವೆಂದರೆ ಇದುವರೆಗೆ ಸುನಿಲ್ ಗವಾಸ್ಕರ್ ಮಾತ್ರ ಭಾರತ ಪರ ಟೆಸ್ಟ್ ಸರಣಿಯಲ್ಲಿ 700+ ರನ್ ಗಳಿಸಿದ್ದರು. ಯಶಸ್ವಿ ಜೈಸ್ವಾಲ್ ಇದೀಗ ಪಟ್ಟಿಗೆ ಸೇರಿದ್ದಾರೆ ಮತ್ತು ಟೆಸ್ಟ್ ಸರಣಿಯಲ್ಲಿ 700+ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸುನಿಲ್ ಗವಾಸ್ಕರ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಎರಡು ಬಾರಿ ಟೆಸ್ಟ್ ಸರಣಿಯಲ್ಲಿ 700+ ರನ್‌ಗಳ ಸ್ಕೋರ್ ದಾಟಿದ್ದಾರೆ.

 

ಅತಿ ಹೆಚ್ಚು ಸಿಕ್ಸರ್‌ ದಾಖಲೆ

ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಅವರು ಇದುವರೆಗೆ 26 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಯಾವುದೇ ಒಂದು ತಂಡದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಟ್ಟು 25 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ಜೈಸ್ವಾಲ್ ಒಂದೇ ಸರಣಿಯಲ್ಲಿ ಸಚಿನ್ ಅವರ ಈ ದಾಖಲೆಯನ್ನು ಮುರಿದಿದ್ದಾರೆ.

1000 ಸಾವಿರ ರನ್
ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವ ವೇಳೆ ಯಶಸ್ವಿ ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 1000 ರನ್ ಗಡಿ ದಾಟಿದರು. ಅಲ್ಲದೇ, ಅತಿ ವೇಗವಾಗಿ ಸಹಸ್ರ ರನ್ ಗಳಿಸಿದ ಎರಡನೇ ಭಾರತೀಯ ಎಂಬ ಸಾಧನೆ ಮಾಡಿದರು.

ಉಳಿದಂತೆ ಜೈಸ್ವಾಲ್ ಮಾಡಿರುವ ಸಾಧನೆಯ ವಿವರ ಹೀಗಿದೆ:

1000 ಟೆಸ್ಟ್‌ ರನ್ ತಲುಪಲು ಅತ್ಯಧಿಕ ಬ್ಯಾಟಿಂಗ್ ಸರಾಸರಿ(ಟೀಮ್ ಇಂಡಿಯಾ ಪರವಾಗಿ)
83.33 ಸರಾಸರಿ: ವಿನೋದ್ ಕಾಂಬ್ಳಿ
71.43 – ಚೇತೇಶ್ವರ ಪೂಜಾರ
71.43 – ಯಶಸ್ವಿ ಜೈಸ್ವಾಲ್
62.5 – ಸುನಿಲ್ ಗವಾಸ್ಕರ್
55.56 – ಮಯಾಂಕ್ ಅಗರ್ವಾಲ್

ಟೆಸ್ಟ್ ನಲ್ಲಿ 1000 ರನ್‌ಗಳನ್ನು ಪೂರೈಸಿದ ಅತ್ಯಂತ ಕಿರಿಯ ಭಾರತೀಯ
19 ವರ್ಷ, 217 ದಿನ: ಸಚಿನ್ ತೆಂಡೂಲ್ಕರ್
21 ವರ್ಷ, 27 ದಿನ: ಕಪಿಲ್ ದೇವ್
21 ವರ್ಷ, 197 ದಿನ: ರವಿಶಾಸ್ತ್ರಿ
22 ವರ್ಷ 70 ದಿನ: ಯಶಸ್ವಿ ಜೈಸ್ವಾಲ್
22 ವರ್ಷ 293 ದಿನ: ದಿಲೀಪ್ ವೆಂಗ್‌ಸರ್ಕರ್

ಚೊಚ್ಚಲ ಪಂದ್ಯದಿಂದ 1000 ಟೆಸ್ಟ್ ರನ್‌ಗಳನ್ನು ಪೂರೈಸಲು ತೆಗೆದುಕೊಂಡಿರುವ ಕಡಿಮೆ ದಿನಗಳು

166 – ಮೈಕೆಲ್ ಹಸ್ಸಿ
185 – ಐಡೆನ್ ಮಾಕ್ರ್ರಾಮ್
207 – ಆಡಮ್ ವೋಜಸ್
227 – ಆಂಡೂ ಸ್ಟ್ರಾಸ್
239 – ಯಶಸ್ವಿ ಜೈಸ್ವಾಲ್‌
244 – ಹರ್ಬರ್ಟ್‌ ಸ್ಕಟ್ಲಿಫ್

ಭಾರತದ ದಾಖಲೆ ಈ ಹಿಂದೆ ರಾಹುಲ್ ದ್ರಾವಿಡ್ (299 ದಿನಗಳು) ಹೆಸರಿನಲ್ಲಿತ್ತು.

1000 ಟೆಸ್ಟ್ ರನ್‌ಗಳಿಗೆ ಕಡಿಮೆ ಪಂದ್ಯಗಳು:
7 ಪಂದ್ಯ: ಡಾನ್ ಬ್ರಾಹ್ಮನ್
9 ಪಂದ್ಯ: ಎವರ್ಟನ್ ವೀಕ್ಸ್
9 ಪಂದ್ಯ: ಹರ್ಬರ್ಟ್‌ ಸ್ಕಟ್ಲಿಫ್
9 ಪಂದ್ಯ: ಜಾರ್ಜ್ ಹೆಡ್ಲಿ
9 ಪಂದ್ಯ: ಯಶಸ್ವಿ ಜೈಸ್ವಾಲ್

ಈ ಹಿಂದೆ ಸುನಿಲ್ ಗವಾಸ್ಕ‌ರ್ ಮತ್ತು ಚೇತೇಶ್ವ‌ರ್ ಪೂಜಾರ (ತಲಾ 11 ಪಂದ್ಯ) ಭಾರತದ ದಾಖಲೆ ಹೊಂದಿದ್ದರು.

ಅತೀ ವೇಗವಾಗಿ 1000 ಟೆಸ್ಟ್ ರನ್‌ಗಳನ್ನು ಗಳಿಸಿದ ಭಾರತೀಯ (ಇನ್ನಿಂಗ್ಸ್ ಲೆಕ್ಕದಲ್ಲಿ)

14 ಇನ್ನಿಂಗ್ಸ್: ವಿನೋದ್ ಕಾಂಬ್ಳಿ

16 ಇನ್ನಿಂಗ್ಸ್: ಯಶಸ್ವಿ ಜೈಸ್ವಾಲ್‌

18 ಇನ್ನಿಂಗ್ಸ್: ಚೇತೇಶ್ವರ ಪೂಜಾರ

19 ಇನ್ನಿಂಗ್ಸ್: ಮಯಾಂಕ್ ಅಗರ್ವಾಲ್

21 ಇನ್ನಿಂಗ್ಸ್: ಸುನಿಲ್ ಗವಾಸ್ಕರ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಪೇನ್‌ಗೆ ನಾಲ್ಕನೇ ಬಾರಿ ಯೂರೋ ಕಪ್; ಸತತ 2ನೇ ಬಾರಿ ಸೋತ ಇಂಗ್ಲೆಂಡ್

ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್‌ ಪ್ರಶಸ್ತಿಯನ್ನು ಸ್ಪೇನ್‌...

ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ...

ಸಾಂಘಿಕ ಹೋರಾಟದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ಟೀಂ ಇಂಡಿಯಾಗೆ 4-1 ಟಿ20 ಸರಣಿ

ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ...

ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕ್ವಾಡ್ ಕ್ಯಾನ್ಸರ್ ಚಿಕಿತ್ಸೆಗೆ ಬಿಸಿಸಿಐ 1 ಕೋಟಿ ರೂ. ನೆರವು

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನ್ಶುಮಾನ್‌ ಗಾಯಕ್ವಾಡ್ ಅವರ ಕ್ಯಾನ್ಸರ್‌ ಚಿಕಿತ್ಸೆಗೆ...