ದಾವಣಗೆರೆ | ಕರವೇ ಜಿಲ್ಲಾ ಘಟಕದಿಂದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಧ್ವಜಾರೋಹಣ

Date:

ದಾವಣಗೆರೆ ನಗರದ ಡಾ.ಎಂ.ಸಿ. ಮೋದಿ ವೃತ್ತದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದಾವಣಗೆರೆ ಜಿಲ್ಲಾ ಘಟಕದಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಿಸಲಾಯಿತು.‌

- Advertisement -

ನಿವೃತ್ತ ಬ್ಯಾಂಕ್ ಉದ್ಯೋಗಿ, ಸಾಹಿತಿ ಎನ್.ಟಿ. ಯರ‍್ರಿ ಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ರಾಜ್ಯದಲ್ಲಿ ಸುಮಾರು 12 ಸಾವಿರ ಬ್ಯಾಂಕುಗಳಿದ್ದು, ಎಲ್ಲಾ ಶಾಖೆಗಳಲ್ಲಿ ಕನ್ನಡ ಬಳಸುವಂತಾದರೆ ಅದು ಅದ್ಭುತ ಬದಲಾವಣೆಯಾಗಲಿದೆ. ಪ್ರತಿಯೊಂದು ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆಗಬೇಕು. ಗ್ರಾಮೀಣ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಕರವೇ ಸಾಕಷ್ಟು ಹೋರಾಟ ಮಾಡುತ್ತಾ ಬರುತ್ತಿದೆ “ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...
1003018806

“ಎಟಿಎಂಗಳಲ್ಲಿ ಸಹಾ ಕನ್ನಡ, ಇಂಗ್ಲೀಷ್, ಹಿಂದಿ ಮೂರು ಭಾಷೆಗಳು ಇರುತ್ತವೆ. ಆದರೆ ಅವುಗಳಲ್ಲಿ ಕನ್ನಡ ಬಿಟ್ಟು ಇನ್ನೆರಡು ಭಾಷೆ ಬಳಸಲು ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಜವಾಗಿಯೂ ಬೇಸರದ ಸಂಗತಿಯಾಗಿದೆ. ನಾವು ನಿರಭಿಮಾನಿಗಳಾಗದೇ ಸ್ವಾಭಿಮಾನಿಗಳಾಗಿ ಕನ್ನಡ ಭಾಷೆಯನ್ನು ಎಲ್ಲೆಲ್ಲಿ ಬಳಸಲು ಸಾಧ್ಯವಿದೆಯೋ ಅಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಡಬೇಕು” ಎಂದು ಕರೆ ನೀಡಿದರು.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡ ಪ್ರಭ ಪತ್ರಿಕೆ ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ್ ಬಡದಾಳ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, “ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ತನ್ನದೇ ಆದ ಒಂದು ಲಿಪಿ ಇದೆ, ಏನು ಬರೆಯುತ್ತೇವೆಯೋ ಅದನ್ನು ಓದುತ್ತೇವೆ, ಏನು ಓದುತ್ತೇವೆಯೋ ಅದನ್ನು ಬರೆಯುತ್ತೇವೆ. ನಾಡು ನುಡಿಗಾಗಿ ಹೋರಾಡಿದವರಲ್ಲಿ ನಮ್ಮ ದಾವಣಗೆರೆಯ ಮಹಾಲಿಂಗರು ಒಬ್ಬರು. ನಮ್ಮ ಹೆಮ್ಮೆಯ ಭಾಷೆಯ ಕವಿಗಳಿಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ. 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹನೀಯರ ಜೊತೆಗೆ ಮಹಾಲಿಂಗ ರಂಗರ ಹೆಸರು ಸಹಾ ಸೇರ್ಪಡೆಯಾಗಬೇಕು” ಎಂದು ಅಭಿಪ್ರಾಯಪಟ್ಟರು.

1003018808

“ನಮ್ಮ ಭಾಷೆ, ನಮ್ಮತನವನ್ನು ನಾವು ಇಂದು ಮರೆಯಬಾರದು. ಹಾಗೆಯೇ ನಾವು ನಮ್ಮ ಮನೆಯಿಂದಲೇ ಕನ್ನಡ ಬಳೆಸುವ ಕಾರ್ಯ ಮಾಡಬೇಕಿದೆ. ದಾವಣಗೆರೆಯಲ್ಲಿ ಪ್ರಮುಖ ವೃತ್ತಗಳಿಗೆ ಮಹನೀಯರ ಹೆಸರಿದ್ದರೂ ಸಹಾ ಬೇರೆ ಹೆಸರಿನಿಂದ ಕರೆದು ರೂಢಿ ಮಾಡಿಕೊಂಡಿದ್ದಾರೆ. ಅದು ಬದಲಾವಣೆ ಆಗಬೇಕಿದೆ. ನಮ್ಮ ಮಕ್ಕಳಿಗೆ ತಿಳಿ ಹೇಳಬೇಕಿದೆ” ಎಂದರು.

ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ ಮಂಜುನಾಥ ಮಾತನಾಡಿ, “ಕನ್ನಡ ಉಳಿಸಿ ಬೆಳೆಸಲು 1947 ರಿಂದಲೂ ಕೂಡಾ ಅನೇಕ ಮಹನೀಯರು ಹೋರಾಟ ಮಾಡುತ್ತಾ ಬಂದಿದ್ದಾರೆ. 1956ರಲ್ಲಿ ಏಕೀಕರಣವಾಯಿತು. ಇದಕ್ಕೂ ಮೊದಲು ಸುಮಾರು 500 ಕ್ಕೂ ಹೆಚ್ಚು ರಾಜ ವಂಶಸ್ತರು ಆಡಳಿತ ಮಾಡಿಕೊಂಡು ಬಂದಿದ್ದರು. ಕನ್ನಡ ಏಕೀಕರಣವಾದ ಮೇಲೆ ಒಂದಾಗಿದೆ. ನಾವು ಇಂತಹ ಪವಿತ್ರ ನೆಲದಲ್ಲಿ ಇದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ನೆಲೆಸಿದ್ದಾರೆ. ಇದರಿಂದ ನಮ್ಮ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ಈ ವಿರುದ್ಧ ನಾವುಗಳು ಹೋರಾಟ ಮಾಡಬೇಕಾಗಿದೆ” ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಕರವೇ ಹೋರಾಟದ ಹಾದಿಯನ್ನು ಸವಿವರವಾಗಿ ವಿವರಿಸಿದರು.

1003018807

ದಾವಣಗೆರೆ ಹರಿಹರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಮಾತನಾಡಿ “ರಾಜ್ಯದಲ್ಲಿ ಆಂಗ್ಲ ನಾಮಫಲಕ ವಿರುದ್ಧ ಕರವೇ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಸರ್ಕಾರದಲ್ಲಿ ಅಧಿಕೃತವಾಗಿ ಆದೇಶ ಮಾಡುವ ಮೂಲಕ ಹೋರಾಟ ನಡೆಸಿದ ಕ್ರಮ ಅಭಿನಂದನಾರ್ಹ, ಇದಕ್ಕೆ ನಮ್ಮ ರಾಜ್ಯ ಸರ್ಕಾರ ಸ್ಪಂದಿಸಿ ಶೇಕಡ 40 /60 ಅನುಪಾತದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ ಅದರಂತೆ ರಾಜ್ಯದಲ್ಲಿ ಎಲ್ಲರೂ ಕನ್ನಡ ನಾಮಫಲಕ ಹಾಕಬೇಕು” ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ನೆಲಕಚ್ಚಿದ ಮೆಕ್ಕೆಜೋಳದ ಇಳುವರಿ ಕುಸಿತ: ನಷ್ಟದಲ್ಲಿರುವ ರೈತರನ್ನು ಮೇಲೆತ್ತುವವರು ಯಾರು?

ಮಹಾನಗರ ಪಾಲಿಕೆ ಸದಸ್ಯ ಏ ನಾಗರಾಜ್, ಮಾಂತೇಶ್, ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಪತ್ರಕರ್ತ ಎಂ.ಎಸ್.ಚನ್ನಬಸವ ಶೀಲವಂತ್, ಜೆ.ಎಚ್.ಪಟೇಲ್ ಕಾಲೇಜು ಕಾರ್ಯದರ್ಶಿ ಮುಸ್ತಫ, ಕರವೇ ವಿವಿಧ ಘಟಕಗಳ ಪದಾಧಿಕಾರಿಗಳಾದ ಮಹೇಶ್ವರಪ್ಪ, ಶ್ರೀನಿವಾಸ್, ಸಂತೋಷ್ ಜಿಎಸ್ ,ಮಂಜುನಾಥ, ನಾಗರಾಜ, ಚಂದ್ರು, ಸುರೇಶ, ಮಂಜುಶ್ರೀಗೌಡ, ಕರಿಬಸಪ್ಪ, ತುಳಸಿರಾಮ್, ಸಂಜು, ಗಿರೀಶ ಕುಮಾರ, ಪರಮೇಶ್ವರ, ಗೋಪಾಲ ದೇವರಮನಿ, ಜಮೀವುಲ್ಲಾ, ಅನ್ವರ್, ದಾದಾಪೀರ್, ರಫೀಕ್, ಈಶ್ವರ್ ,ತನ್ವೀರ್ ,ಭಾಷಾ, ಮಹಿಳಾ ಘಟಕದ ಬಸಮ್ಮ, ಆಲೂರು ನಾಗಮ್ಮ, ಮಂಜುಳಾ ಮಹಾಂತೇಶ, ಅಕ್ಷಯ್, ರಾಕೇಶ್, ಚಂದ್ರು, ಧೀರೇಂದ್ರ, ಮಂಜುಳಾ ಗಣೇಶ, ಸಾವಿತ್ರಮ್ಮ ಸಾಕಮ್ಮ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...

ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ...