ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಜೀವನಾಧಾರಿತ ‘ಡೈರೆಕ್ಟ್ ಆ್ಯಕ್ಷನ್’ ನಾಟಕ ಪ್ರದರ್ಶನ

Date:

ಬಾಲ್ಯದಿಂದಲೇ ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡು ಬಂದವರು ಹಸಿರು ಶಾಲಿನ ಹರಿಕಾರ, ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ. ರಾಜ್ಯದ ರೈತರ ಪರವಾಗಿದ್ದ ಅವರ ಗಟ್ಟಿದನಿ, ವಿಚಾರಗಳು, ಖಚಿತ ಅಂಕಿ-ಅಂಶಗಳನ್ನು ಒಳಗೊಂಡ ಭಾಷಣಗಳು ಸರ್ಕಾರವನ್ನೇ ನಡುಗಿಸುತ್ತಿದ್ದವು. ಅವರ ಬಾಲ್ಯ, ಹೋರಾಟ, ಬದುಕನ್ನು ಚಿಂತಕ ನಟರಾಜ್ ಹುಳಿಯಾರ್ ಅವರು ನಾಟಕದ ರೂಪದಲ್ಲಿ ಹೆಣೆದಿದ್ದಾರೆ. ‘ಡೈರೆಕ್ಟ್ ಆ್ಯಕ್ಷನ್’ ಹೆಸರಿನಲ್ಲಿ ರಂಗದ ಮೇಲೆ ತಂದಿದ್ದಾರೆ. ನಾಟಕವು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಿ.18 ಮತ್ತು 19ರಂದು ಪ್ರದರ್ಶನಗೊಳ್ಳುತ್ತಿದೆ. ದಿಟ್ಟ ಹೋರಾಟಗಾರರೊಬ್ಬರ ಬದುಕು ರಂಗದ ಮೇಲೆ ತೆರೆದುಕೊಳ್ಳುತ್ತಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ಮಾಡ್ರಹಳ್ಳಿ ಗ್ರಾಮದ ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿದ ನಂಜುಂಡಸ್ವಾಮಿ ಅವರು ಲೋಹಿಯಾ ಹಾಗೂ ಗಾಂಧೀವಾದವನ್ನು ತಮ್ಮ ಬದುಕಿನಲ್ಲಿ  ಅಳವಡಿಸಿಕೊಂಡಿದ್ದರು. ಜಾತಿ ವ್ಯವಸ್ಥೆಯ ವಿರುದ್ಧವೂ ಧ್ವನಿ ಎತ್ತಿದ್ದರು. ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ವೃತ್ತಿ ಜತೆಗೆ ಸಾಹಿತ್ಯ, ಸಂಸ್ಕೃತಿ, ರಾಜಕೀಯ ವಲಯಗಳಲ್ಲಿ ವಿಚಾರವಂತ ಯುವಜನರನ್ನು ತಯಾರು ಮಾಡುತ್ತಿದ್ದರು. ಸಮಾಜವಾದಿ ಆಂದೋಲನಕ್ಕೆ ಅವರನ್ನು ಸೆಳೆದು ತರುತ್ತಿದ್ದರು. ಎಂಬತ್ತರ ದಶಕದಲ್ಲಿ ರೈತರ ಪರವಾಗಿ ರೈತ ಸಂಘಟನೆಗೆ ಇಳಿದರು.

ಪತಿಯನ್ನು ಕಳೆದುಕೊಂಡ ತಮ್ಮ ಅಕ್ಕ ಲೀಲಾ ಅವರ ಮೇಲೆ ಮನೆಯವರು ಸಂಪ್ರದಾಯದ ಕಟ್ಟು ಕಟ್ಟಳೆಗಳನ್ನು ಹೇರಲು ಹೊರಟಿದ್ದನ್ನು ನಂಜಂಡಸ್ವಾಮಿ ಬಾಲಕನಾಗಿದ್ದಾಗಲೇ ತೀಕ್ಷ್ಣವಾಗಿ ಖಂಡಿಸಿ ಬಂಡೆದ್ದಿದ್ದರು. ‘ನಮ್ಮಕ್ಕನ್ನ ಮುಟ್ಟೀರಿ ಜೋಕೆ’ ಎಂದು ಕೆರಳಿ ನಿಂತಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಳವೆಯಲ್ಲಿಯೇ ವೈಚಾರಿಕ ನೋಟ ಬೆಳೆಸಿಕೊಂಡಿದ್ದರು. ವಿಜ್ಞಾನ ಅವರಿಗೆ ಪ್ರಿಯವಾದ ವಿಷಯವಾಗಿತ್ತು. ಬಿ.ಎಸ್ಸಿ ವ್ಯಾಸಂಗ ಮಾಡಿದ್ದ ಅವರು, ನಂತರ ಕಾನೂನು ಪದವಿ ಪಡೆದರು. ಪಿಎಚ್.ಡಿ ಪದವಿಗಾಗಿ ಜರ್ಮನಿಗೆ ತೆರಳಿದ್ದ ಅವರು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟು ಬಂದರು. ಬೆಂಗಳೂರಿನ ಬಿಎಂಎಸ್ ಸಂಜೆ ಕಾನೂನು ಕಾಲೇಜಿನಲ್ಲಿ ಕಾನೂನು ಬೋಧಿಸಿ, ಅಚ್ಚುಮೆಚ್ಚಿನ ‘ಮೇಷ್ಟ್ರು’ ಕೂಡ ಆಗಿದ್ದರು.

ಅವರು ‘ಸಾಂವಿಧಾನಿಕ ಕಾನೂನು’ ವಿಷಯವನ್ನು ಬೋಧಿಸಿದ ವೈಖರಿಯು ರವಿವರ್ಮ ಕುಮಾರ್ ಅವರಂತಹ  ವಿಚಾರವಂತ ತರುಣ ವಕೀಲರ ಪಡೆಯನ್ನೇ ಸೃಷ್ಟಿಸಿತು. ಒಮ್ಮೊಮ್ಮೆ ಎಂಡಿಎನ್ ಪಾಠ ಮುಗಿಸಿದ ನಂತರ ಅಲ್ಲೇ ಹತ್ತಿರವಿದ್ದ ಕಿರಂ ನಾಗರಾಜರ ಮನೆಯಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ಚರ್ಚೆಯೂ ನಡೆಯುತ್ತಿತ್ತು. ಆಗಿನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ ಸೇರಿದ್ದ ಕಿರಂ ಮಾತಿನ ನಡುವೆ ಅವರನ್ನು ಕೇಳಿದ್ದರು: ‘ಸಾರ್, ಸಾಹಿತ್ಯ ಪಾಠ ಮಾಡುವಾಗ ರಾಜಕೀಯ, ಸಮಾಜವಾದ ಇವೆಲ್ಲವನ್ನೂ ಬೆರೆಸಿ ಹೇಳುವುದು ಹೇಗೆ?’

ಈ ಸುದ್ದಿ ಓದಿದ್ದೀರಾ? ಐಟಿ ದಾಳಿ | ಜುವೆಲ್ಲರಿ ಶಾಪ್ ಮಾಲೀಕರ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆ

‘ಅವೆಲ್ಲವನ್ನೂ ನೇರವಾಗಿ ಹೇಳಬಾರದು’ ಎಂದ ಎಂಡಿಎನ್, ಪಠ್ಯದ ಸಂದರ್ಭಕ್ಕೆ ತಕ್ಕಂತೆ ಸಮಾಜವಾದವನ್ನು ಬೆರೆಸಿ ಪಾಠ ಮಾಡುವ ಕಲೆಯನ್ನು ಕಿರಂಗೆ ಹೇಳಿಕೊಟ್ಟರು. ಅಗ್ರಹಾರ ಕೃಷ್ಣಮೂರ್ತಿ, ಕರೀಗೌಡ ಬೀಚನಹಳ್ಳಿ ಮುಂತಾದ ಜಾಣ ತರುಣರು ಕೂತಿರುತ್ತಿದ್ದ ಎಂಎ ತರಗತಿಗಳಲ್ಲಿ ಕುಮಾರವ್ಯಾಸನ ಕೃಷ್ಣನನ್ನು ವ್ಯಾಖ್ಯಾನಿಸಲು ಕಿರಂ ಲೋಹಿಯಾರ ‘ರಾಮ, ಕೃಷ್ಣ, ಶಿವ’ ಲೇಖನವನ್ನು ಓದಿಕೊಂಡು ಹೋದರು. ಲೋಹಿಯಾ ಚಿಂತನೆಯನ್ನು ಬಿತ್ತಿದರು. ಕನ್ನಡ ಅಧ್ಯಯನ ಕೇಂದ್ರದ ತರುಣರು ಸಮಾಜವಾದದತ್ತ ತಿರುಗುವ ಜೊತೆಗೆ ಉದಾರವಾದಿ ಜಾತ್ಯತೀತ ಲೇಖಕರಾದ ಹಿನ್ನೆಲೆಯಲ್ಲಿ ಇಂತಹ ಹಲವು ಸಂಗತಿಗಳಿದ್ದವು.

ತಮ್ಮ ಹೋರಾಟದ ಹಾದಿಯಲ್ಲಿ ಹಲವಾರು ನಾಯಕರನ್ನು, ಲೇಖಕರನ್ನು ನಂಜುಂಡಸ್ವಾಮಿ ಮುನ್ನೆಲೆಗೆ ತಂದಿದ್ದಾರೆ. ಅವರ ಗರಡಿಯಲ್ಲಿ ಬೆಳೆದವರು ಇಂದು ರೈತಸಂಘವನ್ನು ಮುನ್ನಡೆಸುತ್ತಿದ್ದಾರೆ. ಅವರ ಜೊತೆಗೆ ಬೆಳೆದ ನಟರಾಜ್ ಹುಳಿಯಾರ್ ಅವರು ತಾವು ಕಂಡ ನಂಜುಂಡಸ್ವಾಮಿ ಅವರ ಬದುಕನ್ನು ‘ಡೈರೆಕ್ಟ್ ಆ್ಯಕ್ಷನ್’ ಎಂಬ ನಾಟಕವಾಗಿ ಚಿತ್ರಿಸಿದ್ದಾರೆ. ನಂಜುಂಡಸ್ವಾಮಿ ಅವರ ಬದುಕನ್ನ ನಾಟಕದ ರೂಪದಲ್ಲಿ ಕಣ್ತುಂಬಿಕೊಳ್ಳಲು ಆಹ್ವಾನಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

545 ಪಿಎಸ್‌ಐ ಮರುಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

545 ಪಿಎಸ್‌ಐ ಹುದ್ದೆಗಳಿಗೆ ನಡೆಸಲಾಗಿದ್ದ ಮರುಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಮಾರ್ಚ್‌ 1...

ದ್ವಿತೀಯ ಪಿಯುಸಿ | ಮೊದಲ ದಿನ 18,231 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ರಾಜ್ಯಾದ್ಯಂತ ಮಾರ್ಚ್‌ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ...

ಬಿಬಿಎಂಪಿ | ನೀರಿನ ಟ್ಯಾಂಕರ್ ಸ್ವಯಂ ನೋಂದಣಿಗೆ ಮಾರ್ಚ್‌ 7 ಕೊನೆ ದಿನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ...

ರಾಮೇಶ್ವರಂ ಕೆಫೆ | ಎನ್‌ಐಎ, ಐಬಿಗೆ ಸ್ಪೋಟದ ಬಗ್ಗೆ ಮಾಹಿತಿ: ಅಲೋಕ್​ ಮೋಹನ್

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಒಟ್ಟು 9 ಮಂದಿ ಗಂಭೀರವಾಗಿ...