ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ದೇವಸೂಗೂರು ಸಮೀಪ ಕೃಷ್ಣಾ ನದಿಯಲ್ಲಿ ರವಿವಾರ ನಡೆದಿದೆ.
ಮೃತರನ್ನು ವೈಟಿಪಿಎಸ್ ಗುತ್ತಿಗೆ ನೌಕರ ಹಾಗೂ ಮಸ್ಕಿ ತಾಲೂಕಿನ ಆನ್ವರಿ ಗ್ರಾಮದ ನಿವಾಸಿ ಶಿವು (25) ಎಂದು ಗುರುತಿಸಲಾಗಿದೆ. ಅವರು ಮಾನ್ವಿ ತಾಲೂಕಿನ ತಮ್ಮ ಮಾವನ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ರವಿವಾರ ಸ್ನೇಹಿತರೊಂದಿಗೆ ದೇವಸೂಗೂರು ಬಳಿಯ ಕೃಷ್ಣಾ ನದಿಗೆ ಈಜಲು ತೆರಳಿದ್ದ ವೇಳೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಶಿವು ಮುಳುಗಿದ್ದಾರೆ. ದಡಕ್ಕೆ ಬರಲು ಸಾಧ್ಯವಾಗದೆ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಸ್ನೇಹಿತರು ದಡದಲ್ಲಿದ್ದ ತೆಪ್ಪದ ಸಹಾಯದಿಂದ ಯುವಕನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಬೆಳಗಿನ ಜಾವ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ
ಈ ಘಟನೆ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




