ಅಬುಧಾಬಿಗೆ ತೆರಳಲು ಡಾ.ಬಿ.ಆರ್.ಶೆಟ್ಟಿಗೆ ಹೈಕೋರ್ಟ್ ಅನುಮತಿ

Date:

ಉಡುಪಿ ಮೂಲದ ದುಬೈ ನಿವಾಸಿ ಉದ್ಯಮಿ ಹಾಗೂ ಎನ್‌ಎಂಸಿ ಹೆಲ್ತ್​​ ಸಂಸ್ಥಾಪಕ ಡಾ.ಬಿ.ಆರ್.ಶೆಟ್ಟಿ ಚಿಕಿತ್ಸೆಗೆ ಅಬುಧಾಬಿಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.

ಬಿ ಆರ್ ಶೆಟ್ಟಿ ಅವರು ನಾನಾ ಬ್ಯಾಂಕ್​ಗಳಿಂದ ಸುಮಾರು ₹2,800 ಕೋಟಿ ಸಾಲ ಪಡೆದಿದ್ದರು. ಪಡೆದಿದ್ದ ಸಾಲವನ್ನು ತೀರಿಸದೇ ಇರುವ ಹಿನ್ನೆಲೆ, ಬ್ಯಾಂಕುಗಳ ಮನವಿ ಮೇರೆಗೆ ಉದ್ಯಮಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಅವರು ವಿದೇಶಕ್ಕೆ ತೆರಳಲು ಅನುಮತಿ ಇರಲಿಲ್ಲ.

ಅಬುಧಾಬಿಗೆ ಪ್ರಯಾಣಿಸಲು ಶೆಟ್ಟಿಗೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಶೆಟ್ಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಕೀಲ ಬಿ.ವಿ.ಆಚಾರ್ಯ, ಪ್ರಭುಲಿಂಗ್ ನಾವದಗಿ ಶೆಟ್ಟಿ ಪರವಾಗಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಅರ್ಜಿ ವಿಚಾರಣೆ ನಡೆಸಿ ಆದೇಶಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

”ಶೆಟ್ಟಿ ಅವರು ಭಾರತೀಯ ಪ್ರಜೆ. ಅವರಿಗೆ 80 ವರ್ಷ ವಯಸ್ಸಾಗಿದೆ. ಡಾ.ಬಿ.ಆರ್‌.ಶೆಟ್ಟಿ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ನ್ಯಾಯಾಲಯದ ಆದೇಶದಂತೆ, ಸಾಲ ವಸೂಲಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಹೀಗಾಗಿ, ಅವರು ಚಿಕಿತ್ಸೆ ಪಡೆಯಲು ಅಬುಧಾಬಿಗೆ ತೆರಳಲು ಅನುಮತಿ ನೀಡಬೇಕು” ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.

ವಾದ ಆಲಿಸಿದ ನ್ಯಾಯಪೀಠ, ”ಡಾ.ಬಿ.ಆರ್.ಶೆಟ್ಟಿ ಅವರ ವಿರುದ್ಧ ಬೇರೆ ಪ್ರಕರಣಗಳಿಲ್ಲದಿದ್ದರೆ ಅವರು ಚಿಕಿತ್ಸೆಗೆ ಅಬುಧಾಬಿಗೆ ತೆರಳಬಹುದು. ಆದರೆ, ಶೆಟ್ಟಿ ಅವರು ಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಬೇಕು. ₹1 ಕೋಟಿ ಶ್ಯೂರಿಟಿ ನೀಡಬೇಕು. ಅಲ್ಲದೇ, ಪ್ರಪಂಚದ ಯಾವುದೇ ಭಾಗದ ಆಸ್ತಿಗಳ ಪರಭಾರೆ ಮಾಡಬಾರದು. ಎಲ್ಒಸಿ ನೀಡುವ ಅಧಿಕಾರ ಹಸ್ತಾಂತರಿಸುವಂತಿಲ್ಲ” ಎಂದು ಪೀಠ ಆದೇಶಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 2025ಕ್ಕೆ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ನಮ್ಮ ಮೆಟ್ರೋ ಕಾಮಗಾರಿ ಪೂರ್ಣ

ಯಾರಿದು ಬಿ.ಆರ್‌.ಶೆಟ್ಟಿ? ಏನಿದು ಪ್ರಕರಣ?

ಬಾವಗುತ್ತು ರಘುರಾಮ ಶೆಟ್ಟಿ ಅವರು ಉಡುಪಿಯ ಕಾಪುವಿನಲ್ಲಿ 1942ರಲ್ಲಿ ಹುಟ್ಟಿದರು. ಫಾರ್ಮಾಸಿಸ್ಟ್ ಆದ ಅವರು ಉಡುಪಿಯಲ್ಲಿ ಫಾರ್ಮಾ ಕಂಪನಿಯೊಂದರ ಡಿಸ್ಟ್ರಿಬ್ಯುಟರ್ ಆಗಿದ್ದರು. ತಮ್ಮ ಸೋದರಿಯ ಮದುವೆಗೆ ಬ್ಯಾಂಕ್ ಸಾಲ ಮಾಡಿದ್ದರು. ಸಾಲ ತೀರಿಸಲು ದಾರಿ ಕಾಣದಾಗ ಶೆಟ್ಟಿ ಅವರು ಕೇವಲ 8 ಡಾಲರ್ ಅಂದರೆ, ಆಗಿನ ಲೆಕ್ಕಾಚಾರದಲ್ಲಿ ಸುಮಾರು ₹56 ರೂ.ಗಳನ್ನು ಇಟ್ಟುಕೊಂಡು ಅಬುಧಾಬಿ ನಗರಕ್ಕೆ ಕಾಲಿಟ್ಟು, ಕೆಲವೇ ದಿನಗಳಲ್ಲಿ ಬಿಲಿಯನೇರ್ ಆದರು.

ನಂತರ ಶೆಟ್ಟಿ ಅವರ ಸಾಮ್ರಾಜ್ಯ ಪತನವಾಯಿತು. ಸಾಲದ ಸುಳಿಯಲ್ಲಿ ಸಿಲುಕಿದ್ದ ಶೆಟ್ಟಿಯವರು 2 ಬ್ಯಾಂಕ್​ಗಳಿಂದ ಸುಮಾರು ₹2,800 ಕೋಟಿ ಸಾಲ ಪಡೆದಿದ್ದರು. ಪಡೆದ ಸಾಲ ತೀರಿಸದ ಕಾರಣಕ್ಕೆ ಉದ್ಯಮಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಅಬುಧಾಬಿಗೆ ಪ್ರಯಾಣಿಸಲು ಶೆಟ್ಟಿಗೆ ಅನುಮತಿ ನೀಡಿರಲಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಬಿಸಿಲಿನ ತಾಪ ಹೆಚ್ಚಳ; ಮೃಗಾಲಯ ತಂಪಾಗಿಡಲು ವಿಶೇಷ ವ್ಯವಸ್ಥೆ

ಪ್ರಸ್ತುತ ವರ್ಷ ಮೈಸೂರು ನಗರದಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿರುವುದರಿಂದ ಮೃಗಾಲಯದ ಪ್ರಾಣಿಗಳು...

ತುಮಕೂರು | ಹಾಲಪ್ಪ ಯಾರು? ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ: ಸಚಿವ ರಾಜಣ್ಣ

ಮಾಜಿ ಸಂಸದ ಮುದ್ದಹನುಮೇಗೌಡ ಅವರು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು,...

ಬೆಂಗಳೂರು | ಕನ್ನಡ ನಾಮಫಲಕ ಕಡ್ಡಾಯ; ತಪ್ಪಿದಲ್ಲಿ ‘ಕರ್ನಾಟಕ ಬಂದ್’: ವಾಟಾಳ್ ನಾಗರಾಜ್ ಎಚ್ಚರಿಕೆ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಗಡುವು ಮುಗಿಯುವುದರೊಳಗಾಗಿ...

ತುಮಕೂರು | ಲೋಕಸಭಾ ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ಬೇಡಿಕೆಯಿಟ್ಟ ಕೆ.ಟಿ ಶಾಂತಕುಮಾರ್

ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್...