ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿರೋ ನಮ್ಮ ಮೆಟ್ರೋ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆಯಷ್ಟೇ ರೈತರೊಬ್ಬರು ಕೊಳಕು ಬಟ್ಟೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಮೆಟ್ರೋ ಭದ್ರತಾ ಸಿಬ್ಬಂದಿ ಅವರಿಗೆ ನಿಲ್ದಾಣದೊಳಗೆ ಪ್ರವೇಶ ನಿರ್ಬಂಧಿಸಿತ್ತು. ಇದೀಗ, ಅಂತಹದ್ದೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಇದೀಗ, ಶರ್ಟ್ ಗುಂಡಿ ಹಾಕದ ಕಾರ್ಮಿಕನೊಬ್ಬನಿಗೆ ಮೆಟ್ರೋ ಒಳಗೆ ಪ್ರವೇಶವಿಲ್ಲ ಎಂದು ಹೇಳಿದ ಭದ್ರತಾ ಸಿಬ್ಬಂದಿ ಕಾರ್ಮಿಕನನ್ನು ನಿಲ್ದಾಣದಲ್ಲಿಯೇ ನಿಲ್ಲಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೆಟ್ರೋ ಸಿಬ್ಬಂದಿಯ ಈ ವರ್ತನೆಯಿಂದಾಗಿ ಯುವಕ ನಿಲ್ದಾಣದಲ್ಲಿಯೇ ಕಾಯುವಂತಾಗಿದೆ. ಯುವಕನ ಪರಿಸ್ಥಿತಿಯನ್ನು ಗಮನಿಸಿದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಓಲ್ಡ್ ಸ್ಯಾಫರಾನ್ ಎಂಬ ಹೆಸರಿನ ಎಕ್ಸ್ ಖಾತೆಯಿಂದ ಈ ವಿಡಿಯೋವನ್ನು ಫೊಸ್ಟ್ ಮಾಡಲಾಗಿದ್ದು, “ಬೆಂಗಳೂರಿನ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಾಗರಿಕರ ಬಟ್ಟೆ/ಉಡುಗೆಗೆ ಸಂಬಂಧಿಸಿದ ಮತ್ತೊಂದು ಘಟನೆ ಇದೀಗ ನನ್ನ ಮುಂದೆ ನಡೆದಿದೆ. ಒಬ್ಬ ಕಾರ್ಮಿಕನ ಶರ್ಟ್ ಗುಂಡಿಗಳು ಇರದ ಕಾರಣ ಅವೆರಡು ಗುಂಡಿಗಳನ್ನು ಹೊಲಿದುಕೊಂಡು ಬಾ ಅಲ್ಲಿಯವರೆಗೂ ಮೆಟ್ರೋ ಹತ್ತಲು ಬಿಡುವುದಿಲ್ಲ ಎಂದು ಅವರನ್ನು ಭದ್ರತಾ ಸಿಬ್ಬಂದಿ ನಿಲ್ದಾಣದಲ್ಲಿಯೇ ನಿಲ್ಲಿಸಿದ್ದಾರೆ. ನಮ್ಮ ಮೆಟ್ರೋ ಯಾವಾಗಿನಿಂದ ಈ ರೀತಿ ಆಯಿತು” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೋಟೆಲ್‌ನ 19ನೇ ಮಹಡಿಯಿಂದ ಹಾರಿ ತಮಿಳುನಾಡಿನ ವ್ಯಕ್ತಿ ಸಾವು
ಅಲ್ಲದೇ, ಈ ಪೋಸ್ಟ್ ಅನ್ನು ಬಿಎಂಆರ್‌ಸಿಎಲ್ ಹಾಗೂ ತೇಜಸ್ವಿ ಸೂರ್ಯ ಅವರಿಗೆ ಟ್ಯಾಗ್ ಮಾಡಲಾಗಿದೆ.
Location Doddakallasandra metro. One more incident of cloth/attire related incident happened in front of me just now. A labourer was stopped & told to stitch up his top two buttons…
When did Namma metro became like this!!? @OfficialBMRCL @Tejasvi_Surya pic.twitter.com/4hB8Z6Q2gT
— Old_Saffron(ಮೋದಿಯ ಪರಿವಾರ/Modi’s Family) (@TotagiR) April 7, 2024
ಮೆಟ್ರೋ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರಿಯಾದ ಬಟ್ಟೆಯಿಲ್ಲದವರಿಗೆ, ರೈತರಿಗೆ, ಕಾರ್ಮಿಕರಿಗೆ ಇಲ್ಲದ ಮೆಟ್ರೋ ಕೇವಲ ಸಿರಿವಂತರಿಗೆ ಮಾತ್ರ ಸೀಮಿತವಾಗಿದೆಯೇ ಎಂದು ಪ್ರಶ್ನಿಸಿಸಿದ್ದಾರೆ.