ಶಿವರಾಜ್ ಕುಮಾರ್ ಕೇಳಿದ್ದಲ್ಲಿ ಲೋಕಸಭಾ ಟಿಕೆಟ್ ಕೊಡಲು ಸಿದ್ಧ: ಡಿ ಕೆ ಶಿವಕುಮಾರ್

Date:

ನಟ ಶಿವರಾಜ್ ಕುಮಾರ್ ಅವರು ಸಂಸತ್ತಿಗೆ ಹೋಗಬೇಕಿದೆ. ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಸಿನಿಮಾ ಮಾಡೋದು ಇದ್ದೇ ಇದೆ. ಸಂಸತ್ತಿಗೆ ಹೋಗೋದು ತಡೆಯಾಗಬಾರದು ಎಂದಿದ್ದೇನೆ. ಅವರು ಎಲ್ಲಿ ಟಿಕೆಟ್ ಕೇಳುತ್ತಾರೋ ಅಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, “ನಿಮಗೆಲ್ಲ ಒಳ್ಳೆಯದಾಯಿತು ಎಂದರೆ ನಮಗೆ ಒಳ್ಳೆಯದಾಯಿತು ಅಂತ ಅರ್ಥ. ವಿದ್ಯೆಯಿಂದ ವಿವೇಕರಾಗಬೇಕು, ಸಂಘಟನೆಯಿಂದ ಬಲವಂತರಾಗಬೇಕು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ನಾವು ಸಿದ್ದರಾಮಯ್ಯನವರ ಸರ್ಕಾರದ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ನೀಡಿದ್ದೀರಿ. ಚಪ್ಪಾಳೆ ಹೊಡೆಸಿಕೊಳ್ಳಲು ನಾವು ಬಂದಿಲ್ಲ. ನಿಮ್ಮ ಜೊತೆಗೆ ಇದ್ದೇವೆ ಎಂಬುದನ್ನು ತಿಳಿಸಲು ಬಂದಿದ್ದೇವೆ. ಸಹಕಾರ ಮಾಡಿದವರನ್ನು ಮರೆಯಲ್ಲ. ಅನೇಕ ಶಾಸಕರನ್ನು ಗೆಲಿಸಿಕೊಟ್ಟಿದ್ದೀರಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮಗೆ ಸಹಾಯ ಮಾಡುವ ಮಾತುಕೊಟ್ಟಿದ್ದೇವೆ, ಉಳಿಸಿಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಬಂಗಾರಪ್ಪನವರ ಸಂಪುಟದಲ್ಲಿ. ಮಧು ಬಂಗಾರಪ್ಪ ಸ್ವಲ್ಪ ಬೇರೆ ಕಡೆ ಕಾಲು ಇಟ್ಟಿದ್ದ. ಗಾಳ ಹಾಕಿ ಗಾಳ ಹಾಕಿ ಆತನನ್ನು ಕಾಂಗ್ರೆಸ್‌ಗೆ ಕರೆತಂದೆ” ಎಂದು ಡಿಸಿಎಂ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜ್‌ ಕುಮಾರ್, “ನಮ್ಮ ಉದ್ದೇಶ ಏನು? ಆಗ ಆಗಬೇಕಿತ್ತು ಈಗ ಆಗಬೇಕಿತ್ತು, ಯಾರಿಂದ ಆಯಿತು, ಯಾರು ಮಾಡಿದರು ಎಂಬುದನ್ನು ಮುಖ್ಯವಲ್ಲ. ಯಾರಿಗಾಗಿ ಮಾಡಿದರು ಎಂಬುದು ಮುಖ್ಯ. ನಾನು ಯಾವಾಗಲು ನಿಮ್ಮಲ್ಲಿ ಒಬ್ಬ. ನೀವೆಲ್ಲ ಬೆಳೆಸಿದ್ದಕ್ಕೆ ನಾವು ಇಲ್ಲಿದ್ದೇನೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಕಾರ್ಯಕ್ರಮಗಳು ಆಗಬೇಕು” ಎಂದು ಹೇಳಿದರು.

“ನಮ್ಮ ಸಂಘದ ಅಮೃತ ಮಹೋತ್ಸವಕ್ಕೆ ಮೆರಗು ತಂದಿದ್ದಾರೆ. ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಇರಬೇಕಿತ್ತು. ಅವರು ಇಲ್ಲಿ ಹಾಜರಿರದಿದ್ದರೂ ಇದ್ದಾರೆಂದು ಭಾವಿಸಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದಿಂದ ಸಮುದಾಯದ ಕೆಲಸಗಳು ಆಗುತ್ತವೆ ಎಂಬ ಭರವಸೆ ಇದೆ” ಎಂದರು.

“ಚುನಾವಣೆಗೆ ಶಿವಣ್ಣನವರು ರೆಡಿಯಾಗಲಿ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದರು. ಬಣ್ಣ ಹಚ್ಚೋದು ನಮ್ಮ ವೃತ್ತಿ. ನನ್ನ ಪತ್ನಿ ರಾಜಕಾರಣದಲ್ಲಿದ್ದಾರೆ. ಅವರ ಆಯ್ಕೆ ಮಾಡಿಕೊಂಡಿದ್ದನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಅವರ ಇಚ್ಛೆಗೆ ಬದ್ಧರಾಗಿದ್ದೇನೆ. ನನ್ನ ಸಪೋರ್ಟ್ ಅವರಿಗೆ ಇದ್ದೇ ಇರುತ್ತದೆ” ಎಂದು ಪ್ರತಿಕ್ರಿಯಿಸಿದರು.

ಹಿರಿಯ ನಟಿ ಲೀಲಾವತಿಯವರ ನಿಧನಕ್ಕೆ ಒಂದು ನಿಮಿಷದ ಮೌನಾಚಣೆಯನ್ನು ಶಿವಣ್ಣ ಅವರು ಸಮಾವೇಶದಲ್ಲಿ ನೆರವೇರಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪ್ತಿಯಾದ 2 ಕೋಟಿ ರೂ. ಬಿಜೆಪಿಗೆ ವಾಪಸ್‌; ಅಧಿಕಾರಿಗಳ ಮೇಲೆ ಕೃಷ್ಣ ಬೈರೇಗೌಡ ಗರಂ

"ನಾವೂ ಹೀಗೆ ಹಣದ ಮೂಲಕ ವಹಿವಾಟು ನಡೆಸಿದರೆ ನಮ್ಮ ಎಲ್ಲಾ ವಹಿವಾಟನ್ನು...

ದುಬೈನಲ್ಲಿ ಭಾರೀ ಮಳೆ; ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ

ಏಪ್ರಿಲ್ 16ರಂದು ಯುಎಇಯ ಇತಿಹಾಸದಲ್ಲೇ ಅತಿ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ...

ಬೆಂಗಳೂರು | ಬಿಜೆಪಿಗೆ ಸೇರಿದ 2 ಕೋಟಿ ಹಣವನ್ನು ವಶಪಡಿಸಿಕೊಂಡ ಚುನಾವಣಾಧಿಕಾರಿಗಳು: ಎಫ್‌ಐಆರ್

ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ...

ಬಿಜೆಪಿ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನಾ ಬರಹ: ಶಿವಸುಂದರ್‌

ಬಿಜೆಪಿಯ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನೆ. ಅವರು ಹೇಳುತ್ತಿರುವುದಕ್ಕೂ ಮತ್ತು ನಡೆದುಕೊಂಡಿರುವುದಕ್ಕೂ ಹೋಲಿಕೆ...