ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿದ ಮಹನೀಯ ರಾಜಕುಮಾರ್ : ಚ ಹ ರಘುನಾಥ ಅಭಿಮತ

Date:

“ಕುವೆಂಪು ರೀತಿಯಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿದ ಮಹನೀಯರಲ್ಲಿ ಡಾ.ರಾಜಕುಮಾರ್ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ. ಕುವೆಂಪು ಆಶಯ, ಬಸವಣ್ಣನ ಕಾಯಕ ಪ್ರಜ್ಞೆಯನ್ನು ರಾಜಕುಮಾರ್ ಅವರ ಅನೇಕ ಸಿನಿಮಾಗಳು ಮೈಗೂಡಿಸಿಕೊಂಡಿವೆ” ಎಂದು ಹಿರಿಯ ಪತ್ರಕರ್ತರಾದ ಚ ಹ ರಘುನಾಥ ಅಭಿಪ್ರಾಯಪಟ್ಟರು.

- Advertisement -

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರದಂದು (ಜ.10) ನಡೆದ ಡಾ.ಮಂಜುನಾಥ ಅದ್ದೆ ಅವರ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

“ರಾಜಕುಮಾರ್ ಕುರಿತು ವ್ಯಕ್ತಿ ನಿಷ್ಠವಾಗಿ ಅನೇಕ  ಕೃತಿಗಳು ಬಂದಿವೆ. ಆದರೆ ವಸ್ತು ನಿಷ್ಠವಾಗಿ ಇಲ್ಲಿಯವರೆಗೂ ಒಂದೂ ಕೃತಿ ಬಂದಿಲ್ಲ. ಜನರ ನಾಯಕನಾಗಿ ರಾಜಕುಮಾರ್ ಏರಿದ ಸ್ಥಾನವನ್ನು ಯಾರಿಗೂ ತಲುಪಲು ಸಾಧ್ಯವಿಲ್ಲ. ಶ್ರೀಮಂತರ ರಾಜಕುಮಾರ್ ಎಂದಿಗೂ ಬಡವರ ಕೇರಿಗೆ ಬರುವುದಿಲ್ಲ. ಆದರೆ ಬಡವರ ರಾಜಕುಮಾರ್ ಎಲ್ಲ ಕಡೆಯೂ ಇರುತ್ತಾರೆ. ರಾಜಕುಮಾರ್ ಬೇಕಿರುವುದು ಬಡವರಿಗಾಗಿಯೇ ಹೊರತು, ಉದ್ಯಮದವರಿಗಲ್ಲ” ಎಂದು ಹೇಳಿದರು.

“ಸಿನಿಮಾ ಕೇವಲ ಮನರಂಜನಾ ಮಾಧ್ಯಮವಲ್ಲ. ಅದಕ್ಕೆ ಕನ್ನಡದ ಸಂಸ್ಕೃತಿಯ ಹೊಣೆಗಾರಿಕೆ ಇದೆ ಅನ್ನುವುದನ್ನು ಮರೆಯಬಾರದು” ಎಂದರು.

WhatsApp Image 2026 01 10 at 8.55.21 PM

ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್ ಮಾತನಾಡಿ “ತಳಸಮುದಾಯದಿಂದ ಬಂದ ರಾಜಕುಮಾರ್ ವೈದಿಕ ಕುತಂತ್ರವನ್ನು ಮೆಟ್ಟಿನಿಂತು ಜನಮಾನಸದಲ್ಲಿ ಉಳಿದುಕೊಂಡರು. ಗೋಕಾಕ್ ಚಳುವಳಿಯ ವೇಳೆ ರಾಜಕುಮಾರ್ ಆ ವೇದಿಕೆಗೆ ಬರದಿದ್ದರೆ, ಇಂದಿನ ಕನ್ನಡ ಊಹಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

“ನಮ್ಮ ತಾತನ (ರಾಜಕುಮಾರ್) ನಡವಳಿಕೆಯೇ ನಮಗೆ ಮಾದರಿ. ತಾತನ ಶ್ರಮ ಮತ್ತು ಅವರ ಶಿಸ್ತು ನಮ್ಮ ಬದುಕನ್ನು ಕಟ್ಟಿಕೊಟ್ಟಿದೆ” ಎಂದು ರಾಜಕುಮಾರ್ ಅವರ ಮೊಮ್ಮಗ ಹಾಗೂ ನಟ ವಿನಯ್ ರಾಜಕುಮಾರ್ ಹೇಳಿದರು.

“ರಾಜಕುಮಾರ್ ಅವರ ಅನೇಕ ಸಿನಿಮಾಗಳನ್ನು ನೋಡಿ ಬೆಳೆದಿದ್ದೇನೆ. ಅದೇ ರೀತಿ ನನ್ನ ಪರಿಶ್ರಮ, ಹೋರಾಟ, ಬೆವರನ್ನು ನಂಬಿ ಬದುಕುತ್ತಿದ್ದೇನೆ. ಇತ್ತೀಚೆಗೆ ತುಂಬಾ ಇಷ್ಟಪಟ್ಟು ಓದುತ್ತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು” ಎಂದು ನಟ ದುನಿಯಾ ವಿಜಯ್ ಹೇಳಿದರು.

Screenshot 2026 01 10 at 8.45.28

“ಕರ್ನಾಟಕದಲ್ಲಿ ಸಿನಿಮಾ ಕ್ಷೇತ್ರದಲ್ಲಿ ರಾಜಕುಮಾರ್ ಅವರ ಸಿನಿಮಾಗಳು ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಅದೇ ರೀತಿಯಲ್ಲಿ ರಾಜಕುಮಾರ್ ಅವರು ಬದುಕಿದ್ದ ಕಾಲಘಟ್ಟದಲ್ಲಿ ನಾವೆಲ್ಲ ಬದುಕಿದ್ದೆವು ಎನ್ನುವುದೇ ನಮ್ಮ ಸೌಭಾಗ್ಯ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ವೇದಿಕೆಯ ಮೇಲೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ, ಕೃತಿಯ ಕರ್ತೃ ಡಾ.ಮಂಜುನಾಥ್ ಅದ್ದೆ, ಕೌದಿ ಪ್ರಕಾಶನದ ಮುಖ್ಯಸ್ಥರಾದ ಡಾ.ಮಮತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧನಲಕ್ಷ್ಮೀ ದೇವರಾಜ್ ನಿರೂಪಣೆ ಮಾಡಿದರು.

Screenshot 2026 01 11 at 6.31.57
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು ಕಾವಲುಗಾರನ ಕಥನ

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ...

ಸೂರಜ್ ರೇವಣ್ಣಗೆ ಬಿಗ್ ರಿಲೀಫ್! 2 ಪ್ರಕರಣಗಳ ಬಿ-ರಿಪೋರ್ಟ್ ಸಲ್ಲಿಸಿದ ಸಿಐಡಿ

ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ...

ಬೆಂಗಳೂರು | ʼನಿನ್ನನ್ನು ಪಾಕಿಸ್ತಾನಕ್ಕೆ ಕಣ್ಮರೆ ಮಾಡುವೆನುʼ: ಮಹಿಳೆಗೆ ಕಿರುಕುಳ, ಎಫ್‌ಐಆರ್

ಬೆಂಗಳೂರು ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ʼಸ್ನೇಹವನ್ನು ಮುರಿದರೆ...