ಉಗಾಂಡ ಮಗು ದತ್ತು | ಭಾರತೀಯ ದಂಪತಿಗೆ ಮಾನ್ಯತೆ ನೀಡಲು ಹೈಕೋರ್ಟ್‌ ಸೂಚನೆ

Date:

‘ಹೇಗ್‌ ದತ್ತು ಒಪ್ಪಂದ’ಕ್ಕೆ ಉಗಾಂಡ ದೇಶ ಸಹಿ ಹಾಕದ ಹೊರತಾಗಿಯೂ ಉಗಾಂಡದ ಮಗುವನ್ನು ಭಾರತೀಯ ದಂಪತಿ ದತ್ತು ಪಡೆದಿರುವುದನ್ನು ಮಾನ್ಯಗೊಳಿಸಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ದತ್ತು ಸ್ವೀಕಾರಕ್ಕೆ ಎನ್‌ಒಸಿ ನೀಡಲು ಕೀನ್ಯಾ ಮೂಲದ ಭಾರತೀಯ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಂತೆ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್‌ಎ) ಕರ್ನಾಟಕ ಹೈಕೋರ್ಟ್  ನಿರ್ದೇಶನ ನೀಡಿದೆ.

ದಂಪತಿಗಳು ಪ್ರಸ್ತುತ ನೈರೋಬಿಯಲ್ಲಿ ವಾಸಿಸುತ್ತಿದ್ದು, ಇಬ್ಬರು ಒಂದೊಂದು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೂಡ ಅವರು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದು, ಭಾರತೀಯ ಪೌರತ್ವವನ್ನು ತ್ಯಜಿಸಿಲ್ಲ. ಅವರು 2011ರಿಂದ 2018ರವರೆಗೆ ಉಗಾಂಡಾದಲ್ಲಿ ವಾಸಿಸುತ್ತಿದ್ದರು. 2019ರಲ್ಲಿ ಕೀನ್ಯಾಗೆ ತೆರಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2014ರ ಆಗಸ್ಟ್ 12ರಂದು ಅವರು ಒಂದು ಮಗುವನ್ನು ದತ್ತು ಪಡೆದಿದ್ದಾರೆ. ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿರುವ ಕುಟುಂಬ ಮತ್ತು ಮಕ್ಕಳ ನ್ಯಾಯಾಲಯದಲ್ಲಿ ಅವರು ಉಗಾಂಡಾ ಕಾನೂನುಗಳ ಅಡಿಯಲ್ಲಿ ಪೋಷಕತ್ವ ಆದೇಶ ನೀಡುವಂತೆ ದಂಪತಿ ಅರ್ಜಿ ಸಲ್ಲಿಸಿದ್ದರು.

2015ರ ಜುಲೈ 20ರಂದು ಉಗಾಂಡಾದ ಹೈಕೋರ್ಟ್ ಅವರಿಗೆ ಮಗುವಿನ ಪಾಲಕತ್ವವನ್ನು ನೀಡಿದೆ. ಅವರನ್ನು ದತ್ತು ಪಡೆದ ಪೋಷಕರೆಂದು ಘೋಷಿಸಿ, ಅವರಿಗೆ ಪೋಷಕತ್ವದ ಎಲ್ಲ ಹಕ್ಕುಗಳನ್ನು ನೀಡಿದೆ.

ದಂಪತಿ 2023ರ ಜೂನ್ 8ರಂದು ಭಾರತ ಸರ್ಕಾರದ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್‌ಎ)ಗೆ ಇಮೇಲ್ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಭಾರತೀಯ ಪ್ರಜೆಗಳಾಗಿರುವುದರಿಂದ ದತ್ತು ಪಡೆದಿರುವುದಕ್ಕೆ ಕಾನೂನು ಮಾನ್ಯತೆ ಕೋರಿದ್ದಾರೆ. ಆದರೆ, ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆಸ್ತಿಯಲ್ಲಿ ಪಾಲು ಕೇಳಿದ ಮಗನ ಮೇಲೆ ಆ್ಯಸಿಡ್ ಎರಚಿದ ತಂದೆ

ದಂಪತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, “ಉಗಾಂಡದ ಮಗುವನ್ನು ದತ್ತು ಪಡೆಯುವುದಕ್ಕೆ ದಂಪತಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು” ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಹೇಗ್‌ ದತ್ತು ಒಪ್ಪಂದ’ಕ್ಕೆ ಉಗಾಂಡ ಸಹಿ ಹಾಕದಿರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗಬಾರದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

“ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ ಅಡಿ ದತ್ತು ಪ್ರಕ್ರಿಯೆ ನಡೆಯದೇ ಇದ್ದರೂ ಹಾಗೂ ಹೇಗ್‌ ಒಪ್ಪಂದಕ್ಕೆ ಸಹಿ ಹಾಕದೇ ಇದ್ದರೂ ದತ್ತು ತೆಗೆದುಕೊಳ್ಳಲಾಗಿದೆ. ಹೀಗಾಗಿ, ದತ್ತು ತೆಗೆದುಕೊಂಡಿರುವ ಭಾರತೀಯ ದಂಪತಿಯ ಮಗುವಿನ ಹಕ್ಕುಗಳನ್ನು ಅತಂತ್ರಗೊಳಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಟ ದ್ವಾರಕೀಶ್ ನಿಧನಕ್ಕೆ ಶಿವರಾಜ್‌ಕುಮಾರ್ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾದರು....

ದಾವಣಗೆರೆ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಣೆ

ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ...

ವಿಜಯೇಂದ್ರ, ಸಿಟಿ ರವಿ, ಪಿ.ರಾಜೀವ್‌ನಿಂದ ಬಿಜೆಪಿ ಹಾಳಾಗುತ್ತಿದೆ: ಮಾಲೀಕಯ್ಯ ಗುತ್ತೇದಾರ ಕಿಡಿ

ಸಹೋದರ ನಿತಿನ್ ಗುತ್ತೇದಾರ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ...