ಟಿಕ್‌ಟಾಕ್‌ ಮೂಲಕ ಚೀನಾ ಬೇಹುಗಾರಿಕೆ ಸಾಧ್ಯತೆ; ಅಮೆರಿಕ ಕಳವಳ

Date:

  • ಅಪ್ಲಿಕೇಶನ್‌ ಬಳಕೆಯನ್ನು ದೇಶದಲ್ಲಿ ಅಮೆರಿಕ ನಿಷೇಧ
  • ಬೈಟ್‌ಡ್ಯಾನ್ಸ್ ಒಡೆತನ ಹೊಂದಿರುವ ವಿಡಿಯೋ ಆ್ಯಪ್

ಚೀನಾ ತನ್ನ ಒಡೆತನದ ವಿಡಿಯೋ ಆ್ಯಪ್ ಟಿಕ್‌ಟಾಕ್‌ ಅನ್ನು ದೇಶದ ನಾಗರಿಕರ ಮೇಲೆ ಕಣ್ಣಿಡಲು ಬೇಹುಗಾರಿಕೆ ರೂಪದಲ್ಲಿ ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕ ಮಂಗಳವಾರ (ಮಾರ್ಚ್‌ 28) ಕಳವಳ ವ್ಯಕ್ತಪಡಿಸಿದೆ.

ಕಳೆದ ವಾರ ಅಪ್ಲಿಕೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊತೆ ಐದು ತಾಸುಗಳ ಸಭೆಯ ನಂತರ ಅಮೆರಿಕದ ಶಾಸಕರು ಈ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಅಮೆರಿಕ ಪ್ರಕಟಣೆ ಹೊರಡಿಸಿದೆ. ಆದರೆ ಇತರರ ಮೇಲೆ ಕಣ್ಣಿಡಲು ತನ್ನ ಸರ್ಕಾರ ಜಾಗತಿಕವಾಗಿ ಅಂತರ್ಜಾಲವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ತಂತ್ರಜ್ಞಾನ ಕಂಪನಿಗಳನ್ನು ಹೇಗೆ ಬಳಸುತ್ತಿದೆ ಎಂಬುದನ್ನು ಅಮೆರಿಕ ಪ್ರಕಟಣೆಯಲ್ಲಿ ಉಲ್ಲೇಖಿಸಿಲ್ಲ.

15 ಕೋಟಿಗಿಂತ ಹೆಚ್ಚು ಅಮೆರಿಕನ್ನರು ಬಳಸುವ ಕಿರು ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್‌ ಅನ್ನು ನಿಷೇಧಿಸಲು ಅಮೆರಿಕ ಪರಿಗಣಿಸಿದೆ. ಅಂತೆಯೇ ಸಾಗರೋತ್ತರ ಅಮೆರಿಕ ನಾಗರಿಕರ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸುತ್ತಿರುವ ಗೂಗಲ್‌, ಮೆಟಾ ಮತ್ತು ಆ್ಯಪಲ್‌ನಂತಹ ಸಂಸ್ಥೆಗಳ ಮೇಲೂ ಅಮೆರಿಕ ನಿಗಾ ಇರಿಸಿದೆ.

ವಿದೇಶಿ ಗುಪ್ತಚರ ಕಣ್ಗಾವಲು ಕಾಯಿದೆಯ (ಎಫ್‌ಐಎಸ್‌ಎ) ಸೆಕ್ಷನ್‌ 702 ಅನ್ನು ಈ ಡಿಸೆಂಬರ್‌ನೊಳಗೆ ಮರು ಪ್ರಮಾಣೀಕರಿಸಲು ಅಮೆರಿಕ ಸಜ್ಜಾಗಿದೆ. ಸದ್ಯ ಇರುವ ಅಮೆರಿಕ ಗುಪ್ತಚರ ಸಂಸ್ಥೆಗಳು ವಿದೇಶಿಯರ ಇಮೇಲ್, ಫೋನ್ ಮತ್ತು ಇತರ ಆನ್‌ಲೈನ್‌ ಸಂವಹನ ಸೇವೆಗಳ ಮೇಲೆ ಸೂಚನೆ ರಹಿತ ಬೇಹುಗಾರಿಕೆ ನಡೆಸಲು ಅನುಮತಿಸುತ್ತವೆ.

ಈ ಸುದ್ದಿ ಓದಿದ್ದೀರಾ? ಭಾರತೀಯ ನ್ಯಾಯಾಲಯದಲ್ಲಿ ರಾಹುಲ್ ಪ್ರಕರಣದ ಮೇಲೆ ಕಣ್ಣಿಟ್ಟಿದ್ದೇವೆ: ಅಮೆರಿಕ

ಅಮೆರಿಕ ಸಂವಿಧಾನದ ನಾಲ್ಕನೇ ತಿದ್ದುಪಡಿಯ ಅಡಿಯಲ್ಲಿ ದೇಶದ ನಾಗರಿಕರು ಆದೇಶ ರಹಿತ ಪರಿಶೀಲನೆಗಳ ವಿರುದ್ಧ ಕೆಲವು ರಕ್ಷಣೆಗಳನ್ನು ಹೊಂದಿದ್ದಾರೆ. ಆದರೆ ಸಾಗರೋತ್ತರ ಅಮೆರಿಕನ್ನರಿಗೆ ಇದು ಅನ್ವಯವಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.

ಅಮೆರಿಕದ ಹೊರಗಿನ ಶತಕೋಟಿ ಅಂತರ್ಜಾಲ ಬಳಕೆದಾರರಿಗೆ ಇರುವ ಗೋಪ್ಯತೆಯ ಕೊರತೆಯಿಂದ ಚೀನಾ ಕಂಪನಿ ಬೈಟ್‌ಡ್ಯಾನ್ಸ್ ಒಡೆತನದ ವಿಡಿಯೋ ಆ್ಯಪ್ ಟಿಕ್‌ಟಾಕ್ ಬೇಹುಗಾರಿಕೆ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಹೇಳಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಡಾನ್‌ ಸಂಘರ್ಷ; ಆಹಾರ ಸಿಗದೆ ಅನಾಥಾಲಯದಲ್ಲಿ 60 ಮಕ್ಕಳು ಸಾವು

ಸಂಘರ್ಷ ಪೀಡಿತ ಸುಡಾನ್‌ ರಾಜಧಾನಿ ಖಾರ್ಟೂಮ್‌ನಲ್ಲಿರುವ ಅನಾಥಾಲಯವೊಂದರಲ್ಲಿ ಆಹಾರ, ಹಾಲು ಸಿಗದೆ...

ಕೇಂದ್ರ ಸರ್ಕಾರದ ಸಬ್ಸಿಡಿ ಕಡಿತ; ಎಲೆಕ್ಟ್ರಿಕ್ ಸ್ಕೂಟರ್ ದುಬಾರಿ!

ಕೇಂದ್ರ  ಸರ್ಕಾರ ಸಬ್ಸಿಡಿಯನ್ನು ಕಡಿತಗೊಳಿಸಿದ ಪರಿಣಾಮ ಗುರುವಾರದಿಂದ (ಜೂನ್‌ 1) ಎಲೆಕ್ಟ್ರಿಕ್...

ಕೆನಡಾದಲ್ಲಿ ಇನ್ನು ಮುಂದೆ ಪ್ರತಿ ಸಿಗರೇಟಿನ ಮೇಲೂ ಹಾನಿ ಎಚ್ಚರಿಕೆ ಸಂದೇಶ

ಕೆನಡಾ ದೇಶವು 2035 ರ ವೇಳೆಗೆ ರಾಷ್ಟ್ರ ವ್ಯಾಪಿ ತಂಬಾಕು ಸೇವನೆ...

ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಹಾಗೂ ಟ್ವಟರ್ ಮುಖ್ಯಸ್ಥ ಎಲಾನ್ ಮಸ್ಕ್...