ಮತ್ತೆ ಬೆಳ್ಳಿತೆರೆಗೆ ಬರಲಿದೆ ಅಜಯ್ ದೇವಗನ್ ಅಭಿನಯದ ‘ಸಿಂಗಮ್’

Date:

ಅಕ್ಟೋಬರ್ 31ರಂದು ದೀಪಾವಳಿಯ ದಿನ ಅಜಯ್ ದೇವಗನ್ ಅಭಿಯನದ ‘ಸಿಂಗಮ್ ಅಗೇನ್’ ಸಿನಿಮಾ ಬಿಡುಗಡೆಯಾಗಲಿದೆ. ಇದು, ‘ಸಿಂಮ್’ ಸಿನಿಮಾದ ಮುಂದುವರೆದ ಭಾಗವೆಂದು ಹೇಳಲಾಗಿದ್ದು, ಹೊಸ ಸಿನಿಮಾದ ಬಿಡುಗಡೆಗೂ ಮುನ್ನ ಮೂಲ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ನಿರ್ಧರಿಸಿದೆ. ‘ಸಿಂಗಂ’ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಕ್ಟೋಬರ್ 18ರಂದು ‘ಸಿಂಗಮ್’ ಮರು-ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕ ರೋಹಿತ್ ಶೆಟ್ಟಿ ತಿಳಿಸಿದ್ದಾರೆ.

- Advertisement -

ಸಿನಿಮಾ ಮರು-ಬಿಡುಗಡೆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ರೋಹಿತ್, “ದೀಪಾವಳಿಯಂದು ‘ಸಿಂಗಮ್ ಅಗೇನ್’ ಪೂರ್ಣ ಬಲದೊಂದಿಗೆ ಬರುವ ಮೊದಲು! ಹಿಂದಿನ ಕತೆಯನ್ನು ಪ್ರೇಕ್ಷಕರಿಗೆ ನೆನಪಿಸಲು, ಆ ಅನುಭವವನ್ನು ಸಂಭ್ರಮಿಸಲು ಮತ್ತೊಮ್ಮೆ ‘ಸಿಂಗಮ್’ಅನ್ನು ಅಕ್ಟೋಬರ್ 18ರಂದು ಬಿಡುಗಡೆ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಅಜಯ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದು, ‘ಸಿಂಗಮ್’ ಮರು-ಬಿಡುಗಡೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

‘ಸಿಂಗಮ್’ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಅಜಯ್ ಪೊಲೀಸ್‌ಆಗಿ ನಟಿಸಿದ್ದರು. ಅವರೊಂದಿಗೆ ನಟಿ ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಬಣ್ಣ ಹಚ್ಚಿಸಿದ್ದರು. ಚಿತ್ರವು ಆ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿತ್ತು. 2014ರಲ್ಲಿ ಸಿಂಗಮ್-2 ಸಿನಿಮಾ ಕೂಡ ಬಂದಿತ್ತು. ಆ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ನಾಯಕಿಯ ಪಾತ್ರ ನಿಭಾಯಿಸಿದ್ದರು.

ಹಿಂದಿನ ಎರಡು ಭಾಗಗಳ ಯಶಸ್ಸಿನೊಂದಿಗೆ ಇದೀಗ ಮೂರನೇ ಕಂತು ‘ಸಿಂಗಮ್ ಅಗೇನ್’ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದಲ್ಲಿ, ಅಜಯ್, ಕರೀನಾ, ರಣವೀರ್ ಸಿಂಗ್, ಟೈಗರ್ ಶ್ರಾಫ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಹಾಗೂ ಅರ್ಜುನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಸವಿತಾ ಸಮಾಜ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬಾಗಲಕೋಟೆಯ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳಿಗೆ ಸೇರಿದ ನಿರುದ್ಯೋಗಿಗಳು ಮತ್ತು...

ಕೊಲ್ಹಾರ | ಮೂರು ದಶಕವಾದರೂ ಮುಳುಗಡೆ ಸಂತ್ರಸ್ತರಿಗೆ ಸಿಗದ ಹಕ್ಕುಪತ್ರ

1996ರಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ವಿಜಯಪುರ ಜಿಲ್ಲೆಯ ಕೊಲ್ಹಾರದ...

ಚಿಕ್ಕಮಗಳೂರು | ಬಣಕಲ್; ಸ.ಮಾ.ಹಿ ಪ್ರಾ. ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಸರ್ಕಾರಿ ಮಾದರಿ ಹಿರಿಯ...

ಬರಕ್ಕೆ ಮಾನದಂಡ ಮುಖ್ಯವೋ, ಬದುಕು ಮುಖ್ಯವೋ?: ಸಿ. ಬೈರೇಗೌಡರ ಪ್ರಶ್ನೆ ಇಂದಿಗೂ ಪ್ರಸ್ತುತ

ಬರ ಮೊದಲು ರೈತನ ಹೊಲದಲ್ಲಿ ಕಾಣಿಸುತ್ತದೆ. ನಂತರ ಅವನ ಸಾಲ, ಮನೆಯ...